ಕೆಲವರ SSLC ಮಾರ್ಕ್ಸ್ ಕಾರ್ಡ್ ಕಳೆದು ಹೋಗಿರುತ್ತದೆ ಅಥವಾ ಯಾವುದೋ ಒಂದು ಅನಿವಾರ್ಯ ಸಂದರ್ಭದಲ್ಲಿ ಅದು ಬೇರೆ ಊರಿನಲ್ಲಿದ್ದಾಗ ತಮ್ಮ ಕೆಲಸದ ಕಾರಣಕ್ಕೋ ಅಥವಾ ಮತ್ಯಾವುದಕ್ಕೂ ಅಪ್ಲೈ ಮಾಡುವುದಕ್ಕಾಗಿ ಮಾರ್ಕ್ಸ್ ಕಾರ್ಡ್ ಬೇಕಿರುತ್ತದೆ. ಅಷ್ಟು ದೂರ ಪ್ರಯಾಣಿಸಿ ತರಲು ಸಾಧ್ಯವಿಲ್ಲ ಎಂದಾಗ ನಿಮ್ಮ ಮೊಬೈಲ್ ನಲ್ಲಿಯೇ ಹೇಗೆ ಪ್ರಿಂಟ್ ಪಡೆಯಬಹುದು ಮತ್ತು ಸದಾ ಅದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಇಟ್ಟುಕೊಳ್ಳಬಹುದು ಎನ್ನುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.
● ಮೊದಲಿಗೆ Play store ಗೆ ಹೋಗಿ Digilocker ಎನ್ನುವ application ಡೌನ್ಲೋಡ್ ಮಾಡಿಕೊಳ್ಳಬೇಕು.
● ನಂತರ ಆಪ್ ಓಪನ್ ಮಾಡಿ Sign in, Create account ಹೀಗೆ 2 ಆಪ್ಷನ್ ಇರುತ್ತದೆ.
● ನೀವು ಈಗಾಗಲೇ ಅಕೌಂಟ್ ಕ್ರಿಯೇಟ್ ಮಾಡಿದ್ದರೆ Sign in ಕೊಡಿ ಇಲ್ಲವಾದಲ್ಲಿ ಮೊದಲ ಬಾರಿಗೆ ಬಳಸುತ್ತಿದ್ದರೆ Create account ಎನ್ನುವುದನ್ನು ಕ್ಲಿಕ್ ಮಾಡಿ.
● ಅಕೌಂಟ್ ಕ್ರಿಯೇಟ್ ಮಾಡುವುದಕ್ಕೆ ಮೊದಲಿಗೆ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರನ್ನು ನಮೂದಿಸಬೇಕು, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ನಂಬರ್, ಇಮೇಲ್ ಐಡಿ ಈ ಆಪ್ಶನ್ ಗಳಲ್ಲೂ ಸರಿಯಾದ ವಿವರ ಫಿಲ್ ಮಾಡಿನಂತರ 6 ಅಂಕಿಗಳ Security pin ಸೆಲೆಕ್ಟ್ ಮಾಡಿ Submit ಕೊಡಿ.
● ಇಷ್ಟಾದರೆ ನಿಮ್ಮ ಅಕೌಂಟ್ ಕ್ರಿಯೇಟ್ ಆಗಿದೆ ಎಂದರ್ಥ
● ಇಷ್ಟಾದ ನಂತರ ನೀವು ಮತ್ತೆ ಆಪ್ ಓಪನ್ ಮಾಡಬೇಕಾದಾಗ ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ಹಾಕಿ, ನಿಮ್ಮ 6 ಸಂಖ್ಯೆಯ ಸೆಕ್ಯುರಿಟಿ ಪಿನ್ ಎಂಟ್ರಿ ಮಾಡ Sign in ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ಹಾಕಿ Submit ಕೊಡಿ.
● ತಕ್ಷಣ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಎಲ್ಲಾ ಡೀಟೇಲ್ಸ್ ಇರುತ್ತದೆ.
● ಇದು ಭಾರತ ಸರ್ಕಾರವು ಡಿಜಿಟಲೀಕರಣವನ್ನು ಉತ್ತೇಜಿಸುವುದಕ್ಕಾಗಿ ರೂಪಿಸಿರುವ ಯೋಜನೆ ಆಗಿದ್ದು ದೇಶದ ಎಲ್ಲಾ ಜನರ ಹೆಸರು ಕೂಡ ಇದರಲ್ಲಿ ಇರುತ್ತದೆ. ಅದರಲ್ಲಿ ರಾಜ್ಯಗಳ ಹೆಸರು ಇರುವ ಕಡೆ ಹೋಗಿ ಎಕ್ಸ್ಪ್ಲೋರ್ ಎನ್ನುವುದನ್ನು ಕ್ಲಿಕ್ ಮಾಡಿದರೆ ಎಲ್ಲ ರಾಜ್ಯಗಳ ಹೆಸರು ಕೂಡ ಬರುತ್ತದೆ, ನೀವು ಅದರಲ್ಲಿ ಕರ್ನಾಟಕ ಎನ್ನುವುದನ್ನು ಸೆಲೆಕ್ಟ್ ಮಾಡಿಕೊಳ್ಳಿ.
● ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಸರ್ಟಿಫಿಕೇಟ್ಗಳು ಕೂಡ ಇದರಲ್ಲಿ ಸಿಗುತ್ತದೆ. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಶೈಕ್ಷಣಿಕ ಅಂಕ ಪಟ್ಟಿಗಳು ಇನ್ನಿತರ ಪ್ರಮಾಣ ಪತ್ರಗಳು ಸೇರಿದಂತೆ ಬಹುತೇಕ ಎಲ್ಲಾ ಸರ್ಟಿಫಿಕೇಟ್ ಗಳ ಆಪ್ಷನ್ ಕೂಡ ಇದರಲ್ಲಿ ಇರುತ್ತದೆ.
● ನಿಮಗೆ ಹತ್ತನೇ ತರಗತಿಯ ಸರ್ಟಿಫಿಕೇಟ್ ಬೇಕಾಗಿರುವುದರಿಂದ Class X ಸರ್ಟಿಫಿಕೇಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ, ಆಧಾರ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರು ಹುಟ್ಟಿದ ದಿನಾಂಕ ಮತ್ತು ನಿಮ್ಮ ಹಾಲ್ ಟಿಕೆಟ್ ನಂಬರ್, ನೀವು ಪಾಸಾದ ವರ್ಷ ಈ ವಿವರಗಳನ್ನು ಹಾಕಿ Get Certificate ಮೇಲೆ ಕ್ಲಿಕ್ ಕೊಡಿ, ಅದು fetching ಆಗುತ್ತದೆ.
● ನಂತರ ಇದನ್ನು ಓಪನ್ ಮಾಡಿ ಚೆಕ್ ನೋಡಿ, ನಿಮ್ಮ ಒರಿಜಿನಲ್ ಸರ್ಟಿಫಿಕೇಟ್ ಮಾಹಿತಿಯೊಂದಿಗೆ ಹೋಲಿಕೆ ಆಗುತ್ತದೆ. ಇದು ಡಿಜಿಟಲ್ ಸೈನ್ ನೊಂದಿಗೆ ಇರುವುದರಿಂದ ಎಲ್ಲಾ ಕಡೆ ಮಾನ್ಯವಾಗುತ್ತದೆ.