ಗೊರಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಗೊರಕೆ ಹೊಡೆಯುವುದು ಆ ವ್ಯಕ್ತಿಗಿಂತ ಅವರ ಪಕ್ಕದಲ್ಲಿ ಮಲಗುವ ವ್ಯಕ್ತಿಗೂ ಕಿರಿಕಿರಿ ಮಾಡುತ್ತದೆ. ಯಾಕೆಂದರೆ ಅವರ ಗೊರಕೆ ಶಬ್ದಕ್ಕೆ ನಿದ್ದೆ ಬರುವುದಿಲ್ಲ. ನಿದ್ರಾಹೀನತೆಯಿಂದ ಕಾಡುವ ಆಲಸ್ಯ, ಮಂಕುತನ, ಮಾನಸಿಕ ಕಿರಿಕಿರಿ, ಒತ್ತಡ, ತಲೆನೋವು ಎಲ್ಲವನ್ನು ಕೂಡ ಇವರು ಅನುಭವಿಸುತ್ತಾರೆ.
ಹಾಗೆಯೇ ಗೊರಕೆ ಹೊಡೆಯುವವರು ಸುಖನಿದ್ರೆ ಮಾಡುತ್ತಾರೆ ಎನ್ನುವುದು ಕೆಲವರ ಅಭಿಪ್ರಾಯ, ಅದು ಕೂಡ ತಪ್ಪು. ಗೊರಕೆ ಹೊಡೆಯುವುದು ಆರೋಗ್ಯಕ್ಕೆ ಅಷ್ಟು ಪೂರಕವಲ್ಲ, ಅವರು ಗೊರಕೆ ಹೊಡೆಯುತ್ತ ನಿದ್ರೆ ಮಾಡುವುದರಿಂದ ನಿದ್ರೆ ಪ್ರಮಾಣ ಪೂರ್ತಿ ಆಗುವುದಿಲ್ಲ ಅವರು ಸಹ ನಿದ್ರಾಹೀನತೆಯ ಸಮಸ್ಯೆಗಳನ್ನು ಅನುಭವಿಸುತ್ತಾರೆ.
ಯಾವ ಕಾರಣದಿಂದ ಈ ರೀತಿ ಗೊರಕೆ ಸಮಸ್ಯೆ ಆಗುತ್ತದೆ ಇದನ್ನು ಸುಲಭವಾಗಿ ಹೇಗೆ ಕಂಟ್ರೋಲ್ ಮಾಡಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಸೈನಸ್ ಸಮಸ್ಯೆಯಿಂದ ಉಸಿರಾಟದ ಮಾರ್ಗಕ್ಕೆ ಅಡಚಣೆ ಆದಾಗ ಗೊರಕೆ ಉಂಟಾಗುತ್ತದೆ.
ಇನ್ನು ಕೆಲವರಿಗೆ ಟಾಕ್ಸಿಲೇಟೀಸ್ ಆಗಿರುತ್ತದೆ, ಅವರಿಗೂ ಕೂಡ ಗೊರಕೆ ಸಮಸ್ಯೆ ಕಾಡುತ್ತದೆ. ಧೂಮಪಾನ, ಮದ್ಯಪಾನದ ದುರಭ್ಯಾಸ ಇರುವವರಿಗೆ ಕೂಡ ಗೊರಕೆ ಸಮಸ್ಯೆ ಕಾಡುತ್ತದೆ ಮತ್ತು ನಾವು ಮಲಗುವ ಕೂಡ ಭಂಗಿ ಕೂಡ ಕಾರಣವಾಗಿರುತ್ತದೆ.
ಇದಿಷ್ಟೇ ಅಲ್ಲದೆ ರಾತ್ರಿ ಹೊತ್ತು ನಾವು ತಿಂದಿರುವ ಆಹಾರ ಪದಾರ್ಥ ಕೂಡ ಗೊರಕೆ ಬರುವುದಕ್ಕೆ ಕಾರಣವಾಗಿರುತ್ತದೆ. ಯಾವ ಕಾರಣದಿಂದ ಗೊರಕೆ ಬಂದರೂ ಅವರ ಆರೋಗ್ಯಕ್ಕೆ ಮಾರಕ ಹಾಗೂ ಅವರ ಜೊತೆಗೆ ನಿದ್ದೆ ಮಾಡುವವರಿಗೂ ಕೂಡ. ಇದನ್ನು ಯಾವ ರೀತಿ ಸುಲಭವಾಗಿ ಕಂಟ್ರೋಲ್ ಮಾಡಬಹುದು ಎನ್ನುವುದಕ್ಕೆ ಟಿಪ್ಸ್ ಗಳು ಹೀಗಿವೆ.
* ಈ ಮೇಲೆ ತಿಳಿಸಿದಂತೆ TNS, ಸೈನಸ್ , ಟ್ಯಾಕ್ಸಿಲೇಟ್ ಸಮಸ್ಯೆ ಇರುವವರು ಆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಚಿಕಿತ್ಸೆ ತೆಗೆದುಕೊಳ್ಳಬೇಕು.
* ಧೂಮಪಾನ ಮದ್ಯಪಾನದಿಂದ ಉಂಟಾಗುವ ಲೋಳೆಯೂ ಅನೇಕ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ, ಹಾಗಾಗಿ ಇದನ್ನು ಕಂಟ್ರೋಲ್ ಮಾಡಬೇಕು.
* ರಾತ್ರಿ ಹೊತ್ತು ಮೊಸರನ್ನ ತಿನ್ನುವವರೆಗೂ ಕೂಡ ಗೊರಕೆ ಬರುತ್ತದೆ. ಸಂಜೆ ಆದ ಮೇಲೆ ರೆಫ್ರಿಜರೇಟರ್ ನಲ್ಲಿ ಇಟ್ಟಿರುವ ಆಹಾರ ಪದಾರ್ಥಗಳನ್ನು ಅವಾಯ್ಡ್ ಮಾಡುವುದು ಒಳ್ಳೆಯದು
* ಗೊರಕೆ ಹೊಡೆಯುತ್ತೇವೆ ಎನ್ನುವ ಕಂಪ್ಲೇಂಟ್ ಇದ್ದರೆ ಮಲಗುವಾಗ ಅಂಗಾತ ಮಲಗುವ ಬದಲು ಬಲಭಾಗಕ್ಕೆ ತಿರುಗಿ ಮಲಗುವುದರಿಂದ ಗೊರಕೆ ಬರುವುದು ಕಂಟ್ರೋಲ್ ಆಗುತ್ತದೆ,
ಗೊರಕೆ ಸಮಸ್ಯೆ ಇರುವವರು ಸ್ವಲ್ಪ ಎತ್ತರದ ದಿಂಬನ್ನು ಹಾಕಿಕೊಳ್ಳುವು ಉತ್ತಮ
* ಒಬೆಸಿಟಿಯಿಂದ ಕೂಡ ಗೊರಕೆ ಬರುತ್ತದೆ, ಬೊಜ್ಜು ಇದ್ದರೆ ಕಡಿಮೆ ಮಾಡಿಕೊಳ್ಳಿ.
* ಮಲಗುವ ಮುನ್ನ ಜೇನುತುಪ್ಪ ಸೇವಿಸುವುದು ಅಥವಾ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯುವುದರಿಂದ ಗೊರಕೆ ಬರುವುದಿಲ್ಲ.
* ರಾತ್ರಿ ಮಲಗುವಾಗ ಅರ್ಧ ಚಮಚ ಶುಂಠಿರಸಕ್ಕೆ ಅರ್ಧ ಚಮಚ ಜೇನುತುಪ್ಪ ಹಾಕಿ ಜೊತೆಗೆ ಏಲಕ್ಕಿ ಸೇರಿಸಿ ಸೇವಿಸಿದರೆ ಗೊರಕೆ ಬರುವುದಿಲ್ಲ
* ಆಯುರ್ವೇದ ಅಂಗಡಿಗಳಲ್ಲಿ ಸೀತಾಫಲಾದಿ ಚೂರ್ಣ ಸಿಗುತ್ತದೆ ಇದನ್ನು ಅರ್ಧ ಚಮಚ ತೆಗೆದುಕೊಂಡು ಅರ್ಧ ಚಮಚ ಜೇನುತುಪ್ಪದ ಜೊತೆ ಮಲಗುವ ಮುನ್ನ ತಿನ್ನಿ.
* ನಶ್ಯ ಚಿಕಿತ್ಸೆ ಕೂಡ ಈ ಸಮಸ್ಯೆಗೆ ಉತ್ತಮ ಪರಿಹಾರ. ಶುದ್ಧ ಹಸುವಿನ ತುಪ್ಪ ಅಥವಾ ಬಾದಾಮಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮೂಗಿಗೆ ಎರಡು ಹನಿ ಹಾಕಿಕೊಳ್ಳಬೇಕು ಮತ್ತು ಹೊಕ್ಕಳಿಗೆ ಕೂಡ ಪ್ರದಕ್ಷಿಣೀಯ ದಿಕ್ಕಿನಲ್ಲಿ ಹಾಕಿಕೊಳ್ಳಬೇಕು.
* ರಾತ್ರಿ ಹೊತ್ತು ಊಟ ಆದಮೇಲೆ ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಸೇವಿಸುವುದರಿಂದ ಈ ಸಮಸ್ಯೆ ಕಂಟ್ರೋಲಿಗೆ ಬರುತ್ತದೆ.
* ಪ್ರಾಣಯಾಮದ ಅಲೋಮ, ವಿಲೋಮ, ಕಪಾಲಭಾತಿ, ಭ್ರಮರಿ ಪ್ರಾಣಾಯಾಮ ಇವುಗಳನ್ನು ಪ್ರತಿನಿತ್ಯ ಮಾಡುವುದರಿಂದ ಕೂಡ ಈ ಸಮಸ್ಯೆ ಪರಿಹಾರವಾಗುತ್ತದೆ.