ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ದೇವಸ್ಥಾನಗಳಿಗೆ ಹೋಗುವುದನ್ನು ಬಹಳ ವಿಶೇಷವಾಗಿ ಕಾಣುತ್ತೇವೆ. ದೇವಸ್ಥಾನಕ್ಕೆ ಹೋಗುವುದು, ಮಂತ್ರಗಳನ್ನು ಹೇಳುವುದು, ಹೋಮ ಯಜ್ಞಗಳಲ್ಲಿ ಭಾಗಿಯಾಗುವುದು, ತೀರ್ಥ ಪ್ರಸಾದ ತೆಗೆದುಕೊಳ್ಳುವುದು ಇದೆಲ್ಲವೂ ಕೂಡ ನಮಗೆ ದೇವರ ಜೊತೆ ಕನೆಕ್ಷನ್ ಆಗುವುದಕ್ಕೆ ಇರುವ ಒಂದು ವಿಧಾನ ಎಂದೇ ನಾವು ನಂಬಿದ್ದೇವೆ.
ಹಾಗೆಯೇ ನಮ್ಮಲ್ಲಿ ಒಂದೊಂದು ದೇವರು ಹಾಗು ದೇವತೆಗಳಿಗೂ ವಿಶೇಷವಾದ ಆಚರಣೆ ಇರುತ್ತದೆ. ಆ ಪ್ರಕಾರವಾಗಿ ಆ ದೇವರಿಗೆ ಅಥವಾ ಆ ದೇವಸ್ಥಾನದಲ್ಲಿ ನಡೆದುಕೊಂಡಾಗ ದೇವರು ಪ್ರಸನ್ನರಾಗಿ ನಮಗೆ ಆಶೀರ್ವಾದ ನೀಡುತ್ತಾರೆ ಎನ್ನುವ ನಂಬಿಕೆ ಅಚಲವಾಗಿದೆ. ಇದೇ ರೀತಿಯಾಗಿ ನಡೆದುಕೊಂಡು ಫಲಿತಾಂಶ ಪಡೆದಿರುವ ಅನೇಕ ಉದಾಹರಣೆಗಳನ್ನು ಕೂಡ ನಾವು ನೋಡಿದ್ದೇವೆ.
ಇವುಗಳ ಪಟ್ಟಿಗೆ ಸೇರುತ್ತಿದೆ ಮಂಡ್ಯ ಜಿಲ್ಲೆಯ ಪಾಂಡವರ ತಾಲೂಕಿನ ಕೆ. ಬೆಟ್ಟಹಳ್ಳಿ ಹಾಗೂ ಹುಲಿಕೆರೆ ಕೊತ್ತಲು ಗ್ರಾಮದ ಮಧ್ಯದಲ್ಲಿರುವ ವಿಜಯ ಕಾಳಿ ಅಮ್ಮನವರ ದೇವಸ್ಥಾನ. ಈ ದೇವಸ್ಥಾನದ ವಿಶೇಷತೆ ಏನೆಂದರೆ, ವಿಜಯ ಕಾಳಿ ಅಮ್ಮನವರ ಈ ಸನ್ನಿಧಾನದಲ್ಲಿ ತಲೆಯ ಮೇಲೆ ಶ್ರೀಚಕ್ರ ಇಟ್ಟು ಅರಿಶಿಣ ನೀರನ್ನು ಹಾಕಲಾಗುತ್ತದೆ. ಈ ಒಂದು ಅವಕಾಶಕ್ಕಾಗಿಯೇ ದೂರದ ಊರುಗಳಿಂದ ಜಿಲ್ಲೆಗಳಿಂದ ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸುತ್ತಾರೆ.
ಮಾ-ಟ ಮಂತ್ರ ಈ ರೀತಿ ನ.ಕಾರಾತ್ಮಕ ಶಕ್ತಿಗಳ ಪ್ರಯೋಗ ಆಗಿದ್ದರೂ, ಕೈ ಕಾಲು ಸೆಳೆತ ಚರ್ಮರೋಗ ತೊನ್ನು ಮುಂತಾದ ಆರೋಗ್ಯ ಸಮಸ್ಯೆಗಳು ಇದ್ದರೂ ಈ ರೀತಿ ವಿಧಾನ ಅನುಸರಿಸುವುದರಿರುವ ಅದು ನಿವಾರಣೆ ಆಗುತ್ತದೆ ಎನ್ನುವುದು ಇಲ್ಲಿಗೆ ನಡೆದುಕೊಳ್ಳುವ ಭಕ್ತಾದಿಗಳ ನಂಬಿಕೆ. 120 ವರ್ಷಗಳ ಕಾಲದಿಂದ ಸ್ಥಳೀಯರೊಬ್ಬರ ಕುಟುಂಬದವರು ಈ ದೇವಸ್ಥಾನವನ್ನು ಹಾಗೂ ದೇವಸ್ಥಾನದಲ್ಲಿ ಮಠವನ್ನು ನಿರ್ವಹಿಸಿ ಅದನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈ ದೇವಾಲಯವು ನಾಲ್ಕನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ ಈಗ ಇದನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಸೋಮವಾರ, ಮಂಗಳವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಈ ದೇವಸ್ಥಾನದಲ್ಲಿ ಭಕ್ತಾದಿಗಳ ದಂಡೇ ತುಂಬಿರುತ್ತದೆ.
ಸಾವಿರಾರು ಭಕ್ತಾದಿಗಳು ಸೇರುವ ಈ ದೇವಸ್ಥಾನದಲ್ಲಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ಪೂಜೆ ಮತ್ತಷ್ಟು ವಿಶೇಷ. ಪ್ರತ್ಯಂಗಿರಾ ಹೋಮವನ್ನು ಕೂಡ ಈ ದೇವಸ್ಥಾನದಲ್ಲಿ ಏರ್ಪಡಿಸಲಾಗುತ್ತದೆ. ಹೋಮದಲ್ಲಿ ಪಾಲ್ಕೊಳ್ಳುವುದರಿಂದ ಇನ್ನು ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಅನೇಕರು ತಪ್ಪದೆ ಇದಕ್ಕೆ ಪಾಲ್ಗೊಳ್ಳುತ್ತಾರೆ. ಈ ದೇವಸ್ಥಾನಕ್ಕೆ ಬಂದು ಅನೇಕರ ಜೀವನದಲ್ಲಿ ಬದುಕು ಬದಲಾವಣೆ ಆಗಿದೆ.
ಗಂಡ ಹೆಂಡತಿಯರ ಮಧ್ಯೆ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಆರ್ಥಿಕವಾಗಿ ಹೊಡೆತ, ವ್ಯಾಪಾರ ವ್ಯವಹಾರಗಳಲ್ಲಿ ಕುಂಠಿತ, ಅನಾರೋಗ್ಯ ಸಮಸ್ಯೆ, ಆಸ್ತಿ ವಿಚಾರಕ್ಕಾಗಿ ವಿವಾದ ಸಂಬಂಧಗಳಲ್ಲಿ ಸಮಸ್ಯೆ ಇನ್ನು ಮುಂತಾದ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಇಲ್ಲಿ ಬಂದು ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಪರಿಹಾರವಾಗುತ್ತದೆ ಎನ್ನುವುದು ಹಲವರ ನಂಬಿಕೆ.
ಈ ದೇವಸ್ಥಾನಕ್ಕೆ ನಂಬಿಕೆಯೇ ಮುಖ್ಯವಾಗಿದೆ. ನಂಬಿಕೆ ಹಾಗೂ ಭಕ್ತಿಯಿಂದ ತಾಯಿ ವಿಜಯ ಕಾಳಿ ಅಮ್ಮರವರನ್ನು ಬಂದು ಇಲ್ಲಿ ಪ್ರಾರ್ಥಿಸಿದರೆ ಖಂಡಿತವಾಗಿಯೂ ಒಳಿತಾಗುತ್ತದೆ, ಇದರ ಜೊತೆಗೆ ಈ ದೇವಸ್ಥಾನದಲ್ಲಿ ಬಸವಣ್ಣ ಸಹ ಇದ್ದಾರೆ. ಇವರಿಗೆ ವಿಜಯಕಾಳಿ ಪವಾಡ ಬಸವಪ್ಪನವರು ಎಂದು ಸುತ್ತ ಮುತ್ತಲಿನ ಜನರು ಕರೆಯುತ್ತಾರೆ. ಈ ಬಸವಣ್ಣವರ ವಿಶೇಷತೆ ಏನೆಂದರೆ ಕುಡಿತದ ಚಟಕ್ಕೆ ಅಥವಾ ಜುಜು ಮುಂತಾದ ದುಶ್ಚಟಗಳಿಗೆ ಈಡಾಗಿರುವವರನ್ನು ಕರೆದುಕೊಂಡು ಬಂದು ಇಲ್ಲಿ ಬಸವಣ್ಣನವರಿಂದ ಪಾದ ಕಲಿಸಿದರೆ ಅವರು ಬುದ್ಧಿ ಕಲಿಯುತ್ತಾರೆ ಎನ್ನುವ ವಾಡಿಕೆ ಇದೆ.