ಕರ್ನಾಟಕ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ (Karnataka Government Guarantee Schemes) ಬಗ್ಗೆ ರಾಜ್ಯದ ಜನತೆಗೆ ತಿಳಿದೇ ಇದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು (Congress Party) ತಮ್ಮ ಪಕ್ಷವು ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ರಾಜ್ಯದ ಜನತೆಗಾಗಿ 5 ಗ್ಯಾರಂಟಿ ಯೋಜನೆಗಳನ್ನು ವಿಶೇಷವಾಗಿ ಜಾರಿಗೆ ತರುವುದಾಗಿ ಹೇಳಿದ್ದರು.
ಇದರ ಪ್ರಕಾರ ಶಕ್ತಿ ಯೋಜನೆಯಲ್ಲಿ (Shakthi yojane) ಮಹಿಳೆಯರಿಗೆ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ (Annabhagya Scheme) ನೀಡುತ್ತಿರುವ ಪಡಿತರವನ್ನು 10Kg ಗೆ ಏರಿಸುವುದು, ಗೃಹಲಕ್ಷ್ಮಿ ಯೋಜನೆಯಡಿ (Gruhalakshmi Scheme) ರೇಷನ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಮುಖ್ರಸ್ಥೆಯ ಖಾತೆಗೆ ಕುಟುಂಬ ನಿರ್ವಹಣೆಗಾಗಿ.
ರೂ.2,000 ಮತ್ತು ಗೃಹಜ್ಯೋತಿ ಯೋಜನೆಯಡಿ (Gruhajyothi Scheme) ಕರ್ನಾಟಕದ ಪ್ರತಿ ಕುಟುಂಬಕ್ಕೆ ಗರಿಷ್ಟ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಜೊತೆಗೆ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯಡಿ (Yuvanidhi Scheme) ಪದವೀಧರರಿಗೆ ರೂ.3000 ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ. 1500 ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಿಸಿತ್ತು.
ಯುವನಿಧಿ ಯೋಜನೆ ಹೊರತುಪಡಿಸಿ ಉಳಿದ ಯೋಜನೆಗಳ ಪ್ರಯೋಜನವನ್ನು ಈಗಾಗಲೇ ರಾಜ್ಯದ ಜನತೆ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಪಡಿತರವನ್ನೇ ನೀಡಲು ಆಗದಿದ್ದರೂ 5Kg ಅಕ್ಕಿ ಜೊತೆಗೆ ಉಳಿದ 5kg ಅಕ್ಕಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ನೀಡಿ ಸರ್ಕಾರ ಸಂಭಾಳಿಸುತ್ತಿದೆ. ಹಂತ ಹಂತವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರುವ ಸರ್ಕಾರದಿಂದ ಶೀಘ್ರವೇ ಯುವನಿಧಿ ಯೋಜನೆ ಅನುಷ್ಠಾನಕ್ಕೆ ಬರುವ ಕುರಿತು ಪ್ರಸ್ತಾಪವಾಗುತ್ತಿದೆ.
ಇದಕ್ಕಾಗಿ ಇದೇ ಡಿಸೆಂಬರ್ 26 ರಿಂದ ಅರ್ಜಿ ಕೂಡ ಅಹ್ವಾನ ಮಾಡಿ ನೂತನ ವರ್ಷದ ಜನವರಿ ತಿಂಗಳಿಂದ ಫಲಾನುಭವಿಗಳ ಖಾತೆಗೆ DBT ಮೂಲಕ ನಿರುದ್ಯೋಗ ಭತ್ಯೆ ನೀಡಲಿದೆ ಎನ್ನುವ ವಿಚಾರವನ್ನು ಕೈಗಾರಿಕೋದ್ಯಮ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಆ ಪ್ರಕಾರವಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳು ಕಡ್ಡಾಯವಾಗಿ ಇರಬೇಕು ಮತ್ತು ಅರ್ಜಿ ಸಲ್ಲಿಸಲು ಯಾರು ಅರ್ಹರು ಎನ್ನುವುದರ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಯೋಜನೆಯ ಹೆಸರು:- ಯುವನಿಧಿ ಯೋಜನೆ
ಯಾರು ಅರ್ಜಿ ಸಲ್ಲಿಸಲು ಅರ್ಹರು:-
1. ಯಾವುದೇ ಗ್ಯಾರಂಟಿ ಯೋಜನೆಗಳಿಗಾದರೂ ಅರ್ಜಿ ಸಲ್ಲಿಸಲು ಕರ್ನಾಟಕದ ಖಾಯಂ ನಿವಾಸಿಗಳಷ್ಟೇ ಅರ್ಹರಾಗಿರುತ್ತಾರೆ
2. 2022-23 ನೇ ಸಾಲಿನಲ್ಲಿ ಅಂತಿಮ ವರ್ಷದ ಪದವಿ ಹಾಗೂ ಅಂತಿಮ ವರ್ಷದ ಡಿಪ್ಲೋಮಾ ಪರೀಕ್ಷೆಗಳನ್ನು ಉತ್ತೀರ್ಣರಾಗಿರಬೇಕು
3. ಡಿಪ್ಲೊಮಾ ಅಥವಾ ಪದವಿ ಉತ್ತೀರ್ಣರಾಗಿ ಆರು ತಿಂಗಳು ಕಳೆದರೂ ಕೆಲಸ ಸಿಗದಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು
4. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಕಡ್ಡಾಯವಾಗಿ ನಿರುದ್ಯೋಗಿಗಳು ಎನ್ನುವುದಕ್ಕೆ ಸ್ವಯಂ ಧೃಡೀಕರಣ ಪತ್ರ ಸಲ್ಲಿಸಬೇಕು ಮತ್ತು ಅದನ್ನು ನೋಟರಿ ಮಾಡಿಸಬೇಕು.
5. ಯಾವುದೇ ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದು, ಅಪ್ರೆಂಟಿಸ್ ಶಿಪ್ ನಲ್ಲಿ ಕೆಲಸ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ
6. ಈ ವರ್ಷ ಪದವಿ ಅಥವಾ ಡಿಪ್ಲೋಮೋ ಉತ್ತೀರ್ಣರಾಗಿದ್ದರು ವಿದ್ಯಾಭ್ಯಾಸ ಮುಂದುವರಿಸುವುದಾದರೆ ಮುಂದಿನ ಶೈಕ್ಷಣಿಕ ತರಗತಿಗಳಿಗೆ ದಾಖಲಾಗಿದ್ದರೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
7. ನಿರುದ್ಯೋಗ ಭತ್ಯೆ ಪಡೆಯುವ ಸಂದರ್ಭದಲ್ಲಿ ಕೆಲಸ ಸಿಕ್ಕಿದರೆ ಅದನ್ನು ಕೂಡ ಘೋಷಿಸಿಕೊಳ್ಳಬೇಕು ತಕ್ಷಣವೇ ಆ ತಿಂಗಳಿಂದ ನಿರುದ್ಯೋಗ ಭತ್ಯೆ ಕಡಿತಗೊಳ್ಳುತ್ತದೆ.
* ನಿರುದ್ಯೋಗ ಭತ್ಯೆ ಮೊತ್ತ:-
1. ಡಿಪ್ಲೋಮೋ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ರೂ.1500
2. ಪದವಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ರೂ.3,000
* ಅರ್ಜಿ ಸಲ್ಲಿಸುವ ದಿನಾಂಕ:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಡಿಸೆಂಬರ್ 26, 2023 * ಜನವರಿ 2024ರ 26ನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಜನವರಿ ತಿಂಗಳಿನಿಂದಲೇ ನಿರುದ್ಯೋಗ ಭತ್ಯೆ ನೆರವು ಸಿಗಲಿದೆ.
ಅರ್ಜಿ ಸಲ್ಲಿಸುವ ವಿಧಾನ:-
1. ಸೇವಾ ಸಿಂಧು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು.
2. ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬೇಕು.
3. ವೆಬ್ಸೈಟ್ ವಿಳಾಸ:-
https://sevasindhu.karnataka.gov.in.
https://youtu.be/FjGazuDmXLQ?si=1XlOwKlm26DENkEO