ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಹಣದ ಅಗತ್ಯತೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು, ಗೃಹಿಣಿಯರು, ವೃದ್ಧರು ಹೀಗೆ ಪ್ರತಿಯೊಬ್ಬರಿಗೂ ಕೂಡ ಅವರದ್ದೇ ಆದ ಖರ್ಚುಗಳು ಇರುತ್ತವೆ. ಆದರೆ ಇದರಲ್ಲಿ ಹೆಚ್ಚಿನವರು ದುಡಿಯುತ್ತಿರುವುದಿಲ್ಲ. ಪ್ರತಿ ಬಾರಿ ಹಣದ ಅಗತ್ಯತೆ ಬಿದ್ದಾಗ ಮತ್ತೊಬ್ಬರ ಮೇಲೆ ಅವಲಂಬಿತರಾಗುವುದು ಮನಸ್ಸಿಗೆ ಬಹಳ ದುಃ’ಖ ತರುತ್ತದೆ.
ಇಂತಹ ಸಂದರ್ಭ ಬಂದಾಗ ತಮಗೂ ಆದಾಯದ ಮೂಲ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿದೇ ಇರದು. ನಿಮಗೂ ಹೀಗನಿಸಿದ್ದರೆ ಈ ಲೇಖನ ಉಪಯುಕ್ತವಾಗುತ್ತದೆ. ಈಗಾಗಲೇ ನಿಮ್ಮ ಬಳಿ ಇರುವ ಹಣವನ್ನು ಒಂದೆಡೆ ಹೂಡಿಕೆ ಮಾಡಿ ಆ ಹಣವನ್ನು ಹಾಗೆ ಇರುವಂತೆ ನೋಡಿಕೊಂಡು ಪ್ರತಿ ತಿಂಗಳ ಖರ್ಚಿಗಾಗಿ ನೀವು ಅದರಲ್ಲಿ ಬಡ್ಡಿ ರೂಪದ ಲಾಭ ಪಡೆಯಬಹುದು ಮತ್ತು ಆ ಬಡ್ಡಿ ಹಣವನ್ನು ನಿಮ್ಮ ತಿಂಗಳ ಖರ್ಚಿಗೆ ವಿನಿಯೋಗಿಸಿಕೊಳ್ಳಬಹುದು.
ಮಕ್ಕಳಿಗೆ ಪ್ರತಿ ತಿಂಗಳು ಹಣ ಕಳುಹಿಸಲು ಆಗದವರು ಅಥವಾ ಹೆಚ್ಚು ಹಣ ಕೊಟ್ಟರೆ ಮಕ್ಕಳು ಹಾಳಾಗುತ್ತಾರೆ ಎಂದು ಯೋಚಿಸುವವರು, ಪೆನ್ಷನ್ ಹಣ ಬಂದಿದೆ ಇದನ್ನು ಸೇಫ್ ಆಗಿ ಇಡಬೇಕು. ಆದರೆ ಪ್ರತಿ ತಿಂಗಳ ಮೆಡಿಕಲ್ ಖರ್ಚಿಗೆ ಸ್ವಲ್ಪ ಆದಾಯ ಇದರಿಂದ ಬರಬೇಕು ಎಂದು ಯೋಚಿಸುವವರು ಅಥವಾ ತವರು ಮನೆಯಿಂದ ಸ್ವಲ್ಪ ಹಣ ಕೊಟ್ಟಿದ್ದಾರೆ.
ಈ ಹಣವನ್ನು ಬಳಸಬೇಕು ಎಂದು ಬಯಸುವ ಗೃಹಿಣಿಯರು ಯಾರೇ ಆದರೂ ಅಥವಾ ಪ್ರತಿ ತಿಂಗಳು ಬಾಡಿಗೆಗೋ ಅಥವಾ ಇನ್ಯಾವುದೋ ಖರ್ಚಿಗೋ ಈಗಾಗಲೇ ನನ್ನ ಬಳಿ ಇರುವ ಉಳಿತಾಯ ಅನುಕೂಲವಾಗಲಿ ಎಂದು ಬಯಸುವ ಪುರುಷರು ಯಾರು ಬೇಕಾದರೂ ಈಗ ನಾವು ಹೇಳುವ ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ ಪ್ರತಿ ತಿಂಗಳು ಒಂದು ನಿಶ್ಚಿತವಾದ ಆದಾಯವನ್ನು ತಮ್ಮ ತಿಂಗಳ ಖರ್ಚಿಗಾಗಿ ಬಳಸಬಹುದು ಅದರ ವಿವರ ಹೀಗಿದೆ.
1. ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆ (POMIS):-
ಈ ಯೋಜನೆಯಲ್ಲಿ ವ್ಯಕ್ತಿ ಒಬ್ಬ 4.5 ಲಕ್ಷದವರೆಗೆ ಜಂಟಿಯಾಗಿ 9 ಲಕ್ಷದವರೆಗೆ ಮತ್ತು ಮೂವರು ಒಟ್ಟಾಗಿ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆ ಮಾಡುವ ಹಣ 100% ರಷ್ಟು ಭದ್ರತೆಯಿಂದ ಕೂಡಿರುತ್ತದೆ ಮತ್ತು 7.4% ಬಡ್ಡಿದರದ ಅನ್ವಯ ಪ್ರತಿ ತಿಂಗಳು ಖಚಿತ ಆದಾಯ ಪಡೆಯಬಹುದು.
ಇದರ ಮೆಚುರಿಟಿ ಅವಧಿ 5 ವರ್ಷ. ಐದು ವರ್ಷದವರೆಗೆ ಆದಾಯ ತೆರಿಗೆ ಬೆನಿಫಿಟ್ ಗಳೊಂದಿಗೆ ಬಡ್ಡಿ ರೂಪದ ಆದಾಯವು ನಿಮ್ಮ ಉಳಿತಾಯ ಖಾತೆಗೆ ಕ್ರೆಡಿಟ್ ಆಗುತ್ತದೆ ಮೆಚುರಿಟಿ ಸಮಯದಲ್ಲಿ ನಿಮ್ಮ ಅಸಲು ಹಣವು ವಾಪಸ್ ಸಿಗುತ್ತದೆ.
2. ಮ್ಯೂಚುವಲ್ ಫಂಡ್ (Systematic Withdrawal Plan):-
ಈ ಮೇಲೆ ತಿಳಿಸಿದ್ದಕ್ಕಿಂತಲೂ ಹೆಚ್ಚಿಗೆ ಲಾಭ ಬೇಕು ರಿಸ್ಕ್ ತೆಗೆದುಕೊಳ್ಳುತ್ತೇನೆ ಎಂದು ಯೋಚಿಸುವವರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. 10- 12% ಬಡ್ಡಿ ದರದೊಂದಿಗೆ ನಿಮ್ಮ ಹೂಡಿಕೆಯ ಅಲ್ಪ ಮೊತ್ತದ ಹಣ ಕೂಡ ಪ್ರತಿ ತಿಂಗಳು ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ.
ಇದನ್ನು SWP ಯೋಜನೆಗಳು ಎಂದು ಕೂಡ ಕರೆಯುತ್ತಾರೆ ಇದರಲ್ಲಿ ಹಲವಾರು ಕಂಪನಿ ಯೋಜನೆಗಳು ಇವೆ. ಉದಾಹರಣೆಗೆ ವಿವರಿಸುವುದಾದರೆ ನೀವು ರೂ.10 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಈ ಬಡ್ಡಿದರದ ಅನ್ವಯ ರೂ.15,000 ಆದಾಯದೊಂದಿಗೆ ನಿಮ್ಮ ಹೂಡಿಕೆಯ ಹಣ ಸಿಗುತ್ತಿರುತ್ತದೆ ಇದರ ಡ್ಯುರೇಷನ್ ಅವಧಿ 7-10 ವರ್ಷಗಳು ಇರುತ್ತದೆ.
* ಆನುವಲ್ ಡೆಪಾಸಿಟ್ ಸ್ಕೀಂ (Anuity Deposite Scheme):-
ಈ ಯೋಜನೆಯ ಅವಧಿ ಒಂದು ವರ್ಷಗಳಾಗಿರುತ್ತದೆ. ಒಂದು ವರ್ಷದವರೆಗೆ ಆಯಾ ಬ್ಯಾಂಕ್ ಅನುಸಾರ 5%-7% ಬಡ್ಡಿದರದೊಂದಿಗೆ ನಿಮ್ಮ ಹೂಡಿಕೆಯ ಹಣವು ಕೂಡ ಒಂದು ವರ್ಷದ ಒಳಗೆ ಡಿವೈಡ್ ಗಳಾಗಿ ಖಾತೆ ಸೇರಿರುತ್ತದೆ. ಒಂದು ವರ್ಷಕ್ಕೆ ಇದರ ಪೀರಿಯಡ್ ಮುಗಿಯುತ್ತದೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಯೂ ಈ ಯೋಜನೆ ಲಭ್ಯವಿದೆ.
* ಪ್ರಧಾನ ಮಂತ್ರಿ ವಯೋ ವಂದನ ಯೋಜನೆ:-
ಇನ್ನು ಹಿರಿಯ ನಾಗರಿಕರಿಗಾಗಿ ಇರುವ ಪ್ರಧಾನಮಂತ್ರಿ ವಯೋ ವಂದನ ಯೋಜನೆಯಡಿ ಕೂಡ ಹೆಚ್ಚಿನ ರೂಪದ ಬಡ್ಡಿದರವನ್ನು ಪಡೆಬಹುದಾಗಿದೆ. ಇದನ್ನು ಪಿಂಚಣಿ ಯೋಜನೆ ಎಂದೇ ಕರೆಯುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ, ಸಾಮಾನ್ಯವಾದ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿದರವು ಸಿಗುತ್ತದೆ ಇದು ಪ್ರತಿ ತಿಂಗಳು ಹೂಡಿಕೆದಾರನ ಖಾತೆಗೆ ಕ್ರೆಡಿಟ್ ಆಗುತ್ತದೆ. ಆದರೆ 60 ವರ್ಷ ಮೇಲ್ಪಟ್ಟವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ