2023 ನೇ ಸಾಲಿನ ಕರ್ನಾಟಕದ ಬಜೆಟ್ ಇಂದು ನಡೆದಿದ್ದು ಈ ಒಂದು ಬಜೆಟ್ ನಲ್ಲಿ ರೈತರಿಗೆ ಹಲವಾರು ರೀತಿಯ ಸಿಹಿ ಸುದ್ದಿಗಳನ್ನು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಅವರು ಅದರಲ್ಲಿ ರೈತರಿಗೆ ಅನುಕೂಲವಾಗುವಂತೆ ಅವರಿಗೆ ಯಾವುದೇ ರೀತಿಯ ಸಂಭವಿಸದಂತೆ ಕೆಲವೊಂದಷ್ಟು ಉತ್ತಮವಾದಂತಹ ನಿರ್ಧಾರವನ್ನು ತೆಗೆದುಕೊಂಡಿದ್ದು ಇದು ರೈತರಿಗೆ ಉಪಯೋಗವಾಗುವಂತಹ ವಿಷಯವಾಗಿದೆ ಎಂದು ಹೇಳಬಹುದು.
ಹೌದು ಸಾಮಾನ್ಯವಾಗಿ ಪ್ರತಿಬಾರಿ ಬಜೆಟ್ ಮಂಡನೆ ಮಾಡುವಂತಹ ಸಮಯದಲ್ಲಿ ಬಹಳ ಮುಖ್ಯವಾಗಿ ರೈತರನ್ನು ನೆನಪಿ ನಲ್ಲಿಟ್ಟುಕೊಂಡು ಅವರು ಬೆಳೆಯುವಂತಹ ಬೆಳೆಗಳಿಗೆ ಯಾವುದೇ ರೀತಿಯಲ್ಲೂ ನಷ್ಟವಾಗದಂತೆ ಅವರಿಗೆ ಅನುಕೂಲವಾಗುವಂತೆ ಉತ್ತಮವಾದಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅದರಂತೆ ಈ ಬಾರಿ 2023 ಬಜೆಟ್ ಇಂದು ನಡೆದಿದ್ದು.
ಈ ಒಂದು ಸಮಯದಲ್ಲಿ ಹಲವಾರು ರೀತಿಯ ವಿಷಯವಾಗಿ ಹಲವಾರು ಉತ್ತಮವಾದಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅದರಲ್ಲೂ ಮೊದಲು ಹೇಳಿದಂತೆ ರೈತರಿಗೆ ಈ ಒಂದು ಬಜೆಟ್ ಬಹಳ ಅನುಕೂಲವಾಗಿದ್ದು ಅವರು ಬೆಳೆಯುವಂತಹ ಬೆಳೆಯಲ್ಲಿ ಅಧಿಕವಾ ದಂತ ಲಾಭವನ್ನು ಪಡೆಯಬಹುದಾಗಿದೆ ಹಾಗಾದರೆ ಈ ದಿನ ಬಜೆಟ್ ಮಂಡನೆ ಮಾಡಿದಂತಹ ಸಿದ್ದರಾಮಯ್ಯ ಅವರು ಯಾವ ಕೆಲವು ವಿಚಾರವಾಗಿ ಗಮನಾರ್ಹವಾದಂತ ತೀರ್ಮಾನಗಳನ್ನು ತೆಗೆದುಕೊಂಡಿ ದ್ದಾರೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಎಂದು ತಿಳಿಯೋಣ.
* ರೈತರಿಗೆ ಸಾಲದ ಬಡ್ಡಿಯನ್ನು ಅಂದರೆ ಶೂನ್ಯ ಬಡ್ಡಿದರ ಸಾಲದ ಮಿತಿಯನ್ನು ಮೂರು ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚು ಮಾಡಿದ್ದಾರೆ.
* ಇದರ ಜೊತೆಗೆ ಮಧ್ಯಮಾವಧಿ ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
* ಇದೇ ವೇಳೆ ಗುಡ್ಡಗಾಡು ಪ್ರದೇಶದ ರೈತರಿಗೆ ಪಿಕಪ್ ವ್ಯಾನ್ ಖರೀದಿಗೆ 7 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ಹೇಳಿದ್ದಾರೆ.
ಹೌದು, ರೈತರು ಗುಡ್ಡಗಾಡು ಪ್ರದೇಶಗಳಲ್ಲಿ ಸಂಚಾರ ಮಾಡಲು ವ್ಯಾನ್ ಗಳ ವ್ಯವಸ್ಥೆ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ ಹಾಗಾಗಿ ಯಾವೆಲ್ಲ ರೈತರು ಪಿಕಪ್ ವ್ಯಾನ್ ಗಳನ್ನು ಖರೀದಿ ಮಾಡಬೇಕು ಎಂದುಕೊಂಡಿರುತ್ತಾರೋ ಅವರೆಲ್ಲರೂ ಕೂಡ ಈ ಒಂದು ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೂ ಇದರ ಮುಖ್ಯ ಉದ್ದೇಶ ಏನು ಎಂದರೆ ರೈತರಿಗೆ ಯಾವುದೇ ರೀತಿಯಲ್ಲೂ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು ಅವರಿಗೆ ಎಲ್ಲಾ ರೀತಿಯ ಸೌಕರ್ಯಗಳು ಸಿಗಬೇಕು ಸರ್ಕಾರ ನೀಡುವಂತಹ ಸೌಲಭ್ಯ ಗಳು ರೈತರಿಗೆ ಯಾವುದೇ ರೀತಿಯ ತೊಂದರೆ ಇಲ್ಲದೆ ಸಿಗಬೇಕು ಎನ್ನುವುದು ಸಿಎಂ ಸಿದ್ದರಾಮಯ್ಯ ಅವರ ಉದ್ದೇಶ.
* ಅದೇ ರೀತಿಯಾಗಿ ಹಸು ದನ ಕರು ಎಮ್ಮೆಗಳು ಆಡು ಮೇಕೆ ಇವುಗಳು ಯಾವುದೇ ರೀತಿಯ ಅನಾರೋಗ್ಯ ತೊಂದರೆಯಿಂದ ಅಂದರೆ ಅಕಾಲಿಕವಾಗಿ ಮರಣ ಹೊಂದಿದರೆ ಅನುಗ್ರಹ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ನೀಡಲು ಸರ್ಕಾರ ಮುಂದಾಗಿದೆ.
* ಇದೇ ರೀತಿ ಪ್ರಸಕ್ತವಾದಂತಹ ಆಯವ್ಯಯವನ್ನು ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ರಲ್ಲಿ ಅನುಗ್ರಹ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.
ಆದರೆ ಈ ಒಂದು ಯೋಜನೆ ಕೆಲವೊಂದು ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಆದರೆ ಈಗ ಈ ಒಂದು ಯೋಜನೆಯನ್ನು ಮತ್ತೆ ಜಾರಿಗೆ ತರುತ್ತಿದ್ದು ಸಾಂಕ್ರಾಮಿಕ ಕಾಯಿಲೆಗಳಿಂದ ಹಸು ಹಾಗೂ ಎಮ್ಮೆ ಮೃತ ಪಟ್ಟರೆ 10,000, ಹಾಗೂ ಕುರಿ ಮೇಕೆ ಸಾವನ್ನಪ್ಪಿದರೆ 5000 ಹಣ ಸಹಾಯಧನವನ್ನು ನೀಡಲಾ ಗುವುದು. ಇದರಿಂದ ಹೈನು ಉದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ.
ದಿನನಿತ್ಯ ರೈತರ ಆದಾಯದ ಮೂಲವಾಗಿರುವಂತಹ ಹೈನು ಉದ್ಯಮ ವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಒಂದು ಯೋಜನೆಯನ್ನು ಮರು ಜಾರಿಗೊಳಿಸಲು ಚಿಂತೆ ಮಾಡಲಾಗಿದೆ.
* ರೇಷ್ಮೆ ಕೃಷಿ ನಂಬಿರುವವರಿಗೆ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಒಂದು ಸಿಹಿ ಸುದ್ದಿ ನೀಡಿದ್ದಾರೆ. ರೇಷ್ಮೆ ಖರೀದಿಗೆ ತಲ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುವುದಾಗಿ ಘೋಷಣೆ ಹೊರಡಿಸಿದ್ದಾರೆ.
* ಇಂದು ತಮ್ಮ 14ನೇ ಬಜೆಟ್ ಮಂಡನೆ ಸಮಯದಲ್ಲಿ ರೇಷ್ಮೆ ಕೃಷಿ ಮಾಡುವವರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದು ಅದರಲ್ಲೂ ರಾಮನಗರ ಹಾಗೂ ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಏಷ್ಯಾದಲ್ಲಿಯೇ ಅತಿಹೆಚ್ಚಿನ ವಹಿವಾಟು ನಡೆಯುತ್ತದೆ ಆದ್ದರಿಂದ ಈ ಒಂದು ಸುದ್ದಿ ಮುಖ್ಯವಾಗಿದೆ.
* ಇದರ ಜೊತೆ ರಾಮನಗರದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ಅತಿ ದೊಡ್ಡ ಮಾರುಕಟ್ಟೆ ಯನ್ನು ನಿರ್ಮಿಸಲಾಗುತ್ತಿದೆ.