ಸಂಜೆ ಆಗುತ್ತಿದ್ದಂತೆ ನಮ್ಮ ಮನೆಗೆ ಹಲವು ಅತಿಥಿಗಳಲ್ಲಿ ಸೊಳ್ಳೆಗಳು ಕೂಡ ಇವೆ ಎಂದು ಹೇಳಬಹುದು. ಕತ್ತಲಾಗುತ್ತಿದ್ದಂತೆ ಸೊಳ್ಳೆಗಳ ಕಾಟ ವಿಪರೀತವಾಗುತ್ತದೆ. ಮನೆ ತುಂಬಾ ಸೊಳ್ಳೆಗಳದ್ದೇ ರಾಜ್ಯಭಾರ. ನೆಮ್ಮದಿಯಾಗಿ ಕೂರಲು ಬಿಡುವುದಿಲ್ಲ, ಮಲಗಲು ಬಿಡುವುದಿಲ್ಲ. ಗುಂಯ್ ಎಂದು ಸದ್ದು ಮಾಡುತ್ತ ಎಚ್ಚರಿಸುತ್ತಾ ರಕ್ತ ಹೀರಿ ಹಿಂಸೆ ಕೊಡುತ್ತವೆ.
ಒಂದು ಚಿಕ್ಕ ಕ್ರಿಮಿಯಾಗಿದ್ದರೂ ಕೂಡ ಮನುಷ್ಯನಿಗೆ ಶತ್ರುಗಳಿಗಿಂತ ಹೆಚ್ಚಿಗೆ ಜೀವ ಹಿಂಡುವುದು ಸೊಳ್ಳೆಗಳೇ. ಈ ಸೊಳ್ಳೆ ಒಂದು ಚಿಕ್ಕ ಜೀವಿ ಎಂದು ನಿರ್ಲಕ್ಷ ಮಾಡುವಂತಿಲ್ಲ. ಯಾಕೆಂದರೆ ಸೊಳ್ಳೆ ಕಡಿತದಿಂದ ದೇಹದ ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸಗಳಾಗುತ್ತವೆ.
ಸೊಳ್ಳೆ ಕಡಿತದಿಂದ ಚರ್ಮಗಳಲ್ಲಿ ಗಂಟು ಬರುತ್ತದೆ, ಕೆಲವು ವಿಚಿತ್ರ ಸೊಳ್ಳೆಗಳ ಕಡಿತದಿಂದ ನೋವು ಹಾಗೂ ಉರಿ ಕೂಡ ಕಾಣಿಸಿಕೊಳ್ಳುತ್ತದೆ. ಚರ್ಮದ ಸಮಸ್ಯೆ ಇದ್ದವರಿಗಂತೂ ಇದು ನರಕವೇ ಸರಿ. ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯ, ಚಿಕನ್ ಗುನ್ಯಾದಂತಹ ಇನ್ನು ಅನೇಕ ರೋಗಗಳು ಬರುತ್ತವೆ.
ಹೀಗೆ ಸೊಳ್ಳೆ ಕಡಿತದಿಂದ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿರುವ ಸಂಖ್ಯೆ ವರ್ಷದಲ್ಲಿ ಲಕ್ಷದಷ್ಟು ಇರುತ್ತದೆ. ಈ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಆರೋಗ್ಯ ಇಲಾಖೆಯು ಕೂಡ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತದೆ ಅಷ್ಟರಮಟ್ಟಿಗೆ ಸೊಳ್ಳೆ ತನ್ನ ಹವಾ ಇಟ್ಟಿದೆ.
ಸೊಳ್ಳೆ ಪರದೆ ಕಟ್ಟುತ್ತೇವೆ, ಮನೆ ಅಕ್ಕ ಪಕ್ಕ ನೀರು ನಿಲ್ಲದಂತೆ ನೋಡಿಕೊಳ್ಳುತ್ತೇವೆ, ಮೈತುಂಬಇರುವ ಬಟ್ಟೆಗಳನ್ನು ಧರಿಸುತ್ತೇವೆ ಎಂದರೂ ಇವಿಷ್ಟೇ ಸಾಲದು. ಯಾಕೆಂದರೆ ಇವುಗಳಿಗೆ ಬಗ್ಗದ ಸೊಳ್ಳೆಗಳು ಕೂಡ ಇರುತ್ತವೆ. ಅವುಗಳಿಗೆ ಹಿಟ್ ನಂತರ ಸ್ಪ್ರೇ ಗಳನ್ನು ಬಳಸುತ್ತೇವೆ, ಆದರೆ ಇದು ನಮ್ಮ ಆರೋಗ್ಯಕ್ಕೂ ಹಾನಿಕರ.
ಕೆಲವರಿಗೆ ಈ ರಾಸಾಯನಿಕದ ವಾಸನೆ ಆಗುವುದಿಲ್ಲ. ಮನೆಯಲ್ಲಿ ವಯಸ್ಸಾದವರು, ಕಾಯಿಲೆ ಬಿದ್ದವರು ಅಥವಾ ಮಕ್ಕಳಿದ್ದರೆ ಬಹಳ ಬೇಗ ಅವರೂ ಕೂಡ ಇದರ ಸೈಡ್ ಎಫೆಕ್ಟ್ ಗೆ ಒಳಗಾಗುತ್ತಾರೆ. ಹಾಗಾಗಿ ಯಾವುದೇ ಖರ್ಚು ಇಲ್ಲದೆ ಸೊಳ್ಳೆಗಳ ಕಾಟಕ್ಕೆ ರಾಮಬಾಣದಂತಿರುವ ಒಂದು ಹಳೆಯ ಉಪಾಯದ ಬಗ್ಗೆ ನಾನು ಈ ಅಂಕಣದಲ್ಲಿತಿಳಿಸುತ್ತಿದ್ದೇವೆ.
ಪ್ರತಿದಿನ ಸಂಜೆ ಈ ಒಂದು ಉಪಾಯ ಮಾಡಿ ಸಾಕು ಸೊಳ್ಳೆ ನಿಮ್ಮ ಮನೆ ಹತ್ತಿರ ಕೂಡ ಸುಳಿವುದೇ ಇಲ್ಲ. ಇದನ್ನು ಮಾಡಲು ಬೇಕಾಗಿರುವುದು ಈರುಳ್ಳಿ, ಲವಂಗ, ಎಳ್ಳೆಣ್ಣೆ ಇಷ್ಟಿದ್ದರೆ ಸಾಕು ಒಮ್ಮೆ ಮಾಡಿದರೆ ಹಲವು ದಿನಗಳವರೆಗೆ ಬಾಳಿಕೆ ಕೂಡ ಬರುತ್ತದೆ.
ಮೊದಲಿಗೆ 10 ಲವಂಗಗಳನ್ನು ತೆಗೆದುಕೊಳ್ಳಿ, ಇವುಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳಿ. ಈಗ ಆ ಪುಡಿಯನ್ನು ಒಂದು ಬೌಲ್ ಗೆ ಹಾಕಿ ಆ ಬೌಲ್ ಗೆ ಸ್ವಲ್ಪ ಎಳ್ಳೆಣ್ಣೆಯನ್ನು ಹಾಕಿ. ಲವಂಗದ ಪುಡಿ ಚೆನ್ನಾಗಿ ಮಿಕ್ಸ್ ಆಗುವಂತೆ ಮಿಕ್ಸ್ ಮಾಡಿ ನಿಮ್ಮ ಮನೆಯಲ್ಲಿ ಅಡುಗೆಗೆ ಬಳಸುವ ಈರುಳ್ಳಿಯನ್ನು ತೆಗೆದುಕೊಳ್ಳಿ.
ಈರುಳ್ಳಿಯ ಸಿಪ್ಪೆ ತೆಗೆದು ತುದಿ ಭಾಗ ಕಟ್ ಮಾಡಿ ಇದು ಕೆಳಗೆ ಇಟ್ಟರೆ ಕೂರಲು ಆಗಬೇಕು ಆ ರೀತಿ ತಳದಲ್ಲಿ ಸಮ ಬರುವಂತೆ ಕಟ್ ಮಾಡಿಕೊಳ್ಳಿ. ಈಗ ಒಳಗಡೆ ಇರುವ ತಿರುಳುಗಳನ್ನು ತೆಗೆದು ಒಂದೆರಡು ಮಾತ್ರ ಹಾಗೆ ಬಿಡಿ ಮತ್ತು ಅದಕ್ಕೆ ನೀವು ಮಿಕ್ಸ್ ಮಾಡಿ ಇಟ್ಟುಕೊಂಡಿದ್ದ ಎಣ್ಣೆ ಮಿಶ್ರಣವನ್ನು ಹಾಕಿ ದೀಪದ ಬತ್ತಿಯನ್ನು ಇಟ್ಟು ಉರಿಸಿ. ಈ ವಾಸನೆ ಸೊಳ್ಳೆಗಳಿಗೆ ಆಗುವುದಿಲ್ಲ ಹಾಗಾಗಿ ಅವು ಮನೆ ಬಿಟ್ಟು ಓಡಿ ಹೋಗುತ್ತವೆ ಹಾಗೂ ಮತ್ತೆ ಆ ಕಡೆ ಬರುವುದೂ ಇಲ್ಲ.