ನಮ್ಮ ಸಮಾಜದಲ್ಲಿ ಎಲ್ಲಾ ರೀತಿಯ ಜನರು ಇದ್ದಾರೆ. ಹಾಗಾಗಿ ಎಲ್ಲಾ ವಿಧವಾದ ಸಮಸ್ಯೆಗಳು ಕೂಡ ಇವೆ. ಅದರಲ್ಲಿ ಸಂಬಂಧಗಳ ನಡುವೆ ಆಸ್ತಿಗಳ ಹಂಚಿಕೆ ಕೂಡ ಒಂದು ಸಮಸ್ಯೆ. ಇತ್ತೀಚಿನ ದಿನಗಳಂತೂ ಅವು ವಿಪರೀತವಾಗಿ, ವಿವಾದಗಳಾಗಿ, ವ್ಯಾಜ್ಯಗಳಾಗಿ ಜೀವನಪೂರ್ತಿ ಕೋರ್ಟ್ ಗೆ ಅಲೆಯುವಂತೆ ಆಗಿವೆ. ಕಾನೂನಿನ ಸರಿಯಾದ ಮಾಹಿತಿ ಇಲ್ಲದೆ ಹೋದಾಗ, ಆ ಬಗ್ಗೆ ಅರಿವು ಇಲ್ಲದೆ ಹೋದಾಗ ಇದರ ಬಗ್ಗೆ ಗೊಂದಲ ಕ್ಕೀಡಾಗಿ ವಾದ ಮಾಡುವುದು ಹಾಗೂ ಇದಕ್ಕಾಗಿ ಕೋರ್ಟ್ ಮೊರೆ ಹೋಗುವುದು ಹೆಚ್ಚು.
ಅದಕ್ಕಾಗಿ ಜನಸಾಮಾನ್ಯರು ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನವನ್ನಾದರೂ ತಿಳಿದು ಕೊಳ್ಳಲೇ ಬೇಕು. ಸಾಮಾನ್ಯವಾಗಿ ಆಸ್ತಿ ವಿಚಾರ ಬಂದಾಗ ಗಂಡ ಹೆಂಡತಿ ಇಬ್ಬರಿಗೂ ಮಕ್ಕಳಿರದೆ ಹೋದರೆ ಅವರ ಆಸ್ತಿ ಯಾರ ಪಾಲಾಗುತ್ತದೆ ಎನ್ನುವ ವಿಚಾರ ಹಲವರಲ್ಲಿ ಗೊಂದಲ ಮೂಡಿಸಿರುತ್ತದೆ. ಅದಕ್ಕೆ ಖ್ಯಾತ ಹಿರಿಯ ನ್ಯಾಯವಾದಿಗಳಾದ ಎಂ ಆರ್ ಸತ್ಯನಾರಾಯಣ ಅವರು ಈ ರೀತಿ ಉತ್ತರಿಸಿದ್ದಾರೆ.
ಗಂಡ ಹೆಂಡತಿ ಇಬ್ಬರಿಗೂ ಮಕ್ಕಳು ಇಲ್ಲ ಎಂದಾಗ ಆ ಆಸ್ತಿ ಹಂಚಿಕೆ ಆಗುವ ವಿಚಾರದಲ್ಲಿ ಒಂದೇ ಬಾರಿಗೆ ಹೀಗೆ ಎಂದು ಹೇಳಲು ಆಗುವುದಿಲ್ಲ. ಅದು ಸಂದರ್ಭದಲ್ಲಿ ಹಾಗೂ ಆಸ್ತಿಯ ಮೂಲದ ಆಧಾರದ ಮೇಲೆ ಹೋಗುತ್ತದೆ. ಯಾಕೆಂದರೆ ಗಂಡ ಹೆಂಡತಿ ಇಬ್ಬರಿಗೂ ಅದು ಸ್ವಯಾರ್ಜಿತ ಆಸ್ತಿಯಾ ಅಥವಾ ಪಿತ್ರಾರ್ಜಿತ ಆಸ್ತಿಯ ಎಂದು ಮೊದಲು ನೋಡಬೇಕು. ಗಂಡನ ತಂದೆ ಕಡೆಯಿಂದ ಆಸ್ತಿ ಬಂದಿದ್ದರೆ ಅದು ಪಿತ್ರಾರ್ಜಿತ ಆಸ್ತಿಯಾಗುತ್ತದೆ.
ಗಂಡ ಹೆಂಡತಿ ಇಬ್ಬರು ಸೇರಿ ದತ್ತು ತೆಗೆದುಕೊಂಡಾಗ ಆ ಹಕ್ಕು ಮಕ್ಕಳಿಗೆ ಹೋಗುತ್ತದೆ. ಒಂದು ವೇಳೆ ಗಂಡ ಮರಣ ಹೊಂದಿದ ನಂತರ ಹೆಂಡತಿ ಮಗುವನ್ನು ದತ್ತು ತೆಗೆದುಕೊಂಡರೆ ಆಗಲು ಸಹ ಗಂಡ ತೀರಿದ ತಕ್ಷಣವೇ ಆ ಆಸ್ತಿ ಸಂಪೂರ್ಣ ಹಕ್ಕು ಹೆಂಡತಿಗೆ ಹೋಗುವುದರಿಂದ ಹೆಂಡತಿ ಮತ್ತು ಮಕ್ಕಳಿಗೆ ಆ ಹಕ್ಕು ಹೋಗುತ್ತದೆ.
ಒಂದು ವೇಳೆ ಅವರು ಇಬ್ಬರು ಜೀವಂತ ಇದ್ದಾಗ ಮಕ್ಕಳನ್ನು ದತ್ತು ತೆಗೆದುಕೊಳ್ಳದೆ ಇದ್ದರೆ ಅವರಿಬ್ಬರು ನಿಧನ ಆದ ಬಳಿಕ ಗಂಡನ ತಾಯಿ ಜೀವಂತ ಇದ್ದರೆ ಅವರಿಗೆ ಹೋಗುತ್ತದೆ. ಒಂದು ವೇಳೆ ಅವರು ಇಲ್ಲ ಎಂದಾಗ ಗಂಡನ ಸಹೋದರ ಅಥವಾ ಸಹೋದರ ಮತ್ತು ಅವರು ಇಲ್ಲವಾದಾಗ ಅವರ ಮಕ್ಕಳಿಗೆ ಆಧಿಕಾರ ಹೋಗುತ್ತದೆ. ಒಂದು ವೇಳೆ ಅದು ಹೆಂಡತಿಯ ಆಸ್ತಿ ಆಗಿದ್ದರೆ ಹೆಂಡತಿಯ ಸ್ವಯಾರ್ಜಿತ ಆಸ್ತಿ ಆಗಿದ್ದರೆ ಅದನ್ನು ಆಕೆ ಯಾರಿಗೆ ಬೇಕಾದರೂ ಇಚ್ಛೆಪಟ್ಟು ಬರೆದು ಕೊಡಬಹುದು.
ಆಕೆ ಆಸ್ತಿಯ ಮೇಲೆ ಗಂಡನ ಕಡೆಯವರಾದ ಯಾರಿಗೂ ಸಹ ಹಕ್ಕು ಇರುವುದಿಲ್ಲ. ಒಂದು ವೇಳೆ ಗಂಡ ಹೆಂಡತಿ ಇಬ್ಬರೂ ಕೂಡ ಸೇರಿ ಸಂಪಾದಿಸಿದ ಆಸ್ತಿ ಆಗಿದ್ದರೆ ಅವರು ಇಚ್ಛೆಪಡುವ ಯಾರಿಗಾದರೂ ಅದನ್ನು ಬರೆದು ಕೊಡಬಹುದು. ಇಲ್ಲವಾದಲ್ಲಿ ಅದನ್ನು ಯಾವುದಾದರೂ ದೇವಾಲಯಕ್ಕೆ ಅಥವಾ ಅನಾಥಾಶ್ರಮಕ್ಕೆ ದಾನದತ್ತಿಗಳಾಗಿ ವೀಲು ಮಾಡಿ ಕೊಡಬಹುದು.
ಹೀಗೆ ಆಸ್ತಿ ಯಾವ ರೀತಿ ಬಂದಿದ್ದು ಎನ್ನುವ ಆಧಾರದ ಮೇಲೆ ಅದು ನಿರ್ಧಾರ ಆಗುತ್ತದೆ ಎನ್ನುವ ಮಾಹಿತಿಯನ್ನು ನ್ಯಾಯವಾದಿಗಳು ತಿಳಿಸಿದ್ದಾರೆ. ಇದೇ ರೀತಿಯ ಹಲವು ಗೊಂದಗಳಿಗೆ, ಸಮಸ್ಯೆಗಳಿಗೆ ಪರಿಹಾರವನ್ನು ಕನ್ನಡ ಮೀಡಿಯಂ 24×7 ಎನ್ನುವ ಯೂಟ್ಯೂಬ್ ಚಾನೆಲ್ ಅಲ್ಲಿ ಸಮಸ್ಯೆಗಳಿಗನುಗುಣವಾಗಿ ಪರಿಹಾರ ನೀಡುತ್ತಿರುತ್ತಾರೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.