ನೀವು ಒಂದು ಮೊತ್ತದ ಹಣವನ್ನು ಯಾವುದಾದರು ಒಂದು ಕಡೆ ಹೂಡಿಕೆ ಮಾಡಿ ಅದರಿಂದ ಪ್ರತಿ ತಿಂಗಳು ಖಚಿತವಾದ ಲಾಭ ಪಡೆದುಕೊಳ್ಳುವುದರ ಜೊತೆಗೆ ನೀವು ಹೂಡಿಕೆ ಮಾಡಿದ ಹಣವು ಕೂಡ ಅಷ್ಟೇ ಸುರಕ್ಷತೆಯಿಂದ ಇರುತ್ತದೆ ಮತ್ತೆ ಅಸಲಿನ ರೀತಿಯ ವಾಪಸ್ ಸಿಗುತ್ತದೆ ಎಂದರೆ ಯಾರಿಗೆ ತಾನೇ ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಷ್ಟ ಆಗುವುದಿಲ್ಲ.
ಇತ್ತೀಚೆಗೆ ಜನರು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಲು ಶಾರ್ಟ್ ಕಟ್ ಗಳನ್ನು ಬಳಸಲು ಹೋಗಿ ಮೋ’ಸ ಹೋಗಿರುವ ಉದಾಹರಣೆಗಳೇ ಹೆಚ್ಚು ಅಥವಾ ಲಾಭದ ಬದಲು ನ’ಷ್ಟವಾಗಿರುವ ಸಂದರ್ಭಗಳೇ ಹೆಚ್ಚು. ಹಾಗಾಗಿ ಸರ್ಕಾರಿ ಯೋಜನೆಗಳ ಮೊರೆ ಹೋದರೆ ಒಳಿತು ಈ ರೀತಿ ಸರ್ಕಾರಿ ಯೋಜನೆಗಳು ಎಂದ ತಕ್ಷಣವೇ ನೆನಪಿಗೆ ಬರುವುದು ಅಂಚೆಕಚೇರಿ.
ಅಂಚೇಕಚೇರಿಯಲ್ಲಿ ಇರುವ ಯೋಜನೆಗಳಲ್ಲಿ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ಈ ಸ್ಕೀಮ್ ಅಲ್ಲಿ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿ ಇರುವುದರ ಜೊತೆಗೆ ಖಚಿತವಾದ ಮೊತ್ತ ಪ್ರತಿ ತಿಂಗಳು ಬಡ್ಡಿರೂಪದಲ್ಲಿ ನಿಮ್ಮ ಖಾತೆಗೆ ಬರುತ್ತದೆ. ಈ ಯೋಜನೆ ಬಗ್ಗೆ ಹೆಚ್ಚು ಮಾಹಿತಿ ತಿಳಿಸಿ ಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● ಅಂಚೆ ಕಚೇರಿಗಳಲ್ಲಿ ಮಾತ್ರ ಈ POMIS ಸ್ಕೀಮ್ ಅಲ್ಲಿ ಹೂಡಿಕೆ ಮಾಡಲು ಅವಕಾಶ ಇರುತ್ತದೆ.
● ಭಾರತೀಯರಿಗೆ ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಇರುವುದು.
● ಒಬ್ಬ ವ್ಯಕ್ತಿ ಕನಿಷ್ಠ ಒಂದು ಸಾವಿರದಿಂದ 9 ಲಕ್ಷದವರೆಗೆ ಹೂಡಿಕೆ ಮಾಡಲು ಅವಕಾಶ ಇರುತ್ತದೆ.
● ಹೂಡಿಕೆ ಮಾಡಿದ ಮೊತ್ತಕ್ಕೆ 7.1% ಬಡ್ಡಿದರದಲ್ಲಿ ಪ್ರತಿ ತಿಂಗಳು ನೀವು ಕೊಡುವ ಉಳಿತಾಯ ಖಾತೆಗೆ ಹಣ ಬರುತ್ತದೆ.
ಉದಾಹರಣೆಗೆ:-
A.ನೀವು ಸಿಂಗಲ್ ಆಗಿ 9 ಲಕ್ಷ ಹೂಡಿಕೆ ಮಾಡಿದರೆ 5,500 ಪ್ರತಿ ತಿಂಗಳು ನಿಮ್ಮ ಉಳಿತಾಯ ಖಾತೆಗೆ ಬರುತ್ತದೆ.
B. ಇಬ್ಬರು ಜಂಟಿಯಾಗಿ ಹೂಡಿಕೆ ಮಾಡಿದರೆ 15 ಲಕ್ಷದವರೆಗೆ ಲಿಮಿಟ್ ಇರುತ್ತದೆ. ನೀವು 15 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 9,250 ರೂಗಳನ್ನು ಬಡ್ಡಿ ರೂಪದಲ್ಲಿ ಪಡೆಯುತ್ತೀರಿ.
● ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರವು ಪರೀಷ್ಕೃತವಾಗುತ್ತಿರುತ್ತದೆ. ಆ ತ್ರೈಮಾಸಿಕ ಅವಧಿಯಲ್ಲಿ ನಡೆಯುವ ಬಡ್ಡಿದರದ ಆಧಾರದ ಮೇಲೆ ಖಾತೆಗೆ ಹಣ ಬರುತ್ತದೆ.
● ಯೋಜನೆಯ ಅವಧಿ ಐದು ವರ್ಷಗಳು ಇರುತ್ತದೆ. ಐದು ವರ್ಷ ಆದ ಬಳಿಕ ನೀವು ಹೂಡಿಕೆ ಮಾಡಿದ ಮೊತ್ತವನ್ನು ವಾಪಸ್ ಪಡೆಯುತ್ತೀರಿ. ನಿಮ್ಮ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಆಗಿರುವುದರಿಂದ ಯಾವುದೇ ಅಭದ್ರತೆಯ ಭಯವಿಲ್ಲ.
● ಯೋಜನೆ ಆರಂಭಿಸಿದ ಒಂದು ವರ್ಷದ ಬಳಿಕ ನಿಮಗೆ ಹಣ ಅವಶ್ಯಕತೆ ಇದ್ದರೆ ವಿತ್ ಡ್ರಾ ಮಾಡಿಕೊಳ್ಳುವ ಸೌಲಭ್ಯ ಕೂಡ ಇರುತ್ತದೆ.
● ಒಂದು ವರ್ಷದಿಂದ ಮೂರು ವರ್ಷದ ಒಳಗೆ ಹಿಂಪಡೆಯುವುದಾದರೆ, ನಿಮ್ಮ ಹೂಡಿಕೆ ಮೊತ್ತದ 2% ಪೆ’ನಾ’ಲ್ಟಿಯಾಗಿ ಕಡಿತಕೊಳ್ಳುತ್ತದೆ.
● 18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು, ಜಂಟಿಯಾಗಿ ಹೂಡಿಕೆ ಮಾಡುವುದಾದರೆ 10 ವರ್ಷ ವಯಸ್ಸಿನ ಮೇಲ್ಪಟ್ಟವರ ಹೆಸರಿನಲ್ಲೂ ಕೂಡ ಹೂಡಿಕೆ ಮಾಡಬಹುದು.
● ನಾಮಿನಿ ಫೆಸಿಲಿಟಿ ಕೂಡ ಇರುತ್ತದೆ. ಹೂಡಿಕೆದಾರರು ಯೋಜನೆ ಅವಧಿಯಲ್ಲಿ ಮೃ’ತಪಟ್ಟರೆ ವಾರಸುದರರಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಹಣ ತಲುಪುತ್ತದೆ.
● ಹಿರಿಯ ನಾಗರಿಕರು, ನಿರುದ್ಯೋಗಿಗಳು, ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಆದಾಯ ತಂದುಕೊಡುವಂತಹ ಯೋಜನೆ ಇದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿ ಶಾಖೆಯನ್ನು ಸಂಪರ್ಕಿಸಿ.