ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ರೂಪಿಸಲಾಗಿದೆ. ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರ ಪಾತ್ರ ಹಾಗೂ ಮಕ್ಕಳ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಇಲಾಖೆಯು ಸರ್ಕಾರದ ಸಹಯೋಗದಿಂದ ಕರ್ನಾಟಕದ ಕಡೆ ಹಳ್ಳಿಯ ಭಾಗದ ವರೆಗೂ ಸರ್ಕಾರದ ನೆರವನ್ನು ತಲುಪಿಸುವ ಜವಾಬ್ದಾರಿ ಹೊತ್ತಿದೆ.

ಇಂತಹ ಇಲಾಖೆಯ ಭಾಗವಾಗಿ ಕೆಲಸ ಮಾಡಲು ಇಚ್ಛಿಸುವ ಕರ್ನಾಟಕದ ಅಭ್ಯರ್ಥಿಗಳಿಗೆ ಈಗ ಒಂದು ಒಳ್ಳೆಯ ಅವಕಾಶ ಸಿಗುತ್ತಿದೆ. ರಾಷ್ಟ್ರೀಯ ಪೋಷಣ್​ ಅಭಿಯಾನ ಯೋಜನೆ ಅಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ (KWCWD Recruitment-2023) ನಡೆಯುತ್ತಿದೆ.

ಪ್ರತಿದಿನ ಇಷ್ಟು ನೀರನ್ನ ಮಾತ್ರ ಕುಡಿಬೇಕು ಇಲ್ಲದಿದ್ರೆ ಏನಾಗುತ್ತೆ ಗೊತ್ತಾ.? ಡಾಕ್ಟರ್ ಅಂಜನಪ್ಪ ಅವರ ಮಾತನ್ನೊಮ್ಮೆ ಕೇಳಿ.!

ಇದಕ್ಕಾಗಿ ಅಧಿಕೃತ ಆದೇಶ ಕೂಡ ಹೊರ ಬಿದ್ದಿತ್ತು ಪ್ರಕಟಣೆಯಲ್ಲಿರುವಂತೆ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆಗಿಟ್ಟಿಸಿಕೊಳ್ಳಬಹುದು. ಈ ಹುದ್ದೆಗಳ ನೇಮಕಾತಿ ತಾತ್ಕಾಲಿಕವಾಗಿದ್ದು,11 ತಿಂಗಳ ಅವಧಿಗೆ ನೇಮಕಾತಿ ನಡೆಯುತ್ತದೆ. ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಈ ಹುದ್ದೆ ನಿರ್ವಹಣೆ ಮುಂದುವರೆಯಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಇದಕ್ಕೆ ಸೂಕ್ತವಾದ ಗೌರವ ಧನವನ್ನು ಕೂಡ ನೀಡಲಾಗುತ್ತದೆ ಅರ್ಜಿ ಸಲ್ಲಿಸುವುದಕ್ಕೆ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ಕೆಲಸದ ಅನುಭವದ ಕುರಿತಾಗಿ ಕೆಲ ಅಂಶಗಳನ್ನು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲೂ ಪ್ರಮುಖ ವಿಷಯಗಳ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ಗ್ಯಾಸ್ಟ್ರಿಕ್ ಪ್ರಾಬ್ಲಂ ಬರಲು ಈ ಮೂರು ಅಂಶಗಳೇ ಕಾರಣ, ಟ್ಯಾಬ್ಲೆಟ್ ತಗೋಬೇಡಿ.! ಡಾಕ್ಟರ್‌ ಹೇಳಿದ ಸತ್ಯ

ಉದ್ಯೋಗ ಸಂಸ್ಥೆ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ.
ಹುದ್ದೆಗಳ ಸಂಖ್ಯೆ:- 02
ಹುದ್ದೆಗಳ ವಿವರ:-
● ಜಿಲ್ಲಾ ಪ್ರಾಜೆಕ್ಟ್​​ ಅಸಿಸ್ಟೆಂಟ್​ – 01
● ಬ್ಲಾಕ್​ ಕೊಆರ್ಡಿನೇಟರ್​ – 01

ಉದ್ಯೋಗ ಸ್ಥಳ:-
● ಜಿಲ್ಲಾ ಪ್ರಾಜೆಕ್ಟ್​​ ಅಸಿಸ್ಟೆಂಟ್​ – ಉಪನಿರ್ದೇಶಕರ ಕಚೇರಿ, ಯಾದಗಿರಿ.
● ಬ್ಲಾಕ್​ ಕೊಆರ್ಡಿನೇಟರ್​ – ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸುರಪುರ.

ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ ಬರುತ್ತೆ.? ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

ವೇತನ ಶ್ರೇಣಿ:- ಮಾಸಿಕವಾಗಿ…
● ಜಿಲ್ಲಾ ಪ್ರಾಜೆಕ್ಟ್​​ ಅಸಿಸ್ಟೆಂಟ್​ – 18,000ರೂ.
● ಬ್ಲಾಕ್​ ಕೊಆರ್ಡಿನೇಟರ್​ – 20,000ರೂ.

ಶೈಕ್ಷಣಿಕ ವಿದ್ಯಾರ್ಹತೆ:-
● ಜಿಲ್ಲಾ ಪ್ರಾಜೆಕ್ಟ್​​ ಅಸಿಸ್ಟೆಂಟ್​ – ಪದವಿ / ಸ್ನಾತಕೋತ್ತರ ಪದವಿ / ಡಿಪ್ಲೋಮಾ ಇನ್ ಮ್ಯಾನೇಜ್ಮೆಂಟ್ / ಸೋಶಿಯಲ್ ಸೈನ್ಸಸ್ / ನ್ರೂಟ್ರಿಷಿಯನ್.
● ಬ್ಲಾಕ್​ ಕೊಆರ್ಡಿನೇಟರ್​ – ಯಾವುದಾದರು ವಿಷಯದಲ್ಲಿ ಪದವಿ.
● ಇದರ ಜೊತೆಗೆ ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
● ಕನ್ನಡ ಮತ್ತು ಇಂಗ್ಲಿಷ್​ ಭಾಷಾ ಜ್ಞಾನ ಹೊಂದಿರಬೇಕು.
● ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ.

ವಾಹನ ಖರೀದಿ, ಸ್ವಯಂ ಉದ್ಯೋಗ, ಶೈಕ್ಷಣಿಕ ಸಾಲ, ಗಂಗಾಕಲ್ಯಾಣ ಯೋಜನೆ ಸಹಾಯಧನಕ್ಕೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ವಯೋಮಿತಿ ಸಡಿಲಿಕೆ:-
● ಕನಿಷ್ಠ ವಯೋಮಿತಿ 21 ವರ್ಷಗಳು
● ಗರಿಷ್ಠ ವಯೋಮಿತಿ 45 ವರ್ಷಗಳು.

ವಯೋಮಿತಿ ಸಡಿಲಿಕೆ:-
● SC / ST ಅಭ್ಯರ್ಥಿಗಳಿಗೆ 05 ವರ್ಷಗಳು
● OBC ಅಭ್ಯರ್ಥಿಗಳಿಗೆ 03 ವರ್ಷಗಳು.

ಅರ್ಜಿ ಸಲ್ಲಿಸುವ ವಿಧಾನ:-
ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಹೋಗಿ ಅರ್ಜಿ ನಮೂನೆ ಪಡೆದು ಅಥವಾ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಪೂರಕ ದಾಖಲೆಗಳ ಜೊತೆ ಖುದ್ದಾಗಿ ಕಚೇರಿಗೆ ಅರ್ಜಿ ಸಲ್ಲಿಸಬಹುದು ಅಥವಾ ಅಂಚೆ ಮೂಲಕ ಕೂಡ ಕಳುಹಿಸಬಹುದು.

ವಾಹನ ಖರೀದಿ, ಸ್ವಯಂ ಉದ್ಯೋಗ, ಶೈಕ್ಷಣಿಕ ಸಾಲ, ಗಂಗಾಕಲ್ಯಾಣ ಯೋಜನೆ ಸಹಾಯಧನಕ್ಕೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಅರ್ಜಿ ಕಳುಹಿಸಬೇಕಾದ ವಿಳಾಸ:-
ಉಪ ನಿರ್ದೇಶಕರ ಕಚೇರಿ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ
ಕೋಣೆ ಸಂಖ್ಯೆ ಸಿ-17, ಒಂದನೇ ಮಹಡಿ,
ಜಿಲ್ಲಾ ಆಡಳಿತ ಭವನ ಸಂಕೀರ್ಣ,
ಚಿತ್ತಾಪೂರ ರಸ್ತೆ,
ಯಾದಗಿರಿ-585202.

ವೆಬ್ ಸೈಟ್ ವಿಳಾಸ:- https://yadgir.nic.in

ಆಯ್ಕೆ ವಿಧಾನ:-
● ಕಂಪ್ಯೂಟರ್ ಆಧಾರಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 27.09.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 07.10.2023.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now