ಈ ಟೆಕ್ನಿಕ್ ಮಾಡಿ ಸಾಕು 2 ವರ್ಷದ ಕರು ಇದ್ದರು 35 ಲೀಟರ್ ಹಾಲು ಕೊಡುವ ಹಸು ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಹೈನುಗಾರಿಕೆ ಲಾಭ ಕೊಡುವ ಉದ್ಯಮವಾಗಿದೆ. ಆದರೆ ಆಳ ಅರಿಯದೆ ನೀರಿಗಳಿದರೆ ಅ’ಪಾ’ಯ’ದ ಪ್ರಮಾಣವು ಅಷ್ಟೇ ಇದೆ. ಹಸುಗಳನ್ನು ಸಾಕುವುದು ಅಷ್ಟು ಸುಲಭದ ಮಾತಲ್ಲ ಮತ್ತು ಹಸುಗಳ ಇಳುವರಿ ಹೆಚ್ಚಾಗುವಂತೆ ಕೆಲವು ಕ್ರಮಗಳನ್ನು ಕೈಗೊಂಡರೆ ಮಾತ್ರ ನಿಮ್ಮ ನಿರೀಕ್ಷೆಯ ಫಲ ಸಿಗುತ್ತದೆ.

ಈಗ ಅತಿ ಹೆಚ್ಚು ಹಾಲು ಕೊಡುವ ಹಸು ಬೇಕು ಎಂದು ಅವುಗಳಿಗೆ ಕ್ರಾಸ್ ಬೀಡ್ ಮಾಡುವುದು ಅಥವಾ ಪಂಜಾಬ್ ಹರಿಯಾಣ ಇಂತಹ ದೂರದ ರಾಜ್ಯಗಳಿಗೆ ಹೋಗಿ ಹೆಚ್ಚು ಫಲ ಕೊಡುವ ಹಸುವಿನ ತಳಿಯನ್ನು ತರುವುದು ಇತ್ಯಾದಿ ಪ್ರಕ್ರಿಯೆಗಳು ಇವೆ. ಆರು ಏಳು ದಿನಗಳ ಪ್ರಯಾಣ ಮಾಡಿ ಪ್ರಯಾಣಕ್ಕೆ ಹೆಚ್ಚು ದುಡ್ಡು ಖರ್ಚು ಮಾಡಿ ಈಗಾಗಲೇ ಆ ಪರಿಸರಕ್ಕೆ ಹೊಂದಿಕೊಂಡಿರುವ ಹಸುಗಳನ್ನು ತಂದು ಇಲ್ಲಿ ಸಾಕುವುದು ಅತಿ ಹೆಚ್ಚು ರಿಸ್ಕ್ ಒಳಗೊಂಡಿದೆ.

LIC ಕಡೆಯಿಂದ ವಿದ್ಯಾರ್ಥಿಗಳಿಗೆ 40,000 ಉಚಿತ ಸ್ಕಾಲರ್ ಶಿಪ್.! ಅರ್ಜಿ ಸಲ್ಲಿಸಿ.!

ಇದರ ಬದಲು ನಾವೇ ಹೇಗೆ ಹೆಚ್ಚು ಹಾಲು ನೀಡುವ ತಳಿಗಳನ್ನು ಸಾಕಬೇಕು, ನಮ್ಮಲ್ಲಿಯೇ ಬಂದು ಬೇರೆಯವರು ತೆಗೆದುಕೊಂಡು ಹೋಗುವಂತೆ ಹೇಗೆ ಮಾಡಬೇಕು. ಹೈನುಗಾರಿಕೆಯಲ್ಲಿ ಲಾಸ್ ಆಗಬಾರದು ಎಂದರೆ ಯಾವೆಲ್ಲ ವಿಚಾರಗಳಲ್ಲಿ ಎಚ್ಚರದಿಂದ ಇರಬೇಕು ಎನ್ನುವ ವಿಚಾರದ ಬಗ್ಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಯುವಕನೋರ್ವ ಮಾಹಿತಿ ಹಂಚಿಕೊಂಡಿದ್ದಾರೆ.

ಈಗಾಗಲೇ ಅವರು ಹಲವು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ್ದು ಏಳರಿಂದ ಎಂಟು ಹಸುಗಳನ್ನು ಸಾಕುತ್ತಿದ್ದಾರೆ. ಇವರ ಹಸುಗಳು ಪ್ರತಿ ಹೊತ್ತಿಗೆ ಕನಿಷ್ಠ 35 ಲೀಟರ್ ಹಾಲು ಕೊಡುತ್ತದೆ ಅವರು ಹೇಗೆ ಈ ಉದ್ಯಮದಲ್ಲಿ ಕ್ಲಿಕ್ ಆದರು ಹಸುಗಳಿಗೆ ಏನೇನು ಕೊಟ್ಟು ಹೇಗೆ ಪೋಷಣೆ ಮಾಡುತ್ತಾರೆ ಎನ್ನುವ ಮಾಹಿತಿ ಹೀಗಿದೆ.

ಕೇವಲ 200 ರೂಪಾಯಿ ಹೂಡಿಕೆ ಮಾಡಿ ಸಾಕು.! 30 ಲಕ್ಷ ಸಿಗುತ್ತೆ ಶ್ರೀಮಂತರಾಗುವ ಕನಸಿದ್ದವರು ಒಮ್ಮೆ ಇಲ್ಲಿ ನೋಡಿ.!

ಹಸುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಚಿಕ್ಕ ಹಸುವಿಗೆ ಇಂಜೆಕ್ಷನ್ ಕೊಡಿಸಿ ಹಿಂಸಿಸಬಾರದು. ಮೊದಲಿಗೆ ಹಸು ಚೆನ್ನಾಗಿ ಬೆಳೆಯಬೇಕು ನಾವು ಒಂದುವರೆ ವರ್ಷದ ತನಕ ಇಂಜೆಕ್ಷನ್ ಹಾಕಿಸುವುದಿಲ್ಲ ಒಳ್ಳೆ ಸಿಮೆನ್ ಸ್ಯಾಂಪಲ್ ಇರುವ ಇಂಜೆಕ್ಷನ್ ಕೊಡಿಸುತ್ತೇವೆ ಮತ್ತು ಆ ಹಸುವಿಕೆ ಹೆಣ್ಣು ಕರು ಹುಟ್ಟಿದರೆ ಅದನ್ನು ಚೆನ್ನಾಗಿ ಸಾಗುತ್ತೇವೆ.

ತಾಯಿ ಹಸು 40 ಲೀಟರ್ ಹಾಲು ಕೊಡುತ್ತಿದ್ದರೆ ಖಂಡಿತವಾಗಿಯೂ ಆ ಕರು 35 ಲೀಟರ್ ಆದರೂ ಕೊಡುತ್ತದೆ. ಇದೇ ನಮ್ಮ ಕಾನ್ಫಿಡೆನ್ಸ್ ಜೊತೆಗೆ ಈಗ ಹಸುಗಳು ಜನೆಟಿಕಲಿ ಮಾಡಿಫೈ ಆಗುತ್ತಿವೆ ನಾವು ಅದಕ್ಕೆ ತಕ್ಕಂತೆ ಬದಲಾಗಬೇಕು. ಅವುಗಳಿಗೆ ಹಳೆ ಕಾಲದ ರೀತಿ ಮುಸರೆ ನೀರು ಕೊಟ್ಟರೆ ಎಲ್ಲಿ ಇಳುವರಿ ಕೊಡುತ್ತವೆ ಅವುಗಳಿಗೆ ಒಳ್ಳೆಯ ಪ್ರೋಟೀನ್ ಕೊಡಬೇಕು.

ಅಂಗನವಾಡಿ ಟೀಚರ್ ಹುದ್ದೆ ನೇಮಕಾತಿ.! SSLC, ಆಗಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ನಾವು ಜೋಳದ ಕಡ್ಡಿ ಖರೀದಿಸಿ ಹಾಕುತ್ತೇವೆ ಮತ್ತು ತರಕಾರಿಗಳನ್ನು ಖರೀದಿಸಿ ಹಾಕುತ್ತೇವೆ, ಚೆನ್ನಾಗಿ ನೀರು ಕುಡಿಸಿ ಚೆನ್ನಾಗಿ ತೊಳೆದು ನೋಡಿಕೊಳ್ಳುತ್ತೇವೆ. ಹಸು ಏನಾದರೂ ಗರ್ಭ ಧರಿಸಿದರೆ ಆರು ತಿಂಗಳವರೆಗೆ ಜೋಪಾನ ಮಾಡುತ್ತೇವೆ. ಇಷ್ಟು ಮಾಡಿದರೆ ವರ್ಷಾನುಗಟ್ಟಲೆ ಅವು ನಮ್ಮನ್ನು ಸಾಕುತ್ತವೆ, ಕರುವಿಗೆ ಎರಡು ವರ್ಷ ಆಗುವವರೆಗೂ ಕೂಡ ಹಾಲು ಕೊಡುತ್ತವೆ.

ಯಾರೇ ಹೈನುಗಾರಿಕೆ ಮಾಡಿದರು ನಾನು ಕೊಡುವ ಟಿಪ್ಸ್ ಏನೆಂದರೆ ಕಡಿಮೆ ಹಾಲು ಕೊಡುವ ಹತ್ತು ಹಸು ಸಾಕುವುದಕ್ಕಿಂತ ಜಾಸ್ತಿ ಇಳುವರಿ ಕೊಡುವ ನಾಲ್ಕು ಹಸು ಸಾಕಿ. ಹಸು ಸಾಕುವುದು ಹಳ್ಳಿ ಕಡೆ ಒಂದು ರೀತಿಯ ಖರ್ಚು ಹೊಂದಿರುತ್ತದೆ, ಸಿಟಿ ಕಡೆ ಬೇರೆ ರೀತಿ ಖರ್ಚು ಇರುತ್ತದೆ.

ಗ್ರಾಮೀಣ ಬ್ಯಾಂಕ್ ಗಳಲ್ಲಿ ಉದ್ಯೋಗವಕಾಶ, ಕನ್ನಡಿಗರಿಗೆ ಮೊದಲ ಆದ್ಯತೆ, ವೇತನ 35,000/- ಆಸಕ್ತರು ಅರ್ಜಿ ಸಲ್ಲಿಸಿ.!

ನೀವು ಯಾರ ಬಳಿಯಾದರೂ ಹಸು ಖರೀದಿಸಲು ಹೋದರೆ ಮೊದಲಿಗೆ ಅವರ ಜೊತೆಗೆ ಇದ್ದು ನಾಲ್ಕೈದು ದಿನ ನೋಡಿ ಅವರು ಹೇಳುವಷ್ಟೇ ಹಾಲು ಕೊಡುತ್ತಿದೆಯೇ, ಹಾಲು ಹೆಚ್ಚಾಗಲು ಏನೆಲ್ಲಾ ಹಾಕುತ್ತಿದ್ದಾರೆ, ಎಲ್ಲವನ್ನು ಕೂಡ ಚೆನ್ನಾಗಿ ತಿಳಿದುಕೊಳ್ಳಿ., ಹಸು ಸಾಕುವುದಕ್ಕೆ ಗೊತ್ತಿಲ್ಲ ಎಂದರೆ ಕೆಲಸಕ್ಕೆ ಇದ್ದರೂ ತಪ್ಪಿಲ್ಲ.

15-20 ಅಥವಾ ತಿಂಗಳುಗಟ್ಟಲೆ ಸರಿಯಾಗಿ ಹಸು ಸಾಕುವುದನ್ನು ಕಲಿತುಕೊಂಡು ಆಮೇಲೆ ಬಂಡವಾಳ ಹಾಕಿ ಹೈನುಗಾರಿಕೆ ಮಾಡಿ ಇಲ್ಲವಾದರೆ ಈಗ ಒಂದು ಹಸುವಿಗೆ ಲಕ್ಷಗಟ್ಟಲೆ ಹಣ ಸುರಿಯಬೇಕು, ನಿಮ್ಮ ಕೈಲಿ ಅದನ್ನು ನೋಡಿಕೊಳ್ಳದಿದ್ದರೆ ಸಿಕ್ಕ ಬೆಲೆಗೆ ಮಾರಬೇಕಾಗುತ್ತದೆ. ಹೈನುಗಾರಿಕೆಯಿಂದ ಖಂಡಿತವಾಗಿಯೂ ಹೆಚ್ಚು ಲಾಭ ಸಿಗುತ್ತದೆ ಆದರೆ ನೀವು ಹೇಗೆ ಸಾಕಬೇಕು ಹೇಗೆ ನೋಡಿಕೊಳ್ಳಬೇಕು ಎನ್ನುವುದನ್ನು ಕಲಿತಿರಬೇಕು ಎನ್ನುತ್ತಾರೆ ಅವರ ಮಾತಿನಲ್ಲಿಯೇ ಈ ವಿಚಾರ ತಿಳಿದುಕೊಳ್ಳಲು ವಿಡಿಯೋ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now