ದೇಶದ ರಕ್ಷಣಾ ಇಲಾಖೆಯ ಭಾಗವಾಗಿ ಕರ್ತವ್ಯ ನಿರ್ವಹಿಸುವುದು ಒಂದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿ ಭಾರತೀಯ ನಾಗರಿಕನು ಸಹ ಇಂತಹದೊಂದು ಅವಕಾಶ ಸಿಕ್ಕರೆ ಸಾಕು ಎಂಬ ಬಲಭಾಗ ಇಚ್ಛೆ ಇರುತ್ತದೆ. ಈ ರೀತಿ ನೀವು ಕೂಡ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ದೇಶದ ಹೆಮ್ಮೆಯ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂದು ಕನಸು ಹೊಂದಿದ್ದರೆ ಇದೀಗ ನಿಮಗೆ ಭಾರತೀಯ ವಾಯುಪಡೆಯಿಂದ ಸಿಹಿ ಸುದ್ದಿ ಇದೆ.
ಅದೇನೆಂದರೆ ಭಾರತೀಯ ವಾಯುಪಡೆಯಲ್ಲಿ (Indian Airforce Recruitment) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕಾಗಿ ಇಲಾಖೆ ಕಡೆಯಿಂದ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆ ಆಗಿದ್ದು ಯಾವೆಲ್ಲ ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು? ಎನ್ನುವ ನೇಮಕಾತಿ ಕುರಿತಂತೆ ನೋಟಿಫಿಕೇಶನ್ ನಲ್ಲಿ ತಿಳಿಸಿರುವ ಸಂಪೂರ್ಣ ವಿವರ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಕೆನರಾ ಬ್ಯಾಂಕ್ ನಲ್ಲಿ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000
ನೇಮಕಾತಿ ಸಂಸ್ಥೆ:- ಭಾರತೀಯ ವಾಯುಪಡೆ (IAF)
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 304 ಹುದ್ದೆಗಳು
ಹುದ್ದೆಗಳ ಹೆಸರು:-
* ಫ್ಲೈಯಿಂಗ್ ಬ್ರಾಂಚ್
* ಗ್ರೌಂಡ್ ಡ್ಯೂಟಿ ಟೆಕ್ನಿಕಲ್
* ಗ್ರೌಂಡ್ ಡ್ಯೂಟಿ ನಾನ್ ಟೆಕ್ನಿಕಲ್
ಹುದ್ದೆಗಳ ವಿವರ:-
* ಫ್ಲೈಯಿಂಗ್ ಬ್ರಾಂಚ್ – 29
* ಗ್ರೌಂಡ್ ಡ್ಯೂಟಿ ಟೆಕ್ನಿಕಲ್ – 157
* ಗ್ರೌಂಡ್ ಡ್ಯೂಟಿ ನಾನ್ ಟೆಕ್ನಿಕಲ್ – 119
ಉದ್ಯೋಗ ಸ್ಥಳ:- ಭಾರತದ ವಿವಿಧ ಕಡೆಗಳಲ್ಲಿ.
ಈ ಸುದ್ದಿ ಓದಿ:- ಅರ್ಧಕ್ಕರ್ಧ ಡೌನ್ ಆಗಲಿದೆ ಚಿನ್ನದ ರೇಟ್.! ಚಿನ್ನ ಖರೀದಿಸುವ ಮುನ್ನ ಈ ವಿಚಾರಗಳು ಗೊತ್ತಿರಲಿ.!
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.56,100 ರಿಂದ ರೂ.1,77,500 ರವರೆಗೆ ವೇತನ ನೀಡಲಾಗುತ್ತದೆ. ಇದರೊಂದಿಗೆ ಇನ್ನಿತರ ಸರ್ಕಾರಿ ಸೌಲಭ್ಯಗಳು ಕೂಡ ಇರುತ್ತವೆ
ಶೈಕ್ಷಣಿಕ ವಿದ್ಯಾರ್ಹತೆ:- ಆಯಾ ಹುದ್ದೆಗೆ ಸಂಬಂಧ ಪಟ್ಟ ಹಾಗೆ ಶೈಕ್ಷಣಿಕ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ, ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಈ ಬಗ್ಗೆ ಮಾಹಿತಿ ಪಡೆಯಬಹುದು.
ವಯೋಮಿತಿ:-
ಹುದ್ದೆಗಳ ಹೆಸರು:-
1. ಫ್ಲೈಯಿಂಗ್ ಬ್ರಾಂಚ್
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ – 20 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ – 24 ವರ್ಷಗಳು
2. ಗ್ರೌಂಡ್ ಡ್ಯೂಟಿ ಟೆಕ್ನಿಕಲ್
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ – 20 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ – 26 ವರ್ಷಗಳು
3. ಗ್ರೌಂಡ್ ಡ್ಯೂಟಿ ನಾನ್ ಟೆಕ್ನಿಕಲ್
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ – 20 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ – 26 ವರ್ಷಗಳು
ಈ ಸುದ್ದಿ ಓದಿ:- PM ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕಿದವರಿಗೆ 3 ಲಕ್ಷ ಹಣ, 15,000 ಮೌಲ್ಯದ ಕಿಟ್ ವಿತರಣೆ.!
ಅರ್ಜಿ ಸಲ್ಲಿಸುವ ವಿಧಾನ:-
* https://indianairforce.nic.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
* ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ನಲ್ಲಿ ಗೆ ಪಾವತಿ ಮಾಡಬೇಕು.
* ಅರ್ಜಿ ಶುಲ್ಕ ಪಾವತಿ ಆದಮೇಲೆ ಹಾಗೂ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಇ-ರಸೀದಿ ಹಾಗೂ ಅರ್ಜಿ ಸ್ವೀಕೃತಿ ಪ್ರತಿಗಳನ್ನು ಪಡೆದುಕೊಳ್ಳಬೇಕು.
ಅರ್ಜಿ ಶುಲ್ಕ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಎಲ್ಲಾ ಅಭ್ಯರ್ಥಿಗಳಿಗೂ ರೂ.550 ಅರ್ಜಿ ಶುಲ್ಕ ವಿಧಿಸಲಾಗಿದೆ.
ಆಯ್ಕೆ ವಿಧಾನ:-
* ಆನ್ಲೈನ್ ಟೆಸ್ಟ್
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 30 ಮೇ, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28 ಜೂನ್, 2024.