ಈ ರೀತಿ ವ್ಯವಸಾಯ ಮಾಡಿದರೆ ಬೇಡ ಅಂದ್ರು ತಿಂಗಳಿಗೆ 1 ಲಕ್ಷ ಆದಾಯ ಗ್ಯಾರಂಟಿ.!

 

WhatsApp Group Join Now
Telegram Group Join Now

ವ್ಯವಸಾಯದಲ್ಲಿ ಈಗ ಸಾಕಷ್ಟು ರೆವೊಲ್ಯೂಷನ್ ಬಂದಿದೆ. ಹಿಂದೆಲ್ಲಾ ರೈತನು ತನ್ನ ಕುಟುಂಬದ ಹೊಟ್ಟೆಪಾಡಿಗಾಗಿ ವ್ಯವಸಾಯ ಮಾಡುತ್ತಿದ್ದ ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ರೈತನ ಕೂಡ ಆರ್ಥಿಕವಾಗಿ ಸದೃಢನಾಗಬೇಕು ಆದರೆ ಹೀಗೆ ಆತ ಸಾಂಪ್ರದಾಯಿಕ ವಿಧಾನಗಳಲ್ಲಿ ಬರಿ ಆಹಾರ ಬೆಳೆಯುತ್ತಿರುವುದರಿಂದ ಲಾಭ ಮಾಡಲು ಆಗುವುದಿಲ್ಲ.

ಹಾಗೆಂದ ಮಾತ್ರಕ್ಕೆ ಆಹಾರ ಧಾನ್ಯಗಳನ್ನು ಬೆಳೆಯದೆ ನಿರ್ಲಕ್ಷ ಮಾಡುವಂತೆಯೂ ಇಲ್ಲ ಇದನ್ನು ಬ್ಯಾಲೆನ್ಸ್ ಮಾಡುವ ಸರಿಯಾದ ವಿಧಾನ ಗೊತ್ತಿದ್ದು ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು? ಯಾವ ಬೆಳೆ ಜೊತೆಗೆ ಯಾವ ಬೆಳೆ ಬೆಳೆಯಬಹುದು? ಹೇಗೆ ಇರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು? ಎನ್ನುವ ಮಾರ್ಗದರ್ಶನ ಸಿಕ್ಕರೆ ಇರುವ ಒಂದೇ ಒಂದು ಎಕರೆಯಲ್ಲಿ ತಿಂಗಳಿಗೆ ಕಡಿಮೆ ಎಂದರು ಒಂದು ಲಕ್ಷ ದುಡಿಯಬಹುದು.

ಇದನ್ನು ಹೇಳುವುದು ಮಾತ್ರವಲ್ಲದೆ ಸಾಧಿಸಿ ತೋರಿಸಿರುವ ರೈತರು ನೀಡಿರುವ ಕೆಲವು ಸಲಹೆ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ರೈತನು ಹೇಳಿದ ಮಾತು ಏನೆಂದರೆ, ನಿಮಗೆ ಒಂದೇ ಎಕರೆ ಜಮೀನು ಇರಲಿ ಅಥವಾ ನಿಮ್ಮ ಜಮೀನು ಎಷ್ಟೇ ಇರಲಿ ಅದರಲ್ಲಿ ರೈತ ಐದು ವಿಭಾಗ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- 2024-25 ನೇ ಸಾಲಿನ ಮುಂಗಾರು ಬೆಳೆಗೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

ಇದರಲ್ಲಿ 40 ಪರ್ಸೆಂಟ್ ಆಹಾರ ಧಾನ್ಯಗಳನ್ನು ಬೆಳೆಯಲು ಇಟ್ಟುಕೊಳ್ಳಬೇಕು ಮುದ್ದೆ ತಿನ್ನುವ ಕಡೆ ರಾಗಿ ಬೆಳೆಯಲಿ, ಅನ್ನ ತಿನ್ನುವವರು ಭತ್ತ ಬೆಳೆಯಲಿ ಅಥವಾ ರೊಟ್ಟಿ ತಿನ್ನುವವರು ಜೋಳ ಬೆಳೆಯಲಿ ಇದು ಆತನ ಕುಟುಂಬಕ್ಕೆ ಹಾಗೂ ಆತನನ್ನು ಅವಲಂಬಿಸಿದವರಿಗೆ ಒಂದು ವರ್ಷದವರೆಗೆ ಬೇಕಾಗುತ್ತದೆ.

ಅದೇ ರೀತಿಯಾಗಿ ಒಬ್ಬ ಮನುಷ್ಯ ದಿನಕ್ಕೆ ಇಷ್ಟು ಗ್ರಾಂ ಪ್ರೋಟೀನ್, ಇಷ್ಟು ಗ್ರಾಂ ಫ್ಯಾಟ್ ಇಷ್ಟು ಗ್ರಾಂ ಕ್ಯಾಲ್ಸಿಯಂ, ಇಷ್ಟು ಗ್ರಾಂ ಕಾರ್ಬೋಹೈಡ್ರೇಟ್ಸ್ ತಿನ್ನಬೇಕು ಎನ್ನುವ ನಿಯಮ ಇದೆ ಆಧಾರದ ಮೇಲೆ ಅದನ್ನು ವರ್ಷಕ್ಕೆ ಕ್ಯಾಲುಕೇಟ್ ಮಾಡಿ ಬೆಳೆಗಳನ್ನು ಬೆಳೆಯಬೇಕು.

ಹಿಂದೆ ಸಮಗ್ರ ಕೃಷಿ ಎನ್ನುವ ಕಾನ್ಸೆಪ್ಟ್ ಇಲ್ಲದೆ ಇದ್ದರೂ ನಮ್ಮ ಹಿರಿಯರಿಗೆ ಅದೆಲ್ಲ ಗೊತ್ತಿತ್ತು ಆದರೆ ಈಗ ಅದಕ್ಕೆ ವೈಜ್ಞಾನಿಕ ಟಚ್ ಕೊಟ್ಟು ಹೊಸ ರೂಪದಲ್ಲಿ ತರಲಾಗಿದೆ ಅಷ್ಟೇ. ಇದು ಕೃಷಿಗೆ ಇನ್ನಷ್ಟು ಪೂರಕವಾಗಿದೆ. ಕೃಷಿ ಎಂದ ಮಾತ್ರಕ್ಕೆ ಬರೀ ಬೆಳೆಗಳನ್ನು ಬೆಳೆಯುವುದು ಮಾತ್ರವಲ್ಲ ಇದಕ್ಕೆ ಪೂರಕವಾಗಿಯೇ ಹಸು ಸಾಕಾಣಿಕೆ, ಕುರಿ ಕೋಳಿ ಸಾಕಾಣಿಕೆ, ರೇಷ್ಮೆ ಕೃಷಿ, ಮೀನು ಸಾಕಾಣಿಕೆ ಎಲ್ಲವನ್ನು ತಾನಿರುವ ವಾತಾವರಣದಲ್ಲಿಯೇ ವ್ಯವಸ್ಥೆ ಮಾಡಿಕೊಂಡು ಮಾಡಬೇಕು.

ಈ ಸುದ್ದಿ ಓದಿ:- Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ.!

ಹಾಗೆ ದಿನದ ಆದಾಯ, ತಿಂಗಳಿಗೆ ಆದಾಯ ಕೊಡುವ, ಮೂರು ತಿಂಗಳಿಗೆ ಆದಾಯ ಕೊಡುವ, ವಾರ್ಷಿಕ ಆದಾಯ ಕೊಡುವ ಬೆಳೆಗಳನ್ನು ಬೆಳೆಯಬೇಕು. ಆಹಾರ ಪದಾರ್ಥಗಳಾದ ಏಕದಳ ಧಾನ್ಯಗಳ ಜೊತೆಗೆ ಪ್ರೋಟೀನ್ ಇರುವ ದ್ವಿ ದಳ ಧಾನ್ಯಗಳು, ಈ ದ್ವಿದಳ ಧಾನ್ಯಗಳ ಜೊತೆಗೆ ಎಣ್ಣೆ ಕಾಳುಗಳು ಮಿಶ್ರ ಮಾಡಿ ಮಿಶ್ರ ಬೆಳೆ ಬೆಳೆಯಬೇಕು. ಜೊತೆಗೆ ದೊಡ್ಡ ದೊಡ್ಡ ಮರಗಳನ್ನು ವಾರ್ಷಿಕ ಆದಾಯ ಎಂದು ಪರಿಗಣಿಸಲಾಗುತ್ತದೆ.

ಇವುಗಳನ್ನು ಬದುಗಳಲ್ಲಿ ಅಥವಾ ಹೊಲದಲ್ಲಿಯೇ ಬೆಳೆಯಬಹುದು. ಆ ಮರಗಳು ಬೆಳೆಯುವವರೆಗೆ ಅದರ ಕೆಳಗೆ ಕೃಷಿ ಮಾಡಬಹುದು ಮರಗಳು ಬೆಳೆದ ಮೇಲೆ ಅದರಿಂದಲೇ ಲಾಭ ಬರುತ್ತದೆ ಹೀಗೆ ಒಂದು ಕುಟುಂಬಕ್ಕೆ ವರ್ಷಪೂರ್ತಿ ಉದ್ಯೋಗ ಹಾಗೂ ಆದಾಯವು ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುವ ಉತ್ತಮ ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ ಇದರ ಬಗ್ಗೆ ಇನ್ನಷ್ಟು ಡೀಟೇಲ್ ಆಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now