ಹಣ ಉಳಿತಾಯ ಮಾಡಬೇಕು ಮತ್ತು ಉಳಿತಾಯ ಮಾಡಿರುವ ಹಣವನ್ನು ಸುರಕ್ಷಿತವಾಗಿ ಹೂಡಿಕೆ (Invest) ಮಾಡಬೇಕು ಎಂದರೆ ಅದಕ್ಕೆ ಅಂಚೆ ಕಛೇರಿ ಯೋಜನೆಗಳು (Post Office Schemes) ಹೆಚ್ಚು ಸೂಕ್ತ ಯಾಕೆಂದರೆ ನಮ್ಮ ಹಣಕ್ಕೆ ಭದ್ರತೆ ಜೊತೆಗೆ ಖಚಿತ ಮೊತ್ತದ ಆದಾಯ ಅಂಚೆ ಕಚೇರಿಗಳಲ್ಲಿ ಗ್ಯಾರಂಟಿ ಸಿಗುತ್ತದೆ.
ಪ್ರಸ್ತುತವಾಗಿ ಅಂಚೆ ಕಛೇರಿಯಲ್ಲಿ ಈ ರೀತಿಯಾಗಿ 13ಕ್ಕೆ ಹೆಚ್ಚು ಉಳಿತಾಯ ಯೋಜನೆಗಳು ಇವೆ. ಅದರಲ್ಲಿ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ (Post office Monthly Income Scheme) ಕೂಡ ಒಂದು ಅತ್ಯುತ್ತಮ ಯೋಜನೆಯಾಗಿತ್ತು. ಈ ಯೋಜನೆಯಲ್ಲಿ ಯಾಕೆ ಹೂಡಿಕೆ ಮಾಡಬೇಕು ಮತ್ತು ಈ ಯೋಜನೆಯಿಂದ ಸಿಗುವ ಲಾಭವೇನು ? ಹಾಗೂ ಯೋಜನೆ ಕುರಿತ ಇನ್ನಷ್ಟು ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ 2000 ಅಲ್ಲ 4000 ಹಣ ನೀಡಲು ನಿರ್ಧರಿಸಿರುವ ಸರ್ಕಾರ, ತಪ್ಪದೇ ಈ ಕೆಲಸ ಮಾಡಿ.!
ಪ್ರಯೋಜನಗಳು:-
* ಅಂಚೆ ಕಛೇರಿಯ ಈ ಮಾಸಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಸಿಗುವ ಅತ್ಯುತ್ತಮ ಅನುಕೂಲತೆ ಏನೆಂದರೆ, ಮನೆಯಿಂದ ದೂರ ಹೋಗಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪ್ರತಿ ತಿಂಗಳು ಖರ್ಚಿಗೆ ಹಣವನ್ನು ಸುಲಭವಾಗಿ ತಲುಪಿಸಬಹುದು.
ಅಥವಾ ತಂದೆ-ತಾಯಿಯಿಂದ ಉದ್ಯೋಗಕ್ಕಾಗಿರುವ ದೂರದ ಸ್ಥಳಗಳಲ್ಲಿರುವವರು ಪ್ರತಿ ತಿಂಗಳು ನೇರವಾಗಿ ಭೇಟಿಯಾಗಿ ಹಣ ನೀಡಲಾಗದಿರುವ ಸಂದರ್ಭದಲ್ಲಿ ಮಕ್ಕಳು ತಮ್ಮ ಹೆಸರಿನಲ್ಲಿ ಅಥವಾ ಪೋಷಕರ ಹೆಸರಿನಲ್ಲಿ ಅಥವಾ ಈ ಮೇಲೆ ತಿಳಿಸಿದಂತೆ ಮಕ್ಕಳ ಹೆಸರಿನಲ್ಲಿ ಅಥವಾ ಜಂಟಿಯಾಗಿ ಹೂಡಿಕೆ ಮಾಡಿ.
ಈ ಸುದ್ದಿ ಓದಿ:- ಕೇವಲ 2496 ರೂಪಾಯಿಗೆ ಸ್ಪಿಂಕ್ಲರ್ ಸೆಟ್ ಪಡೆಯಿರಿ.! ಕೃಷಿ ಇಲಾಖೆಯಿಂದ ರೈತರಿಗೆ ಬಂಪರ್ ಕೊಡುಗೆ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಹಾಕಿ.!
ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ನೀಡಲಾಗುವ ಕಾರ್ಡ್ ಮಕ್ಕಳಿಗೆ ಅಥವಾ ಪೋಷಕರ ನೀಡಿದರೆ ಪ್ರತಿ ತಿಂಗಳು ನಿಗದಿಪಡಿಸಿದ ದಿನದಂದು ಖಾತೆಗೆ ಹಣ ಜಮೆ ಆಗುವುದರಿಂದ ಸರಿಯಾದ ಸಮಯಕ್ಕೆ ಖರ್ಚು ವೆಚ್ಚಕ್ಕೆ ಹಣ ಸಿಗುತ್ತದೆ.
* ಒಂದು ವೇಳೆ ನಾವೇ ಹೂಡಿಕೆ ಮಾಡುವುದಾದರೂ ಪ್ರತಿ ತಿಂಗಳ ಮನೆ ನಿರ್ವಹಣೆ ಖರ್ಚಿಗೆ ಅಥವಾ ಮನೆ ಬಾಡಿಗೆ ಕಟ್ಟಲು ಈ ಹಣ ನಿಗದಿಪಡಿಸಿದ ದಿನಾಂಕದಂದು ಕೈಗೆ ಸಿಗುತ್ತದೆ.
* ಈ ಯೋಜನೆಯಿಂದ ಸಿಗುವ ಬಡ್ಡಿ ರೂಪದ ಲಾಭದ ಹಣವನ್ನು ಅಂಚೆ ಕಚೇರಿಯಲ್ಲಿ ಬೇರೆ ಯಾವುದಾದರೂ ಯೋಜನೆಯಲ್ಲಿ ಹೂಡಿಕೆ ಮಾಡಿ ಇನ್ನು ಹೆಚ್ಚಿನ ಲಾಭವನ್ನು ಪಡೆಯಬಹುದು.
ಈ ಸುದ್ದಿ ಓದಿ:- ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ & ಕ್ಲರ್ಕ್, ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ 51,400
ಯೋಜನೆ ಕುರಿತು ಪ್ರಮುಖ ಅಂಶಗಳು:-
* ಈ ಯೋಜನೆಗೆ ಒಬ್ಬರ ಹೆಸರಿನಲ್ಲಿ ಕನಿಷ್ಠ 9 ಲಕ್ಷ ಹಾಗೂ ಜಂಟಿಯಾಗಿ 15 ಲಕ್ಷ ದವರೆಗೆ ಹೂಡಿಕೆ ಮಾಡಬಹುದು.
* ಕನಿಷ್ಠ ರೂ.1000 ದಿಂದ ಕೂಡ ಹೂಡಿಕೆ ಮಾಡಬಹುದು
* 10 ವರ್ಷ ಮೇಲ್ಪಟ್ಟ ಯಾರ ಹೆಸರಿನಲ್ಲಿ ಬೇಕಾದರೂ ಈ ಮಾಸಿಕ ಉಳಿತಾ ಯೋಜನೆ ಖಾತೆ ತೆರೆಯಬಹುದು.
* ಪ್ರಸ್ತುತವಾಗಿ 1 ಜನವರಿಯಿಂದ 2024 ರಿಂದ 7.4% ಅನ್ವಯವಾಗುತ್ತಿದೆ
* ನೀವು ನಿಗದಿಪಡಿಸಿದ ದಿನಾಂಕದಂದು ಸರಿಯಾಗಿ ನಿಮ್ಮ ಉಳಿತಾಯ ಖಾತೆಗೆ ಅಥವಾ ನೀವು ನೀಡುವ ಇತರೆ ಯಾವುದೇ ಬ್ಯಾಂಕ್ ಉಳಿತಾಯ ಖಾತೆಗೆ ಮಾಸಿಕ ಬಡ್ಡಿ ರೂಪದ ಆದಾಯವು ಜಮೆ ಆಗುತ್ತದೆ
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ.
ಈ ಸುದ್ದಿ ಓದಿ:- ರೈತರಿಗೆ ಬಂಪರ್ ನ್ಯೂಸ್ ಈ ಬ್ಯಾಂಕ್ ನಲ್ಲಿ ಸಾಲ ಮಾಡಿದ ರೈತರ ಸಾಲ ಮನ್ನಾ.! 440 ಕೋಟಿ ಬಡ್ಡಿ ಮನ್ನಾ.!
* ಈ ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳು
* ಪ್ರಸ್ತುತವಾಗಿ ಅನ್ವಯವಾಗಿರುವ ಬಡ್ಡಿ ದರದ ಪ್ರಕಾರ ಲೆಕ್ಕ ಹಾಕಿದರೆ ನೀವು ಜಂಟಿಯಾಗಿ 15 ಲಕ್ಷ ಹೂಡಿಕೆ ಮಾಡಿದರೆ ಮಾಸಿಕವಾಗಿ ರೂ.9,250 ಹಣ ಪಡೆಯಬಹುದು
* ಒಂದು ವೇಳೆ ನೀವು ಮೆಚುರಿಟಿ ಅವಧಿಗೂ ಮುನ್ನ ಪ್ರಿ ಮೆಚ್ಯೂರ್ ವಿತ್ ಡ್ರಾ ಮಾಡುವುದಾದರೆ ಮೊದಲೇ ತಿಳಿಸಿ ಅಪ್ಲಿಕೇಷನ್ ಫಾರಂನಲ್ಲಿ ಫಿಲ್ ಮಾಡಬೇಕು.
ಇಲ್ಲವಾದಲ್ಲಿ ಒಂದು ಬಾರಿ 5 ವರ್ಷ ಅವಧಿಗೆ ಎಂದು ಒಪ್ಪಿಕೊಂಡು ಹೂಡಿಕೆ ಮಾಡಿ ಅದನ್ನು ಹಿಂಪಡೆಯುವುದಾದರೆ ಒಂದು ವರ್ಷ ತುಂಬುವವರೆಗೂ ಹಿಂಪಡೆಯಲು ಸಾಧ್ಯವಿಲ್ಲ, 1 – 3 ವರ್ಷದ ಅವಧಿಯಲ್ಲಿ ಹಿಂಪಡೆಯುವುದಾದರೆ ನಿಮ್ಮ ಹೂಡಿಕೆಯ 2%, 3-5 ವರ್ಷದ ಅವಧಿಯಲ್ಲಿ ಪಡೆಯುವುದಾದರೆ 1% ದಂಡ ಬೀಳುತ್ತದೆ.
* ಯೋಜನೆಯ ಬಗ್ಗೆ ಹೆಚ್ಚು ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿಗೆ ಭೇಟಿ ಕೊಡಿ