ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಬದಲಾವಣೆ, ಇಂದಿರಾ ಕ್ಯಾಂಟೀನ್ ಗೆ ಹೋಗುವವರು ತಪ್ಪದೆ ಈ ಸುದ್ದಿ ನೋಡಿ.!

 

WhatsApp Group Join Now
Telegram Group Join Now

2017ರಲ್ಲಿ ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇಂದಿರಾ ಕ್ಯಾಂಟೀನ್ ಯೋಚನೆಯನ್ನು ಆರಂಭಿಸಿತ್ತು. ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕನಸಿನ ಯೋಜನೆ ಎಂದು ಹೇಳಬಹುದು. ಯಾಕೆಂದರೆ ಗರೀಬಿ ಹಠವೋ ಎನ್ನುವ ಧ್ಯೇಯದೊಂದಿಗೆ ಭಾರತದಾದ್ಯಂತ ಬಡತನ ನಿರ್ಮೂಲನೆ ಮಾಡಬೇಕು ಎಂದು ಹಠ ತೊಟ್ಟಿದ್ದ.

ಮಾಜಿ ಪ್ರಧಾನಮಂತ್ರಿ ದಿವಾಂಗತ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ಕೊಡುವ ಕ್ಯಾಂಟೀನ್ ಗಳನ್ನು ನಿರ್ಮಿಸಿ ಬಡಜನರನ್ನು ಹಸಿವಿನಿಂದ ಕಾಪಾಡುವುದು ಈ ಯೋಜನೆಗೆ ಉದ್ದೇಶ ಆಗಿತ್ತು. ಕೇವಲ 5 ರೂಪಾಯಿಗೆ ಹೊಟ್ಟೆ ತುಂಬಾ ಬಡವರು ಊಟ ಮಾಡುವಂತೆ ಆಗಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ಈ ಕ್ಯಾಂಟೀನ್ ಯೋಜನೆ ಆರಂಭವಾಗಿ ನಾಡಿನಾದ್ಯಂತ ಒಳ್ಳೆಯ ಹೆಸರು ಕೂಡ ಪಡೆದಿತ್ತು.

ಬೆಂಗಳೂರು ನಗರ ಒಂದರಲ್ಲಿಯೇ ಸುಮಾರು 150ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ಗಳು ಶುರು ಆಗಿದ್ದವು. ಇದನ್ನು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಕೇಂದ್ರಗಳನ್ನು ಕೂಡ ಇಂದಿರಾ ಕ್ಯಾಂಟೀನ್ ಗಳು ಆರಂಭವಾಗಿ, ಆಹಾರ ಗುಣಮಟ್ಟ ಕೂಡ ಉತ್ತಮವಾಗಿದ್ದರಿಂದ ಬೆಲೆ ಕೂಡ ಬಹಳ ಕಡಿಮೆ ಇದ್ದ ಕಾರಣಕ್ಕಾಗಿ ಮತ್ತು ಆಹಾರದ ಪ್ರಮಾಣವೂ ಕೂಡ ಹಸಿವಿನಿಂದ ಕುಡಿದವರಿಗೆ ಸಮಾಧಾನಕರವಾಗಿದ್ದ ಕಾರಣ ಜನಸಾಮಾನ್ಯರು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರು.

ನಗರ ಮತ್ತು ಪಟ್ಟದ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಮತ್ತು ಕೆಲಸದ ಉದ್ದೇಶಕ್ಕಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಬರುವವರು ಇಂದಿರಾ ಕ್ಯಾಂಟೀನ್ ನಲ್ಲಿಯೇ ಆಹಾರ ಸೇವಿಸುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ನಂತರದ ಚುನಾವಣೆಯಲ್ಲಿ ಸೋತ ಕಾರಣ 2018ರಲ್ಲಿ ಅಧಿಕಾರಕ್ಕೆ ಬಂದ BJP ಸರ್ಕಾರ ಈ ಯೋಜನೆ ಬಗ್ಗೆ ಅಷ್ಟು ಆಸಕ್ತಿ ತೋರಿರಲಿಲ್ಲ.

ಈಗ 2023 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಗೆದ್ದಿರುವುದರಿಂದ ಈಗ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಈ ಯೋಜನೆಯನ್ನು ಇನ್ನು ವಿಶೇಷ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಚಿಂತಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು BJP ಸರ್ಕಾರವು ಹಣಕಾಸಿನ ಕೊರತೆಯ ನೆಪ ಹೇಳಿ ಈ ಯೋಜನೆಯನ್ನು ನಿರ್ಲಕ್ಷ ಮಾಡಿತ್ತು.

ಹಾಗಾಗಿ ಇಂದಿರಾ ಕ್ಯಾಂಟೀನ್ ಯೋಜನೆ ತಳ ಹಿಡಿದಿತ್ತು ಆದರೆ ಹಸಿವುಮುಕ್ತ ಕರ್ನಾಟಕ ಮಾಡುವುದೇ ನಮ್ಮ ಸರ್ಕಾರದ ಗುರಿ. ಹಾಗಾಗಿ ಯಾವುದೇ ಕಾರಣಕ್ಕೂ ಬಡವರಿಗೆ ಅನುಕೂಲವಾಗುತ್ತಿರುವ ಈ ಯೋಜನೆಯನ್ನು ನಿಲ್ಲಿಸುವುದಿಲ್ಲ. ಕೆಲವೇ ದಿನಗಳಲ್ಲಿ ಹೊಸ ರೀತಿಯಲ್ಲಿ ಯೋಜನೆಯನ್ನು ಪುಲಶ್ಚೇತನಗೊಳಿಸುತ್ತೇವೆ, ಅದಕ್ಕಾಗಿ ಮತ್ತೆ ಟೆಂಡರ್ ಕರೆಯುತ್ತೇವೆ.

ಮಾರ್ಷಲ್ ವರದಿ ಪ್ರಕಾರ ಹಣಕಾಸಿನ ತೊಂದರೆಯಿಂದ ಯೋಜನೆ ನಿಂತು ಹೋಗಿದ್ದರೆ ಈ ಒಂದು ತಿಂಗಳಲ್ಲಿಯೇ ಆ ಎಲ್ಲಾ ಲೆಕ್ಕಚಾರವನ್ನು ಕೂಡ ಸರಿಪಡಿಸಿ ಅವರಿಗೆ ಹಣ ಮಂಜೂರು ಮಾಡಿ ಮತ್ತೆ ಯೋಜನೆಯನ್ನು ಆರಂಭಿಸುತ್ತೇವೆ. ಈಗಾಗಲೇ ಅಡಿಕೆ ಸಾಮಗ್ರಿಗಳ ಶಿಫ್ಟಿಂಗ್ ಕಾರ್ಯ ಶುರುವಾಗಿದೆ. ಆದರೆ ಈಗ ಆಹಾರದ ದರವನ್ನು ಸ್ವಲ್ಪ ಹೆಚ್ಚಿಸುತ್ತಿದ್ದೇವೆ, ಹಿಂದೆ ಐದು ರೂಪಾಯಿಗೆ ಉಪಹಾರ ಮತ್ತು ಊಟವನ್ನು ಕೊಡಲಾಗುತ್ತಿತ್ತು.

ಆದರೆ ಈಗ ಅದನ್ನು ಐದು ರೂಪಾಯಿಯಿಂದ ಹತ್ತು ರೂಪಾಯಿಗೆ ಏರಿಸಲಿದ್ದೇವೆ. ಆದರೆ ರಾತ್ರಿ ವೇಳೆ ಆಹಾರಕ್ಕೆ ಬೇಡಿಕೆ ಕಡಿಮೆ ಇರುವುದರಿಂದ ರಾತ್ರಿ ಸಿಗುವ ಊಟ ಮಾತ್ರ ಅದೇ ಹಳೆ ಬೆಲೆಗೆ ಮುಂದುವರೆಯಲಿದೆ ಎನ್ನುವುದನ್ನು ಮುಖ್ಯ ಮಂತ್ರಿಗಳು ಹೇಳಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now