ನಮ್ಮ ದೇಶದಲ್ಲಿ 18 ವರ್ಷ ತುಂಬಿದ ಬಳಿಕ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕು ಬರುತ್ತದೆ. 18 ವರ್ಷ ತುಂಬಿದ ಯುವಕ ಯುವತಿಯರು ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಆರಿಸಬಹುದು. ಗ್ರಾಮ ಪಂಚಾಯಿತಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕನ್ನು ಇವರು ಹೊಂದಿರುತ್ತಾರೆ.
ಆದರೆ 18 ವರ್ಷ ತುಂಬಿದ ಬಳಿಕ ಅವರು ಮತದಾರರ ಗುರುತಿನ ಚೀಟಿಗೆ ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದು ಮತ್ತು ಮತದಾರರ ಲಿಸ್ಟ್ ನಲ್ಲಿ ಹೆಸರು ಹೊಂದಿದ್ದರೆ ಮಾತ್ರ ಈ ಅವಕಾಶ ಸಿಗುವುದು. ಇನ್ನು ಅನೇಕರಿಗೆ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರು ವೋಟರ್ ಐಡಿ ಮತ್ತು ವೋಟರ್ ಲಿಸ್ಟ್ ನಲ್ಲಿ ಹೆಸರು ಇರುವುದಿಲ್ಲ ಅಥವಾ ಕಾರಣಾಂತರಗಳಿಂದ ರದ್ದು ಆಗಿರಬಹುದು ನಿಮಗೂ ಅಂತಹ ಗೊಂದಲಗಳಿದ್ದರೆ ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಈ ಮೂಲಕ ವೋಟರ್ ಲಿಸ್ಟ್ ನಲ್ಲಿ ಹೆಸರು ಇದೆ ಅನ್ನೋದನ್ನ ಚೆಕ್ ಮಾಡಿಕೊಳ್ಳಿ.
ಈ ಸುದ್ದಿ ಓದಿ:- ಈ ಮಹಿಳೆಯರಿಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ.! ಸರ್ಕಾರದಿಂದ ಅಧಿಕೃತ ಘೋಷಣೆ ಮಹಿಳೆಯರಿಗೆ ಬಿಗ್ ಶಾ’ಕ್.!
* ರಾಷ್ಟ್ರೀಯ ಮತದಾನ ಸೇವಾ ಪೋರ್ಟಲ್ (National Voters Service Portal) or ಮುಖ್ಯ ಚುನಾವಣಾಧಿಕಾರಿ ಕರ್ನಾಟಕ (Chief Electroral officer Karnataka) ಈ ವೆಬ್ ಸೈಟ್ ವಿಳಾಸಕ್ಕೆ ಭೇಟಿ ಕೊಡಬೇಕು ಅಥವಾ ಗೂಗಲ್ ನಲ್ಲಿ ನೇರವಾಗಿ https://electoralsearch.in/ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಅಥವಾ ಗೂಗಲ್ ನಲ್ಲಿ CEO ಎಂದು ಟೈಪ್ ಮಾಡಿದರೆ ಸಿಗುವ Cheif Electroral officer Karnataka ಇದನ್ನು ಕ್ಲಿಕ್ ಮಾಡುವ ಮೂಲಕ ವೆಬ್ಸೈಟ್ ಮುಖಪುಟಕ್ಕೆ ತಲುಪಬಹುದು.
* ಪೇಜ್ ಸ್ಕ್ರೋಲ್ ಮಾಡಿದರೆ ಕೊನೆಯಲ್ಲಿ ನನ್ನ ಅಗತ್ಯತೆ ಎನ್ನುವ ವಿಭಾಗದಲ್ಲಿ ಹಲವಾರು ಆಯ್ಕೆಗಳು ಕಾಣುತ್ತವೆ
* ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಹುಡುಕುವುದು ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಒಂದು ಪಾಪ್ ಆಫ್ ಮೆಸೇಜ್ ಬರುತ್ತದೆ Ok ಮಾಡಿ
* electoral.search.in ಈ ವೆಬ್ ಸೈಟ್ ಗೆ ಕನೆಕ್ಟ್ ಆಗುತ್ತೀರಿ ಇದು National Voters Service Portal ಆಗಿರುತ್ತದೆ.
ಈ ಸುದ್ದಿ ಓದಿ:- ಇನ್ಮುಂದೆ ಪ್ರತಿ ಮನೆಗೂ ಸಿಗಲಿದೆ ಸೋಲಾರ್ ವಿದ್ಯುತ್, ಕೇಂದ್ರ ಸರ್ಕಾರದ ಹೊಸ ಯೋಜನೆ.!
* ಸ್ಕ್ರೀನ್ ಮೇಲೆ ಕೆಲವು ಆಪ್ಷನ್ಗಳನ್ನು ನೀಡಲಾಗಿರುತ್ತದೆ ಅದರಲ್ಲಿ ನಿಮ್ಮ ವೈಯಕ್ತಿಕ ವಿವರಗಳಾದ ನಿಮ್ಮ ಹೆಸರು ನಿಮ್ಮ ತಂದೆಯ ಹೆಸರು ಹುಟ್ಟಿದ ದಿನಾಂಕ ಅಥವಾ ವಯಸ್ಸು ಲಿಂಗ ನಿಮ್ಮ ಜಿಲ್ಲೆ ತಾಲೂಕು ಮತ್ತು ನಿಮ್ಮ ವಿಧಾನಸಭಾ ಕ್ಷೇತ್ರ ಯಾವುದು ಎನ್ನುವ ಮಾಹಿತಿಯನ್ನು ನಮೂದಿಸಬೇಕು.
* ನೀವು ಈ ವಿವರಗಳನ್ನು ತಪ್ಪಾಗಿ ನೀಡಿದ್ದಲ್ಲಿ ನಿಮಗೆ ನಿಮ್ಮ ವೋಟರ್ ಲಿಸ್ಟ್ ಪರಿಶೀಲಿಸಲು ಆಗುವುದಿಲ್ಲ. ಹಾಗಾಗಿ ನಿಮ್ಮ ವೋಟರ್ ID ನಲ್ಲಿ ಇರುವಂತೆ ಸರಿಯಾದ ಮಾಹಿತಿಗಳನ್ನು ನೀಡಬೇಕು.
* ಕೊನೆಯಲ್ಲಿ ಕ್ಯಾಪ್ಚಾ ಕೋಡ್ ನೀಡಲಾಗಿರುತ್ತದೆ ಅದನ್ನು ನಮೂದಿಸಿ ಸರ್ಚ್ ಕೊಡಿ.
* ಇಷ್ಟು ಮಾಡುತ್ತಿದ್ದಂತೆ ಸ್ಕ್ರೀನ್ ಮೇಲೆ ನಿಮ್ಮ EPIC No., Name, Father Name, Polling Station, assembly Constituency and Parliment Constituency ಇತ್ಯಾದಿ ಮಾಹಿತಿಗಳು ಸಿಗುತ್ತವೆ.
ಈ ಸುದ್ದಿ ಓದಿ:- HDFC ಬ್ಯಾಂಕ್ ಸ್ಕಾಲರ್ಶಿಪ್ 75,000 ವಿದ್ಯಾರ್ಥಿ ವೇತನ ಪಡೆಯಿರಿ. 1 ನೇ ತರಗತಿಯಿಂದ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವವರು ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.!
* View Details ಮೇಲೆ ಕ್ಲಿಕ್ ಮಾಡಿ ಇನ್ನು ಹೆಚ್ಚಿನ ಮಾಹಿತಿ ಪಡೆಯಬಹುದು ನಿಮ್ಮ ವೋಟರ್ ಲಿಸ್ಟ್ ಮಾಹಿತಿ ಮಾತ್ರವಲ್ಲದೆ ಮುಂದಿನ ಚುನಾವಣೆಯಲ್ಲಿ ಯಾವ ದಿನಾಂಕದಂದು ವೋಟ್ ಮಾಡಲಿದ್ದೀರಿ, ವೋಟರ್ ಐಡಿಯಲ್ಲಿ ಯಾವುದಾದರೂ ತಿದ್ದುಪಡಿ ಇದೆ ಅದನ್ನು ಸರಿಪಡಿಸಿಕೊಳ್ಳಲು ಫಾರಂ ಮತ್ತು ನಿಮ್ಮ ರಾಜ್ಯದ ಚುನಾವಣೆ ಅಧಿಕಾರಿಗಳು ಜಿಲ್ಲೆಯ ಚುನಾವಣಾಧಿಕಾರಿಗಳು, BLO ಇವರುಗಳ ವಿವರವನ್ನು ಕೂಡ ಪಡೆಯಬಹುದು.
ವೋಟರ್ ಲಿಸ್ಟ್ ಹಾಗೂ ವೋಟರ್ ಐಡಿ ಕುರಿತು ಬಗ್ಗೆ ಹರಿಯಲಾಗದಂತಹ ಸಮಸ್ಯೆ ಇದ್ದರೆ ಇವರನ್ನು ಸಂಪರ್ಕಿಸಿದರೆ ಪರಿಹಾರ ನೀಡುತ್ತಾರೆ.
* ನೀವು ಬೇಕಾದರೆ ಈ ಫಾರಂ ಪ್ರಿಂಟ್ ಪಡೆದುಕೊಳ್ಳಬಹುದು ಮತ್ತು ಈ ಪೇಜ್ ಕೂಡ ಪ್ರಿಂಟ್ ಪಡೆದುಕೊಳ್ಳಬಹುದು.
ಈ ಸುದ್ದಿ ಓದಿ:- ಇ-ಸ್ಟ್ಯಾಂಪ್ ಪೇಪರ್ ಎಂದರೇನು.? ಹೇಗೆ ಬರೆಯಬೇಕು ಸಂಪೂರ್ಣ ಮಾಹಿತಿ.