ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಗಳಿಂದ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಕೆಲವರು ವಾಹನಗಳನ್ನು ಖರೀದಿಸುವುದಕ್ಕಾಗಿ ಸಾಲಮಾಡಿದ್ದರೆ, ಇನ್ನು ಕೆಲವರು ಗೃಹ ಸಾಲ, ವಾಣಿಜ್ಯ ಸಾಲ, ವೈಯಕ್ತಿಕ ಸಾಲ ಇನ್ನು ಮುಂದಾದ ಯಾವುದಾದರೂ ಒಂದು ಸಾಲವನ್ನು ಪಡೆದಿರುತ್ತಾರೆ.
ಸಾಲ ಪಡೆದವರಿಂದ ಆ ಹಣವನ್ನು ಹಿಂಪಡೆಯಲು ಬ್ಯಾಂಕ್ ಗಳು EMI ಗಳನ್ನು ನಿರ್ಧರಿಸುತ್ತವೆ ಇದರಲ್ಲಿ ಸಾಲ ಮರುಪಾವತಿ ರೂಪದ ಸ್ವಲ್ಪ ಮೊತ್ತದ ಹಣ ಹಾಗೂ ಅದಕ್ಕೆ ಅನ್ವಯವಾಗುವ ಬಡ್ಡಿದರ ಸೇರಿರುತ್ತದೆ. ಸಾಲ ತೀರುವವರೆಗೂ ಪ್ರತಿ ತಿಂಗಳು ಕೂಡ ಈ ರೀತಿ EMI ಗಳನ್ನು ತಪ್ಪದೆ ಸಾಲ ಪಡೆದುಕೊಂಡ ಗ್ರಾಹಕರು ಕಟ್ಟಲೇಬೇಕು.
ಇದುವರೆಗೂ ಕೂಡ EMI ಕಟ್ಟಲು ಆಗದ ಗ್ರಾಹಕರಿಗೆ ತಕ್ಷಣವೇ ಬ್ಯಾಂಕ್ ಗಳು ದಂಡವನ್ನು ಹಾಕುತ್ತಿದ್ದವು, ಇನ್ನು ಮುಂದೆ ಆ ರೀತಿ ಮಾಡುವಂತಿಲ್ಲ ಎಂದು RBI ಆದೇಶಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ ಈ ಕುರಿತು ಗ್ರಾಹಕರಿಂದ ಕೂಡ ಅನೇಕ ಬಾರಿ ಮನವಿ ಸಲ್ಲಿಕೆಯಾಗಿತ್ತು.
ಯಾಕೆಂದರೆ ಎಲ್ಲರಿಗೂ ತಿಳಿದಿರುವಂತೆ ಯಾವುದೇ ಸಾಲದ EMI ಆದರೂ ಕೂಡ ಅದು ಪ್ರತಿ ತಿಂಗಳ 2ನೇ ದಿನಾಂಕದಂದು ಕಡಿತಗೊಳ್ಳುತ್ತವೆ ಆದರೆ ತಿಂಗಳ ಸಂಬಳಕ್ಕೆ ದುಡಿಯುವ ಶೇಕಡವಾರು ಮಂದಿಗೆ 5 ರಿಂದ 10ನೇ ತಾರೀಕಿಗೆ ಅವರ ಖಾತೆಗೆ ಸಂಬಳದ ಹಣ ವರ್ಗಾವಣೆ ಆಗುವುದು.
ಹೀಗಾಗಿ ಬಹಳ ಸಮಸ್ಯೆ ಆಗುತ್ತಿತ್ತು, ಇದನ್ನು ಹೊರತುಪಡಿಸಿ ಕೂಡ ಕೆಲವು ಸಂದರ್ಭಗಳಲ್ಲಿ ಯಾವುದೋ ಒಂದು ತಿಂಗಳು EMI ಬೌನ್ಸ್ ಆಗಿದ್ದರೆ ಅದಕ್ಕೂ ಕೂಡ ದಂಡ ವಿಧಿಸಲಾಗುತ್ತಿತ್ತು. ಈಗ ಇವುಗಳಿಗೆ ಕಡಿವಾಳ ಹಾಕಿ ಗ್ರಾಹಕರಿಗೆ ಅನುಕೂಲತೆ ಆಗಲಿ ಎನ್ನುವ ಉದ್ದೇಶದಿಂದ RBI ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ದೇಶದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಲಯದ ಹಣಕಾಸು ಸಂಸ್ಥೆಗಳ ಮೇಲೆ ತನ್ನ ಹಿಡಿತ ಹೊಂದಿರುವ RBI ಎಲ್ಲಾ ಬ್ಯಾಂಕುಗಳು ಮತ್ತು NBFC ಗಳಿಗೂ ಕೂಡ ಅನ್ವಯವಾಗುವಂತೆ ನಿಯಮ ತಂದಿದೆ. ಇನ್ನು ಮುಂದೆ ಯಾವುದೇ ಗ್ರಾಹಕನಿಗೆ ಆತನ EMI ಕಟ್ಟಲು ಸಾಧ್ಯವಾಗಿಲ್ಲ ಎಂದರೆ ಆತನಿಗೆ ಒಂದು ವಾರಗಳ ಗ್ರೇಸ್ ಅವಧಿ ನೀಡಬೇಕು.
ಕೆಲವೊಮ್ಮೆ EMI ಪಾವತಿ ಸಮಯದಲ್ಲಿ ಆತನ ಖಾತೆಯಲ್ಲಿ ಹಣ ಇಲ್ಲದೆ ಹೋಗಬಹುದು ಹಾಗಾಗಿ ಅದಕ್ಕೂ ಮುನ್ನ ನೋಟಿಫಿಕೇಷನ್ ಕೊಟ್ಟು ಎಚ್ಚರಿಸಿದರೆ ಉತ್ತಮ ಎಂದು ಹೇಳಿದೆ. ಅದೇ ರೀತಿಯಾಗಿ ಇದಿಷ್ಟು ಮಾತ್ರವಲ್ಲದೆ ಕ್ರೆಡಿಟ್ ಕಾರ್ಡ, ಡೆಬಿಟ್ ಕಾರ್ಡ್, ಸಿಬಿಲ್ ಸ್ಕೋರ್ ಇತ್ಯಾದಿಗಳ ಮೇಲು ನಿಯಮ ಹೇಳಿದೆ.
ಎಕ್ಸ್ಪೀರಿಯನ್ ಸಂಬಂಧಿತ ಕಂಪನಿಗಳ ಬಗ್ಗೆ ಕೂಡ ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದು ಇವುಗಳನ್ನು ಸರಿಯಾದ ರೀತಿಯಲ್ಲಿ ಮಾನಿಟರ್ ಮಾಡಬೇಕು ಎನ್ನುವಂತಹ ನಿಯಮಗಳನ್ನು ಕೂಡ ಜಾರಿಗೆ ತಂದಿದೆ. ಯಾವುದೇ ಕಂಪನಿಗಳು ತನ್ನ ಗ್ರಾಹಕನ ಸಿಬಿಲ್ ಸ್ಕೋರ್ ಚೆಕ್ ಮಾಡುವಾಗ ಆತನಿಗೆ ಅಲೆರ್ಟ್ ಕಳುಹಿಸಿ ಮಾಹಿತಿ ಸಲ್ಲಿಸಬೇಕು.
ಹಾಗೆ ವರ್ಷಕ್ಕೊಮ್ಮೆ ಉಚಿತವಾಗಿ ಕಂಪನಿಗಳು ಆತನ ಸಿಬಿಲ್ ಸ್ಕೋರ್ ವಿವರಗಳನ್ನು ನೀಡಬೇಕು ಎಂದು ಹೇಳಿದೆ. ಈ ಎಲ್ಲಾ ಬದಲಾವಣೆಗಳು ಕೂಡ ಇದೇ ಜನವರಿ 2024 ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ ಎಂದು ಆಜ್ಞೆ ನೀಡಿದೆ.