ಕರ್ನಾಟಕ ರಾಜ್ಯದಲ್ಲಿ ಕೃಷಿ ಚಟುವಟಿಕೆಯ ಜೊತೆಗೆ ಹೈನುಗಾರಿಕೆ (dairy farming) ಕೂಡ ಇಲ್ಲಿನ ರೈತರ ಮುಖ್ಯ ಕಸುಬು. ಇದನ್ನು ಮನಗಂಡಿರುವ ಸರ್ಕಾರವು ಪಶು ಸಂಗೋಪನೆಗೆ (Animal husbandry) ಅನೇಕ ಯೋಜನೆಗಳ ಮೂಲಕ ನೆರವು ನೀಡಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸುತ್ತಿದೆ. ಪಶು ಸಂಜೀವಿನಿ ಮುಂತಾದ ಯೋಜನೆಗಳನ್ನು ಜಾರಿ ಮಾಡಿದ್ದ ಸರ್ಕಾರವು ಅದರ ಮುಂದುವರಿದ ಭಾಗವಾಗಿ ಪಶುಗಳಿಗೆ ಸಂಚಾರಿ ಕ್ಲಿನಿಕ್ ( Veterinary mobile clinic) ವ್ಯವಸ್ಥೆಯನ್ನು ಕೂಡ ಮಾಡಿಕೊಟ್ಟಿದೆ.
ಈ ಯೋಜನೆಯ ಮೂಲಕ ತಮ್ಮ ಮನೆಯಲ್ಲಿರುವ ಹಸು, ಕುರಿ, ಎಮ್ಮೆ, ಮೇಕೆ, ಹಂದಿ ಮುಂತಾದ ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಆದಾಗ ಚಿಕಿತ್ಸೆ ಬೇಕು ಎಂದರೆ ಸರ್ಕಾರ ಸೂಚಿಸಿರುವ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು ನಿಮ್ಮ ಮನೆ ಬಾಗಿಲಿಗೆ ಬಂದು ವೈದ್ಯಕೀಯ ತಂಡ ಚಿಕಿತ್ಸೆ ನೀಡಲಿದೆ. ಭಾರತ ದೇಶವು ಮೂಲತಃ ಹಳ್ಳಿಗಳ ದೇಶ, ಆದ್ದರಿಂದ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರ ಕುಟುಂಬದಲ್ಲೂ ಕೂಡ ಹಸು, ಕುರಿ, ಮೇಕೆ, ಹಂದಿ ಸಾಕಾಣಿಕೆ ಮಾಡುತ್ತಾರೆ.
ಆದರೆ ಎಲ್ಲಾ ಗ್ರಾಮಗಳಲ್ಲೂ ಕೂಡ ಪಶು ಆಸ್ಪತ್ರೆ ವ್ಯವಸ್ಥೆ ಇಲ್ಲ, ಆಸ್ಪತ್ರೆ ಇರುವ ಗ್ರಾಮಗಳಲ್ಲೂ ಕೂಡ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅನೇಕ ಕಡೆ ವೈದ್ಯರು ನೇಮಕವಾಗಿಲ್ಲ ಇನ್ನು ಕೆಲವು ಕಡೆ ಚಿಕಿತ್ಸೆಗೆ ಬೇಕಾದ ಪರಿಕರಣಗಳೇ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ವರ್ಷಗಳ ಕಾಲದಿಂದ ಅನುಭವಿಸಿದ್ದ ಗ್ರಾಮೀಣ ಭಾಗದ ರೈತರು ಈಗ ನಿಟ್ಟುಸಿರು ಬಿಡುವಂತೆ ಆಗಿದೆ.
ಇನ್ನು ಮುಂದೆ ನಿಮ್ಮ ಮನೆಯಲ್ಲಿ ನೀವು ಸಾಕುವ ಜಾನುವಾರಿಗಳಿಗೆ ಯಾವುದೇ ಸಮಸ್ಯೆ ಬಂದರೂ ಈ ಸಹಾಯವಾಣಿಗೆ ಕರೆ ಮಾಡಿದರೆ ಸಾಕು ಉಚಿತವಾಗಿ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡುವಂತ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಪ್ರಾಣಿಗಳ ಆರೋಗ್ಯ ಹಾಗೂ ರೋಗ ನಿಯಂತ್ರಣ ಯೋಜನೆಯಡಿ ಈ ರೀತಿ ಸಂಚಾರಿ ಚಿಕತ್ಸಾಲಯಗಳನ್ನು ಆರಂಭಿಸಲು ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡುತ್ತದೆ ಎಂದು ಕೇಂದ್ರ ಪಶು ಸಂಗೋಪನ ಸಚಿವರಾದ ಪ್ರಭು ಚೌಹಾಣ್ (Minister Prabhu Chouhan) ಅವರು ಮಾಹಿತಿ ತಿಳಿಸಿದ್ದಾರೆ.
ಪಶು ಚಿಕಿತ್ಸಾಲಯ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿದೆ 275 ಮೊಬೈಲ್ ಕ್ಲಿನಿಕ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎನ್ನುವ ವಿಷಯವನ್ನು ಕೂಡ ಹಂಚಿಕೊಂಡಿದ್ದಾರೆ. ಬೆಂಗಳೂರು ವಿಭಾಗಕ್ಕೆ 70 ವಾಹನಗಳು, ಬೆಳಗಾವಿ ವಿಭಾಗಕ್ಕೆ 82 ಹಾಗೂ ಕಲ್ಯಾಣ ಕರ್ನಾಟಕ ವಿಭಾಗಕ್ಕೆ 68 ಸಂಚಾರಿ ವಾಹನಗಳನ್ನು ಮಂಜೂರು ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಕೂಡ ಸಚಿವರು ಹಂಚಿಕೊಂಡಿದ್ದಾರೆ.
ರೈತರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆಯನ್ನು ನೀಡುವಂತಹ ವಿಶೇಷವಾದ ಯೋಜನೆ ಇದಾಗಿದ್ದು ಜನಸಾಮಾನ್ಯರು ಆರೋಗ್ಯ ಸಮಸ್ಯೆ ಆದಾಗ ಸಹಾಯಕ್ಕೆ 108 ಆಂಬ್ಯುಲೆನ್ಸ್ ಗೆ ಕರೆ ಮಾಡುವಂತೆ ತಾವು ಸಾಕುವ ಜಾನುವಾರುಗಳಿಗೆ ಸಮಸ್ಯೆ ಆದಾಗ ಪಶು ಸಂಚಾರಿ ಚಿಕಿತ್ಸೆ ಸಹಾಯವಾಣಿ ಸಂಖ್ಯೆಯಾದ 1962 ಅಥವಾ 8277100200 ಈ ಸಂಖ್ಯೆಗೆ ಕರೆ ಮಾಡಿ ಉಚಿತವಾಗಿ ಚಿಕಿತ್ಸೆ ಸೌಲಭ್ಯ ಪಡೆಯಬಹುದು.
ಮೀನು ಸಾಗಾಣಿಕೆಗೆ ಸರ್ಕಾರದಿಂದ ಸಿಗಲಿದೆ 60% ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಿ.!
ಜಾನುವಾರುಗಳಿಗೆ ಅಗತ್ಯವಾಗಿರುವ ಔಷಧಗಳು, ಸಾಧನ ಸಲಕರಣೆಗಳನ್ನು ಒಳಗೊಂಡ ಶಸ್ತ್ರಚಿಕಿತ್ಸಾ ವಾಹನದೊಂದಿಗೆ ವೈದ್ಯರು ಮತ್ತು ಸಹಾಯಕರು ನೀವು ತಿಳಿಸಿದ ವಿಳಾಸಕ್ಕೆ ಬಂದು ಉಚಿತವಾಗಿ ಚಿಕಿತ್ಸೆ ಕೊಡುತ್ತಾರೆ. ಇಂತಹ ಉಪಯುಕ್ತ ಮಾಹಿತಿ ಬಗ್ಗೆ ಎಲ್ಲ ರೈತರಿಗೂ ಕೂಡ ತಿಳಿಸಿ.