ಎಲ್ಲ ರೈತರ ಉದ್ದೇಶ ಕೂಡ ಇದೇ ಆಗಿರುತ್ತದೆ. ಉತ್ತಮವಾದ ಗುಣಮಟ್ಟದ ಆಹಾರ ಒದಗಿಸಿಕೊಡುವುದರ ಜೊತೆಗೆ ತಮ್ಮ ಕುಟುಂಬ ನಿರ್ವಹಣೆಗಾಗಿ ಕೈತುಂಬ ಆದಾಯ ಪಡೆಯಬೇಕು ಎನ್ನುವುದು. ಆದರೆ ಇಂದು ಕೃಷಿ ಮಾಡುವುದು ಅಷ್ಟು ಸುಲಭದ ಸಂಗತಿ ಅಲ್ಲ ಎನ್ನುವುದು ಕೂಡ ಎಲ್ಲರಿಗೂ ಅರಿವಾಗಿದೆ.
ಮಳೆ ಕೊರತೆ, ನಿಶ್ಚಿತವಲ್ಲದ ನೀರಾವರಿ ಸೌಲಭ್ಯ, ಕೂಲಿ ಕಾರ್ಮಿಕರ ಕೊರತೆ, ಕಳ್ಳ ಕಾಕರ ಕಾಟ, ಬಂಡವಾಳದ ಕೊರತೆ, ಭೂ ಹಿಡುವಳಿಗಳ ವಿಸ್ತೀರ್ಣ ಕಡಿಮೆ ಇರುವುದು ಇನ್ನು ಇತ್ಯಾದಿ ಕಾರಣಗಳು ಕೃಷಿಯನ್ನು ಚಾಲೆಂಜಿಂಗ್ ಕ್ಷೇತ್ರವನ್ನಾಗಿಸಿದೆ. ಆದರೆ ರೈತ ಸ್ವಲ್ಪ ಬುದ್ಧಿವಂತನಾದರೆ ತನಗಿರುವ ಸಂಪನ್ಮೂಲದಲ್ಲಿ ಹೆಚ್ಚಿನ ರಿಸ್ಕ್ ಇಲ್ಲದೆ ಲಕ್ಷ ಲಕ್ಷ ಆದಾಯ ಗಳಿಸಬಹುದು.
ಸಾಮಾನ್ಯವಾಗಿ ರೈತರು ತಮ್ಮ ಸುತ್ತಮುತ್ತ ಯಾವ ಬೆಳೆ ಬೆಳೆಯುತ್ತಿದ್ದಾರೆ ಅದನ್ನೇ ಹೆಚ್ಚು ಆರಿಸಿಕೊಳ್ಳುತ್ತಾರೆ. ಈ ರೀತಿ ಧಾನ್ಯಗಳು, ತರಕಾರಿಗಳು, ಹೂ ಬೆಳೆಯುವುದರ ಜೊತೆಗೆ ಮರಗಳನ್ನು ಬೆಳೆದು ಅವುಗಳಿಂದ ಆದಾಯ ಪಡೆಯುವ ಬಗ್ಗೆಯೂ ಕೂಡ ಯೋಚಿಸಬೇಕು.
ಈ ಸುದ್ದಿ ಓದಿ:- ಈ ಶಕ್ತಿಶಾಲಿ ಎಲೆ ನಿಮ್ಮಮನೆಯಲ್ಲಿದ್ದರೆ ಸಾಕು ಸಾಕಷ್ಟು ಹಣ ಬರ್ತಾನೆ ಇರುತ್ತೆ.!
ಮರಗಳನ್ನು ಬೆಳೆಯುವ ವಿಷಯ ಬಂದಾಗ ಹಣ್ಣು ನೀಡುವ ಮರ ಬೆಳೆದರೆ ಆ ಹಣ್ಣಿನಿಂದಲೇ ವರ್ಷಕ್ಕೆ ಲಕ್ಷಾಂತರ ಹಣ ಗಳಿಸಬಹುದು. ಮಾವಿನ ಹಣ್ಣಿನ ಉದಾಹರಣೆಯೊಂದಿಗೆ ಇದನ್ನು ವಿವರಿಸಲು ಪ್ರಯತ್ನಿಸುತಿದ್ದೇವೆ. ಬೆಂಗಳೂರು ಸಮೀಪದ ದೇವನಹಳ್ಳಿ ಭಾಗದ ರೈತರು ಒಬ್ಬರು ತಮ್ಮ ಒಟ್ಟು 27 ಎಕರೆ ಕೃಷಿ ಭೂಮಿಯಲ್ಲಿ ಪೂರ್ತಿ ಮಾವಿನ ಮರಗಳನ್ನು ಮಾತ್ರ ಬೆಳೆದಿದ್ದಾರೆ.
ಇವರ ಜಮೀನಿನಲ್ಲಿ ಸುಮಾರು 2000 ಕ್ಕೂ ಹೆಚ್ಚು ಮಾವಿನ ಮರಗಳು ಇವೆ. ಪ್ರತಿ ಸೀಸನ್ ಗೆ ಒಂದು ಮರ ಕಡಿಮೆ ಎಂದರೂ 200KG ಇಳುವರಿ ಕೊಡುತ್ತದೆ. ಒಂದು KG 40 ರೂಪಾಯಿಗೆ ಮಾರಾಟವಾದರೂ ರೈತನ ಆದಾಯ ಎಷ್ಟಾಯಿತು ಎನ್ನುವುದನ್ನು ನೀವೇ ಲೆಕ್ಕ ಹಾಕಿ ನೋಡಬಹುದು.
30 ಅಡಿ ಅಂತರದಲ್ಲಿ ಮರಗಳನ್ನು ಹಾಕಲಾಗಿದೆ. ಮಿಶ್ರ ಕೃಷಿ ಮಾಡಲು ಬಯಸುವವರು ವರ್ಷಕ್ಕೆ ಒಂದು ಬಾರಿ ಮಾತ್ರ ಫಲ ನೀಡುವ ಈ ಮಾವಿನ ಮರಗಳ ಮಧ್ಯದಲ್ಲಿ ಸಣ್ಣಪುಟ್ಟ ಯಾವುದಾದರು ತರಕಾರಿ ಬೇಕಾದರೂ ಬೆಳೆಯಬಹುದು. ಆದರೆ ಈ ರೈತರು ಅನುಸರಿಸುವ ವಿಧಾನ ಎಂದರೆ ಇವರು ಮಾವು ಬಿಟ್ಟು ಬೇರೆ ಕೃಷಿ ಮಾಡುತ್ತಿಲ್ಲ, 7-8 ಆಳುಗಳಲ್ಲಿ ಇವರು ಇಡೀ 27 ಎಕರೆ ಮೇಂಟೇನ್ ಮಾಡುತ್ತಿದ್ದಾರೆ.
ಈ ಸುದ್ದಿ ಓದಿ:- ಮುರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಉಚಿತ ಪ್ರವೇಶ ಆಸಕ್ತರು ಅರ್ಜಿ ಸಲ್ಲಿಸಿ.!
ಮೊದಲ ಬಾರಿಗೆ ಇವರು ಮಾವಿನ ಕೃಷಿ ಆರಂಭ ಮಾಡಬೇಕು ಎಂದು ನಿರ್ಧರಿಸಿದಾಗ ಮಲ್ಲಿಕಾ ಹಾಗೂ ಬಾದಾಮಿ ತಳಿ ಆರಿಸಿಕೊಂಡಿದ್ದರಂತೆ. ಯಾಕೆಂದರೆ ಮಲ್ಲಿಕ ಬಹಳ ಬೇಗ ಫಲ ಕೊಡುತ್ತದೆ ಮತ್ತು ಬಾದಾಮಿ ಮಾರ್ಕೆಟ್ ನಲ್ಲಿ ಹೆಚ್ಚಿಗೆ ಬೇಡಿಕೆಯಲ್ಲಿದೆ ಎನ್ನುವುದು ಇದಕ್ಕೆ ಕಾರಣವಂತೆ. ಒಂದು ಸಾಲಿನಲ್ಲಿ ಮಲ್ಲಿಕಾ ಹಾಗೂ ಒಂದು ಸಾಲಿನಲ್ಲಿ ಬಾದಾಮಿ ಮರಗಳನ್ನು ಬೆಳೆದಿದ್ದಾರೆ.
ನಿರ್ವಹಣೆಗೆ ಸವಾಲೇನೆಂದರೆ ಗಿಡ ಚಿಕ್ಕದಿದ್ದಾಗ ಪ್ರತಿನಿತ್ಯ ನೀರು ಹಾಕಬೇಕು, ಮರಗಳು ಬೆಳೆದಂತೆ ಎರಡು ಮೂರು ದಿನಕ್ಕೆ ನೀರು ಹಾಕಿದರು ನಡೆಯುತ್ತದೆ. ಆದರೆ ಗಿಡಗಳಿಗೆ ಕಾಯಿಲೆ ಬರುತ್ತದೆ ಕ್ರಿಮಿ ನಾಶಕಗಳು ಕೀಟನಾಶಕಗಳನ್ನು ಸಿಂಪಡಿಸಿಕೊಂಡು ಮರಗಳು ಹಾಳಾಗದಂತೆ ನೋಡಿಕೊಳ್ಳಬೇಕು.
ಅದರಲ್ಲೂ ಬಾದಾಮಿ ಮರ ಬಹಳ ಸೂಕ್ಷ್ಮ ಇದಕ್ಕೆ ಹೆಚ್ಚು ಕಾಯಿಲೆ ಬೀಳುವ ಸಾಧ್ಯತೆ ಇರುತ್ತೆ ಮರ ಪೂರ್ತಿ ವೇಸ್ಟ್ ಆಗುತ್ತದೆ ಹಾಗಾಗಿ ಸೂಕ್ಷ್ಮದಿಂದ ನೋಡಿಕೊಳ್ಳಬೇಕು. ಎರಡು ವರ್ಷಕ್ಕೊಮ್ಮೆ ಮರಗಳನ್ನು ಕಟ್ಟಿಂಗ್ ಮಾಡಿಸುತ್ತೇವೆ ಇದರಿಂದ ಇಳುವರಿ ಹೆಚ್ಚಾಗುತ್ತದೆ ಇನ್ನು ಮಾರ್ಕೆಟಿಂಗ್ ಸುಲಭವಾಗಿದೆ ಯಾಕೆಂದರೆ ನಾವು ಕಂಪನಿ ಜೊತೆಗೆ ಕಾಂಟ್ರಾಕ್ಟ್ ಆಗಿದ್ದೇವೆ ಅವರೇ ಬಂದು ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳುತ್ತಿದ್ದಾರೆ.
ಈ ಸುದ್ದಿ ಓದಿ:- ಮನೆ ತಾರಸಿ ಮೇಲೆ ಮಿನಿ ತೋಟ, ಮಾರ್ಕೆಟ್ ನಲ್ಲಿ ಸಿಗುವ ಎಲ್ಲಾ ತರಕಾರಿಗಳನ್ನು ಮನೆ ಮೇಲೆ ಬೆಳೆಯುವ ಸುಲಭ ವಿಧಾನ.!
ಈ ರೈತನ ಮಾತು ಕೇಳುತ್ತಿದ್ದರೆ ಹಣ್ಣುಗಳ ರಾಜನಾದ ಮಾವನ್ನು ಬೆಳೆಯುವುದರಿಂದ ಖಂಡಿತವಾಗಿಯೂ ರೈತ ಕೈತುಂಬ ಆದಾಯ ಪಡೆಯಬಹುದು ಎನ್ನುವ ನಂಬಿಕೆ ಬರುತ್ತದೆ. ಈ ವಿಚಾರವಾಗಿ ಇನ್ನಷ್ಟು ಡೀಟೇಲ್ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.