ಭಾರತದಾದ್ಯಂತ ಇರುವ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ. ಯಾಕೆಂದರೆ, ಒರಿಸ್ಸಾ ಹೈಡ್ರೋ ಪವರ್ ಕೋ ಆಪರೇಷನ್ (OHPC) ಸಂಸ್ಥೆಯಲ್ಲಿ ಉದ್ಯೋಗವಕಾಶಗಳು ಖಾಲಿ ಇದ್ದು ಇದಕ್ಕೆ ಸಂಬಂಧಿಸಿದಂತೆ ಜಲ ವಿದ್ಯುತ್ ನಿಗಮ ಅಧಿಸೂಚನೆ ಹೊರಡಿಸಿ ಈ ಹುದ್ದೆಗಳಿಗೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಈ ಹುದ್ದೆಗಳಿಗೆ ಭಾರತದಾದ್ಯಂತ ಇರುವ ಎಲ್ಲಾ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯಲ್ಲಿ ತಿಳಿಸಿರುವ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಾನ ಮಿತಿ ಇನ್ನಿತರ ಮಾಹಿತಿಗಳನ್ನು ತಿಳಿದುಕೊಂಡು ಆ ಪ್ರಕಾರವಾಗಿ ಅರ್ಹತೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳು ಅಮಾನ್ಯವಾಗತ್ತವೆ.
ಆದ್ದರಿಂದ ಈ ಅಂಕಣದಲ್ಲಿ ಅಧಿಸೂಚನೆಯಲ್ಲಿ ಇರುವ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹೆಚ್ಚಿನ ಮಾಹಿತಿಯನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.
ಇಲಾಖೆ:- ಜಲವಿದ್ಯುತ್ ಇಲಾಖೆ.
ಸಂಸ್ಥೆ:- OHPC
ಉದ್ಯೋಗ ಸ್ಥಳ:- ಒರಿಸ್ಸಾ.
ಒಟ್ಟು ಹುದ್ದೆಗಳ ಸಂಖ್ಯೆ:- 09.
ಹುದ್ದೆಯ ಬಗೆ:- ಖಾಯಂ ಉದ್ಯೋಗಗಳು.
ಹುದ್ದೆಗಳ ವಿವರ:-
● ಜೂನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್) – 04
● ಜೂನಿಯರ್ ಮ್ಯಾನೇಜರ್ (ಮೆಕಾನಿಕಲ್) – 01
● ಜೂನಿಯರ್ ಮ್ಯಾನೇಜರ್ ಹಣಕಾಸು – 02
● ಜೂನಿಯರ್ ಮ್ಯಾನೇಜರ್ HR – 02
ಶೈಕ್ಷಣಿಕ ವಿದ್ಯಾರ್ಹತೆ:-
● ಜೂನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್) – 10ನೇ, ITI.
● ಜೂನಿಯರ್ ಮ್ಯಾನೇಜರ್ (ಮೆಕಾನಿಕಲ್) – ಡಿಪ್ಲೊಮೋ.
● ಜೂನಿಯರ್ ಮ್ಯಾನೇಜರ್ ಹಣಕಾಸು – 10ನೇ, CA / ICWA, ಪದವಿ, ಸ್ತಾತಕೋತ್ತರ ಪದವಿ.
● ಜೂನಿಯರ್ ಮ್ಯಾನೇಜರ್ HR – 12ನೇ, ಪದವಿ, ಸ್ತಾತಕೋತ್ತರ ಪದವಿ.
ವೇತನ ಶ್ರೇಣಿ:- ನಿಗಮ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ 30,000ರೂ. ದಿಂದ 60,000ರೂ. ಮಾಸಿಕ ವೇತನ ಸಿಗಲಿದೆ.
ವಯೋಮಾನ ಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 30 ವರ್ಷಗಳು
ವಯೋಮಾನ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
ಅರ್ಜಿ ಶುಲ್ಕ:-
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿ ಅರ್ಜಿ ಶುಲ್ಕವನ್ನು ವಿಧಿಸಿರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮತ್ತು ಆಫ್ಲೈನ್ 2 ವಿಧಾನದಲ್ಲೂ ಕೂಡ ಅರ್ಜಿ ಸಲ್ಲಿಸಬಹುದು.
● ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವವರು OHPC ಅಧಿಕೃತ ವೆಬ್ಸೈಟ್ ಆದ ohpcltd.com ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಫಿಲ್ ಮಾಡಿ ಸಂಬಂಧಪಟ್ಟ ದಾಖಲೆಗಳ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
● ಆಫ್ಲೈನಲ್ಲಿ ಅರ್ಜಿ ಸಲ್ಲಿಸುವವರು ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ಫಿಲ್ ಮಾಡಿ ಇದರ ಜೊತೆ ಕೇಳಲಾದ ದಾಖಲೆಗಳನ್ನು ಲಗತ್ತಿಸಿ ನಿಗಮದ ಕಛೇರಿ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗೆ ತಲುಪುವಂತೆ ಕಳುಹಿಸಿಕೊಡಬೇಕು.
ಕಛೇರಿ ವಿಳಾಸ:-
ಜನರಲ್ ಮ್ಯಾನೇಜರ್ (HR),
OHPC ಕಾರ್ಪೋರೇಟ್ ಕಛೇರಿ,
ಭುವನೇಶ್ವರ್.
ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ:- 20.05.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 07.06.2023.