ಕರ್ನಾಟಕದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕೃಷಿ ಇಲಾಖೆ ವತಿಯಿಂದ ಸಿಹಿ ಸುದ್ದಿ ಇದೆ. ಕೃಷಿ ಇಲಾಖೆಯ ಅಧೀನ ಸಂಸ್ಥೆಯಾದ FACT ಫರ್ಟಿಲೈಜರ್ಸ್ ಅಂಡ್ ಕೆಮಿಕಲ್ಸ್ ಟ್ರಾವಂಕೂರ್ ಲಿಮಿಟೆಡ್ ಅಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದ ಎಲ್ಲಾ ಅರ್ಹ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು.
ಅಧಿಸೂಚನೆಯಲ್ಲಿ ತಿಳಿಸಲಾಗಿರುವ ನಿಯಮಾವಳಿಗಳ ಪ್ರಕಾರ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಒಳಗಿರುವವರು ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಅದ್ದರಿಂದ ಈ ಅಂಕಣದಲ್ಲೂ ಸಹ ಅರ್ಜಿ ಸಲ್ಲಿಸುವವರ ಅನುಕೂಲತೆಗಾಗಿ ಪ್ರಕಟಣೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ತಿಳಿಸಿಕೊಡಲಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಹಂಚಿಕೊಂಡು ಹೆಚ್ಚಿನ ಜನರಿಗೆ ಈ ಉದ್ಯೋಗ ಮಾಹಿತಿ ತಿಳಿಯುವಂತೆ ಮಾಡಿ.
ಇಲಾಖೆ:- ಕೃಷಿ ಇಲಾಖೆ
ಸಂಸ್ಥೆ:- ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರಾವಂಕೂರ್ ಲಿಮಿಟೆಡ್ FACT.
ಹುದ್ದೆಗಳ ವಿವರ:-
● ಕ್ಯಾಂಟೀನ್ ಮೇಲ್ವಿಚಾರಕರು
● ನರ್ಸ್
● ಕುಕ್ ಮತ್ತು ಬೇರರ್
ವೇತನ ಶ್ರೇಣಿ:- 22,000 – 25,000 ಮಾಸಿಕವಾಗಿ…
ಶೈಕ್ಷಣಿಕ ವಿದ್ಯಾರ್ಹತೆ:- ಆಯಾ ಹುದ್ದೆಗಳಿಗೆ ಅನುಸಾರವಾಗಿ 10ನೇ ತರಗತಿ, 12ನೇ ತರಗತಿ ಮತ್ತು ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
● ಕ್ಯಾಂಟೀನ್ ಮೇಲ್ವಿಚಾರಕರು:- ಅಡುಗೆ ತಂತ್ರಜ್ಞಾನ, ಅಡುಗೆ ವಿಜ್ಞಾನ ಅಥವಾ ಹೋಟೆಲ್ ನಿರ್ವಹಣೆಯಲ್ಲಿ ಡಿಪ್ಲೋಮೋ ಅಥವಾ ಪದವಿ.
● ನರ್ಸ್:- 10ನೇ ತರಗತಿ, ಜನರಲ್ ನರ್ಸಿಂಗ್, ಮಿಡ್ ವೈಫರಿ ಡಿಪ್ಲೋಮೋ.
● ಕುಕ್ ಮತ್ತು ಬೇರರ್:- 10ನೇ ತರಗತಿ.
ವಯೋಮಿತಿ:- ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರಾವಂಕೂರ್ ಲಿಮಿಟೆಡ್ ಸಂಸ್ಥೆಯು ಹೊರಡಿಸಿರುವ ಅತಿ ಸೂಚನೆ ಪ್ರಕಾರ ಕನಿಷ್ಠ 18 ವರ್ಷಗಳನ್ನು ಪೂರೈಸಬೇಕು ಗರಿಷ್ಠ 35 ವರ್ಷಗಳನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
ಅರ್ಜಿ ಶುಲ್ಕ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ವರ್ಗದ ಅಭ್ಯರ್ಥಿಗಳು ಕೂಡ ಅರ್ಜಿ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮತ್ತು ಆಫ್ಲೈನ್ ಮೂಲಕ
1. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಛಿಸುವವರು ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರಾವಂಕೂರ್ ಲಿಮಿಟೆಡ್ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂನಲ್ಲಿ ಸರಿಯಾದ ವೈಯುಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಕೇಳಲಾದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ಅರ್ಜಿಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಂಡ ಬಳಿಕ ಅದರ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು.
2. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಚಿಸುವವರು ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರಾವಂಕೂರ್ ಲಿಮಿಟೆಡ್ ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ವಿವರಗಳನ್ನು ಇಂಗ್ಲಿಷ್ ಅಲ್ಲಿ ಭರ್ತಿ ಮಾಡಿ ಇತ್ತೀಚಿನ ಭಾವಚಿತ್ರವನ್ನು ಮತ್ತು ಕೇಳಲಾದ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಸಂಸ್ಥೆಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿಕೊಡಬೇಕು.
ವಿಳಾಸ:-
DGM (HR) IR, HR ಇಲಾಖೆ, FEDO ಕಟ್ಟಡ,
FACT, ಉದ್ಯೋಗ ಮಂಡಲ.
Pin code: 683501
ವೆಬ್ ಸೈಟ್ ವಿಳಾಸ – fact.co.in
ಪ್ರಮುಖ ದಿನಾಂಕಗಳು:-
● ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 04.05.2023.
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಕಡೆ ದಿನಾಂಕ – 19.05.2023.
● ಹಾರ್ಟ್ ಪ್ರತಿಗಳನ್ನು ಕಳುಹಿಸಲು ಕಡೆ ದಿನಾಂಕ – 29.05.2023.