ಕೇಂದ್ರ ಸರ್ಕಾರದ ಯೋಜನೆ ಆದ ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆಕ್ಟ್ 2005ರ ಅಡಿಯಲ್ಲಿ ಬರೆದ ಕಾರ್ಡ್ ಅಥವಾ ಉದ್ಯೋಗ ಖಾತ್ರಿ ಕಾರ್ಡ್ ಅಥವಾ ಮನ್ರೇಗಾ ಕಾರ್ಡ್ ಇದ್ದವರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗಾವಕಾಶ ಸಿಗಲಿದೆ. ಈ ಉದ್ಯೋಗಕ್ಕೆ ಪುರುಷ ಹಾಗೂ ಮಹಿಳಾ ಕೆಲಸಗಾರರಿಗೆ ಸಮಾನ ವೇತನವಾಗಿ ದಿನಕ್ಕೆ 316 ರೂಪಾಯಿಗಳ ವೇತನ ಸಿಗುತ್ತದೆ. ಹಳ್ಳಿಗಾಡಿನಲ್ಲಿ ಪ್ರತಿಯೊಬ್ಬರೂ ಕೂಡ ಈ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನರೇಗಾ ಕಾರ್ಡ್ ಪಡೆದಿರುತ್ತಾರೆ.
ಪಂಚಾಯಿತಿ ಕಡೆಯಿಂದ ಹಳ್ಳಿಗಳಲ್ಲಿ ನಡೆಯುವ ಕೆಲಸಗಳಾದ ಕೆರೆಗಳಲ್ಲಿ ಹೂಳೆತ್ತುವುದು, ಕಟ್ಟೆಗಳನ್ನು ನಿರ್ಮಿಸುವುದು ಅಥವಾ ದನ ಕರುಗಳಿಗೆ ನೀರು ಕುಡಿಯಲು ತೊಟ್ಟಿ ನಿರ್ಮಿಸುವುದು ಇನ್ನೂ ಮುಂತಾದ ಕೆಲಸಗಳಿಗೆ ಈ ಕಾರ್ಮಿಕರನ್ನು ಬಳಸಿಕೊಂಡು ವೇತನ ನೀಡಲಾಗುತ್ತದೆ. ಗ್ರಾಮ ಪಂಚಾಯಿತಿಯಿಂದ ನಿಮಗೆ ಈ ನೂರು ದಿನಗಳ ಉದ್ಯೋಗ ಸಿಗಬೇಕು ಎಂದರೆ ನೀವು ಈ ನರೇಗಾ ಕಾರ್ಡ್ ಹೊಂದಿರಬೇಕು ಆನ್ಲೈನ್ ಅಲ್ಲಿ ಅಪ್ಲೈ ಮಾಡಿ ಈಗ ಈ ಕಾರ್ಡನ್ನು ಪಡೆಯಬಹುದು.
ಅದಕ್ಕಾಗಿ ಕೆಲವು ನಿಯಮಗಳು ಇದ್ದು ಆ ಕುರಿತು ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.
ನರೇಗಾ ಕಾರ್ಡ್ ಪಡೆಯಲು ಆನ್ಲೈನ್ ನಲ್ಲಿ ಅಪ್ಲೈ ಮಾಡುವ ವಿಧಾನ :-
● ಮೊದಲಿಗೆ ನೀವು ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ ಒಂದು ವೇಳೆ ಲಾಗಿನ್ ಐಡಿ ಇಲ್ಲ ಎಂದರೆ ರಿಜಿಸ್ಟ್ರೇಷನ್ ಪೂರ್ತಿಗೊಳಿಸಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಪಡೆದು ಲಾಗಿನ್ ಆಗಿ.
● ಲಾಗಿನ್ ಆದಮೇಲೆ ತೆರೆದುಕೊಳ್ಳುವ ಪುಟದಲ್ಲಿ ಎಡಭಾಗದಲ್ಲಿ ವಿವ್ಯೂ ಆಲ್ ಅವಾಲ್ಯೇಬಲ್ ಸರ್ವಿಸಸ್ ಎನ್ನುವ ಆಪ್ಶನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಮತ್ತೊಂದು ಹೊಸ ಪುಟ ತೆರೆದುಕೊಳ್ಳುತ್ತದೆ.
● ಅದರಲ್ಲಿರುವ ಬಲಭಾಗದ ಸರ್ಚ್ ಬಾರ್ ಅಲ್ಲಿ ಅದರಲ್ಲಿ MGNREGA ಎಂದು ಟೈಪ್ ಮಾಡಿ.
● ಐದನೇ ಸಾಲಿನಲ್ಲಿ ಇಷ್ಯೂ ಆಫ್ ಜೌಬ್ ಕಾರ್ಡ್ ಟು ಲೇಬರ್ಸ್ ಅಂಡರ್ಡ್ ಮನ್ರೇಗಾ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ನಂತರ ಮೊಬೈಲ್ ಸಂಖ್ಯೆ ಕೇಳಲಾಗುತ್ತದೆ ಅದನ್ನು ಎಂಟ್ರಿ ಮಾಡಿದ ಮೇಲೆ ಒಂದು ಅಪ್ಲಿಕೇಶನ್ ಫಾರಂ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ವಿವರಗಳನ್ನು ಫಿಲ್ ಮಾಡಬೇಕು. ನಿಮ್ಮ ಹೆಸರು, ನಿಮ್ಮ ಸಂಗಾತಿ ಹೆಸರು, ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಮತ್ತು ವಿಳಾಸ ಇವುಗಳನೆಲ್ಲ ಫಿಲ್ ಮಾಡಿ ಕೆಳಗೆ ಒಂದು ಬಾರ್ ಅಲ್ಲಿ ಕಾಣುವ ಕ್ಯಾಪ್ಚಾವನ್ನು ಕೂಡ ಎಂಟ್ರಿ ಮಾಡಿ ಸಬ್ಮಿಟ್ ಕೊಟ್ಟರೆ ಮುಂದಿನ ಹಂತಕ್ಕೆ ಹೋಗುತ್ತದೆ.
● ಇ-ಸೈನ್ ಆಂಡ್ ಸಬ್ಮಿಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಿದಾಗ ಒಂದು ಅಥೆಂಟಿಕೇಷನ್ ಫಾರ್ಮ್ ಬರುತ್ತದೆ ಅದರ ಮೇಲೆ ಐ ಅಗ್ರಿ ಎಂದು ಇರುವ ಜಾಗದಲ್ಲಿ ಕ್ಲಿಕ್ ಮಾಡಿ ಓಟಿಪಿ ಎನ್ನುವ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ
ಎಲೆಕ್ಟ್ರಾನಿಕ್ ಸಿಗ್ನೇಚರ್ ಸರ್ವಿಸ್ ಎನ್ನುವ ಪೇಜ್ ಬರುತ್ತದೆ ಅದರಲ್ಲಿ ಇರುವ ಆಂಥೆಟಿಕೇಶನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಕೇಳುತ್ತದೆ ಆಧಾರ್ ಸಂಖ್ಯೆಯನ್ನು ಕೂಡ ಎಂಟ್ರಿ ಮಾಡಿ
● ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ, ಅದನ್ನು ಎಂಟ್ರಿ ಮಾಡಿ ವೆರಿಫಿಕೇಶನ್ ಕೊಟ್ಟಾಗ ಡೈರೆಕ್ಟ್ ಆಗಿ ನಿಮ್ಮ ಉದ್ಯೋಗ ಖಾತ್ರಿ ಕಾರ್ಡ್ ಅಪ್ಲಿಕೇಶನ್ ಅಕ್ನಾಲೆಜ್ಮೆಂಟ್ ಕಾಪಿ ಬರುತ್ತದೆ.
● ಇದನ್ನು ಪ್ರಿಂಟೌಟ್ ತೆಗೆದು ಇಟ್ಟುಕೊಳ್ಳಬೇಕು ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಡ್ ನ ಸ್ಟೇಟಸ್ ಚೆಕ್ ಮಾಡಲು ಇದು ಉಪಯೋಗಕ್ಕೆ ಬರುತ್ತದೆ. ಈ ರೀತಿ ಆನ್ಲೈನಲ್ಲಿ ಅಪ್ಲಿಕೇಶನ್ ಹಾಕಿ ಮನ್ರೇಗಾ ಜಾಬ್ ಕಾರ್ಡ್ ಪಡೆಯಬಹುದು.