ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಉಳಿತಾಯ ಖಾತೆ ಹೊಂದಿರುತ್ತಾರೆ. ಈ ರೀತಿ ಉಳಿತಾಯ ಖಾತೆ ಮೇಲಿರುವ ಹಣ ನಮ್ಮ ಮನೆಯಲ್ಲಿ ನಾವು ಕೊಟ್ಟಿದ್ದ ಹಣದಂತೆಯೇ ಸರಿ. ನಮಗೆ ಹಣದ ಅಗತ್ಯ ಇರುವಾಗ ATM ಗಳ ಮೂಲಕ ಹಣ ವಿತ್ ಡ್ರಾ ಮಾಡಿಕೊಂಡು ಅಥವಾ UPI ಆಧಾರಿತ ಆಪ್ ಗಳ ಮೂಲಕ ಬಳಸಿಕೊಳ್ಳಬಹುದು ಅಥವಾ ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ನಗದು ಹಿಂಪಡೆಯಬಹುದು.
ಆದರೂ ಮನೆಯಲ್ಲಿ ಹಣವನ್ನು ಇಡುವುದಕ್ಕಿಂತ ಉಳಿತಾರ ಖಾತೆಗಳಲ್ಲಿ ಈ ರೀತಿ ಹಣ ಇಡುವುದು ಬೆಸ್ಟ್ ಯಾಕೆಂದರೆ ದೇಶದ ಎಲ್ಲಾ ಬ್ಯಾಂಕ್ ಗಳು ಉಳಿತಾಯ ಖಾತೆಯಲ್ಲಿ ಇಟ್ಟಿರುವ ಹಣಕ್ಕೆ ಬಡ್ಡಿಯನ್ನು ನೀಡುತ್ತವೆ. ಆದರೆ ಹೀಗೆ ಉಳಿತಾಯ ಖಾತೆಯಲ್ಲಿ ಹಣ ಇಡುವುದಕ್ಕೂ ಕೂಡ ಮಿತಿ ಇದೆ ಇದರ ಬಗ್ಗೆ ನಿಮಗೆ ಗೊತ್ತೇ?
ವಿವರವಾಗಿ ಈ ಬಗ್ಗೆ ಹೇಳುವುದಾದರೆ ಈ ನಿಯಮವನ್ನು ಉಳಿತಾಯ ಖಾತೆಯ ಇಡುವ ಹಣಕ್ಕೆ ವಿಧಿಸಿರುವ ಮಿತಿ ಎಂದು ಬಗ್ಗೆ ಸ್ಪಷ್ಟವಾಗಿ ತಿಳಿಸುವುದಿಲ್ಲ. ಒಬ್ಬ ವ್ಯಕ್ತಿಯು ಎಷ್ಟು ಬ್ಯಾಂಕ್ ಗಳಲ್ಲಿ ಬೇಕಾದರೂ ಉಳಿತಾಯ ಖಾತೆ ತೆರೆಯಬಹುದು ಮತ್ತು ಆ ಖಾತೆಯಲ್ಲಿ ಎಷ್ಟು ಹಣ ಬೇಕಾದರೂ ಇಡಬಹುದು.
ಈ ಸುದ್ದಿ ಓದಿ:-ಹೈನುಗಾರಿಕೆಯಲ್ಲಿ ಖರ್ಚು ಹೇಗೆ ಲಾಭ ಎಷ್ಟು ಗೊತ್ತಾ.? ಸಗಣಿಯಿಂದಲೇ 2.5 ಲಕ್ಷ ಹಣ ಸಂಪಾದನೆ.!
ಆದರೆ ಒಂದು ಆರ್ಥಿಕ ವರ್ಷದಲ್ಲಿ ವ್ಯಕ್ತಿಯೊಬ್ಬ 10 ಲಕ್ಷಕ್ಕಿಂತ ಹೆಚ್ಚಿಗೆ ಹಣವನ್ನು ಹೂಡಿಕೆ ಮಾಡಿದಾಗ ಅದಕ್ಕೆ ಸಂಬಂಧಪಟ್ಟ ಪುರಾವೆಯನ್ನು ಇಟ್ಟುಕೊಂಡಿರಬೇಕು. ಈ ರೀತಿ ವಹಿವಾಟು ಆದಾಗ ಬ್ಯಾಂಕ್ ಗಳು ಆದಾಯ ತೆರಿಗೆ ಇಲಾಖೆಗೆ ವರದಿ ಸಲ್ಲಿಸುತ್ತವೆ ಆ ಸಮಯದಿಂದ ಹಿಡಿದು ಮುಂದಿನ 10 ವರ್ಷಗಳಲ್ಲಿ ಯಾವಾಗ ಬೇಕಾದರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಕೊಟ್ಟು ನಿಮ್ಮನ್ನು ತನಿಖೆಗೆ ಒಳಪಡಿಸಬಹುದು.
ನೀವೇನಾದರೂ ಆದಾಯ ತೆರಿಗೆ ಸಲ್ಲಿಸುವವರಾದರೆ (ITR) ನಿಮಗೆ ಇದು ಅನ್ವಯಿಸುವುದಿಲ್ಲ ಹೀಗೆ ಒಬ್ಬ ವ್ಯಕ್ತಿ ತನ್ನ ಉಳಿತಾಯ ಖಾತೆಯಲ್ಲಿ ಎಷ್ಟು ಕೋಟಿ ಹಣ ಬೇಕಾದರೂ ಇಡಬಹುದು ಆದರೆ ಉಳಿತಾಯದ ಮೇಲೆ ಪಡೆಯುವ ಬಡ್ಡಿ ದರದ ಲಾಭದ ಮೇಲೆ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
ಆದಾಯ ತೆರಿಗೆ ನಿಯಮ 80TTA ಪ್ರಕಾರವಾಗಿ ರೂ.10,000 ವರೆಗೆ ಒಂದು ಆರ್ಥಿಕ ವಿಷಯದಲ್ಲಿ ಉಳಿತಾಯ ಖಾತೆಯಲ್ಲಿ ಇಟ್ಟಿದ್ದ ಹಣಕ್ಕೆ ಬಡ್ಡಿ ರೂಪದಲ್ಲಿ ಲಾಭ ಪಡೆದಿದ್ದರೆ ಯಾವುದೇ ರೀತಿಯ ತೆರಿಗೆ ವಿಧಿಸುವುದಿಲ್ಲ. ಇದಕ್ಕಿಂತ ಹೆಚ್ಚಿಗೆ ಆದರೆ ಅವರು ಪಡೆಯುವ ಲಾಭದ ಆಧಾರದ ಮೇಲೆ ತೆರಿಗೆ ನಿರ್ಧಾರವಾಗುತ್ತದೆ.ಷಪ್ರಸ್ತುತವಾಗಿ ಬ್ಯಾಂಕಿನಲ್ಲಿ 2.70%-4% ವರೆಗೂ ಬಡ್ಡಿಯನ್ನು ನೀಡಲಾಗುತ್ತಿದೆ.
ಈ ಸುದ್ದಿ ಓದಿ:-3 ಲಕ್ಷ ಹಣ ಡೆಪೋಸಿಟ್ ಮಾಡಿದ್ರೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು.!
ಮತ್ತೊಂದು ಪ್ರಮುಖವಾದ ವಿಷಯವೇನೆಂದರೆ ಉಳಿತಾಯ ಖಾತೆಯಲ್ಲಿರುವ ಹಣವು ಸೇರಿದಂತೆ ನೀವೇನಾದರೂ ಮ್ಯೂಚುವಲ್ ಫಂಡ್, ಶೇರ್, ಬಾಂಡ್ ಎಫ್ ಡಿ ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದರೂ ಕೂಡ ಇದನ್ನು ಒಳಗೊಂಡು ಒಟ್ಟಾರೆ ಉಳಿತಾಯ ಎಂದೇ ಭಾವಿಸಿ ಅವುಗಳಿಂದ ಪಡೆಯುವ ಲಾಭದ ಹಣಕ್ಕೆ ಅನುಗುಣವಾಗಿ ಬಡ್ಡಿದರ ವಿಧಿಸಲಾಗುತ್ತಿದೆ.
ಈ ಮೇಲೆ ತಿಳಿಸಿದ ಮತ್ತಕ್ಕಿಂತ ಹೆಚ್ಚಿಗೆ ಲಾಭ ಇದ್ದರೆ ನೀವು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿ ತೆರಿಗೆ ಪಾವತಿಸಬೇಕು. ಕೆಲವೊಮ್ಮೆ ಕೇಂದ್ರ ಸರ್ಕಾರವು ವಿಶೇಷವಾಗಿ ಆಯೋಜಿಸಿರುವ ಯೋಜನೆಗಳಿಗೆ ಆದಾಯ ತೆರಿಗೆ ವಿನಾಯತಿಯನ್ನು ಘೋಷಿಸಿರುವ ಉದಾಹರಣೆಗಳು ಕೂಡ ಇವೆ. ಈ ವಿಚಾರವಾಗಿ ಇನ್ನು ವಿಸ್ತಾರವಾಗಿ ಮಾಹಿತಿ ಬೇಕಿದ್ದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಬೇಟಿಕೊಟ್ಟು ಅಲ್ಲಿನ ಸಿಬ್ಬಂದಿಗಳಲ್ಲಿ ವಿಚಾರಿಸಿ ಮಾಹಿತಿ ಪಡೆಯಿರಿ.