ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಬಂಧನ್ ಬ್ಯಾಂಕ್ (Bandhan Bank) ಕೂಡ ಒಂದು. ಇಂತಹ ಬಂಧನ್ ಬ್ಯಾಂಕ್ ಈಗ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ಹೊಂದಿರುವ ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಹುತೇಕ ಎಲ್ಲರೂ ಇಚ್ಚೆ ಪಡುತ್ತಾರೆ ಯಾಕೆಂದರೆ ಇಲ್ಲಿ ಕೆಲಸವು ನಿಗದಿತ ಸಮಯಕ್ಕೆ ಒಳಪಟ್ಟಿರುತ್ತದೆ, ಕೆಲಸದ ಒತ್ತಡವು ಕೂಡ ಕಡಿಮೆ ಇರುತ್ತದೆ, ಮತ್ತು ಅತಿ ಹೆಚ್ಚು ರಜೆಗಳ ಅವಕಾಶ ಸಿಗುತ್ತದೆ, ಉತ್ತಮ ಕೆಲಸದ ವಾತಾವರಣದೊಂದಿಗೆ ಉದ್ಯೋಗ ಭದ್ರತೆ ಕೂಡ ಇರುತ್ತದೆ ಇನ್ನು ಇತ್ಯಾದಿ ಕಾರಣಗಳಿವೆ.
ಈ ರೀತಿ ಬ್ಯಾಂಕಿಂಗ್ ಜಾಬ್ ಬಗ್ಗೆ ಕನಸು ಕಾಣುವವರಲ್ಲಿ ನೀವು ಒಬ್ಬರಾಗಿದ್ದರೆ ಇನ್ನೇಕೆ ತಡ ಇಂದೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಹುದ್ದೆಗೆ ನೇಮಕಾತಿಗೆ ಸಂಬಂಧಿಸಿದ ವಿವರ ಹಾಗೂ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಬಂಧನ್ ಬ್ಯಾಂಕ್
ಹುದ್ದೆ ಹೆಸರು:- ಬ್ಯಾಂಕ್ ಸಹಾಯಕ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 31 ಹುದ್ದೆಗಳು
ಉದ್ಯೋಗ ಸ್ಥಳ:- ಭಾರತದಾದ್ಯಂತ ಇರುವ ವಿವಿಧ ಬ್ರಾಂಚ್ ಗಳಲ್ಲಿ
ಶೈಕ್ಷಣಿಕ ವಿದ್ಯಾರ್ಹತೆ:-
* ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸ್ ಮಾಡಿರಬೇಕು ಅಥವಾ ಇದಕ್ಕೆ ತತ್ಸಮನಾದ ವಿದ್ಯಾರ್ಹತೆ ಪಡೆದಿರಬೇಕು
* ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಬಲ್ಲವರಾಗಿರಬೇಕು.
* ಕಂಪ್ಯೂಟರ್ ಜ್ಞಾನ ಹೊಂದಿರಬೇಕು
* ಗ್ರಾಹಕ ಸೇವಾ ಕೌಶಲ್ಯಗಳು ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.
* ಈಗಾಗಲೇ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 05 ವರ್ಷಗಳ ಸಡಿಲಿಕೆ ಇರುತ್ತದೆ
* OBC ಅಭ್ಯರ್ಥಿಗಳಿಗೆ 03 ವರ್ಷಗಳ ಸಡಿಲಿಕೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* https://bandhanbank.com/ ಈ ವೆಬ್ಸೈಟ್ಗೆ ಭೇಟಿ ನೀಡಿ
* ಅರ್ಜಿ ಸಲ್ಲಿಸಲು ಸೂಚಿಸುವ ಲಿಂಕ್ ಕ್ಲಿಕ್ ಮಾಡಿ
* ಫಾರ್ಮೆಟ್ ಅಲ್ಲಿ ಎಲ್ಲ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
* ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪಡೆದುಕೊಳ್ಳಿ
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸಿದ ಎಲ್ಲರಿಗೂ ಕಂಪ್ಯೂಟರೈಸ್ಡ್ ಟೆಸ್ಟ್ ಇರುತ್ತದೆ
* ಉತ್ತಮ ಶ್ರೇಣಿಯಲ್ಲಿ ಪಾಸಾದವರಿಗೆ ಸಂದರ್ಶನ ನಡೆಸಿ ಅವರ ದಾಖಲೆಗಳನ್ನು ಪರಿಶೀಲನೆ ಮಾಡಿ ಆಯ್ದುಕೊಳ್ಳಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 03 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಮೇ, 2024.