ಕರ್ಪೂರ ಮನೆಯಿಂದ ಹಿಡಿದು ಗುಡಿಯವರೆಗೆ, ಗಣೇಶ ಹಬ್ಬದಿಂದ ಹಿಡಿದು ಮದುವೆ ಮನೆಯವರೆಗೆ ಎಲ್ಲಾ ಕಡೆ ಬಹಳ ಡಿಮ್ಯಾಂಡ್ ಇರುವ ವಸ್ತು. ಹಾಗಾಗಿ ಕರ್ಪೂರವನ್ನು ತಯಾರಿಸುವ ಕೆಲಸ ಮಾಡುವುದರಿಂದ ಲಾಸ್ ಆಗುವುದಿಲ್ಲ ಎನ್ನುವುದು ಗ್ಯಾರಂಟಿ. ಏಕೆಂದರೆ ನಾವು ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಪೂಜೆಗಾಗಿ ಬಳಸುವ ವಸ್ತು ಇದಾಗಿದೆ.
ಇನ್ನು ದೇವಸ್ಥಾನಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಮದುವೆ ಸೀಸನ್ ಇತ್ಯಾದಿ ಸಮಯದಲ್ಲಿ ಇದಕ್ಕೆ ಡಿಮ್ಯಾಂಡ್ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಗ್ಯಾರಂಟಿ ಕೊಡಬಹುದು. ನೀವೇನಾದರೂ ಕರ್ಪೂರ ಮಾಡುವ ಬಿಸಿನೆಸ್ ಶುರು ಮಾಡುವುದಾದರೆ 1Kg ಕರ್ಪೂರಕ್ಕೆ ಕಡಿಮೆ ಎಂದರು 2000 ಲಾಭ ಮಾಡುವುದು ಗ್ಯಾರಂಟಿ ಇದರ ಕುರಿತು ಕೆಲ ಇಂಟರೆಸ್ಟಿಂಗ್ ಸಂಗತಿಗಳು ಹೀಗಿವೆ ನೋಡಿ.
ಕರ್ಪೂರವನ್ನು ತಯಾರಿಸುವುದು ಹೇಗೆಂದರೆ ಕರ್ಪೂರ ತಯಾರಿಸುವ ಯಂತ್ರ ಇರುತ್ತದೆ ಇದು ಸ್ಟಾರ್ಟಿಂಗ್ ರೂ.70,000 ಕೂಡ ಇರುತ್ತದೆ ಮತ್ತು ನಿಮ್ಮ ಅವಶ್ಯಕತೆಗೆ ತಕ್ಕಹಾಗೆ ನೀವು ದೊಡ್ಡ ಮಿಷನ್ ಖರೀದಿಸಬಹುದು. ಸ್ಟಾರ್ಟಿಂಗ್ ಶುರು ಮಾಡುವಾಗ ಚಿಕ್ಕ ಮೆಷಿನ್ ನಿಂದ ಆರಂಭಿಸುವುದೇ ಒಳ್ಳೆಯದು.
ಈ ಸುದ್ದಿ ಓದಿ:- ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, PUC ಪಾಸ್ ಆದವರು ಅರ್ಜಿ ಸಲ್ಲಿಸಿ ವೇತನ 42,000/-
ಇದರಲ್ಲಿ ಅಚ್ಚುಗಳು ಕೂಡ ಇರುತ್ತವೆ, ನೀವು ಯಾವ ಆಕಾರದ ಡೈ ಬೇಕು ಆ ಆಕಾರದ ಡೈಸ್ ಸೆಟ್ ಮಾಡಿ ರಾ ಮೆಟೀರಿಯಲ್ ಹಾಕಿದರೆ ಸಾಕು ಕರ್ಪೂರ ಬರುತ್ತದೆ. ನಂತರ ನೀವು ಅದನ್ನು ಪಾಲಿಬ್ಯಾಗ್ ನಲ್ಲಿ ಕವರ್ ಮಾಡಿ ಸೇಲ್ ಮಾಡಲು ಕೊಡಬಹುದು. ರಾ ಮೆಟೀರಿಯಲ್ ಆಗಿ ಮಂಗಳಂ ಪೌಡರ್ ಹಾಗೂ ಎಕ್ಸಾಮಿನ್ ಪೌಡರ್ ಬಳಸುತ್ತಾರೆ.
ಈ ಮಿಷನ್ ಹಾಗೂ ರಾ ಮೆಟೀರಿಯಲ್ ಗಳು ಇಂಡಿಯಾ ಮಾರ್ಟ್ ನಲ್ಲಿ ಆನ್ಲೈನ್ ನಲ್ಲಿ ಸಿಗುತ್ತವೆ. ಮಂಗಳಂ ಪೌಡರ್ ಒಂದು Kgಗೆ 600 ರಿಂದ 700 ಹಾಗೂ ಎಕ್ಸಾಮಿನ್ ಪೌಡರ್ 150 ರಿಂದ 200 ರೂಪಾಯಿ ಇರುತ್ತದೆ. ನೀವು ದೊಡ್ಡ ಸೈಜ್ ನ ಮಿಷನ್ ಖರೀದಿಸಿದರೆ ರೂ.1,20,000 ಕ್ಕೆ ಸಿಗುತ್ತದೆ.
ಇದರಲ್ಲಿ ಒಂದು ಬಾರಿಗೆ 12 ಅಚ್ಚುಗಳು ಬರುತ್ತವೆ ಹಾಗೂ 2 ಲಕ್ಷಕ್ಕೂ ಕೂಡ ಮಿಷನ್ ಇದೆ ಇದರಲ್ಲಿ ಒಂದೇ ಬಾರಿಗೆ 20 ಅಚ್ಚು ಗಳು ಬರುತ್ತದೆ. 6mm ನಿಂದ 16mm ವರೆಗೂ ಕೂಡ ಕರ್ಪೂರ ತಯಾರಿಸಬಹುದು ನೀವು ನಿಮ್ಮ ಮನೆಯಲ್ಲಿ ಈ ಮಿಷನ್ ಇಟ್ಟುಕೊಂಡು ಬಿಸಿನೆಸ್ ಮಾಡಬಹುದು ನಿಮ್ಮ ಮನೆ ಜನರೇ ಬಿಡುವಿದ್ದಾಗ ಮಾಡಿದರೂ ಆಗುತ್ತದೆ.
ಈ ಸುದ್ದಿ ಓದಿ:-ಹೋಟೆಲ್ ಬ್ಯುಸಿನೆಸ್ ಪ್ರತಿದಿನ 15 ಸಾವಿರ ಖರ್ಚು, 25 ಸಾವಿರ ಲಾಭ.!
ಪ್ರೊಫೆಷನಲ್ ಆಗಿ ಶುರು ಮಾಡುವುದಾದರೆ ಯಾವುದೇ ಇದಕ್ಕಾಗಿ ಸೆಪೆರೇಟ್ ರೆಂಟ್ ಜಾಗ ಮಾಡುವ ಅವಶ್ಯಕತೆ ಇಲ್ಲ ಮನೆಯಲ್ಲಿ ಮಿಷನ್ ಇಡಬಹುದು ಕರೆಂಟ್ ಕನೆಕ್ಷನ್ ಮಾತ್ರ ಕಮರ್ಷಿಯಲ್ ಮಾಡಿಸಿದರೆ ಸಾಕು ಯಾಕೆಂದರೆ ನೀವು 12 ತಾಸು ಇದನ್ನು ರನ್ ಮಾಡುವುದಾದರೆ 150 ಯೂನಿಟ್ ಆಗುತ್ತದೆ.
ನಿಧಾನವಾಗಿ ನೀವು ಇದನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಿದ ಮೇಲೆ ಪಾಲಿಬ್ಯಾಗ್ ಮಿಷನ್ ಕೂಡ ಖರೀದಿಸಿ ನೀವೇ ಪಾಲಿ ಕವರ್ ಗಳನ್ನು ಕೂಡ ಮ್ಯಾನುಫ್ಯಾಕ್ಚರ್ ಮಾಡಿ ಪ್ಯಾಕ್ ಮಾಡಿ ಸೇಲ್ ಮಾಡಬಹುದು ಆಗ ಖರೀದಿಸುವ ಖರ್ಚು ಕೂಡ ಉಳಿಯುತ್ತದೆ. ಏನಿಲ್ಲ ಎಂದರು ಮಾರ್ಕೆಟಿಂಗ್ ಸ್ಕಿಲ್ ಗೊತ್ತಿದ್ದರೆ ದಿನಕ್ಕೆ 2000 ವರೆಗೂ ಕೂಡ ತಿಳಿಯಬಹುದು ಎನ್ನುತ್ತಾರೆ ಈಗಾಗಲೇ ಕರ್ಪೂರ ಮಾಡುವ ಬಿಸಿನೆಸ್ ನಲ್ಲಿ ತೊಡಗಿಕೊಂಡಿರುವವರು.