ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ, 10th, ITI, ಡಿಪ್ಲೋಮೋ, ಪದವಿ ಆದವರು ಅರ್ಜಿ ಸಲ್ಲಿಸಬಹುದು.! ವೇತನ ₹ 1,12,400/-

 

WhatsApp Group Join Now
Telegram Group Join Now

ಸರ್ಕಾರಿ ಹುದ್ದೆ ಪಡೆಯಬೇಕು ಎನ್ನುವುದು ಅನೇಕ ಕನಸು. ಅದರಲ್ಲೂ ಭಾರತೀಯ ರಕ್ಷಣಾ ಇಲಾಖೆಯ ಭಾಗವಾಗಿ ಕೆಲಸ ಮಾಡುವುದು ಎಂದರೆ ಭಾರತೀಯರಿಗೆ ಅದೊಂದು ಹೆಮ್ಮೆ. ನೀವು ಕೂಡ ಇಂತಹ ಮಹತ್ವಕಾಂಕ್ಷೆ ಹೊಂದಿದ್ದರೆ ನಿಮಗೆ ಈಗ ಒಂದು ಸಿಹಿ ಸುದ್ದಿ ಇದೆ.

ಅದೇನೆಂದರೆ, ಭಾರತೀಯ ರಕ್ಷಣಾ ಇಲಾಖೆಯ ನೌಕಾಪಡೆ ವಿಭಾಗದಲ್ಲಿ ಖಾಲಿ ಇರುವ 910 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಬಿದ್ದಿದೆ. ಈ ಹುದ್ದೆಗಳಿಗೆ ಪ್ರಕಟಣೆಯಲ್ಲಿ ಅರ್ಹತಾ ಮಾನದಂಡಗಳನ್ನು ಕೂಡ ತಿಳಿಸಲಾಗಿದೆ. ಆ ಪ್ರಕಾರವಾಗಿ ಅರ್ಹತೆ ಹೊಂದಿ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ ಹುದ್ದೆ ಪಡೆಯಲು ಪ್ರಯತ್ನಿಸಬಹುದು. ಈ ಕುರಿತಾದ ಪ್ರಮುಖ ಮಾಹಿತಿ ಹೀಗಿದೆ ನೋಡಿ…

ನೇಮಕಾತಿ ಸಂಸ್ಥೆ:- ನೌಕಾಪಡೆ
ಉದ್ಯೋಗ ಕ್ಷೇತ್ರ:- ಭಾರತೀಯ ರಕ್ಷಣಾ ಇಲಾಖೆ
ಒಟ್ಟು ಹುದ್ದೆಗಳ ಸಂಖ್ಯೆ: 910

ಹುದ್ದೆಗಳ ವಿವರ:-

* ಚಾರ್ಜ್‌ಮನ್ (ಅಮ್ಯುನಿಷನ್ ವರ್ಕ್‌ಶಾಪ್ ) – 22
* ಚಾರ್ಜ್‌ಮನ್ (ಫ್ಯಾಕ್ಟರಿ) – 20
* ಸೀನಿಯರ್ ಡ್ರಾಟ್ಸ್‌ಮನ್ (ಇಲೆಕ್ಟ್ರಿಕಲ್) – 142
* ಸೀನಿಯರ್ ಡ್ರಾಟ್ಸ್‌ಮನ್ (ಮೆಕ್ಯಾನಿಕಲ್) – 26
* ಸೀನಿಯರ್ ಡ್ರಾಟ್ಸ್‌ಮನ್ (ಕಂಸ್ಟ್ರಕ್ಷನ್) – 29
* ಸೀನಿಯರ್ ಡ್ರಾಟ್ಸ್‌ಮನ್ (ಕಾರ್ಟೊಗ್ರಫಿ) – 11
* ಸೀನಿಯರ್ ಡ್ರಾಟ್ಸ್‌ಮನ್ (ಆರ್ಮನೆಂಟ್) – 50
* ಟ್ರೇಡ್ಸ್‌ಮನ್ ಮೇಟ್ (ಗ್ರೂಪ್‌ ಸಿ) – 610

ವೇತನಶ್ರೇಣಿ:-

ಆಯಾ ಹುದ್ದೆಗಳಿಗೆ ಅನುಸಾರವಾಗಿ ರೂ.18,000 ದಿಂದ ರೂ.1,12,400 ವರೆಗೆ ವೇತನ ಇರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ:-

* ಚಾರ್ಜ್‌ಮನ್ (ಅಮ್ಯುನಿಷನ್ ವರ್ಕ್‌ಶಾಪ್ & ಫ್ಯಾಕ್ಟರಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಪ್ಲೊಮೋ ಅಥವಾ BSc. ಉತ್ತೀರ್ಣರಾಗಿರಬೇಕು.
* ಸೀನಿಯರ್ ಡ್ರಾಟ್ಸ್‌ಮನ್ (ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಕನ್ಸ್ಟ್ರಕ್ಷನ್ ಕಾರ್ಟೋಗ್ರಫಿ & ಆರ್ಮನೆಂಟ್ ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೆಟ್ರಿಕ್ಯೂಲೇಷನ್‌ ಜತೆಗೆ ಡಿಪ್ಲೊಮ ಅಥವಾ ITI ನ್ನು ಸಂಬಂಧಪಟ್ಟ ವಿಷಯದಲ್ಲಿ ಪಾಸ್ ಆಗಿರಬೇಕು.
* ಟ್ರೇಡ್ಸ್‌ಮನ್ ಮೇಟ್ (ಗ್ರೂಪ್‌ ಸಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೆಟ್ರಿಕ್ಯೂಲೇಷನ್ ಪಾಸ್ ಆಗಿರಬೇಕು.

ವಯೋಮಿತಿ:-

* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಚಾರ್ಜ್‌ಮನ್ ಮತ್ತು ಟ್ರೇಡ್ಸ್‌ಮನ್ ಮೇಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 25 ವರ್ಷಗಳು
* ಸೀನಿಯರ್ ಡ್ರಾಟ್ಸ್‌ಮನ್ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 27 ವರ್ಷಗಳು.

ವಯೋಮಿತಿ ಸಡಿಲಿಕೆ:-

* Sc/ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳು
* OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:-
* Sc/ST, ಮಹಿಳಾ ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ
* ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.295

ಆಯ್ಕೆ ವಿಧಾನ:-
* ಲಿಖಿತ ಪರೀಕ್ಷೆ
* PST
* PET
* ಮೆಡಿಕಲ್ ಟೆಸ್ಟ್
* ಸಂದರ್ಶನ
* ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:-

* https://www.joinindiannavy.gov.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡಿ ಸ್ವ ವಿವರಗಳನ್ನು ತುಂಬಿಸಬೇಕು
* ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
* ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು.

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 18 ಡಿಸೆಂಬರ್, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಡಿಸೆಂಬರ್, 2023.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now