ದೇಶದಾದ್ಯಂತಿರುವ ಎಲ್ಲಾ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ. ಕೇಂದ್ರ ಸರ್ಕಾರದ ಕಡೆಯಿಂದ ಬೃಹತ್ ನೇಮಕಾತಿ ನಡೆಯುತ್ತಿದ್ದು, IKDRC ಸಂಸ್ಥೆಯಲ್ಲಿ ಖಾಲಿ ಇರುವ 1000ಕ್ಕೂ ಹೆಚ್ಚು ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕಾಗಿ ಸಂಸ್ಥೆಯಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಈ ಹುದ್ದೆಗಳಿಗೆ ಭಾರತದಾದ್ಯಂತ ಇರುವ ಎಲ್ಲಾ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತಿ ಇರುವ ಎಲ್ಲ ಅಭ್ಯರ್ಥಿಗಳು ಕೂಡ ಅಧಿಸೂಚನೆಯಲ್ಲಿರುವಂತೆ ಅರ್ಹತೆ ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಈ ಉದ್ಯೋಗವನ್ನು ಪಡೆದುಕೊಳ್ಳಿ. ಅನುಕೂಲತೆಗಾಗಿ ಈ ಅಂಕಣದಲ್ಲಿ ಈ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಕೆಲವು ಮಹತ್ವದ ಅಂಶಗಳನ್ನು ತಿಳಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು.
ಉದ್ಯೋಗದ ಪ್ರಕಾರ:- ಕೇಂದ್ರ ಸರ್ಕಾರದ ಉದ್ಯೋಗಗಳು
ಉದ್ಯೋಗ ಸಂಸ್ಥೆ:- ಇನ್ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸ್ ಅಂಡ್ ರಿಸರ್ಚ್ ಸೆಂಟರ್ (IKDRC)
ಹುದ್ದೆಯ ಹೆಸರು:- ಕ್ಲರ್ಕ್
ಉದ್ಯೋಗ ಸ್ಥಳ:- ಭಾರತದಾತ್ಯಂತ
ಒಟ್ಟು ಹುದ್ದೆಗಳ ಸಂಖ್ಯೆ:- 1156
ಹುದ್ದೆಗಳ ವಿವರ:-
● ಆಡಳಿತ ಸಹಾಯಕ – 1
● ಆಡಳಿತ ಸಹಾಯಕಾಧಿಕಾರಿ – 2
● ಕಚೇರಿ ಅಧಿಕ್ಷಕರು – 5
● ಹಿರಿಯ ಗುಮಾಸ್ತ – 9
● ಜೂನಿಯರ್ ಕ್ಲರ್ಕ್ – 69
● ವೈಯಕ್ತಿಕ ಕಾರ್ಯದರ್ಶಿ – 1
● ಮುಖ್ಯಗುಮಾಸ್ತ – 3
● ಮುಖ್ಯ ಖಾತೆ ಅಧಿಕಾರಿ (ಗ್ರೂಪ್1) – 1
● ಅಕೌಂಟೆಂಟ್ (ಗ್ರೂಪ್ 3) – 3
● ಸ್ಟೋರ್ ಆಫೀಸರ್ (ಗ್ರೂಪ್ 2) – 1
● ಸ್ಟೋರ್ ಕೀಪರ್ (ಗ್ರೂಪ್ 3) – 5
● ಮಾರ್ಕೆಟ್ ಸೂಪರಿಡೆಂಟ್ (ಗ್ರೂಪ್ 2) – 3
● ನರ್ಸಿಂಗ್ ಸೂಪರಿಡೆಂಟ್ (ಗ್ರೂಪ್ 2) – 3
● ಉಪ ನರ್ಸಿಂಗ್ ಸೂಪರಿಡೆಂಟ್ (ಗ್ರೂಪ್ – 2) – 4
● ಸಹಾಯಕ ನರ್ಸಿಂಗ್ ಸೂಪೇರಿಡೆಂಟ್ (ಗ್ರೂಪ್ 3) – 28
● ಸೀನಿಯರ್ ಫಾರ್ಮಸಿಸ್ಟ್ / ಫಾರ್ಮಸಿಸ್ಟ್ ವಿಭಾಗ ( ಗ್ರೂಪ್ 3) – 3
● ಜ್ಯೂನಿಯರ್ ಫಾರ್ಮಸಿಸ್ಟ್ (ಗ್ರೂಪ್ 3) – 22
● ಸ್ಟಾಫ್ ನರ್ಸ್ – 650
● ಪ್ರಯೋಗಾಲಯ ತಂತ್ರಜ್ಞ (ಗ್ರೂಪ್ 3) – 31
● ಪ್ರಯೋಗಾಲಯ ಸಹಾಯಕ (ಗ್ರೂಪ್ 3) – 93
● ಕಿಡ್ನಿ ತಂತಜ್ಞ HD (ಗ್ರೂಪ್ 3) – 50
● ಸಹಾಯಕ HD ,ತಂತ್ರಜ್ಞ (ಗ್ರೂಪ್ 3) – 60
● ಎಕ್ಸ್ ರೇ ತಂತ್ರಜ್ಞ (ಗ್ರೂಪ್ 3) – 5
● ಸಹಾಯಕ ಎಕ್ಸ್ ರೇ ತಂತ್ರಜ್ಞ (ಗ್ರೂಪ್ 3) – 25
● ಸಹಾಯಕ ECG ತಂತ್ರಜ್ಞಾನ (ಗ್ರೂಪ್ 3) – 4
● ಆಪರೇಷನ್ ಥಿಯೇಟರ್ ಸಹಾಯಕ (ಗ್ರೂಪ್ 3) – 32
● ಸಂಖ್ಯಾಶಾಸ್ತ್ರಜ್ಞ (ಗ್ರೂಪ್ 3) – 4
● ಛಾಯಾಗ್ರಹಕ (ಗ್ರೂಪ್ 3) – 3
● ಸಹಾಯಕ ಸ್ಯಾನಿಟರಿ ಇನ್ಸ್ಪೆಕ್ಟರ್ (ಗ್ರೂಪ್ 3) – 6
● ಆರೋಗ್ಯ ಶಿಕ್ಷಕ (ಗ್ರೂಪ್ 3) – 18
● ಆಹಾರ ತಜ್ಞರು (ಗ್ರೂಪ್ 3) – 5
● ಸ್ಯಾನಿಟರಿ ಇನ್ಸ್ಪೆಕ್ಟರ್ (ಗ್ರೂಪ್ 3) – 2
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಅಧಿಕೃತ ವೆಬ್ಸೈಟ್ ವಿಳಾಸ:- www.ikdrc.its.org
ಶೈಕ್ಷಣಿಕ ವಿದ್ಯಾರ್ಹತೆ:-
ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ 10ನೇ ತರಗತಿ, 12ನೇ ತರಗತಿ, ಡಿಪ್ಲೋಮೋ, ಪದವಿ, ಸ್ನಾತಕೋತರ ಪದವಿ, ವೈದ್ಯಕೀಯ ಕೋರ್ಸ್ ಮತ್ತು ತಾಂತ್ರಿಕ ಕೋರ್ಸ್ಗಳನ್ನು ಪಡೆದವರು ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ:-
● ಕನಿಷ್ಠ ವಯಸ್ಸಿನ ಮಿತಿ 28 ವರ್ಷಗಳು.
● ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 16 ಮೇ, 2023.