ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.

 

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ವತಿಯಿಂದ ಭಾರತದಾತ್ಯಂತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. IBPS ಇದಕ್ಕಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಯನ್ನು ಕೂಡ ಆಹ್ವಾನಿಸಿದೆ. ಇದರ ಪ್ರಕಾರ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ್ ಬ್ಯಾಂಕ್ ಸೇರಿದಂತೆ ಇನ್ನು ಹಲವು ಪ್ರಾದೇಶಿಕ ಬ್ಯಾಂಕುಗಳ ಒಟ್ಟು 8812 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತದೆ.

ಈಗಾಗಲೇ ಹಲವು ಬಾರಿ IBPS ಇದೇ ರೀತಿ ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ದುಕೊಂಡು ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿದೆ. ಈ ಬಾರಿಯೂ ಸಹ ವಿವಿಧ ಹುದ್ದೆಗಳಿಗೆ ಭರ್ತಿ ಮಾಡುವ ಉದ್ದೇಶದಿಂದ ಪರೀಕ್ಷೆ ನಡೆಸುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು, ಆಸಕ್ತರಿಗಾಗಿ ಅಂಕಣದಲ್ಲಿ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ.

ನೇಮಕಾತಿ ನಡೆಸುವ ಸಂಸ್ಥೆ:- ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS).

ಉದ್ಯೋಗ ಸಂಸ್ಥೆ:-
● ಕರ್ನಾಟಕ ಗ್ರಾಮೀಣ ಬ್ಯಾಂಕ್
● ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್
● ವಿವಿಧ ಪ್ರಾದೇಶಿಕ ಬ್ಯಾಂಕುಗಳು.

ಹುದ್ದೆಗಳ ಸಂಖ್ಯೆ:- 8,812

ಹುದ್ದೆಗಳ ವಿವರ:-
● ಆಫೀಸ್​ ಅಸಿಸ್ಟೆಂಟ್​
● ಆಫೀಸರ್​ ಸ್ಕೇಲ್​ 1 (ಅಸಿಸ್ಟಂಟ್​ ಮ್ಯಾನೇಜರ್​)
● ಆಫೀಸರ್​ ಸ್ಕೇಲ್​ 1 (ಅಗ್ರಿಕಲ್ಚರ್​ ಆಫೀಸರ್​)
● ಆಫೀಸರ್​ ಸ್ಕೇಲ್​ 2(ಐಟಿ)
● ಆಫೀಸರ್​ ಸ್ಕೇಲ್​ 2 (ಕಾನೂನು)
● ಆಫೀಸರ್​​ ಸ್ಕೇಲ್​ 3
● ಮಲ್ಟಿಪರ್ಪಸ್ ಆಫೀಸ್ ಅಸಿಸ್ಟೆಂಟ್

ಶೈಕ್ಷಣಿಕ ವಿದ್ಯಾರ್ಹತೆ:-
● ಆಫೀಸ್​ ಅಸಿಸ್ಟೆಂಟ್​, ಆಫೀಸರ್​ ಸ್ಕೇಲ್​ 1 (ಅಸಿಸ್ಟಂಟ್​ ಮ್ಯಾನೇಜರ್​), ಆಫೀಸರ್​ ಸ್ಕೇಲ್​ 1​ (ಅಗ್ರಿಕಲ್ಚರ್​ ಆಫೀಸರ್​), ಆಫೀಸರ್​ ಸ್ಕೇಲ್​ 2(ಐಟಿ), ಆಫೀಸರ್​​ ಸ್ಕೇಲ್​ 3 ಹುದ್ದೆಗೆ ಪದವಿ ಪೂರ್ಣಗೊಳಿಸಿರಬೇಕು.
● ಉಳಿದ ಹುದ್ದೆಗಗಳಿಗೆ MBA / CA ಪದವಿ ಹೊಂದಿರಬೆಕು.
● ಆಫೀಸರ್​ ಸ್ಕೇಲ್​ 2 (ಕಾನೂನು) LLB ಪದವಿ ಆಗಿರಬೇಕು.

ವಯೋಮಿತಿ:-
● ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು.
● ಗರಿಷ್ಠ 40 ವರ್ಷಗಳನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
● ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.

ಅರ್ಜಿ ಶುಲ್ಕ:-
● SC/ST ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 175ರೂ.
● ಉಳಿದ ಅಭ್ಯರ್ಥಿಗಳಿಗೆ 850ರೂ.

ಆಯ್ಕೆ ವಿಧಾನ:-
● ಮೊದಲಿಗೆ ಎಲ್ಲಾ ಅಭ್ಯರ್ಥಿಗಳಿಗೂ ಬಹು ಆಯ್ಕೆ ಪ್ರಶ್ನೆಗಳ ಪ್ರಿಲಿಮ್ಸ್ ಪರೀಕ್ಷೆ ನಡೆಸಲಾಗುತ್ತದೆ.
● ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾತ್ರ ಮುಖ್ಯ ಪರೀಕ್ಷೆ ನೀಡಲಾಗುತ್ತದೆ.
● ಇದರಲ್ಲಿ ತೇರ್ಗಡೆಯಾದವರು ಸಂದರ್ಶನಗಳನ್ನು ಎದುರಿಸಬೇಕು.
● ದಾಖಲೆಗಳ ಪರಿಶೀಲನೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
● ಅಧಿಕೃತ ವೆಬ್ಸೈಟ್ ಆದ ibos.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ.
● ಸಂಬಂಧಪಟ್ಟ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
●ಆನ್ಲೈನ್ ಅಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಬೇಕು, ಆ ಬಳಿಕ ಮಾತ್ರ ಅರ್ಜಿ ಸಲ್ಲಿಕೆ ಪ್ರಕ್ರಿಯ ಪೂರ್ತಿಯಾಗುತ್ತದೆ.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 01.06.2023.
● ಅರ್ಜಿ ಸಲ್ಲಿಸಲು ಕಡೆ ದಿನಾಂಕ: 21.06.2023.
● ಪ್ರಿಲಿಮ್ಸ್ ಪರೀಕ್ಷೆ ನಡೆಯುವ ದಿನಾಂಕ: ಜುಲೈ 17 ರಿಂದ 22 ರ ಒಳಗೆ.
● ಮುಖ್ಯ ಪರೀಕ್ಷೆ ನಡೆಯುವ ದಿನಾಂಕ: ಸೆಪ್ಟೆಂಬರ್ ತಿಂಗಳಿನಲ್ಲಿ.

Leave a Comment

%d bloggers like this: