IBPS ನೇಮಕಾತಿ ಅಧಿಸೂಚನೆ, ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 3049 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಭಾರತ ಸರ್ಕಾರದ ಹಣಕಾಸು ಸಚಿವಾಲಯದಡಿಯಲ್ಲಿ ಬರುವ ಕೇಂದ್ರೀಯ ನೇಮಕಾತಿ ಏಜೆನ್ಸಿಯಾಗಿರುವ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ರಾಷ್ಟ್ರೀಕೃತ ಬ್ಯಾಂಕುಗಳಾದ (nationalized banks) ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್,

ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಯುಕೋ ಬ್ಯಾಂಕ್ ಮತ್ತು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 3000ಕ್ಕೂ ಹೆಚ್ಚು ಪ್ರಬೇಷನರಿ ಆಫೀಸರ್ಸ್ / ಮ್ಯಾನೇಜ್ ಮೆಂಟ್ ಟ್ರೈನೀಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿ. ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಆಸಕ್ತ ಅಭ್ಯರ್ಥಿಗಳು ಸಾಮಾನ್ಯ ನೇಮಕಾತಿ ಪ್ರಕ್ರಿಯೆಗೆ (CRP) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ.

ಇವುಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- IBPS
ಹುದ್ದೆ : ಪ್ರೊಬೆಷನರಿ ಆಫೀಸರ್‌/ ಮ್ಯಾನೇಜ್‌ಮೆಂಟ್‌ ಟ್ರೇನಿ
ಒಟ್ಟು ಹುದ್ದೆಗಳು:- 3049
ಉದ್ಯೋಗ ಸ್ಥಳ:- ಭಾರತದಾತ್ಯಂತ…

ವಿದ್ಯಾರ್ಹತೆ:- ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 20 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು.

ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC/ST, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷಗಳು
● ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.

ಅರ್ಜಿ ಶುಲ್ಕ:-
● SC/ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 175ರೂ.
● ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ 850ರೂ.
● ಆನ್ಲೈನ್ ವಿಧಾನದ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಿ ಇ-ರಶೀದಿ (e-reciept) ಪಡೆದುಕೊಳ್ಳಬೇಕು.

ಅರ್ಜಿ ಸಲ್ಲಿಸುವ ವಿಧಾನ:-

● www.ibps.in ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಅರ್ಜಿ ಸಲ್ಲಿಸಬೇಕು.
● ಅರ್ಜಿ ಫಾರಂ ನಲ್ಲಿ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
● ಸಂಪರ್ಕಕ್ಕಾಗಿ ಕೊಡುವ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಮಾನ್ಯವಾಗಿರಬೇಕು.
● ಸಂಬಂಧಪಟ್ಟ ಎಲ್ಲಾ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು
● ಅರ್ಜಿ ಶುಲ್ಕ ಪಾವತಿ ಮಾಡಿದ ನಂತರ ಅರ್ಜಿ ಸಲ್ಲಿಸುವಿಕೆ ಪೂರ್ತಿ ಆಗುತ್ತದೆ
● ರಿಜಿಸ್ಟ್ರೇಷನ್ ನಂಬರ್ ಪಾಸ್ವರ್ಡ್ ಮತ್ತು ಆನ್ಲೈನಲ್ಲಿ ಅರ್ಜಿ ಸಲ್ಲಿಸಿರುವ ಪ್ರಿಂಟೌಟ್ ತೆಗೆದು ಇಟ್ಟುಕೊಳ್ಳಬೇಕು.

ಆಯ್ಕೆ ವಿಧಾನ:-

● ಪ್ರಿಲಿಮ್ಸ್ , ಮೇನ್ಸ್ ಮತ್ತು ಮುಖ್ಯ ಪರೀಕ್ಷೆ ಎನ್ನುವ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ.
● ಕಂಪ್ಯೂಟರ್ ಬೇಸ್ಡ್ ಎಕ್ಸಾಮ್ (computer based exam) ಆಗಿರುತ್ತದೆ.
● ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ, ದಾಖಲೆಗಳ ಪರಿಶೀಲನೆ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರಮುಖ ದಿನಾಂಕಗಳು:

● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 01.08.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 21.08.2023.
● ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ – 21-08-2023.
● ಪ್ರಿಲಿಮ್ಸ್ ಪರೀಕ್ಷೆಗಾಗಿ ಕಾಲ್ ಲೆಟರ್ ಡೌನ್‌ಲೋಡ್ ಮಾಡುವ ಸಮಯ – ಸೆಪ್ಟೆಂಬರ್ 2023
● ಆನ್‌ಲೈನ್ ಪ್ರಿಲಿಮ್ಸ್ ಪರೀಕ್ಷೆ – ಸೆಪ್ಟೆಂಬರ್/ಅಕ್ಟೋಬರ್ 2023
● ಆನ್‌ಲೈನ್ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ – ಅಕ್ಟೋಬರ್ 2023
● ಆನ್‌ಲೈನ್ ಮುಖ್ಯ ಪರೀಕ್ಷೆ -ನವೆಂಬರ್ 2023
● ಆನ್‌ಲೈನ್ ಮುಖ್ಯ ಪರೀಕ್ಷೆಯ ಫಲಿತಾಂಶ ಬಿಡುಗಡೆ – ಡಿಸೆಂಬರ್ 2023
● ಸಂದರ್ಶನಕ್ಕ ಕಾಲ್‌ ಲೆಟರ್‌ – ಜನವರಿ/ಫೆಬ್ರವರಿ 2024
● ಸಂದರ್ಶನ ನಡೆಯುವ ಸಮಯ – ಜನವರಿ/ಫೆಬ್ರವರಿ 2024.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now