ಈ ಹಿಂದೆ ಆಸ್ತಿಗೆ ಸಂಬಂಧಪಟ್ಟ ಹಾಗೆ ಯಾವುದೇ ವಿವರ ಬೇಕಿದ್ದರೂ ತಮ್ಮ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿ ಸಲ್ಲಿಸಿ ಅದನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಈಗ ಎಲ್ಲ ಕ್ಷೇತ್ರವು ಡಿಜಿಟಲೀಕರಣವಾಗಿರುವುದರಿಂದ ಈ ಮಾಹಿತಿಗಳನ್ನು ಕೂಡ ಕುಳಿತಲ್ಲಿಯೇ ಮೊಬೈಲ್ ಮೂಲಕ ಕ್ಷಣದಲ್ಲಿಯೇ ಪಡೆಯಬಹುದು. ಇದರಿಂದ ರೈತನಿಗೆ ಸಮಯ ಹಾಗೂ ಹಣದ ಉಳಿತಾಯ ಕೂಡ ಆಗುತ್ತದೆ. ಯಾವ ವಿಧಾನದಲ್ಲಿ ಇದನ್ನು ತಿಳಿದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
* https://e-swathu.kar.nic.in ಈ ವೆಬ್ಸೈಟ್ ಲಿಂಕ್ ಮೂಲಕ ಅಥವಾ ಗೂಗಲ್ ನಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಂದು ಸರ್ಚ್ ಮಾಡುವ ಮೂಲಕ ನೀವು ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
* ಆಸ್ತಿಗಳ ಪರಿಶೋಧನೆ (Search your property) ಎನ್ನುವ ಆಪ್ಷನ್ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಅರ್ಜಿ ಆಹ್ವಾನ. ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಏನೆಲ್ಲಾ ದಾಖಲೆಗಳು ಬೇಕು.? ಎಲ್ಲಿ ಅರ್ಜಿ ಹಾಕಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಆಸ್ತಿಗಳ ಶೋಧನೆ ಎಂಬ ಇಂಟರ್ಫೇಸ್ ಓಪನ್ ಆಗುತ್ತದೆ, ಅದರಲ್ಲಿ select property form and Enter property ID ಎನ್ನುವ ಮೊದಲ ಫಾರ್ಮ್ ಕಾಣುತ್ತದೆ. ಪ್ರಾಪರ್ಟಿ ಸಂಖ್ಯೆ ಇಲ್ಲದೆ ಇರುವುದರಿಂದ ಈ ಫಾರ್ಮ್ ಅವಶ್ಯಕತೆ ಇಲ್ಲ. ಇದರ ಕೆಳಗೆ ಮತ್ತೊಂದು ಫಾರ್ಮ್ ಕಾಣುತ್ತದೆ, ಅದರಲ್ಲಿ select Propert form ಆಪ್ಷನ್ ನಲ್ಲಿ form11B ಎನ್ನುವುದರ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ, ಗ್ರಾಮದ ಹೆಸರು ಎಲ್ಲವನ್ನು ಕೂಡ ಸೆಲೆಕ್ಟ್ ಮಾಡುವ ಆಪ್ಷನ್ ಇರುತ್ತದೆ ಸರಿಯಾದ ಮಾಹಿತಿಯನ್ನು ಸೆಲೆಕ್ಟ್ ಮಾಡಿ, ಕೊನೆಯಲ್ಲಿ Printed form ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕೂಡ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಮದುವೆ ಹೆಣ್ಣಿನ ಮೇಕಪ್ ಮಾಡುತ್ತಾ 1 ಕೋಟಿ ದುಡಿದ ಸಾಮಾನ್ಯ ಗೃಹಿಣಿ.! ನೂರಾರು ಹೆಣ್ಣು ಮಕ್ಕಳಿಗೆ ಉದ್ಯೋಗಕ್ಕೆ ದಾರಿ ತೋರಿಸಿದ ಸಾಹಸಿ.!
* ಜೊತೆಗೆ Property ID No. ಆಪ್ಷನ್ ಇರುತ್ತದೆ ಅದನ್ನು ಖಾಲಿ ಬಿಡಿ Owner Name ಆಪ್ಷನ್ ನಲ್ಲಿ ನೀವು ಯಾರ ಪ್ರಾಪರ್ಟಿ ವಿವರ ಹುಡುಕುತ್ತಿದ್ದೀರಾ ಅವರ ಹೆಸರನ್ನು ಹಾಕಿ search ಕೊಡಬಹುದು ಆಗ ನೀವು ಸೆಲೆಕ್ಟ್ ಮಾಡಿರುವ ಮಾಹಿತಿಯ ಪ್ರಕಾರ ಆ ಗ್ರಾಮದಲ್ಲಿರುವ ಈ ಹೆಸರನ್ನು ಮಾಲೀಕತ್ವದಲ್ಲಿರುವ ಪ್ರಾಪರ್ಟಿ ವಿವರ ನಿಮಗೆ ಸಿಗುತ್ತದೆ.
ಒಂದು ವೇಳೆ Owner Name ತಿಳಿದಿಲ್ಲ ಎಂದರೆ ಅದನ್ನು ಕೂಡ ಕಾಲಿಬಿಟ್ಟು ಸರ್ಚ್ ಕೊಟ್ಟರೆ ನೀವು ಸೆಲೆಕ್ಟ್ ಮಾಡಿರುವ ಮಾಹಿತಿ ಪ್ರಕಾರ ಆ ಗ್ರಾಮ ಪಂಚಾಯಿತಿಯಲ್ಲಿರುವ ಎಲ್ಲಾ ಪ್ರಾಪರ್ಟಿ ಮಾಲೀಕರ ಹೆಸರು ಹಾಗೂ ಆ ಪ್ರಾಪರ್ಟಿಗಳ ID No. ಲಿಸ್ಟ್ ಬರುತ್ತದೆ. ಅದರಲ್ಲಿ ನೀವು ನಿಮಗೆ ಯಾರದ್ದು ಬೇಕು ಅವರದ್ದನ್ನು ಹುಡುಕಿ ತಿಳಿದುಕೊಳ್ಳಬೇಕಾಗುತ್ತದೆ.
ಈ ಸುದ್ದಿ ಓದಿ:- ಮನೆಗೆ ಇ-ಸ್ವತ್ತು ಮಾಡಿಸುವುದು ಎಷ್ಟು ಮುಖ್ಯ.? ಮತ್ತು ಇ-ಸ್ವತ್ತು ಮಾಡಿಸುವುದು ಹೇಗೆ ನೋಡಿ.!
* ಈ ರೀತಿ Search ಕೊಟ್ಟ ಕೂಡಲೆ ಲಿಸ್ಟ್ ಬರುತ್ತದೆ. ಅದರಲ್ಲಿ Document No., Property Code, Property ID, Owner Name, village Name, Asset No. ಇಷ್ಟು ಮಾಹಿತಿಗಳು ಸಿಗುತ್ತವೆ.
* ಈ ಲಿಸ್ಟ್ ನಲ್ಲಿ Owner Name ಎನ್ನುವುದರಲ್ಲಿ ನಿಮ್ಮ ಹೆಸರು ಇದ್ದರೆ ಆ ನೇರದಲ್ಲಿ ಇರುವ Document No. ಮೇಲೆ ಕ್ಲಿಕ್ ಮಾಡಿ Pdf ರೂಪದಲ್ಲಿ ಮೊಬೈಲ್ ನಲ್ಲಿಯೇ ಆಸ್ತಿ ವಿವರವನ್ನು ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
* ಆ pdf ನಲ್ಲಿ Certificate ರೂಪದಲ್ಲಿ ನಿಮ್ಮ ಆಸ್ತಿಯ ಸಂಖ್ಯೆ, ಭಾವಚಿತ್ರ, ಮಾಲೀಕರ ವಿವರ ಸೇರಿದಂತೆ ಸಂಪೂರ್ಣ ಮಾಹಿತಿಯು ಸ್ಪಷ್ಟವಾಗಿ ಸಿಗುತ್ತದೆ.