ರಾಜ್ಯದಲ್ಲಿರುವ ಎಲ್ಲರಿಗೂ ಕೂಡ ಸರ್ಕಾರ ವತಿಯಿಂದ ಬಿಗ್ ಅಪ್ಡೇಟ್ ಇದೆ. ಅದೇನೆಂದರೆ ಕಂದಾಯ ಇಲಾಖೆ (Revenue department) ನೋಂದಣಿ ಮತ್ತು ಮುದ್ರಾಕ ಶುಲ್ಕವನ್ನು ಹೆಚ್ಚಿಸಿದೆ (Registration charges). ಆಸ್ತಿ ಖರೀದಿ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿರುವ ಪ್ರತಿಯೊಬ್ಬರು ಈ ಮಾಹಿತಿಯನ್ನು ತಿಳಿದುಕೊಂಡಿರಬೇಕು ಯಾಕೆಂದರೆ ಪರೀಷ್ಕೃತ ದರವು ಅ. 3 ರಿಂದ ಜಾರಿಯಲ್ಲಿದೆ.
ಕರ್ನಾಟಕ ರಾಜ್ಯದ ಹೊಸ ಸರ್ಕಾರದ ನೂತನ ಕಂದಾಯ ಸಚಿವರಾಗಿ ಸಂಪುಟ ಸೇರಿರುವ ಕೃಷ್ಣ ಬೈರೇಗೌಡ (Minister Krishna Bairegowda) ಅವರು ಕಂದಾಯ ಇಲಾಖೆಯ ಜವಾಬ್ದಾರಿ ಹೊತ್ತುಕೊಂಡ ದಿನದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಂತರ ಈಗ ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಹೆಚ್ಚಿಸಿ ಆದೇಶ ಮಾಡಿದ್ದಾರೆ.
ನಿಯಮದ ಪ್ರಕಾರ ಪ್ರತಿ ವರ್ಷವೂ ಕೂಡ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರೀಷ್ಕೃತವಾಗಬೇಕು ಆದರೆ ರಾಜ್ಯದಲ್ಲಿ ಐದು ವರ್ಷಗಳಿಂದ ಈ ಈ ಪ್ರಕ್ರಿಯೆ ನಡೆದಿಲ್ಲ ಯಾಕೆಂದರೆ ಎಲ್ಲರಿಗೂ ತಿಳಿದಿರುವಂತೆ 2019ರಲ್ಲಿ ಬಂದ ಕೋವಿಡ್ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿತು. ಹಾಗಾಗಿ ನಾಗರೀಕರಿಗೆ ಹೆಚ್ಚು ಹೊರೆಯಾಗುವುದು ಬೇಡ ಎಂದು ಇದನ್ನು ಮುಂದೂಡಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ನಿಧಾನವಾಗಿ ಚೇತರಿಸಿಕೊಂಡ ಎಲ್ಲಾ ಆರ್ಥಿಕ ಚಟುವಟಿಕೆಗಳು ಹಿಂದಿನಂತೆ ಗರಿಗೆದರಿವೆ ಹಾಗಾಗಿ ಸರ್ಕಾರವು ಕೂಡ ತನ್ನ ರಾಜಸ್ವ ಸಂಗ್ರಹಕ್ಕೆ ಮುಂದಾಗಿದೆ. ಸರ್ಕಾರದ ಯೋಜನೆಗಳಿಗೆ ಹಣ ತುಂಬಿಸುವ ಸಲುವಾಗಿ ಬಾಕಿ ಉಳಿದಿದ್ದ ಎಲ್ಲಾ ಕಾರ್ಯಗಳಿಗೆ ಚಾಲನೆ ನೀಡಿದೆ ಅದರಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಿಸುವುದು ಕೂಡ ಸೇರಿದೆ.
ಮೊದಲನೇ ಕಂತಿನ ಹಣ ಬಾರದೇ ಇರುವವರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!
ಕಂದಾಯ ಇಲಾಖೆಯ ಬಲವಾದ ಮೂಲಗಳ ಮಾಹಿತಿ ಪ್ರಕಾರ ಶೇಕಡ 20% ರಿಂದ 30%ರಷ್ಟು ದರ ಹೆಚ್ಚಳವಾಗಿದೆ. ಆದರೆ ಇದು ರಾಜ್ಯದ ಎಲ್ಲಾ ಭಾಗಗಳಲ್ಲೂ ಕೂಡ ಒಂದೇ ತೆರನಾಗಿ ಆಗಿಲ್ಲ ಎನ್ನುವುದು ವಿಶೇಷ. ಯಾಕೆಂದರೆ ಕೆಲವು ಕಡೆ ಈಗಾಗಲೇ ಮಾರುಕಟ್ಟೆಗಿಂತ ಹೆಚ್ಚು ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಜಾರಿಯಲ್ಲಿದೆ ಇನ್ನು ಕೆಲವು ಕಡೆ ಈ ಹಿಂದೆ ಇದ್ದಿದಕಿಂತ ಆ ಪ್ರದೇಶಗಳು ಹೆಚ್ಚಿಗೆ ಬೆಳವಣಿಗೆ ಹೊಂದಿವೆ ಹಾಗಾಗಿ ಆಯಭಾಗದ ಪರಿಸ್ಥಿತಿ ಅವಲೋಕಿಸಿ ಹೊಸದರ ನಿಗಧಿ ಪಡಿಸಿರುವುದಾಗಿ ಇಲಾಖೆ ತಿಳಿಸಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500ರಿಂದ 2000 ಪಟ್ಟು ಹೆಚ್ಚಿದೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭೂಮಿಗಳಿಗೆ ಮಾರ್ಗಸೂಚಿ ದರ 5 ರಿಂದ 10 ಲಕ್ಷ ರೂ. ನಿಗದಿಯಾಗಿದ್ದರೆ, ಮಾರುಕಟ್ಟೆ ದರ 10 ಕೋಟಿ ರೂ.ಗಳಿಗೂ ಅಧಿಕವಿದೆ ಇಂತಹ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ. 50%ರಷ್ಟು ಹೆಚ್ಚಿಸಲಾಗಿದೆ.
ಬಾಯಿ ಹುಣ್ಣು ಸುಲಭವಾಗಿ ವಾಸಿಯಾಗಲು ಪರಿಣಾಮಕಾರಿಯಾದ ಮನೆಮದ್ದುಗಳು ಇವು.!
ಸೆಪ್ಟೆಂಬರ್ 29ಕ್ಕೆ ಹಳೆ ದರದ ಸಮಯ ಮುಗಿದಿದ್ದು, ಸರ್ಕಾರ ಈ ಬಗ್ಗೆ ಮುಂಚೆಯೇ ಮಾಹಿತಿ ನೀಡಿದ್ದರಿಂದ ಕೊನೆ ದಿನಗಳಲ್ಲಿ ಹೆಚ್ಚಿಗೆ ನೋಂದಣಿಯಾಗಿ ದಾಖಲೆ ಮಟ್ಟದಲ್ಲಿ ರಾಜ್ಯದ ಖಜಾನೆಗೆ ಆದಾಯ ಬಂದಿದೆ. ಸರ್ಕಾರವು ಕೂಡ ಜನಸಾಮಾನ್ಯರಿಗೆ ಅನುಕೂಲ ಆಗಲಿ ಎಂದು ಸೆಪ್ಟೆಂಬರ್ ತಿಂಗಳ ಕೊನೆಯ 10 ದಿನಗಳಲ್ಲಿ ಬೆಳಗ್ಗೆ 8:00 ರಿಂದ ರಾತ್ರಿ 8:00 ರವರೆಗೂ ಕಛೇರಿ ತೆರೆದಿರಲು ಅನುಮತಿ ನೀಡಿತ್ತು.
ಆದರೆ ವರ್ಕ್ ಲೋಡ್ ಹೆಚ್ಚಿದ್ದ ಕಾರಣ 11 ಗಂಟೆಯವರೆಗೂ ಕೂಡ ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಡೆದಿದೆ, ಜನರು ಮುಗಿಬಿದ್ದು ತಮ್ಮ ಆಸ್ತಿ, ನೋಂದಣಿ ಬಾಕಿ ಇದ್ದಿದ್ದನ್ನು ಈ ಸಮಯದಲ್ಲಿ ಮುಗಿಸಿಕೊಂಡಿದ್ದಾರೆ. ಅಕ್ಟೋಬರ್ 1 ರಿಂದಲೇ ನಿಯಮದ ಪ್ರಕಾರ ಹೊಸದರ ಜಾರಿಯಲ್ಲಿದೆ. ಆದರೆ ಅಕ್ಟೋಬರ್ 1 ಮತ್ತು ಅಕ್ಟೋಬರ್ 2 ರಂದು ಸಾರ್ವತಿಕಕ ರಜೆ ಇದ್ದ ಕಾರಣ ಅಕ್ಟೋಬರ್ 3 ರಿಂದ ಅಧಿಕೃತವಾಗಿ ಹೊಸ ದರದಂತೆ ರಿಜಿಸ್ಟ್ರಾರ್ ನಡೆಯುತ್ತಿದೆ.