ಶ್ರೀಮಂತರಾಗುವ ಕನಸಿದ್ದವರು ಹಣ ಉಳಿತಾಯದ ಬಗ್ಗೆ ಗಮನ ಕೊಡಬೇಕು. ಪ್ರತಿದಿನ, ಪ್ರತಿವಾರ, ಪ್ರತಿ ತಿಂಗಳು, ಉಳಿತಾಯ ಅವರ ಆದ್ಯತೆ ಆಗಿರಬೇಕು. ಬಳಿಕ ಅದು ಉಳಿತಾಯವಾಗಿರದೆ ಹೂಡಿಕೆ ಹಣವಾಗಿ ಬದಲಾಗಬೇಕು ಈ ರೀತಿ ಪ್ಲಾನ್ ಮಾಡಿದರೆ ಶ್ರೀಮಂತರಾಗಬಹುದು.
ಇಂತಹ ಸಮಯದಲ್ಲಿ ಸರ್ಕಾರದ ಅನೇಕ ಯೋಜನೆಗಳು ಈ ರೀತಿ ಹೂಡಿಕೆ ಮಾರ್ಗಗಳನ್ನು ತೋರಿವೆ. ಇದು ಹಣಕ್ಕೆ 100% ರಷ್ಟು ಭದ್ರತೆ ನೀಡಿದರೂ ಹಣದ ಬೆಳವಣಿಗೆ ಮಂದಗತಿಯಲ್ಲಿದೆ. ಹಾಗಾಗಿ ಜನರು ಬಹಳ ಬೇಗ ಹಣ ಗಳಿಸಲು ವ್ಯೂಚುವಲ್ ಫಂಡ್ ಗಳು ಶೇರ್ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.ಆದರೆ ಇದು ಕೆಲವು ರಿಸ್ ಗಳನ್ನು ಹೊಂದಿದೆ ಎನ್ನುವುದು ನಿಜ.
ಅಂಗನವಾಡಿ ಟೀಚರ್ ಹುದ್ದೆ ನೇಮಕಾತಿ.! SSLC, ಆಗಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಆದರೆ ಸಿಪ್ (SIP) ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (Systematic Investment plan) ಮೂಲಕ ಮ್ಯೂಚುವಲ್ ಫಂಡ್ ಹೂಡಿಕೆಯು ಸದ್ಯ ಮಾರ್ಕೆಟ್ ನಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಹೆಚ್ಚು ಜನ ಇದರ ಬಗ್ಗೆ ಒಲವು ತೋರಿಸಲು ಕಾರಣ ಇದು ಮಾರುಕಟ್ಟೆಯ ಏರಿಳಿತ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುವುದು.
ಮ್ಯೂಚುವಲ್ ಫಂಡ್ ಗಳು ನಾವು ಹೂಡಿದಂತಹ ಹಣವನ್ನು ವಿವಿಧ ರೀತಿಯ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಹೀಗಿರುವಾಗ, ಕೆಲವು ಷೇರುಗಳ ಬೆಲೆ ಕುಸಿಯುವ ಸಂಭಾವನೆ ಇರುತ್ತದೆ. ವಿಶೇಷವೇನೆಂದರೆ, ಕೆಲವೊಮ್ಮೆ ಇಳಿಕೆ ಕಂಡಿದ್ದರು ಮಾರುಕಟ್ಟೆಯು ಉತ್ತಮಗೊಂಡ ನಂತರ ಹಿಂದಿನ ನ’ಷ್ಟವನ್ನು ಮರುಪಡೆಯುತ್ತದೆ. SIP ಹೂಡಿಕೆಯಲ್ಲಿ ಶಿಸ್ತು ಕಲಿಸುತ್ತದೆ ಎನ್ನಬಹುದು, ಹೂಡಿಕೆದಾರರು ತಮ್ಮ ಆದಾಯದಿಂದ ಪ್ರತಿ ತಿಂಗಳು, ವಾರ ಅಥವಾ ತ್ರೈಮಾಸಿಕವಾಗಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡಬಹುದು.
SIP ಕುರಿತು ಕೆಲವು ಪ್ರಮುಖ ಅಂಶಗಳು:-
* ಏರಳಿತಗಳು ಇದ್ದಾಗಲೂ ಕೂಡ ಸರಾಸರಿ ವೆಚ್ಚ ನಿಭಾಯಿಸುತ್ತದೆ ಎನ್ನುವ ಗ್ಯಾರಂಟಿ ಇಟ್ಟುಕೊಳ್ಳಬಹುದು.
* ದೀರ್ಘಾವಧಿಯಲ್ಲಿ ಲಾಭ ಖಂಡಿತ ಹೆಚ್ಚಾಗುತ್ತದೆ. ನೀವು ದೀರ್ಘಕಾಲದವರೆಗೆ SIP ಅನ್ನು ಮುಂದುವರಿಸಿದರೆ, ನಿಮ್ಮ ಹೂಡಿಕೆಗಳು ಸಮಯಕ್ಕೆ ಹೆಚ್ಚಾಗುತ್ತವೆ.
SIP ಯಲ್ಲಿ ಹೂಡಿಕೆ ಮಾಡುವುದು ಹೇಗೆ:-
* SIP ಅನ್ನು ಪ್ರಾರಂಭಿಸಲು, ನೀವು ಮೊದಲು SIP ಯೋಜನೆಯನ್ನು ಆಯ್ಕೆ ಮಾಡಬೇಕು, SIP ಯೋಜನೆಯಲ್ಲಿ ವಿವಿಧ ರೀತಿಯ ಹೂಡಿಕೆ ಯೋಜನೆಗಳಿವೆ ನಿಮ್ಮ ಬಜೆಟ್ ಪರಿಶೀಲಿಸಿ ಸೂಕ್ತವಾದದ್ದನ್ನು ಆಯ್ದುಕೊಳ್ಳಿ.
* ನಿಮ್ಮ ಬ್ಯಾಂಕ್ ಖಾತೆಯನ್ನು SIP ಯೋಜನೆಗೆ ಸಂಪರ್ಕಿಸಿದರೆ ನೀವು ಆರಿಸಿದ ಸಮಯಗಳಿಗನುಗುಣವಾಗಿ ಮೊತ್ತವು ಖಾತೆಯಿಂದ ಆಟೋ ಡಿಟೆಕ್ಟ್ ಆಗುತ್ತದೆ, SIP ಯಲ್ಲಿ ಹೂಡಿಕೆ ಆಗುತ್ತದೆ.
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ.! ಜನವರಿ 15 ಕಡೆ ದಿನಾಂಕ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
* ಆಯ್ಕೆ ಮಾಡಿದ ನಂತರ, ನೀವು SIP ಮೊತ್ತ ಮತ್ತು ಹೂಡಿಕೆ ಆವರ್ತನವನ್ನು ಆರಿಸಬೇಕು. SIP ಮೊತ್ತವು ರೂ. 500 ನಿಂದ ಪ್ರಾರಂಭವಾಗುತ್ತದೆ ಮತ್ತು ನೀವು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಅರೆ-ವಾರ್ಷಿಕ ಅಥವಾ ವಾರ್ಷಿಕವಾಗಿ ಪ್ರೀಮಿಯಂಗಳನ್ನು ಕಟ್ಟಬಹುದು.
* ಲಾಭದ ಲೆಕ್ಕಾಚಾರ ಹಾಕುವುದಾದರೆ ದೀರ್ಘ ಕಾಲದವರೆಗೆ ಹೂಡಿಕೆ ಮಾಡುವುದು ಹೆಚ್ಚು ಲಾಭ ಸಿಗುತ್ತದೆ. ಕಳೆದ ವರ್ಷಗಳಲ್ಲಿ SIP 12%ರಷ್ಟು ಸರಾಸರಿ ಆದಾಯವನ್ನು ನೀಡಿವೆ. ಈ ಅಂಕಿಅಂಶಗಳನ್ನು ಆಧರಿಸಿ, ನಾವು ಸಿಪ್ನಲ್ಲಿ ದಿನಕ್ಕೆ ರೂ.200 ಹೂಡಿಕೆ ಮಾಡಿದರೆ ಅದು 15, 20 ಮತ್ತು 25 ವರ್ಷಗಳಲ್ಲಿ ನಿಮಗೆ ಎಷ್ಟು ಲಾಭ ನೀಡಬಹುದು.
ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸಲು ಅವಕಾಶ.!
ಎಂದರೆ 25 ವರ್ಷ ವಯಸ್ಸಿನವರು ದಿನಕ್ಕೆ 200 ರೂಪಾಯಿಗಳನ್ನು 15 ವರ್ಷಗಳವರೆಗೆ ಉಳಿಸಿ, ಅದನ್ನು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿ. 15 ವರ್ಷಗಳಲ್ಲಿ, ನಿಮ್ಮ ಹೂಡಿಕೆ 10.8 ಲಕ್ಷ ರೂಪಾಯಿಗಳನ್ನು ತಲುಪುತ್ತದೆ. ಈ ಸಮಯದಲ್ಲಿ, ನೀವು ಸರಾಸರಿ 12% ವಾರ್ಷಿಕ ಲಾಭವನ್ನು ಪಡೆಯುತ್ತೀರಿ.
5 ವರ್ಷಗಳ ನಂತರ, ನಿಮ್ಮ ಒಟ್ಟು ಹಣ 30.3 ಲಕ್ಷ ರೂಪಾಯಿಗಳಾಗಿರುತ್ತದೆ. ಮಕ್ಕಳ ಉನ್ನತ ಶಿಕ್ಷಣ ಅಥವಾ ಮದುವೆ ಖರ್ಚಿಗೆ, ಮನೆ ಕಟ್ಟುವ ಯೋಜನೆಗೆ ಹಣ ಉಳಿತಾಯ ಮಾಡುತ್ತಿದ್ದರೆ SIP ಉತ್ತಮ ಯೋಜನೆ ಎನ್ನಬಹುದು. 15 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಅಂದರೆ 20, 25, 30 ವರ್ಷಗಳನ್ನು ಕಾಯುವುದರಿಂದ ಕೋಟಿಗಟ್ಟಲೆ ಹಣ ಪಡೆಯಬಹುದು.