ಅಟಲ್ ಪೆನ್ಷನ್ ಯೋಜನೆಯಲ್ಲಿ ಕೇವಲ 210 ರೂಪಾಯಿ ಕಟ್ಟಿ ಸಾಕು, ಪ್ರತಿ ತಿಂಗಳು 5000 ಪೆನ್ಷನ್ ಸಿಗುತ್ತೆ ಜೊತೆಗೆ ನಾಮಿನಿಗೆ 8.5 ಲಕ್ಷ ಸಿಗುತ್ತೆ.!

 

2015 ರಲ್ಲಿ ದೇಶದ ಪ್ರಧಾನಿಯಾಗಿದ್ದ ನರೇಂದ್ರ ಮೋದಿ (PM Narendra Modi) ಅವರು ಜಾರಿಗೆ ತಂದಂತಹ ಯೋಜನೆ ಅಟಲ್ ಪೆನ್ಷನ್ ಯೋಜನೆ (Atal pension Scheme). ಈ ಯೋಜನೆಯಲ್ಲಿ ಹೂಡಿಕೆ ಮಾಡಿ 60 ವರ್ಷ ಆದ ಬಳಿಕ ಪ್ರತಿ ತಿಂಗಳು ಖಚಿತವಾದ ಪೆನ್ಷನ್ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರದ ಯೋಜನೆಯಾಗಿರುವ ಅಟಲ್ ಪೆನ್ಷನ್ ಯೋಜನೆಯಡಿ ಹೂಡಿಕೆ ಮಾಡುವುದರಿಂದ ಸರ್ಕಾರವೇ ನಿಮ್ಮ ಹಣಕ್ಕೆ ಭದ್ರತೆ ಕೊಡುತ್ತದೆ.

ಜೀವನದ ಸಂಧ್ಯಾಕಾಲವು ಆರಾಮದಾಯಕವಾಗಿರಬೇಕು ಎಂದರೆ ಪ್ರತಿ ತಿಂಗಳು ದುಡಿಯಲು ಶಕ್ತಿ ಇರದ ಆ ವಯಸ್ಸಿನ ಅವಶ್ಯಕತೆಗಾಗಿ ಯುವ ಜನತೆ ಉದ್ಯೋಗದಲ್ಲಿದ್ದಾಗಲೇ ಹಣ ಹೂಡಿಕೆ ಮಾಡುವುದು ಉತ್ತಮ. ಅದಕ್ಕಾಗಿ ಈ ಅಂಕಣದಲ್ಲಿ ಅಟಲ್ ಪೆನ್ಷನ್ ಯೋಜನೆ ಬಗ್ಗೆ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ.

ನಿಮ್ಮ ಗ್ರಾಮದಲ್ಲಿ ಯಾರಿಗೆ ಎಷ್ಟು ಪಿಂಚಣಿ ಬರುತ್ತೆ.? ಯಾರೆಲ್ಲಾ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಪಿಂಚಣಿ ಪಡೆಯುತ್ತಿದ್ದಾರೆ. ಆ ಮಂಜೂರು ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವ ವಿಧಾನ.!

ಯೋಜನೆ ಹೆಸರು:- ಅಟಲ್ ಪೆನ್ಷನ್ ಯೋಜನೆ
ಅಟಲ್ ಪೆನ್ಶನ್ ಯೋಜನೆ ಕುರಿತಾದ ಪ್ರಮುಖ ವಿಷಯಗಳು:-

● ಈ ಯೋಜನೆ ಖರೀದಿಸುವವರು ಭಾರತೀಯರಾಗಿರಬೇಕು
● ಈ ಯೋಜನೆಯನ್ನು 18 ವರ್ಷ ಮೇಲ್ಪಟ್ಟ ಹಾಗೂ 40 ವರ್ಷದ ಒಳಗಿನ ವಯಸ್ಸಿನವರು ಮಾತ್ರ ಖರೀದಿಸಬಹುದು.
● 60 ವರ್ಷ ತುಂಬುವವರೆಗೂ ಕೂಡ ನೀವು ಪ್ರತಿ ತಿಂಗಳು ಈ ಯೋಜನೆಗೆ ನೀವು ಆಯ್ಕೆ ಮಾಡಿದ ಮೊತ್ತದ ಹಣವನ್ನು ಪಾವತಿ ಮಾಡಬೇಕು.

● ನೀವು 60 ವರ್ಷ ತುಂಬಿದ ಬಳಿಕ ಎಷ್ಟು ಪೆನ್ಷನ್ ಪಡೆಯಬೇಕು ಎನ್ನುವುದನ್ನು ಯೋಜನೆ ಖರೀದಿಸುವ ವೇಳೆಯೇ ನಿಶ್ಚಯ ಮಾಡಬೇಕು ಮಾಸಿಕವಾಗಿ 1,000 ದಿಂದ ಹಿಡಿದು 5,000 ವರೆಗೂ ಕೂಡ ನಿಮಗೆ ಪೆನ್ಷನ್ ನೀಡುವ ಆಯ್ಕೆಗಳು ಇವೆ. ಅದರಲ್ಲಿ ನೀವು ಯಾವ ಮೊತ್ತದ ಹಣವನ್ನು ಸೆಲೆಕ್ಟ್ ಮಾಡುತ್ತಿರೋ ಆ ಮೊತ್ತಕ್ಕೆ ಅನುಗುಣವಾಗಿ ನಿಮ್ಮ ಪ್ರೀಮಿಯಂಗಳು ಇರುತ್ತವೆ.

SSC ನೇಮಕಾತಿ, 1876 ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ 1,12,400 ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

● ನಿಮ್ಮ ಪ್ರೀಮಿಯಂಗಳನ್ನು ಮಾಸಿಕವಾಗಿ ತ್ರೈಮಾಸಿಕವಾಗಿ ಅಥವಾ ಅರ್ಧವಾರ್ಷಿಕವಾಗಿ ಕೂಡ ಕಟ್ಟಲು ಅವಕಾಶಗಳಿವೆ.
● ನೀವು ಯೋಜನೆ ಖರೀದಿಸುವ ವೇಳೆಗೆ ನಿಮ್ಮ ಸಂಗಾತಿ ಹೆಸರು ಹಾಗೂ ನಾಮಿನಿ ಹೆಸರನ್ನು ಮತ್ತು ದಾಖಲೆಗಳನ್ನು ಸಲ್ಲಿಸಬೇಕು.
● ಈ ಯೋಜನೆಯನ್ನು ಖರೀದಿಸಿದ ವ್ಯಕ್ತಿಯು 60 ವರ್ಷಕ್ಕಿಂತ ಮೊದಲೇ ಮೃ’ತಪಟ್ಟಲ್ಲಿ ಅವರು ಈವರೆಗೆ ಹೂಡಿಕೆ ಮಾಡಿದ ಹಣಕ್ಕೆ ಕಾನೂನು ಪ್ರಕಾರವಾಗಿ ನೀಡುವ ಬಡ್ಡಿ ಮೊತ್ತ ಸೇರಿಸಿ ನಾಮಿನಿಗೆ ಕೊಡಲಾಗುತ್ತದೆ.

● 60 ವರ್ಷದ ನಂತರ ಮೃ’ತ ಪಟ್ಟರೆ ಪೆನ್ಷನ್ ಅನ್ನು ಅವರ ಪತ್ನಿ ಜೀವಂತ ಇರುವವರೆಗೂ ಕೂಡ ನೀಡಲಾಗುತ್ತದೆ. ಪತ್ನಿ ಮ’ರ’ಣ ಹೊಂದಿದ ಬಳಿಕ ನಾಮಿನಿ ಆಗಿರುವವರಿಗೆ ಮೊತ್ತ ಸೇರುತ್ತದೆ.
ಮಾಸಿಕವಾಗಿ 1000ರೂ. ಪೆನ್ಷನ್ ಯೋಜನೆ ಸೆಲೆಕ್ಟ್ ಮಾಡಿದವರಿಗೆ 1.7 ಲಕ್ಷ, 2000ರೂ. ಸೆಲೆಕ್ಟ್ ಮಾಡಿದವರಿಗೆ 3.4ಲಕ್ಷ, 3,000ರೂ. ಸೆಲೆಕ್ಟ್ ಮಾಡಿದವರಿಗೆ 5.1ಲಕ್ಷ, 4000ರೂ. ಸೆಲೆಕ್ಟ್ ಮಾಡಿದವರಿಗೆ 6.8 ಮತ್ತು 5,000ರೂ. ಸೆಲೆಕ್ಟ್ ಮಾಡಿ ಪ್ರೀಮಿಯಂಗಳನ್ನು ಪಾವತಿಸಿದವರಿಗೆ 8.5ಲಕ್ಷ ಹಣವು ಸಿಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್.! ಮಂಜೂರಾಯ್ತು ಗೃಹಲಕ್ಷ್ಮಿ ಯೋಜನೆಯ ಹಣ ಈ ರೀತಿ ಚೆಕ್ ಮಾಡಿ.!

● ನೀವು ಹತ್ತಿರದಲ್ಲಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಗಳಲ್ಲಿ ಕೂಡ ಈ ಯೋಜನೆಯನ್ನು ಖರೀದಿಸಬಹುದು. ನಿಮ್ಮ ಬ್ಯಾಂಕ್ ಖಾತೆಯಿಂದ ಈ ಯೋಜನೆಗೆ ಆಟೋಮೆಟಿಕ್ ಅಮೌಂಟ್ ಕಟ್ ಆಗುವ ಅನುಕೂಲತೆಯನ್ನು ಕೂಡ ಮಾಡಿಸಿಕೊಳ್ಳಬಹುದು.

ಬೇಕಾಗುವ ದಾಖಲೆಗಳು

1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್ ವಿವರ
3. ಮೊಬೈಲ್ ಸಂಖ್ಯೆ
4. ನಾಮಿನಿ ಡೀಟೇಲ್ಸ್.

● ಅಟಲ್ ಪೆನ್ಷನ್ ಯೋಜನೆಯ ಕಾರ್ಡ್ ಕೂಡ ಸಿಗುತ್ತದೆ ಆನ್ಲೈನ್ ನಲ್ಲಿ ಅಪ್ಲೈ ಮಾಡಿದರೆ ಪೋಸ್ಟ್ ಮೂಲಕ ನಿಮ್ಮ ವಿಳಾಸಕ್ಕೆ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು, ನಾಮಿನಿ ಹೆಸರು, ಹುಟ್ಟಿದ ದಿನಾಂಕ, ಯಾವ ಬ್ಯಾಂಕ್ ಖಾತೆಯಿಂದ ಹಣ ಕಟ್ಟಾಗುತ್ತದೆ ಎಷ್ಟು ಪೆನ್ಷನ್ ಗೆ ಯೋಜನೆ ಮಾಡಿಸಲಾಗಿದೆ ಈ ವಿವರಗಳು ಇರುತ್ತದೆ.

Leave a Comment

%d bloggers like this: