ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ ಕ್ಷೇತ್ರವೇ ಆಗಿದ್ದರೂ ಭಾರತದಲ್ಲಿ ಕೃಷಿಯು ಮಳೆ ಜೊತೆ ಆಡುವ ಜೂಜಾಟವಾಗಿದೆ. ಹೀಗಾಗಿ ಕೃಷಿ ಮೂಲದಿಂದ ಬರುವ ಆದಾಯವನ್ನು ಅನಿಶ್ಚಿತ ಎಂದು ಹೇಳಬಹುದು. ಭೂ’ಕಂ’ಪ, ಸು’ನಾ’ಮಿ, ಚಂ’ಡ’ಮಾ’ರು’ತ, ಅ’ತಿ’ವೃ’ಷ್ಟಿ, ಅ’ನಾ’ವೃ’ಷ್ಟಿ ಇನ್ನು ಮುಂತಾದ ಪ್ರಕೃತಿ ವಿಕೋಪಗಳ ಕಾರಣದಿಂದಾಗಿ ಬೆಳೆ ಹಾನಿ ಆದಾಗ ರೈತನ ಪರಿಸ್ಥಿತಿ ತೀರ ಹದಗೆಡುತ್ತದೆ.
ಮೊದಲೇ ನಮ್ಮ ದೇಶದಲ್ಲಿ ರೈತ ಆರ್ಥಿಕವಾಗಿ ಬಹಳ ಹಿಂದೆ ಉಳಿದಿದ್ದಾನೆ, ಈಗಲೂ ಸಹ ರೈತನು ತನ್ನ ಕೃಷಿ ಚಟುವಟಿಕೆ ಆರಂಭಿಸಲು ಸಾಲ ಮಾಡಿ ಬಂಡವಾಳವನ್ನು ತರಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಬೆಳೆ ಹಾನಿಯಾದರೆ ಆತನಿಗೆ ಎದುರಾಗುವ ಸಂಕಷ್ಟದ ಬಗ್ಗೆ ವಿವರಿಸುವುದು ಅಸಾಧ್ಯ.
ಈಗಾಗಲೇ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನಗಳನ್ನು ನೀಡಿರುವ ಸರ್ಕಾರಗಳು ಬೆಳೆ ವಿಮೆ ಕುರಿತಾಗಿ ಕೂಡ ಹೊಸ ಚಿಂತನೆ ನಡೆಸಿ ನೆರವಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಕರ್ನಾಟಕ ರೈತ ಸುರಕ್ಷ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು (PMFBY) ಜಾರಿಗೆ ತಂದಿದ್ದಾರೆ.
ಈ ಸುದ್ದಿ ಓದಿ:- Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ.!
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಮೆ ಕಂಪನಿಗಳ ಜೊತೆಗೂಡಿ ರೈತನಿಗಾಗುವ ಆರ್ಥಿಕ ನಷ್ಟವನ್ನು ವಿಮೆ ಮೂಲಕ ತುಂಬುವ ಪ್ರಯತ್ನ ಮಾಡುತ್ತಿವೆ.
ಅಂತೆಯೇ ಈಗ 2024-25 ನೇ ಸಾಲಿನ ಮುಂಗಾರು ಮಳೆಯ ಬಿತ್ತನೆಯ ಸಮಯವಾಗಿದೆ ಮತ್ತು ಈ ಸಾಲಿನ ಫಸಲ್ ಭೀಮಾ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ರೈತನು ಸರಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು, ಯಾವ ಬೆಳೆಗೆ ಎಷ್ಟು ವಿಮೆ ಇದೆ ಎಂಬುದನ್ನು ತಿಳಿದುಕೊಂಡು ಪಾವತಿಸಬೇಕಾಗುತ್ತದೆ. ಈ ಪ್ರಕ್ರಿಯೆ ಹೇಗೆ ಎನ್ನುವುದರ ವಿವರ ಹೀಗಿದೆ.
ಈ ಸುದ್ದಿ ಓದಿ:- ಉಚಿತ ಕಂಪ್ಯೂಟರ್ ತರಬೇತಿ DTP ಮತ್ತು ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ಕಲಿಯಿರಿ.!
* ಮೊದಲಿಗೆ ರೈತರು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://samrakshane.karnataka.gov.in/CropHome.aspx
* ತಕ್ಷಣ ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ ಇದರಲ್ಲಿ ವರ್ಷ ಮತ್ತು ಋತುವನ್ನು ಆಯ್ಕೆ ಮಾಡಿ. ನೀವು ವರ್ಷ ಎಂದು ಕೇಳಿರುವ ಆಪ್ಷನ್ ನಲ್ಲಿ 2024-25 ಹಾಕಿ, ಋತು ಎಂಬ ಆಪ್ಷನ್ ನಲ್ಲಿ kharif ಎಂದು ನಮೂದಿಸಿ.
* ಈಗ ಮತ್ತೊಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿ ನೀವು crop you can isure ಎಂಬ ಆಪ್ಷನ್ ಕಾಣುತ್ತದೆ ಇದರ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ನೀವು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ, ಕೆಳಗೆ ನೀಡಲಾದ Dispaly ಬಟನ್ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಉಚಿತ ಕಂಪ್ಯೂಟರ್ ತರಬೇತಿ DTP ಮತ್ತು ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ಕಲಿಯಿರಿ.!
* ಸ್ಕ್ರೀನ್ ಮೇಲೆ ನಿಮ್ಮ ಜಿಲ್ಲೆಯಲ್ಲಿ ಈ ಸಾಲಿನ ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಯಾವ ಯಾವ ಬೆಳೆಗಳು ಇವೆ ಮತ್ತು ಬೆಳೆ ವಿಮೆ ಎಷ್ಟು ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಆ ಪಟ್ಟಿಯಲ್ಲಿ ನೀವು ಮುಂಗಾರು ಬೆಳೆಯಲ್ಲಿ ಯಾವ ಬೆಳೆ ಹಾಕಲು ನಿರ್ಧರಿಸಿದ್ದೀರಿ ಎನ್ನುವುದರ ಬೆಲೆ ನೋಡಿಕೊಳ್ಳಿ
* ಅರ್ಜಿ ಸಲಿಸುವ ಕುರಿತು ಯಾವುದೇ ಗೊಂದಲಗಳಿದ್ದರೂ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ CSC ಕೇಂದ್ರಗಳಿಗೆ ಭೇಟಿ ಕೊಡಿ.