ಹಿಂದೆ ಸಕ್ಕರೆ ಕಾಯಿಲೆಯನ್ನು ಶ್ರೀಮಂತರ ಕಾಯಿಲೆ ಎನ್ನಲಾಗುತ್ತಿತ್ತು ಮತ್ತು ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಆದರೆ ಇಂದು ಡಯಾಬಿಟಿಕ್ ಗೆ ಭಾರತವೇ ರಾಜಧಾನಿ ಎನ್ನುವ ರೀತಿಯಲ್ಲಿ ಪ್ರತಿ ಮನೆ ಮನೆಗಳಲ್ಲೂ ಕೂಡ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸಿಗುತ್ತಿದ್ದಾರೆ ಮತ್ತು ವಯಸ್ಸಾದವರು ಮಾತ್ರವಲ್ಲದೆ ಮಕ್ಕಳಲ್ಲೂ ಕೂಡ ಸಕ್ಕರೆ ಕಾಯಿಲೆ ಉಂಟಾಗುತ್ತಿರುವುದು ಬಹಳ ಗಾಬರಿ ತರುತ್ತಿದೆ.
ಸಕ್ಕರೆ ಕಾಯಿಲೆಯಿಂದ ದೇಹದಲ್ಲಿ ರಕ್ತ ಸಂಚಾರಕ್ಕೆ ಅಡ್ಡಿಯಾಗಿ ಹತ್ತಾರು ಬಗೆಯ ಆರೋಗ್ಯ ಸಮಸ್ಯೆಗಳು ಬರುತ್ತವೆ. ಹೃದಯ ಸಂಬಂಧಿತ ಸಮಸ್ಯೆ ಮೈ ಕೈ ನೋವು ದೃಷ್ಟಿ ಹೀನತೆ ಈ ರೀತಿಯ ಇನ್ನು ಅನೇಕ ಇಮ್ ಬ್ಯಾಲೆನ್ಸ್ ಗಳು ಉಂಟಾಗುತ್ತವೆ ಹಾಗಾಗಿ ಆರೋಗ್ಯ ನಾರ್ಮಲ್ ಆಗಿರಬೇಕು ಎಂದರೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹತೋಡಿಯಲ್ಲಿ ಇಟ್ಟುಕೊಳ್ಳಬೇಕು.
ಈ ಸುದ್ದಿ ಓದಿ:-ಲಾಭದಾಯಕ ಸೇವಂತಿಗೆ ಹೂವಿನ ಕೃಷಿ ಮಾಡಿ, ಮೊದಲ ಇಳುವರಿಯಲ್ಲಿಯೇ 7.5 ಲಕ್ಷ ಲಾಭ ಪಡೆಯಬಹುದು.!
ಕೇವಲ ಆಸ್ಪತ್ರೆಯಲ್ಲಿ ಕೊಡುವ ಔಷಧಿಗಳನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುವುದಿಲ್ಲ ನೀವು ತಿನ್ನುವ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತರಬೇಕು, ಕಾಯಿಲೆ ನಿಯಂತ್ರಣಕ್ಕೆ ತರುವಂತಹ ಸರಿಯಾದ ಡಯಟ್ ಫಾಲೋ ಮಾಡಬೇಕು ಇದರೊಂದಿಗೆ ವ್ಯಾಯಮ ಕೂಡ ದೇಹಕ್ಕೆ ಅಷ್ಟೇ ಮುಖ್ಯ ಆಗ ಮಾತ್ರ ಸಮಸ್ಯೆ ಹತೋಟಿಗೆ ಬರುತ್ತದೆ.
ಹಾಗಾಗಿ ಸಕ್ಕರೆ ಕಾಯಿಲೆಯಲ್ಲಿ ಸಿಲುಕಿರುವವರು ನಿಯಂತ್ರಣಕ್ಕೆ ತರಲು ಅಥವಾ ಕಾಯಿದೆ ಬರಬಾರದು ಎಂದು ಎಚ್ಚರಿಕೆ ವಹಿಸುವವರು ಈಗ ನಾವು ತಿಳಿಸಿದ ಈ ವ್ಯಾಯಾಮಗಳನ್ನು ಪ್ರತಿನಿತ್ಯ ತಪ್ಪದೇ ಪಾಲಿಸಿ ಒಂದು ವಾರದಿಂದ ಮತ್ತೊಂದು ವಾರಕ್ಕೆ ನಿಮ್ಮ ವ್ಯಾಯಾಮ ಮಾಡುವ ಸಮಯವನ್ನು ಹೆಚ್ಚಿಸಿಕೊಳ್ಳಿ.
ಈ ಸುದ್ದಿ ಓದಿ:-ಜಮೀನು ರಿಜಿಸ್ಟರ್ ಆದ ಮೇಲೆ ಮ್ಯೂಟೇಷನ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ನೋಡಿ.!
ದಿನದಲ್ಲಿ ಕನಿಷ್ಠ 30 ನಿಮಿಷಗಳ ನಡಿಗೆ ಹಾಗೂ 30 ನಿಮಿಷಗಳ ವ್ಯಾಯಾಮ ಮತ್ತು 10 ನಿಮಿಷಗಳ ಧ್ಯಾನ ದೇಹಕ್ಕೆ ಅವಶ್ಯಕ. ಇದನ್ನು ಸರಿಯಾಗಿ ಫಾಲೋ ಮಾಡಿದವರು ರೋಗಗಳಿಂದ ಮುಕ್ತಿ ಪಡೆಯುತ್ತಾರೆ. ಶುಗರ್ ಕಂಟ್ರೋಲ್ ಗೆ ತರಲು ವ್ಯಾಯಾಮಗಳನ್ನು ತಪ್ಪದೇ ದಿನನಿತ್ಯ ಮಾಡಿ.
* 1KG ಡಂಬಲ್ಸ್ ತೆಗೆದುಕೊಳ್ಳಿ ಇಲ್ಲದೆ ಇದ್ದವರು ಒಂದು KGಯ ವಾಟರ್ ಬಾಟಲ್ ಗೆ ನೀರು ತುಂಬಿಕೊಂಡು ಬಳಸಬಹುದು. ಎರಡು ಕೈಗಳಿಗೂ ಡಂಬಲ್ಸ್ ಇಟ್ಟುಕೊಂಡು ಎರಡು ಕೈಗಳನ್ನು ಮುಂದೆ ಮಾಡುವುದು ಕೆಳಗೆ ಬಿಡುವುದು, ಎರಡು ಕೈಗಳನ್ನು ಹೆಗಲವರೆಗೆ ಮೇಲೆ ಮಾಡುವುದು ಕೆಳಗೆ ಬಿಡುವುದು.
ಈ ಸುದ್ದಿ ಓದಿ:-ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!
ಎರಡು ಕೈಗಳನ್ನು ತಲೆಯಿಂದ ಮೇಲಕ್ಕೆ ತರುವುದು ಕೆಳಗೆ ಬಿಡುವುದು, ಎರಡು ಕೈಗಳನ್ನು ಅಗಲ ಮಾಡುವುದು ಕೆಳಗೆ ಬಿಡುವುದು ಹೀಗೆ ಐದೈದು ಬಾರಿ ಈ ಎಕ್ಸಸೈಜ್ ಮಾಡಿ. ನಂತರ ಕಾಲುಗಳನ್ನು ಒಂದಾದ ಮೇಲೆ ಒಂದರಂತೆ ಹತ್ತತ್ತು ಬಾರಿ ಕಾಲು ಮಂಡಿಯವರೆಗೂ ಎತ್ತುವುದು ಕೆಳಗೆ ಬಿಡುವುದು ಈ ಎಕ್ಸಸೈಜ್ ಮಾಡಿ
* ಇದಾದ ಬಳಿಕ ಶವಾಸನದಲ್ಲಿ ಬೆನ್ನಿನ ಮೇಲೆ ಮಲಗಿಕೊಂಡು ಕಾಲುಗಳಿಗೆ ಮತ್ತೊಂದು ಬಗೆಯ ಎಕ್ಸಸೈಜ್ ಮಾಡಬೇಕು. ಕಾಲುಗಳನ್ನು ನಿಧಾನವಾಗಿ 20 ಡಿಗ್ರಿಯಲ್ಲಿ ಮೇಲಕ್ಕೆ ಎತ್ತುವುದು ಕೆಳಗೆ ಬಿಡುವುದು ಮಡಚುವುದು ಸ್ಟ್ರೈಟ್ ಮಾಡುವುದು ಹೀಗೆ ಇದನ್ನು ಕೂಡ ಐದು ಐದು ಬಾರಿ ಮಾಡಿ ನಂತರ ಹೆಚ್ಚಿಗೆ ಮಾಡಿಕೊಳ್ಳಬೇಕು. ಇದು ಕಾಲುಗಳಿಗೆ ಮಾತ್ರವಲ್ಲ ಹೊಟ್ಟೆಗೂ ವ್ಯಾಯಾಮವಾಗುತ್ತದೆ. ಹೊಟ್ಟೆ ಭಾಗದ ಮಝಲ್ ಗಳಿಗೆ ವ್ಯಾಯಾಮವಾಗಿ ರಕ್ತ ಸಂಚಾರ ಸರಾಗವಾಗುತ್ತದೆ.
ಈ ಸುದ್ದಿ ಓದಿ:-ಸೈಟ್ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲನೆ ಮಾಡುವುದು ಕಡ್ಡಾಯ.!
* ನಂತರ ಎಡ ಭಾಗಕ್ಕೆ ತಿರುಗಿ ಎಡಗೈಗೆ ತಲೆಗೆ ಕೊಟ್ಟುಕೊಂಡು ಮತ್ತೆ 75 ಡಿಗ್ರಿ ಬಲಗಾಲು ಮೇಲೆ ಬರುವಂತೆ ಮಾಡಿ ಕೆಳಗೆ ಬಿಡುವುದು ಹೀಗೆ ಇದನ್ನು 10-15 ಬಾರಿ ಮಾಡಬೇಕು ಮತ್ತು ಇದೇ ವ್ಯಾಯಾಮವನ್ನು ಬಲಭಾಗಕ್ಕೆ ತಿರುಗಿ ಕೂಡ ಎಡಗಾಲಿನಲ್ಲಿಯೂ ಮಾಡಬೇಕು. ಈ ರೀತಿಯ ಎಲ್ಲಾ ಅಂಗಾಗಗಳಿಗೂ ವ್ಯಾಯಾಮವಾಗುವಂತಹ ಎಕ್ಸಸೈಜ್ ಗಳನ್ನು ಮಾಡಬೇಕು. ಈ ಎಕ್ಸರ್ಸೈಜ್ ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.