ಈಗ ಲೈಫ್ ಇನ್ಶೂರೆನ್ಸ್, ಹೆಲ್ತ್ ಇನ್ಸೂರೆನ್ಸ್, ಟರ್ಮ್ ಇನ್ಸೂರೆನ್ಸ್, ಆಕ್ಸಿಡೆಂಟ್ ಇನ್ಸೂರೆನ್ಸ್, ವೆಹಿಕಲ್ ಇನ್ಸುರೆನ್ಸ್ ಹಲವಾರು ರೀತಿಯ ಇನ್ಶುರೆನ್ಸ್ ಗಳು ಇವೆ. ಇದರಲ್ಲಿ ಸರ್ಕಾರದಿಂದ ದೇಶದ ಬಡ ಹಾಗೂ ಮಾಧ್ಯಮ ಕುಟುಂಬಗಳ ಜನತೆಗೆ ವಾರ್ಷಿಕವಾಗಿ 20 ರೂಪಾಯಿ ಖರ್ಚಿನಲ್ಲಿ ಮಾಡಿರುವಂತಹ ವಿಶೇಷವಾದ ಅಪಘಾತ ವಿಮೆ (Accident insurance) ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ (Pradana Mantri Suraksha Bhima Yojane) ಇದಾಗಿದ್ದು ಈ ಯೋಜನೆಯ ಪ್ರಯೋಜನಗಳನ್ನು ಏನು? ಯೋಜನೆಗೆ ಯಾರು ಅರ್ಹರು? ಯಾವ ರೀತಿ ನೋಂದಾಯಿಸಿಕೊಳ್ಳಬೇಕು? ಮತ್ತು ಏನೆಲ್ಲಾ ದಾಖಲೆಗಳನ್ನು ಕೊಡಬೇಕು ಎನ್ನುವ ಸಂಪೂರ್ಣ ವಿವರ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಸಿಲಿಂಡರ್ ಬೆಲೆ ಮತ್ತಷ್ಟು ಇಳಿಕೆ, ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್.!
ಯೋಜನೆಗೆ ಹೆಸರು:- ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆ (PMSBY)
ಯೋಜನೆ ಕುರಿತ ಪ್ರಮುಖ ವಿಷಯಗಳು:-
* ವಾರ್ಷಿಕವಾಗಿ ಕೇವಲ 20 ರೂಪಾಯಿ ಪ್ರೀಮಿಯಂ ಪಾವತಿ ಮಾಡುವ ಯೋಜನೆಯಾಗಿದೆ (ನಿಮ್ಮ ಖಾತೆಯಿಂದ ಆಟೋ ಡೆಬಿಟ್ ಆಗುತ್ತದೆ)
* 2 ಲಕ್ಷ ಮೊತ್ತದ ಅಪಘಾತ ವಿಮೆ ಸುರಕ್ಷತೆಯನ್ನು ಪಡೆಯಬಹುದಾಗಿದೆ
* 18 ವರ್ಷ ಮೇಲ್ಪಟ್ಟ 70 ವರ್ಷದ ಒಳಗಿನವರು ಯೋಜನೆಗೆ ಅರ್ಹರಾಗಿರುತ್ತಾರೆ
* ಅ’ಪ’ಘಾ’ತಗಳಿಂದ ಹಾನಿ ಉಂಟಾದರೆ ಸರ್ಕಾರದಿಂದ ವಿಮಾ ರಕ್ಷಣೆ ನೆರವು ಸಿಗುತ್ತದೆ
ವಿಮಾ ರಕ್ಷಣೆ:-
* ಅಪಘಾತ ಸಮಯದಲ್ಲಿ ಮ’ರ’ಣ ಹೊಂದಿದರೆ ಅಥವಾ ಸಂಪೂರ್ಣ ಅಂಗವಿಕಲತೆ ಉಂಟಾದರೆ ಸರ್ಕಾರವು ನಿಮಗೆ 2 ಲಕ್ಷ ರೂಪಾಯಿ ವಿಮಾ ರಕ್ಷೆ ನೀಡುತ್ತದೆ. ಭಾಗಶಃ ಅಂಗವಿಕಲತೆ ಉಂಟಾದರೆ 1 ಲಕ್ಷ ಸಹಾಯ ನೀಡುತ್ತದೆ
* ಶಾಶ್ವತ ಅಂಗವಿಕಲತೆ ಎಂದು ಎರಡು ಕಣ್ಣುಗಳನ್ನು ಸರಿಪಡಿಸಲಾಗದ ನಷ್ಟ ,ಎರಡು ಕೈಕಾಲುಗಳ ಸರಿಪಡಿಸಲಾಗದ ನಷ್ಟವನ್ನು ಪರಿಗಣಿಸಲಾಗುತ್ತದೆ
* ಭಾಗಶಃ ಅಂಗವಿಕತೆಯೆಂದು ಒಂದು ಕಣ್ಣಿನ ಸಂಪೂರ್ಣ ನಷ್ಟ ಹಾಗೂ ಒಂದು ಕೈ ಅಥವಾ ಕಾಲಿನ ಸರಿಪಡಿಸಲಾಗದ ನಷ್ಟವನ್ನು ಪರಿಗಣಿಸಲಾಗುತ್ತದೆ.
ಯೋಜನೆಯ ಪ್ರಯೋಜನಗಳು:-
* ಕ್ಲೈಂ ಆದ ಅಮೌಂಟ್ ನ್ನು ಅಪಘಾತವಾದ ವ್ಯಕ್ತಿಯ ಕುಟುಂಬದವರು ಅಥವಾ ನಾಮಿನಿ ಪಡೆಯುತ್ತಾರೆ
* ಭಾಗಶಃ ಅಂಗವಿಕಲತೆ ಆದಾಗ ಅಪಾಯದ ಕವರೇಜ್ ಪಡೆಯಬಹುದು
* ಆಟೋ ಡೆಬಿಟ್ ಪ್ರೀಮಿಯಂ ಪಾವತಿ ಮಾಡಬಹುದಾದ ಅವಕಾಶ ಇರುವುದರಿಂದ ಹೆಚ್ಚಿನ ಅನುಕೂಲತೆ ಇದೆ
ಅರ್ಜಿ ಸಲ್ಲಿಸುವ ವಿಧಾನ:-
* ಜನ ಸುರಕ್ಷಾ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಗಳ ಲಾಭ ಪಡೆಯಬಹುದು
* ನೀವು ಬ್ಯಾಂಕ್ ಅಕೌಂಟ್ ತೆರೆಯುವಾಗಲೇ ಈ ಯೋಜನೆಗೆ ಅಪ್ಲಿಕೇಶನ್ ಹಾಕಬಹುದು (ಬಹುತೇಕ ದೇಶದ ಎಲ್ಲಾ ಬ್ಯಾಂಕ್ ಗಳಲ್ಲೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶ ಇದೆ)
* ಅಥವಾ ನೇರವಾಗಿ ಈಗ ಬ್ಯಾಂಕ್ ಶಾಖೆಗೆ ಭೇಟಿ ಕೊಡುವ ಮೂಲಕ ಕೂಡ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಯೋಜನೆ ಆರಂಭಿಸಲು ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಬ್ಯಾಂಕ್ ಖಾತೆ ವಿವರ
* ನಾಮಿನಿ ವಿವರ
* ಕ್ಲೈಮ್ ಮಾಡುವ ಸಮಯದಲ್ಲಿ (ಮರಣ ಪ್ರಮಾಣ ಪತ್ರ ಅಥವಾ ಅಂಗವಿಕಲ ಪ್ರಮಾಣ ಪತ್ರ)
ಕ್ಲೈಮ್ ಮಾಡುವುದು ಹೇಗೆ?
* ಇನ್ಸೂರೆನ್ಸ್ ಮಾಡಿಸಿದ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಕ್ಲೈಮ್ ಮಾಡಬಹುದು
* ಜನ ಸುರಕ್ಷಾ ವೆಬ್ಸೈಟ್ನಲ್ಲೂ ಕೂಡ ನೀವು ನಿಯಮಗಳ ಪ್ರಕಾರವಾಗಿ ಕ್ಲೈಮ್ ಮಾಡಬಹುದಾಗಿದೆ. ಕ್ಲೈಮ್ ಮಾಡಲು ಫಾರ್ಮ್ ಇರುತ್ತದೆ. ಇನ್ಸೂರೆನ್ಸ್ ಕಂಪನಿ ಹೆಸರು, ಆಸ್ಪತ್ರೆ ವಿವರ, ಸಂಪರ್ಕ ಮಾಹಿತಿ, ಇತ್ಯಾದಿ ವಿವರಗಳನ್ನು ಫಿಲ್ ಮಾಡಿ ಪೂರಕ ದಾಖಲೆಗಳನ್ನು ಸಬ್ಮಿಟ್ ಮಾಡಿ ಆನ್ಲೈನಲ್ಲಿ ಅಪ್ಲೈ ಮಾಡಬಹುದು.