ಸರ್ಕಾರದ ಪಂಚಖಾತ್ರಿ ಯೋಜನೆಗಳಲ್ಲಿ ಐದನೇ ಗ್ಯಾರಂಟಿ ಯೋಜನೆಯಾಗಿ ಯುವನಿಧಿ ಯೋಜನೆ ಜಾರಿಗೆ ಬರುತ್ತಿದೆ. ಅದಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಲಾಗುತ್ತಿದೆ. ಸುಲಭವಾಗಿ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
* ಮೊದಲಿಗೆ ಮೊಬೈಲ್ ನಲ್ಲಿ ಗೂಗಲ್ ಗೆ ಹೋಗಿ https://sevasindhugs.karnataka.gov.in ಟೈಪ್ ಮಾಡಿ
* ಕರ್ನಾಟಕ ಸರ್ಕಾರ ಸೇವಾ ಸಿಂಧು ವೆಬ್ಸೈಟ್ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಗ್ಯಾರಂಟಿ ಯೋಜನೆಗಳ ಮುಖಪುಟ ಓಪನ್ ಆಗುತ್ತದೆ
* ಯುವನಿಧಿ ಯೋಜನೆ ಆಪ್ಷನ್ ಮೇಲೆ ಕ್ಲಿಕ್ ಮಾಡಿ
* Apply for Yuvanidhi ಆಪ್ಷನ್ ಕಾಣುತ್ತದೆ.User ID & Password ಇದ್ದರೆ ಹಾಕಿ login ಆಗಿ ಆಪ್ಲೈ ಮಾಡಬಹುದು, ಇಲ್ಲದೇ ಇದ್ದವರು registration here ಕ್ಲಿಕ್ ಮಾಡಿ ಕ್ರಿಯೆಟ್ ಮಾಡಿ
* Registration ಪೇಜ್ ಓಪನ್ ಆಗುತ್ತದೆ ಆಧಾರ್ ನಂಬರ್ ಹಾಕಿ, Captcha ಎಂಟ್ರಿ ಮಾಡಿ next ಕ್ಲಿಕ್ ಮಾಡಿ
* ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಎಂಟ್ರಿ ಮಾಡಿ Continue ಕ್ಲಿಕ್ ಮಾಡಿ
* digilocker website ಓಪನ್ ಆಗುತ್ತದೆ allow ಕೊಡಿ
* Registration ಗೆ ಮಾಹಿತಿ ಕೇಳುತ್ತದೆ, e-mail id, mobils no. ಹಾಕಿ, ಕೊಟ್ಟಿರುವ ಸೂಚನೆಯು ಒಳಗೊಂಡಂತೆ 8 ಅಂಕಿಗಳ Password set ಮಾಡಿ. Captcha code entry ಮಾಡಿ Submit ಕೊಡಿ.
* ನೀವು ನೀಡಿರುವ e-mail ಮತ್ತು Mobile No ಗೆ OTP ಬಂದಿರುತ್ತದೆ, ಆ 2 OTP ಗಳನ್ನು ನಮೂದಿಸಿ Verification Ok ಮಾಡಬೇಕು. ಇದು ಸಕ್ಸೆಸ್ಫುಲ್ ಆದ ಮೇಲೆ ಇದೆ ಐಡಿ ಮತ್ತು ಪಾಸ್ವರ್ಡ್ ಉಪಯೋಗಿಸಿ ಅಪ್ಲಿಕೇಶನ್ ಹಾಕಬೇಕು.
* ಮತ್ತೆ ಈಗ ನೀವು ಮೊದಲಿನಿಂದ ಗ್ಯಾರಂಟಿ ಯೋಜನೆಗಳ ಮುಖಪುಟಕ್ಕೆ ಬಂದು ಯುವನಿಧಿ ಸೆಲೆಕ್ಟ್ ಮಾಡಬೇಕು
* login to apply for ಎಂದು ಬಂದಾಗ ನೀವು ಯಾವ ಮೊಬೈಲ್ ಸಂಖ್ಯೆ ಕೊಟ್ಟು ಪಾಸ್ವರ್ಡ್ ಕ್ರಿಯೇಟ್ ಮಾಡಿದ್ದೀರ ಆ ಮೊಬೈಲ್ ಸಂಖ್ಯೆ ಮತ್ತು ನೀವು ಈ ಮೊದಲು ಆರಿಸಿ ಸೆಟ್ ಮಾಡಿದ ಪಾಸ್ ವರ್ಡ್ ಎಂಟ್ರಿ ಕೊಟ್ಟು, Captcha ನಮೂದಿಸಿ login ಆಗಿ
* ನೇರವಾಗಿ ಅಪ್ಲಿಕೇಶನ್ ಹಾಕಬೇಕಾದ ಕರ್ನಾಟಕ ಸರ್ಕಾರ ಯುವನಿಧಿ ಯೋಜನೆ ಪೇಜ್ ಓಪನ್ ಆಗುತ್ತದೆ.
* ಸ್ವಯಂ ಘೋಷಣೆ ಒಪ್ಪಿಗೆ ಅಂಶಗಳು ಇರುತ್ತವೆ ಅವುಗಳನ್ನೆಲ್ಲ ಓದಿ, ಅದು ಯಾರು ಅರ್ಜಿ ಸಲ್ಲಿಸಲು ಅರ್ಹರು ಎನ್ನುವ ಮಾಹಿತಿ ಆಗಿರುತ್ತದೆ. ನೀವು ಆ ಮಾನದಂಡಗಳನ್ನು ಪೂರೈಸುವವರಾದಲ್ಲಿ ಹೌದು ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಕೆಳಗೆ ವೈಯಕ್ತಿಕ ವಿವರಗಳು ಎನ್ನುವ ಆಪ್ಷನ್ ಕಾಣುತ್ತದೆ ಅದರಲ್ಲಿ ಸ್ವಯಂ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
* ಮೊದಲಿಗೆ Aadhar Authentication ಕ್ಲಿಕ್ ಮಾಡಿ, Aadhar e-KYC ಪುಟ ತೆರೆಯುತ್ತದೆ, ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಕೆಳಗೆ ಕೊಟ್ಟಿರುವ ಚೆಕ್ ಬಾಕ್ಸ್ ನಲ್ಲಿ ರೈಟ್ ಕ್ಲಿಕ್ ಮಾಡಿ OTP ಎಂದು ಸೆಲೆಕ್ಟ್ ಮಾಡಿ. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ನಂತರ ನಮೂದಿಸಿ Submit ಕೊಡಿ.
* ಆಧಾರ್ ವಿವರಗಳು ಎಂದು ಇರುತ್ತದೆ. ಅದರಲ್ಲಿರುವ ಆಪ್ಷನ್ ಗಳಲ್ಲಿ ಆಧಾರ್ ನಲ್ಲಿ ಇರುವಂತೆ ಹೆಸರು, ಹುಟ್ಟಿದ ದಿನಾಂಕ ಇತ್ಯಾದಿ ವಿವರಗಳು ಇರುತ್ತದೆ ಅವುಗಳನ್ನು ಪರಿಶೀಲಿಸಿ ವಿಳಾಸ ಕೂಡ ಹಾಗೆ ಇದೆ ಎಂದು ಆಪ್ಷನ್ ಇರುತ್ತದೆ Yes ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಅಜ್ಜಿ ತರದ ಜಿಲ್ಲೆ ಮತ್ತು ತಾಲೂಕುಗಳು ಎನ್ನುವ ಆಪ್ಷನ್ ನಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲೂಕು ಸೆಲೆಕ್ಟ್ ಮಾಡಿ.
* ವಿದ್ಯಾರ್ಥಿಯ ವಿವರಗಳು ಎನ್ನುವ ಆಪ್ಷನ್ ಇರುತ್ತದೆ ಅದರಲ್ಲಿ ನಿಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಹಾಗೆ ಆಪ್ಷನ್ ಗಳನ್ನು ನೀಡಲಾಗಿರುತ್ತದೆ. ಸರಿಯಾದ ಮಾಹಿತಿಯನ್ನು ಸೆಲೆಕ್ಟ್ ಮಾಡಿ ಹಾಗೆ ಕೆಲವು ದಾಖಲೆಗಳನ್ನು ಕೇಳಲಾಗಿರುತ್ತದೆ ಅದನ್ನು ಅಪ್ಲೋಡ್ ಕೂಡ ಮಾಡಿ.
* ಗೃಹವಾಸಿ ಪರಿಶೀಲನೆಗಾಗಿ ಆಯ್ಕೆ ಮಾಡಿ ಎನ್ನುವ ಆಪ್ಷನ್ಗಳು ಇರುತ್ತವೆ. ಅದರಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ, ಅರ್ಜಿದಾರರ ಸಂಪರ್ಕ ವಿವರಗಳು ಎನ್ನುವ ಆಪ್ಷನ್ ನಲ್ಲಿ ಕೂಡ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ
* ಹೆಚ್ಚುವರಿ ಮಾಹಿತಿಗಳು ಎನ್ನುವಲ್ಲಿ ಕೆಟಗರಿಗೆ ಸಂಬಂಧಪಟ್ಟ ಪ್ರಶ್ನೆಗಳು ಇರುತ್ತವೆ ಅವುಗಳಲ್ಲಿ ಸರಿಯಾದ ಆಪ್ಷನ್ ಸೆಲೆಕ್ಟ್ ಮಾಡಿ ಕೆಲ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ದಾಖಲೆಗಳ ಸಂಖ್ಯೆಗಳನ್ನು ನಮೂದಿಸಿದರೆ ಸಾಕು.
* ಈ ಎಲ್ಲ ವಿವರ ತುಂಬಿಸಿದ ಮೇಲೆ ಕೊನೆಯಲ್ಲಿ Submit ಕ್ಲಿಕ್ ಮಾಡಿ ಅರ್ಜಿ ಸ್ವೀಕೃತಿ ಪ್ರತಿ (acknowledgement) ಪಡೆಯಿರಿ.
* ಒಂದು ವೇಳೆ ಅರ್ಜಿ ಸಲ್ಲಿಸಲು ತಿಳಿಯದೆ ಇದ್ದವರು ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.