ರೈತರಿಗೆ ಸಿಹಿಸುದ್ದಿ ಬರ ಪರಿಹಾರದ ಹಣ ಪಡೆಯಲು ಈ ದಾಖಲೆ ಕೊಡಿ ಸಾಕು

 

WhatsApp Group Join Now
Telegram Group Join Now

ರೈತರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗುತ್ತವೆ. ರೈತನನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಕೃಷಿ ಚಟುವಟಿಕೆಗಳನ್ನು ಆಧುನೀಕರಿಸಲು ರೈತನಿಗೆ ಸಹಾಯ ಮಾಡುವ ಉದ್ದೇಶದಿಂದ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಸಬ್ಸಿಡಿ ರೂಪದ ಅಥವಾ ಬಡ್ಡಿ ರಹಿತ ಕೃಷಿ ಸಾಲ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ.

ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ರೂಪದ ಸಾಲ, ಕೃಷಿ ಜೊತೆಗೆ ಸಾಗುವ ಕಸುಬುಗಳಾದ ಹೈನುಗಾರಿಕೆ, ಕುರಿ ಸಾಕಾಣಿಕೆ ಮುಂತಾದವುಗಳ ಘಟಕ ಸ್ಥಾಪನೆಗೆ ಸಹಾಯಧನ, ಪಂಪ್ ಸೆಟ್ ಗೆ ಸೋಲಾರ್ ಅಳವಡಿಸಿಕೊಳ್ಳುವುದಕ್ಕೆ ನೆರವು, ಸಬ್ಸಿಡಿ ರೂಪದಲ್ಲಿ ಬಿತ್ತನೆ ಬೀಜ ಹಾಗೂ ಕೀಟನಾಶಕ ರಸಗೊಬ್ಬರಗಳ ವಿತರಣೆ ಇನ್ನು ಮುಂತಾದ ಸಾಕಷ್ಟು ಯೋಚನೆಗಳ ಪ್ರಯೋಜನವನ್ನು ರೈತ ಪಡೆಯಬಹುದು.

ಹಾಗೆಯೇ ಪ್ರಕೃತಿ ವಿಕೋಪಗಳ ಕಾರಣದಿಂದಾಗಿ ಬೆಳೆ ಹಾನಿಯಾದರೆ ಅದಕ್ಕೂ ಸಹ ಪರಿಹಾರ ಸಿಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಪ್ರಕಾರ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ರೈತನಿಗಾಗಿರುವ ನಷ್ಟ ತುಂಬಿಸಲು ನೆರವು ಸಿಗುತ್ತದೆ.

ಸಂಕಷ್ಟದಲ್ಲಿರುವ ರೈತನಿಗೆ ಆತನ ಜೀವನ ನಿರ್ವಹಣೆ ಹಾಗೂ ಸಾಲದ ಹೊರೆ ಇಳಿಸಿಕೊಳ್ಳುವುದಕ್ಕೆ ಬೆಳೆಗಾಗಿ ಖರ್ಚು ಮಾಡಿದ್ದ ಮೊತ್ತದಲ್ಲಿ ಸ್ವಲ್ಪ ಹಣವನ್ನು ಪರಿಹಾರವಾಗಿ ಸರ್ಕಾರ ನೀಡುತ್ತದೆ. ಸಂಬಂಧಪಟ್ಟ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳದು ಒದಗಿಸಿ ಈ ಪರಿಹಾರ ಪಡೆಯಬಹುದು.

ಆದರೆ ಇನ್ನು ಮುಂದೆ ರೈತರು ಈ ರೀತಿಯ ಯಾವುದೇ ಸೌಲಭ್ಯ ಪಡೆಯಬೇಕು ಎಂದರೆ ಉಳಿದ ಎಲ್ಲಾ ಮಾನದಂಡಗಳ ಜೊತೆಗೆ FID ಸಂಖ್ಯೆಯನ್ನು ಹೊಂದಿರಲೇಬೇಕು. FID ಎಂದರೇನು? ಇಷ್ಟು ಪ್ರಾಮುಖ್ಯತೆ ಯಾಕೆ ಎಂದು ಅನೇಕರಿಗೆ ತಿಳಿದಿರುವುದಿಲ್ಲ. ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಒಬ್ಬ ನಾಗರಿಕನಿಗೆ ಆಧಾರ್ ಕಾರ್ಡ್ ಹೇಗೋ ಹಾಗೆಯೇ ಒಬ್ಬ ರೈತನಿಗೆ FID ಸಂಖ್ಯೆ. ಈ FID ಸಂಖ್ಯೆಯನ್ನು ಪಡೆಯಲು Farmers Registration and unified beneficiary information systems (FRUITS) ಪೋರ್ಟಲ್ ನಲ್ಲಿ ತನ್ನ ಕೃಷಿ ಜಮೀನಿನ ವಿವರಗಳನ್ನು ನೋಂದಾಯಿಸಿಬೇಕು. FRUITS ನಲ್ಲಿ ರಿಜಿಸ್ಟರ್ ಆದ ನಂತರ ರೈತನಿಗೆ FID ನಂಬರ್ ಸಿಗುತ್ತದೆ

ಸರ್ಕಾರವು ಈಗ ಎಲ್ಲಾ ರೀತಿಯ ಯೋಜನೆಗಳನ್ನು ಆನ್ಲೈನ್ ಮೂಲಕ ತಲುಪಿಸುತ್ತಿರುವುದರಿಂದ DBT ಮೂಲಕ ಹಣ ವರ್ಗಾವಣೆಯಾಗಲು ಇದು ಕೂಡ ಮುಖ್ಯ. ಹಾಗಾಗಿ ತಪ್ಪದೆ ರೈತರು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅಥವಾ ತಾಲ್ಲೂಕು ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಆಧಾರ ಕಾರ್ಡ್​, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಮುಂತಾದ ದಾಖಲೆಗಳ ಜೊತೆ ಭೇಟಿ ಕೊಟ್ಟು FID ಸಂಖ್ಯೆ ಪಡೆಯಬಹುದು.

ಕಲಬುರಗಿ ಜಿಲ್ಲೆಯಲ್ಲಿ FID ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮಾ ಆಗಿದೆ, FID ಮಾಡಿಸದೇ ಇರುವ ರೈತರಿಗೆ ಬರ ಪರಿಹಾರ, ತೊಗರಿ ನೆಟೆ ರೋಗ ಪರಿಹಾರ ಮೊತ್ತ ಬರುವುದಿಲ್ಲ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಹಾಗಾಗಿ ತಪ್ಪದೆ ರೈತರಕ ಈ ಕಾರ್ಯ ಪೂರ್ತಿಗೊಳಿಸಿ ಮತ್ತು ಈ ಉಪಯುಕ್ತ ಮಾಹಿತಿಯು ಎಲ್ಲಾ ರೈತರಿಗೂ ತಲುಪುವಂತೆ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now