ನಿಮ್ಮದೆ ಸ್ವಂತ ನೀರಿನ ಬಾಟಲ್ ಕಂಪನಿ ಮಾಡುವುದು ಹೇಗೆ.? ಎಷ್ಟು ಬಂಡವಾಳ ಬೇಕು.? ಲಾಭ ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಈಗಿನ ಕಾಲದಲ್ಲಿ ಬೇರೆಯವರ ಬಳಿ ಕೆಲಸ ಮಾಡುವುದಕ್ಕಿಂತ ಸ್ವಂತ ಉದ್ಯಮ ಮಾಡಲು ಬಯಸುತ್ತಾರೆ. ಇದಕ್ಕೆ ಸಾಕಷ್ಟು ಆಪ್ಷನ್ ಗಳಿವೆ. ಅದರಲ್ಲಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕೂಡ ಒಂದು ಈ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮಾಡುವುದರ ಪ್ಲಸ್ ಪಾಯಿಂಟ್ ಗಳು ಸಾಕಷ್ಟಿವೆ.

WhatsApp Group Join Now
Telegram Group Join Now

ಮನೆಯಲ್ಲಿಯೇ ಇದ್ದುಕೊಂಡು ನೀವು ಇದನ್ನು ಮಾಡಬಹುದು ಮತ್ತು ನೀವೇ ಮಾರ್ಕೆಟಿಂಗ್ ಮಾಡಿಕೊಳ್ಳಬಹುದು ಮಧ್ಯವರ್ತಿಯ ಕಾಟ ಇರುವುದಿಲ್ಲ, ಅವಕಾಶ ಹೆಚ್ಚು ಸಿಗುತ್ತದೆ, ಹೆಚ್ಚು ಪ್ರೊಡಕ್ಷನ್ ಕೂಡ ಮಾಡಬಹುದು, ಫ್ರಾಫಿಟಾ ಕೂಡ ಖಚಿತ ಇಷ್ಟೆಲ್ಲಾ ಅನುಕೂಲತೆಗಳಿರುವುದರಿಂದ ಖಂಡಿತವಾಗಿಯೂ ನಿಮ್ಮ ನಿರೀಕ್ಷೆಗಿಂತಲೂ ಹೆಚ್ಚು ದುಡಿಯಬಹುದು. ಇಂತಹ ಮ್ಯಾನುಫ್ಯಾಕ್ಚರಿಂಗ್ ಗಳಲ್ಲಿ ವಾಟರ್ ಬಾಟೆಲ್ ತಯಾರಿಕೆ ಕೂಡ ಒಂದು. ಯಾಕೆಂದರೆ ಈಗ ವಾಟರ್ ಬಾಟೆಲ್ ಗಳಿಗೆ ಬಹಳ ಡಿಮ್ಯಾಂಡ್ ಇದೆ.

ನಾವು ಹೋದ ಕಡೆಯಲೆಲ್ಲಾಶನೀರು ಇರುವುದಿಲ್ಲ ಆಗ ಪಕ್ಕದಲ್ಲೇ ಇರುವ ಅಂಗಡಿಗಳಿಂದ ಖರೀದಿಸಿ ಕುಡಿಯುತ್ತೇವೆ. ಹೋಟೆಲ್ ಗಳಿಂದ ಹಿಡಿದು ಟೂರಿಂಗ್ ಪ್ಲೇಸ್ ವರೆಗೆ ಹಳ್ಳಿಗಳ ಮದುವೆ ಮನೆಯಿಂದ ಹಿಡಿದು ದಿಲ್ಲಿಗಳ ಮಾಲ್ ವರೆಗೆ ವಾಟರ್ ಬಾಟೆಲ್ ಗಳು ಮಾರಾಟ ಆಗುವುದರಿಂದ ಈ ಬಿಸಿನೆಸ್ ಪಕ್ಕ ಕೈ ಹಿಡಿಯುತ್ತದೆ ಎನ್ನುವುದು ಈಗಾಗಲೇ ಇದರಲ್ಲಿ ತೊಡಗಿಕೊಂಡಿರುವವರ ಅಭಿಪ್ರಾಯ.

ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಜಮೆ ಆಗಿದೆಯೇ ಇಲ್ಲವೇ ಎನ್ನುವುದನ್ನು ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ, ಈ ವಿಧಾನದಲ್ಲಿ ಚೆಕ್ ಮಾಡಿ.!
ಈಗಿನ ಲೆಕ್ಕಾಚಾರದಲ್ಲಿ 1ltr ಪ್ಯಾಕಿಂಗ್ ವಾಟರ್ ಬಾಟೆಲ್ ತಯಾರಿಸಲು ಎಷ್ಟು ಖರ್ಚಾಗುತ್ತದೆ ಎನ್ನುವ ವಿವರ ಹೀಗಿದೆ.

* ಖಾಲಿ ಬಾಟೆಲ್ ತಯಾರಿಕೆಗೆ 2ರೂ.50ಪೈಸೆ ಖರ್ಚಾಗುತ್ತದೆ.
* ಕ್ಯಾಪ್ ಗೆ 32 ಪೈಸೆ
* ಲೇಬಲ್ 25 ಪೈಸೆ
* ಪ್ಯಾಕಿಂಗ್ 37 ಪೈಸೆ
* ಪ್ಯಾಕಿಂಗ್ ಟೇಪ್ ಗೆ 20ಪೈಸೆ
* ಲೇಬರ್ ಚಾರ್ಜ್ 8ಪೈಸೆ
* ಎಲೆಕ್ಟ್ರಿಸಿಟಿ ಇನ್ನಿತರ ಮೇಂಟೆನೆನ್ಸ್ ಚಾರ್ಜ್ 50 ಪೈಸೆ ಒಟ್ಟಾರೆಯಾಗಿ ಒಂದು ಪಾಟಲಿಗೆ 3ರೂ70 ಪೈಸೆ ಆಗುತ್ತದೆ.
ಒಂದು ಲೀಟರ್ ನ 12 ಬಾಟೆಲ್ ಹಾಕಿ ಪ್ಯಾಕ್ ಮಾಡಿದರ ಅದರ ಖರ್ಚು ಅಂದಾಜು 44ರೂ.40 ಪೈಸೆ

ಇದನ್ನೇ ಅರ್ಧ ಲೀಟರ್ ಬಾಟೆಲ್ ಗೆ ಲೆಕ್ಕ ಹಾಕಿದರೆ

* ಖಾಲಿ ಬಾಟಲಿಗೆ 1.50ರೂ.
* ಕ್ಯಾಪ್ ಗೆ 32ಪೈಸೆ
* ಲೇಬರ್ ಗೆ 25ಪೈಸ
* ಬಾಕ್ಸ್ ಗೆ 35 ಪೈಸೆ
* ಟೇಪ್ ಗೆ 25 ಪೈಸೆ
* ಲೇಬರ್ ಖರ್ಚು 8 ಪೈಸೆ
* ಎಲೆಕ್ಟ್ರಿಸಿಟಿ ಮತ್ತು ಮತ್ತಿತರ ಲೇಬರ್ ಚಾರ್ಜ್ 32 ಪೈಸೆ
* ಹೀಗೆ ಒಟ್ಟಾರೆಯಾಗಿ ಅರ್ಧ ಲೀಟರ್ ಬಾಟಲಿಗೆ ರೂ.3 ಖರ್ಚಾಗುತ್ತದೆ.

ಅರ್ಧ ಲೀಟರ್ ನ 24 ಬಾಟೆಲ್ ಗಳನ್ನು ಒಂದು ಬಾಕ್ಸ್ ನಲ್ಲಿ ಹಾಕಿ ಪ್ಯಾಕ್ ಮಾಡಿದರೇ ಆ ಪ್ಯಾಕ್ ಮ್ಯಾನುಫ್ಯಾಕ್ಚರಿಂಗ್ ಚಾರ್ಜ್ 70 ‌ರೂ. ಹೋಲ್ ಸೇಲ್ ಆಗಿ ನಿಮ್ಮ ಒಂದು ಲೀಟರ್ ಒಂದು ಬಾಕ್ಸ್ ನ್ನು 70 ರಿಂದ 80 ರೂಪಾಯಿಗೆ ಡೀಲರ್ಸ್ ಗಳಿಗೆ ಸೇಲ್ ಮಾಡಬಹುದು, ಅರ್ಧ ಲೀಟರ್ ಬಾಕ್ಸ್ ಅನ್ನು 110 ಗೆ ಸೇಲ್ ಮಾಡಬಹುದು.

ಈ ಸುದ್ದಿ ಓದಿ:-ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ಹೇಗಿದೆ ನೋಡಿ.! ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!

ಹೀಗೆ ಒಂದು ಬಾಕ್ಸ್ ಗೆ ಕನಿಷ್ಠ 30 ರೂಪಾಯಿಯಾದರೂ ಪ್ರಾಫಿಟ್ ಇದ್ದೇ ಇರುತ್ತದೆ ಅರ್ಧ ಲೀಟರ್ ಬಾಟಲ್ ನಲ್ಲಿ ರೂ. 40 ಆಗುತ್ತದೆ. ಹಾಗೆ ನೀವು ಒಂದು ದಿನಕ್ಕೆ 250 ಬಾಕ್ಸ್ ಗಳನ್ನು ಸೇಲ್ ಮಾಡುವುದಾದರೆ 7500 ಸಾವಿರ ಒಂದು ದಿನಕ್ಕೆ ಲಾಭವಾಗುತ್ತದೆ. 250 ಬಾಕ್ಸ್ ಅರ್ಧ ಲೀಟರ್ ಬಾಟಲ್ ಸೇಲ್ ಮಾಡಿದರೆ 10,000. ಎರಡೂ ಸೇರಿ 500 ಬಾಟೆಲ್ ಸೇಲ್ ಮಾಡಿದರೆ ಖರ್ಚು ಕಳೆದು ರೂ.17,500 ಉಳಿಯುತ್ತದೆ.

ನೀವು ಈ ಮಿಷನ್ ಗಳ ಸೆಟಪ್ ಮಾಡಿಸಲು ನಿಮ್ಮ ಸ್ವಂತ ಜಾಗ ಹೊಂದಿದ್ದು ಎಲೆಕ್ಟ್ರಿಕ್ ಸಿಟಿ ಸಪ್ಲೈ ವ್ಯವಸ್ಥೆ ಕೂಡ ಇರಬೇಕು. ಹಾಗೆ ಕನಿಷ್ಠ ಮೂರು ಜನ ಮಾರ್ಕೆಟಿಂಗ್ ಹಾಗೂ ನಾಲ್ಕೈದು ಜನ ಮಿಷನ್ ನೋಡಿಕೊಳ್ಳುವುದಕ್ಕೆ ವರ್ಕರ್ಸ್ ಬೇಕು.

ಮಿಷನ್ ಬಂಡವಾಳ ಎಲ್ಲ ಸೇರಿ 50 ರಿಂದ 60 ಲಕ್ಷ ಇದ್ದರೆ ಇದನ್ನು ಆರಂಭಿಸಬಹುದು, ನೀರಿನ ಗುಣಮಟ್ಟಕ್ಕೆ ಪರೀಕ್ಷೆ, Feesai ಸರ್ಟಿಫಿಕೇಟ್, ನಗರ ಅಥವಾ ಗ್ರಾಮ ಪಂಚಾಯಿತಿಯಿಂದ ಘಟಕ ಸ್ಥಾಪನೆಗೆ ಅನುಮತಿ ಇತ್ಯಾದಿಗಳನ್ನು ಕೂಡ ತಪ್ಪದೆ ಪಡೆದುಕೊಂಡಿರಬೇಕು. ಈ ವಿಚಾರವಾಗಿ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

https://youtu.be/hBhGsDTXaJQ?si=9c2XpENv0wgbg5VO

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now