1. ಕಾಲುಗಳು ಮರಗಟ್ಟುವಿಕೆ (tingling and Numbness):- ಕಾಲುಗಳು ಹೃದಯದಿಂದ ಬಹಳ ದೂರ ಇರುವ ದೇಹದ ಭಾಗಗಳಾಗಿವೆ. ಸಕ್ಕರೆ ಕಾಯಿಲೆ ಇರುವವರಿಗೆ ಹೃದಯದ ನಾಳಗಳಿಂದ ರಕ್ತ ಮತ್ತು ಆಕ್ಸಿಜನ್ ಸಪ್ಲೈ ಗೆ ಸಮಸ್ಯೆ ಆಗುತ್ತದೆ ಈ ಕಾರಣದಿಂದ ಕಾಲುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ.
ಇದರಿಂದ ಕಾಲುಗಳಲ್ಲಿ ಜೋಮು ಹಿಡಿಯುವುದು ಅಥವಾ ಪಿನ್ ನಲ್ಲಿ ಚುಚ್ಚಿದ ರೀತಿ ಅನುಭವ ಆಗುವುದು, ಕಾಲುಗಳಲ್ಲಿ ಉರಿ ರಾತ್ರಿ ಹೊತ್ತು ಕಾಲುಗಳ ತುದಿ ನೋವು ಬರುವುದು ಇತ್ಯಾದಿಗಳು ಸಕ್ಕರೆ ಕಾಯಿಲೆ ಬಂದಿರುವ ಲಕ್ಷಣವಾಗಿರಬಹುದು.
2. ಕಾಲುಗಳಲ್ಲಿ ಊತ ಬರುವುದು(Swelling or Pedal Edema):- ನಮ್ಮ ದೇಹದಲ್ಲಿ ಅಥವಾ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ರಕ್ತನಾಳಗಳ ಒಳಗೆ inflamation ಆಗುತ್ತದೆ. ಸಕ್ಕರೆ ಕಾಯಿಲೆ ಅಲ್ಲದೆ ಇನ್ನು ಅನೇಕ ಕಾಯಿಲೆಗಳಿಗೆ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ. ಆದರೆ ಯಾವುದೇ ಕಾರಣಗಳು ಇಲ್ಲದೆ ಈ ರೀತಿ ಆಗುತ್ತಿದ್ದರೆ ನೀವು ಶುಗರ್ ಟೆಸ್ಟ್ ಮಾಡಿಸಿಕೊಳ್ಳುವುದು ಒಳ್ಳೆಯದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 2,000 ಹಣ ಬರದೇ ಪೆಂಡಿಂಗ್ ಇರುವ ಎಲ್ಲರಿಗೂ ಈ ದಿನ ಹಣ ಬಿಡುಗಡೆ.!
3. ಗಾಯಗಳು ಗುಣವಾಗುವುದು ತಡವಾದರೆ(Delayed Wound healing):- ಸಾಮಾನ್ಯರಿಗೆ ಗಾಯಗಳಾದರೆ ಸ್ವಲ್ಪ ದಿನದಲ್ಲಿ ಗುಣವಾಗುತ್ತದೆ ಆದರೆ ಸಕ್ಕರೆ ಕಾಯಿಲೆ ಬಂದವರಿಗೆ ಯಾವುದೇ ಗಾಯವಾದರೂ ಅದು ಬೇಗ ಗುಣ ಆಗುವುದಿಲ್ಲ. ಗಾಯಗಳು ಗುಣವಾಗಲು ಬಿಳಿ ರಕ್ತ ಕಣಗಳು ಮುಖ್ಯಪಾತ್ರ ವಹಿಸುತ್ತವೆ ಆದರೆ ಸಕ್ಕರೆ ಕಾಯಿಲೆ ಇರುವವರಿಗೆ ಈ ಮೆಕಾನಿಸಂನಲ್ಲಿ ವ್ಯತ್ಯಾಸವಾಗುವುದರಿಂದ ಗಾಯ ಬೇಗ ಗುಣವಾಗುವುದಿಲ್ಲ. ಈ ರೀತಿ ಲಕ್ಷಣಗಳಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು
4. ಕಾಲುಗಳಲ್ಲಿ ಫಂಗಲ್ ಇನ್ಫೆಕ್ಷನ್ ಆಗುವುದು(Fungle infections in feet):- ಮಳೆ ಬಂದಾಗ ಅಥವಾ ಕೆಸರು ತುಳಿದಾಗ ಕೆಲವರಿಗೆ ಕಾಲುಗಳಲ್ಲಿ ಈ ರೀತಿ ಇನ್ಫೆಕ್ಷನ್ ಆಗುತ್ತದೆ, ಇದನ್ನು ಹೊರತುಪಡಿಸಿ ಕಾಲಿನ ಬೆರಳುಗಳ ಸಂಧಿಯಲ್ಲಿ ಫಂಗಲ್ ಇನ್ಫೆಕ್ಷನ್ ಆಗುತ್ತಿದ್ದರೆ ಸಕ್ಕರೆ ಕಾಯಿಲೆ ಲಕ್ಷಣ ಇರಬಹುದು.
5. ಒಣ ಚರ್ಮ(Dry Skin):- ರಕ್ತದಲ್ಲಿ ಗ್ಲುಕೋಸ್ ನ ಅಂಶ ಹೆಚ್ಚಿದ್ದಾಗ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ ಈ ಕಾರಣಕ್ಕಾಗಿ ಚರ್ಮ ಡ್ರೈ ಆಗುತ್ತದೆ. ಮತ್ತು ಕಾಲುಗಳಲ್ಲಿ ಹಿಮ್ಮಡಿ ಒಡೆಯುತ್ತದೆ. ಈ ರೀತಿ ಲಕ್ಷಣಗಳೇನಾದರೂ ಕಾಣಿಸಿಕೊಳ್ಳುತ್ತಿದ್ದರೆ ತಜ್ಞ ವೈದ್ಯರನ್ನು ಭೇಟಿಯಾಗಿ ಸಮಾಲೋಚಿಸಿ.
ಈ ಸುದ್ದಿ ಓದಿ:- ಹೊಸ ವೋಟರ್ ID ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ.! ಮೊಬೈಲ್ ನಲ್ಲಿ ಅಪ್ಲೈ ಮಾಡುವ ವಿಧಾನ.!
6. ಚರ್ಮದ ಬಣ್ಣ ಬದಲಾಗುವುದು(Skin colour Change):- ಮುಖ್ಯವಾಗಿ ಈ ಲಕ್ಷಣಗಳು ಕಾಲಿನ ಬೆರಳುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕಾಲಿನ ಬೆರಳುಗಳಲ್ಲಿ ಕೆಂಪಾಗುವಿಕೆ ಕಾಣುತ್ತಿದ್ದರೆ ಶುಗರ್ ಲಕ್ಷಣ ಇರಬಹುದು. ಯಾಕೆಂದರೆ ಸಕ್ಕರೆ ಕಾಯಿಲೆ ಇದ್ದವರಿಗೆ ರಕ್ತನಾಳಗಳಲ್ಲಿ ಇನ್ಫಾಮೇಟರಿ ಕ್ರಿಯೇಟ್ ಆಗಿ ಈ ರೀತಿ ಲಕ್ಷಣ ತೋರುತ್ತದ ಮತ್ತು Insulin resistance ಇದ್ದವರಿಗೆ ಹೆಚ್ಚು ಇನ್ಸುಲಿನ್ ಉತ್ಪತ್ತಿ ಆಗುವುದರಿಂದ ಅದು ಚರ್ಮದ ಮೇಲೆ ಪ್ಯಾಚಸ್ ಮತ್ತು ಸ್ಕಿನ್ ಟ್ಯಾಗ್ ಆಗುವಂತೆ ಕೂಡ ಮಾಡುತ್ತದೆ
7. ಪಾದಗಳು ತಣ್ಣಗೆ ಆಗುವುದು(Cold feel in feet):- ಸಾಮಾನ್ಯವಾಗಿ ಪಾದಗಳು ಮಾತ್ರವಲ್ಲದೆ ದೇಹದ ಇತರ ಅಂಗಗಳು ಕೂಡ ಸ್ವಲ್ಪ ಬಿಸಿಯಾಗಿಯೇ ಇರಬೇಕು ಆದರೆ ಪಾದಗಳು ಮುಟ್ಟಿ ನೋಡಿದಾಗ ಬಿಸಿಯಾಗಿದ್ದಳು ತಣ್ಣಗೆ ಇರುವಂತೆ ಫೀಲ್ ಆಗುವುದು ಕೂಡ ಸಕ್ಕರೆ ಕಾಯಿಲೆಗೆ ಒಂದು ಲಕ್ಷಣವಾಗಿದೆ ಆ ಭಾಗದಲ್ಲಿರುವ ನರಗಳ ಇಂಜುರಿ ಮತ್ತು ರಕ್ತ ಸಂಚಾರದ ಅಡಚಣೆ ಕೂಡ ಇದಕ್ಕೆ ಕಾರಣ, ಹೀಗಾಗಲು ಸಕ್ಕರೆ ಕಾಯಿಲೆ ಕಾರಣ ಹಾಗಾಗಿ ತಪ್ಪದೆ ಒಮ್ಮೆ ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸಿ ದೃಢಪಡಿಸಿಕೊಳ್ಳಿ
8. ಕೂದಲು ಉದುರುವಿಕೆ(Sudden Hairloss):- ಇದು ಕೂಡ ಹೆಚ್ಚಾಗಿ ಕಾಲಿನ ಭಾಗಗಳಲ್ಲಿಯೇ ಕಾಣಿಸಿಕೊಳ್ಳುತ್ತದೆ. ಇದ್ದಕ್ಕಿದ್ದಂತೆ ಕಾಲಿನ ಒಂದು ಭಾಗದಲ್ಲಿ ಕೂದಲು ಕಡಿಮೆಯಾಗಿದೆ ಎಂದರೆ ಇದು ಸಹ ಸಕ್ಕರೆ ಕಾಯಿಲೆಯ ಲಕ್ಷಣವೇ.
ಈ ಸುದ್ದಿ ಓದಿ:- ಇನ್ಮುಂದೆ ಪ್ರತಿ ಮನೆಗೂ ಸಿಗಲಿದೆ ಸೋಲಾರ್ ವಿದ್ಯುತ್, ಕೇಂದ್ರ ಸರ್ಕಾರದ ಹೊಸ ಯೋಜನೆ.!
9. ಕಾಲಿನ ಆಕಾರ ಬದಲಾಗುವುದು(abnormality in legs):- ದೇಹದಲ್ಲಿ ಅಥವಾ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದು ನರನಾಡಿಗಳಲ್ಲೂ ಕೂಡ ವ್ಯತ್ಯಾಸಗಳನ್ನು ಉಂಟುಮಾಡುತ್ತವೆ ಇದರ ಪರಿಣಾಮವಾಗಿ ಕಾಲಿನ ಶೇಪ್ ಬದಲಾಗುವುದು. ಸಾಮಾನ್ಯವಗ್ಗಿ ಈ ಲಕ್ಷಣವೂ ಸಕ್ಕರೆ ಕಾಯಿಲೆ ಅಧಿಕವಾದಾಗ ಕಾಣಿಸಿಕೊಳ್ಳುತ್ತದೆ. ಆದರೆ ನೀವೇನಾದರೂ ಇದನ್ನು ಮೊದಲೇ ಗುರುತಿಸಿದರೆ ತಪ್ಪದೆ ನಿಮ್ಮ ವೈದ್ಯರಿಗೆ ತಿಳಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು.
10. ಕಾಲುಗಳಲ್ಲಿ ನೋವು(Pains in Legs):- ವಾಕ್ ಮಾಡುವಾಗ, ನಡೆದಾಡುವಾಗ ವಿಪರೀತವಾಗಿ ಕಾಲಿನಲ್ಲಿ ನೋವು ಬರುತ್ತಿದೆ ಎಂದರೆ ಕಾಲಿನಲ್ಲಿರುವ ನರಗಳಿಗೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಉಂಟಾಗಿರುವ ತೊಂದರೆಯೇ ಕಾರಣ. ಆ ಭಾಗದ ನರಗಳು ವೀಕ್ ಆಗಿರಬಹುದು ಅಥವಾ ಊದಿಕೊಂಡಿರಬಹುದು ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ತಪ್ಪದೇ ವೈದ್ಯರನ್ನು ಸಂಪರ್ಕಿಸಿ.