ಮಾನವನ ದೇಹದಲ್ಲಿರುವ ದೊಡ್ಡ ಕರುಳು, (Big interstane) ದೊಡ್ಡ ಕರುಳಿನ ಕೊನೆಯ ಭಾಗ (rectum) ಮತ್ತು ಗುದದ್ವಾರ (Anus) ಇದೆಲ್ಲವನ್ನು ಒಟ್ಟಿಗೆ ಕೋಲೋರೆಕ್ಟಲ್ (colorectal) ಎಂದು ಕರೆಯುತ್ತಾರೆ ಈ ಭಾಗಕ್ಕೆ ಆಗುವ ಕ್ಯಾನ್ಸರ್ ಅನ್ನು ಒಟ್ಟಾರೆಯಾಗಿ ಕರುಳಿನ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.
ಇದರಲ್ಲಿ ಯಾವುದೇ ಭಾಗಕ್ಕೆ ಹಾನಿಯಾದರೂ ಕಾಣಿಸಿಕೊಳ್ಳುವ ಲಕ್ಷಣಗಳು ಹಾಗೂ ಇದಕ್ಕೆ ನೀಡುವ ಔಷಧಿ ಎಲ್ಲವೂ ಕೂಡ ಒಂದೇ ರೀತಿ ಇರುತ್ತದೆ. ಈ ಭಾಗಗಳಲ್ಲಿ ಕ್ಯಾನ್ಸರ್ ಉಂಟಾಗುವುದಕ್ಕೆ ಕಾರಣ ಸಾಕಷ್ಟಿದೆ ಅನುವಂಶಿಯವಾಗಿ (familiar reason) ಬಂದಿರುವ ಕಾಯಿಲೆ ಆಗಿರಬಹುದು.
ಅಥವಾ ಜೀರ್ಣಕ್ರಿಯ ಸಮಸ್ಯೆಯಿಂದ (digestion issues) ಅದೆಲ್ಲವೂ ಕರುಳಿನಲ್ಲಿ ಶೇಖರಣೆಯಾಗಿ ದೊಡ್ಡ ಕರುಳಿನಲ್ಲಿ ಹುಣ್ಣಾಗಿರುವುದು ಅಥವಾ ಕರುಳಿನ ಭಾಗದಲ್ಲಿ ಗಂಟಾಗಿರುವುದು (pollip) ನಂತರ ಆ ಗಂಟು ಕ್ಯಾನ್ಸರ್ ಗೆ ತಿರುಗಬಹುದು, ಅತಿ ಹೆಚ್ಚು ಮಾಂಸಹಾರಗಳ ಸೇವನೆ, ಆಲ್ಕೋಹಾಲ್ ಗಳ ಸೇವನೆ (alchohol and red meat) ಕರುಳಿನ ಕ್ಯಾನ್ಸರ್ ಬರುವುದಕ್ಕೆ ಮುಖ್ಯ ಕಾರಣವಾಗಿದೆ.
ಈ ಕ್ಯಾನ್ಸರ್ ನ ಅತಿ ಮುಖ್ಯವಾದ ವಿಷಯವೇನೆಂದರೆ, ಲಂಗ್ ಕ್ಯಾನ್ಸರ್ ಅಥವಾ ಇನ್ಯಾವುದೇ ಕ್ಯಾನ್ಸರ್ ಗೆ ಹೋಲಿಸಿಕೊಂಡರೆ ಕರುಳಿನ ಕ್ಯಾನ್ಸರ್ ಸ್ಟೇಜ್ 4 ರಲ್ಲಿ ಗಮನಕ್ಕೆ ಬಂದರೂ ಕೂಡ ಚಿಕಿತ್ಸೆ ಯಶಸ್ವಿಯಾಗುತ್ತದೆ. ಕರುಳಿನ ಕ್ಯಾನ್ಸರ್ ಇರುವ ಲಕ್ಷಣಗಳು ಹೇಗೆ ಕಂಡುಬರುತ್ತವೆ ಎಂದು ನೋಡುವುದಾದರೆ ರೆಕ್ಟಮ್ ನಲ್ಲಿ ರಕ್ತಸ್ತ್ರಾವ, ನೀವು ಮಲವಿಸರ್ಜನೆ ಮಾಡಿದರೂ ಕೂಡ ಹೊಟ್ಟೆ ಪೂರ್ತಿಯಾಗಿ ಕ್ಲೀನ್ ಆಗಿಲ್ಲ ಇದು ಎನಿಸುತ್ತಿದ್ದರೆ.
ಇನ್ನು ಕೆಲವರಿಗೆ ಎರಡು ದಿನಗಳವರೆಗೆ ಸರಾಗವಾಗಿ ಮಲವಿಸರ್ಜನೆ ಆಗುವುದು, ಇನ್ನೂ ಮೂರು ದಿನ ಮಲವಿಸರ್ಜನೆ ಮಾಡಲು ಕ’ಷ್ಟವಾಗುವುದು ಇದನ್ನು ಆಲ್ಟರ್ನೇಟಿವ್ ಡೈರಿಯಾ (alternative diarea) ಎಂದು ಕೂಡ ಕರೆಯುತ್ತಾರೆ, ಇವುಗಳ ಜೊತೆ ತೂಕ ಕಡಿಮೆಯಾಗುವುದು, ಹಸಿವಾಗದೆ ಇರುವುದು, ಹೊಟ್ಟೆಯ ಭಾಗದಲ್ಲಿ ವಿಪರೀತ ನೋವು ಆದರೆ ನೋವು ಎಲ್ಲಾಗುತ್ತಿದೆ ಎಂದು ಪತ್ತೆ ಹಚ್ಚಲು ಆಗದೆ ಇರುವುದು ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಕ್ಯಾನ್ಸರ್ ಆಗದಂತೆ ದೇಹವನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದರೆ ಫೈಬರ್ ಯುಕ್ತ ಆಹಾರ ಪದಾರ್ಥ ಸೇವನೆ ಮಾಡಿದಾಗ ಚಯಾಪಚಯ ಕ್ರಿಯೆಗಳು ಸರಾಗವಾಗುತ್ತದೆ. ಸಮತೋಲನ ಆಹಾರ ಹಾಗೂ ಸರಿಯಾದ ಆಹಾರ ಸೇವನೆಯಿಂದಾಗಿ ಟಾಕ್ಸಿನ್ ಅಂಶಗಳು ರೆಕ್ಟಮ್ ನಲ್ಲಿ ಶೇಖರಣೆ ಆಗುವುದಿಲ್ಲ ಆಗ ಕ್ಯಾನ್ಸರ್ ಆಗುವ ಸಾಧ್ಯತೆ ಕಡಿಮೆ ಇದರೊಂದಿಗೆ ಧೂಮಪಾನ ಹಾಗೂ ಮಧ್ಯಪಾನವನ್ನು ತ್ಯಜಿಸುವುದೇ ಉತ್ತಮ.
ಕೆಲವು ಟೆಸ್ಟ್ ಗಳ ಮೂಲಕ ಇದನ್ನು ಪತ್ತೆ ಹಚ್ಚಬಹುದು. ಸಿಗ್ಮಾಡೊಸ್ಕ್ರೋಪಿ ಟೆಸ್ಟ್ ಮೂಲಕ, ವರ್ಷಕೊಮ್ಮೆ FOBT (Feacle accord blood test) ಮಾಡಿಸುವುದರಿಂದ, 5 ವರ್ಷಗಳಿಗೊಮ್ಮೆ ಕೊಲೊನೋಸ್ಕೋಪಿ ಅಥವಾ ವರ್ಚುನಲ್ ಕೊಲಿನೋಗ್ರಫಿ ಟೆಸ್ಟ್ ಮಾಡಿಸುವುದರಿಂದ ದೊಡ್ಡ ಕರುಳಿನ ಎಲ್ಲಾ ಭಾಗದ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು.
ಒಂದು ವೇಳೆ ನಿಮಗೂ ಇದೇ ರೀತಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರೆ ಅಥವಾ ಅನುಮಾನಗಳು ಇದ್ದರೆ ಹತ್ತಿರದ ಅಂಕೋಲಜಿಸ್ಟ್ ಭೇಟಿಯಾಗಿ. ಅವರು ಮೊದಲಿಗೆ CITI ಸ್ಕ್ಯಾನ್, ಅಥವಾ ಪೂರ್ತಿ ಬಾಡೀಸ್ ಸ್ಕ್ಯಾನ್ ಮಾಡಿಸಿ ನಂತರ ಬಯಾಪ್ಸಿ (Biopsy) ಮಾಡಿಸಿ ಕ್ಯಾನ್ಸರ್ ಎಂದು ಕನ್ಫರ್ಮ್ ಆದ ನಂತರ ಚಿಕಿತ್ಸೆಗಳ ಬಗ್ಗೆ ವಿವರಿಸುತ್ತಾರೆ. ಈ ಮೇಲೆ ತಿಳಿಸಿದಂತೆ ಉಳಿದ ಕ್ಯಾನ್ಸರ್ ಗಳಿಗಿಂತ ತುಂಬಾ ಪರಿಣಾಮಕಾರಿಯಾಗಿ ಕರುಳಿನ ಕ್ಯಾನ್ಸರ್ ಗುಣಪಡಿಸಬಹುದು ಯಾವುದೇ ರೀತಿಯಾಗಿ ಹೆದರುವ ಅವಶ್ಯಕತೆ ಇರುವುದಿಲ್ಲ.