Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಮಾನವನ ಜೀರ್ಣಾಂಗ ವ್ಯೂಹವು ದೇಹದ ಅತಿ ಮುಖ್ಯವಾದ ಅಂಗ. ಮನುಷ್ಯ ತಿಂದ ಆಹಾರವು ಜೀರ್ಣವಾಗಿ ಆತನಿಗೆ ಶಕ್ತಿಯಾಗಿ ಪರಿವರ್ತನೆ ಆಗಬೇಕು ಎಂದರೆ ಆ ಕಾರ್ಯದಲ್ಲಿ ಜೀರ್ಣಾಂಗ ವ್ಯೂಹದಲ್ಲಿ (Dijestive system) ಬರುವ ಎಲ್ಲಾ ಅಂಗಗಳ (organ) ಪಾತ್ರವು ಮಹತ್ವದ್ದಾಗಿರುತ್ತದೆ.
ಇವುಗಳಲ್ಲಿ ಮುಖ್ಯವಾದ ಜಠರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ಸಾಮಾನ್ಯವಾಗಿ ಆಡು ಭಾಷೆಯಲ್ಲಿ ಇದನ್ನು ಹೊಟ್ಟೆ (abdomen) ಎನ್ನುತ್ತಾರೆ. ಆದರೆ ಹೊಟ್ಟೆ ಎನ್ನುವುದಕ್ಕಿಂತ ಜಠರ ಎನ್ನುವುದು ಬಹಳ ಸೂಕ್ತವಾದ ಪದ ಇದನ್ನೇ ಇಂಗ್ಲಿಷ್ ನಲ್ಲಿ ಸ್ಟಮಕ್ (Stomach) ಎನ್ನುವುದು ಇತ್ತೀಚಿನ ಗಿಡಗಳಲ್ಲಿ ಮನುಷ್ಯನ ಸಣ್ಣ ಪುಟ್ಟ ನಿರ್ಲಕ್ಷದಿಂದಾಗಿ ಜಠರ ಕ್ಯಾನ್ಸರ್ ಗೆ (Stomach Cancer) ಗುರಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಜೊತೆಗೆ ಲಕ್ಷಣಗಳು ಕಾಣಿಸಿಕೊಂಡಾಗಲೂ ಜಾಗೃತಿ ಇಲ್ಲದೆ (awarness) ಚಿಕಿತ್ಸೆ ಇಲ್ಲದೆ ಅನೇಕರು ಪ್ರಾಣಪಾಯ ತಂದುಕೊಳ್ಳುತ್ತಿದ್ದಾರೆ ಹಾಗಾಗಿ ಈ ಅಂಕಣದಲ್ಲಿ ಜಠರದ ಕ್ಯಾನ್ಸರ್ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ತಿಳಿಸುತ್ತಿದ್ದೇವೆ. ಗ್ಯಾಸ್ಟ್ರಿಯಾಟಿಸಿಸ್ ನಿಂದ ( Gastritis ) ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಇದರಲ್ಲಿ ಅಕ್ಯೂಟ್ (acquite) ಗ್ಯಾಸ್ಟ್ರಿಯಾಟಿಸಿಸ್ ಮತ್ತು ಕ್ರೋನಿಕ್ (cronic) ಗ್ಯಾಸ್ಟ್ರಿಯಾಟಿಸಿಸ್ ಎನ್ನುವ ಎರಡು ರೀತಿ ಇದೆ.
ನಾವು ಮಸಾಲೆ ಪದಾರ್ಥಗಳನ್ನು ತಿಂದಾಗ ಹೊಟ್ಟೆ ಉರಿ ಬರುತ್ತಿದೆ, ಖಾರವಾದ ಪದಾರ್ಥಗಳನ್ನು ತಿನ್ನಲು ಆಗುವುದಿಲ್ಲ ಎನ್ನುವ ರೀತಿ ಇದ್ದರೆ ಅದು ಅಕ್ಯೂಟ್ ಗ್ಯಾಸ್ಟ್ರಿಯಾಟಿಸಿಸ್ ಇದು ಆಗಷ್ಟೇ ಶುರುವಾಗಿರುವ ಸ್ಟೇಜ್ ಎಂದು ಸುಲಭ ರೀತಿಯಲ್ಲಿ ಹೇಳಬಹುದು ಆದರೆ ಕ್ರೋನಿಕ್ ಗ್ಯಾಸ್ಟ್ರಿಯಾಸಿಸ್ ಎನ್ನುವುದು ದೀರ್ಘಕಾಲದಿಂದ ನಿಮಗೆ ಜಾಸ್ತಿ ಸಮಸ್ಯೆ ಇದೆ ಆದರೆ ನೀವು ಅದನ್ನು ನಿರ್ಲಕ್ಷಿಸುತ್ತಿರುವುದರಿಂದ ಅದು ಜಠರದ ಒಳಪದರಕ್ಕೆ ಡ್ಯಾಮೇಜ್ ಮಾಡಿದೆ.
ಅಲ್ಲಿ ಊದಿಕೊಳ್ಳುವಿಕೆ ಅಥವಾ ಇನ್ನಿತರ ಬದಲಾವಣೆಗಳಾಗಿವೆ ಎಂದು ಅರ್ಥ. ಇದರಿಂದ ಅಲ್ಸರ್ ಆಗಬಹುದು ಕ್ಯಾನ್ಸರ್ ಕೂಡ ಆಗಬಹುದು. ಹೆಲಿಕೋ ಬ್ಯಾಕ್ಟರಿ ಪೈಲೋರೆ ಎನ್ನುವ ವೈರಸ್ ಇನ್ಫೆಕ್ಷನ್ ನಿಂದ (Virus Infection) ನಿಂದ ಕೂಡ ಜಠರದ ಕ್ಯಾನ್ಸರ್ ಬರುತ್ತದೆ. ಕ್ಯಾನ್ಸರ್ ಆಗಿದೆ ಎಂದು ಗುರುತಿಸಲು ಅದರ ಲಕ್ಷಣಗಳೇನೆಂದರೆ ಸಾಮಾನ್ಯವಾಗಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜಠರದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ನಿಮಗೆ ಜಠರದ ಕ್ಯಾನ್ಸರ್ ಆಗಿದ್ದರೆ ನೀವು ಬೆಳಿಗ್ಗೆ ತಿಂದ ಆಹಾರವು ಜೀರ್ಣವಾಗದೆ ರಾತ್ರಿ ವಾಮಿಟ್ ಆಗುತ್ತದೆ, ಹೊಟ್ಟೆಯಲ್ಲಿ ಅನ್ ಕಂಫರ್ಟ್ ಆದ ಅನುಭವ, ಇದ್ದಕ್ಕಿದ್ದಂತೆ ದೇಹ ತೂಕ ಬಹಳ ಕಡಿಮೆ ಆಗುವುದು, ನೀವು ವಾಂತಿ ಮಾಡಿದಾಗ ರಕ್ತ ಕಾಣಿಸಿಕೊಳ್ಳುತ್ತದೆ, ಸ್ವಲ್ಪ ಊಟ ಮಾಡಿದರೆ ಹೊಟ್ಟೆ ಊದಿಕೊಂಡ ಹಾಗೆ ಆಗುತ್ತದೆ, ಕೆಲವೊಮ್ಮೆ ಹೆಚ್ಚೆಚ್ಚು ಹಸಿವು ಆಗುತ್ತದೆ, ಮಲವಿಸರ್ಜನೆಯಲ್ಲಿ ಕಪ್ಪು ಬಣ್ಣದ ಅಂಶಗಳು ಹೊರಹೋದ ರೀತಿ ಇರುತ್ತದೆ.
ಈ ರೀತಿ ಲಕ್ಷಣಗಳು ಇದ್ದಾಗ ತಪ್ಪದೇ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ವೈರಸ್ ಇನ್ಫೆಕ್ಷನ್ ಇಂದ ಜಠರದ ಕ್ಯಾನ್ಸರ್ ಆಗಿದ್ದರೆ ಅದನ್ನು ಮಾತ್ರೆಯಿಂದಲೇ ಗುಣಪಡಿಸಬಹುದು ಹೆದರುವ ಅಗತ್ಯ ಇಲ್ಲ. ಎಂಡೋಸ್ಕೋಪಿ ಟೆಸ್ಟ್ ಗೆ (Endoscopy test) ಒಳಪಡಬೇಕು ಅಂದರೆ ಕ್ಯಾಮರಾ ಹಾಕಿ ಹೊಟ್ಟೆ ಒಳಗಡೆ ಏನಾಗಿದೆ ಎಂದು ನೋಡುತ್ತಾರೆ.
ಅದರಲ್ಲಿ ಗೆಡ್ಡೆಗಳ ರೀತಿ ಇದ್ದರೆ ಸ್ಯಾಂಪಲ್ ತೆಗೆದು ಬಯೋಪ್ಸಿ (biopsy) ಮಾಡಿ ಕ್ಯಾನ್ಸರ್ ಎನ್ನುವುದನ್ನು ಧೃಡಪಡಿಸುತ್ತಾರೆ ಇಲ್ಲವಾದಲ್ಲಿ ಬೇರೆ ಏನು ಸಮಸ್ಯೆ ಆಗಿದೆ ಎನ್ನುವುದರ ನಿಖರವಾದ ಮಾಹಿತಿ ಸಿಗುತ್ತದೆ, ಅದರ ಚಿಕಿತ್ಸೆ ನೀಡುತ್ತಾರೆ. ಅರ್ಲಿ ಗ್ಯಾಸ್ಟಿಕ್ ಕ್ಯಾನ್ಸರ್ ಆಗಿದ್ದರೆ ಕೂಡ ಅದನ್ನು ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ ಆದ್ದರಿಂದ ಈ ಲಕ್ಷಣಗಳ ಬಗ್ಗೆ ಗಮನ ಇರಲಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೆ ಶೇರ್ ಮಾಡಿ ಅವರಿಗೂ ಮಾಹಿತಿ ತಿಳಿಸಿ.