ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಹೇಳಿ ಮಂಚಕ್ಕೆ ಕರೆದ ಈ ನಿರ್ಮಾಪಕ ಎಂದು ಕಣ್ಣೀರಿಟ್ಟ ಕವಿತಾ ಗೌಡ.

ಎಷ್ಟೇ ಒಳ್ಳೆಯ ಅಭಿನಯ ಬಂದರೂ ಸಹ ಕೆಲವೊಮ್ಮೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ತುಂಬಾ ಕಷ್ಟ. ಕೆಲವೊಮ್ಮೆ ಪ್ರತಿಭಾನ್ವಿತರಿಗೂ ಸಹ ವಂಚನೆ ಆಗುತ್ತದೆ. ಅಂತಹದ್ದೇ ಒಂದು ವಿಷಯವನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕವಿತಾ ಗೌಡ ಅವರು ಎಲ್ಲರಿಗೂ ಸಹ ಪರಿಚಿತರೆ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಕವಿತ ಗೌಡ ಅವರ ಪ್ರಾರಂಭದ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ, ಇವರು ನಟಿಸಿದಂತಹ ಮೊದಲಾಧಾರವಾಹಿ ಎಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಲಕ್ಷ್ಮೀ ಬಾರಮ್ಮ ಈ ಧಾರವಾಹಿ ಈ ಮೂಲಕ ಕವಿತಾ ಗೌಡ ಅವರು ಜನರಿಗೆ ಪರಿಚಿತರಾದರು. ಅಷ್ಟೇ ಅಲ್ಲದೆ ಈ ಧಾರವಾಹಿಯಲ್ಲಿ ಕೊ ಆರ್ಟಿಸ್ಟ್ ಆದಂತಹ ಚಂದನ್ ಕುಮಾರ್ ಅವರ ಜೊತೆ ವೈವಾಹಿಕ ಜೀವನವಕ್ಕೆ ಕಾಲಿಟ್ಟರು.

WhatsApp Group Join Now
Telegram Group Join Now

ಈ ಒಂದು ಧಾರಾವಾಹಿಯಲ್ಲಿ ಚಿನ್ನು ಎನ್ನುವಂತಹ ಪಾತ್ರಧಾರಿಯಾದ ಕವಿತಾ ಗೌಡ ಅವರು ಉತ್ತಮವಾದ ಅಭಿನಯದ ಮೂಲಕ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡರು. ಚಂದನವನದಲ್ಲಿ ನಟಿಯಾಗಿ ಸ್ಥಾನ ಗಿಟ್ಟಿಸಿಕೊಂಡಿರುವಂತಹ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಅವರು ಬಹಳಷ್ಟು ಅಭಿಮಾನಿಗಳನ್ನು ಕರ್ನಾಟಕದಲ್ಲಿ ಒಳಗೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ನಟಿಸುತ್ತಿರುವಂತಹ ಸಂದರ್ಭದಲ್ಲಿ ಇವರಿಗೆ ಒಂದು ಸಿನಿಮ ಆಫರ್ ಬಂದಿತ್ತು. ನಿರ್ದೇಶಕರ ಮ್ಯಾನೇಜರ್ ಒಬ್ಬರು ಇವರು ಇರುವಂತಹ ಸಟ್ ಗೆ ನಮ್ಮ ನಿರ್ಮಾಪಕರು ನಿಮ್ಮಿಂದ ಬೇರೆ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳುತ್ತಾರೆ ನಿಮಗೆ ಎಷ್ಟು ಬೇಕಾದರೂ ಹಣವನ್ನು ನೀಡುತ್ತಾರೆ ಅವರು ಹೇಳಿದ ಹಾಗೆ ನೀವು ಕೇಳಬೇಕು ಎಂದು ಆ ಮ್ಯಾನೇಜರ್ ಹೇಳಿದರು ಅದಕ್ಕೆ ಕವಿತಾ ಗೌಡ ಚೆನ್ನಾಗಿ ಬೈದು ಸೆಟ್ ನಿಂದ ಹೊರಗೆ ಹಾಕುತ್ತಾರೆ.

ಮತ್ತೊಬ್ಬ ನಿರ್ಮಾಪಕರು ಸಿನಿಮಾ ಬಗ್ಗೆ ಮಾತನಾಡಲು ಒಂದು ಹೋಟೆಲ್ ಗೆ ಕರೆಸಿಕೊಳ್ಳುತ್ತಾರೆ ಆದರೆ ಆ ಹೋಟೆಲಲ್ಲಿ ಮಾಡಿದ್ದಂತಹ ರೂಂನಲ್ಲಿ ಯಾರು ಸಹ ಇರುವುದಿಲ್ಲ ಕೇವಲ ನಿರ್ಮಾಪಕರು ಮಾತ್ರ ಇರುತ್ತಾರೆ ಆಗ ಕವಿತಾ ಗೌಡ ಅವರಿಗೆ ಅನುಮಾನ ಉಂಟಾಗುತ್ತದೆ. ಅವರು ನೇರವಾಗಿ ನಿರ್ಮಾಪಕರಲ್ಲಿ ಕೇಳುತ್ತಾರೆ ಇಲ್ಲಿ ಹೀರೋ ಮತ್ತು ನಿಮ್ಮ ಮ್ಯಾನೇಜರ್ ಹಾಗೆ ಕಥೆ ಹೇಳುವವರು ಯಾರು ಇಲ್ಲ ಎಂದು ಕೇಳಿದಾಗ ಕುಳಿತುಕೊಳ್ಳಿ ಸಮಾಧಾನವಾಗಿ ಮಾತನಾಡೋಣ, ಕುಡಿಯಲು ಏನಾದರೂ ತೆಗೆದುಕೊಳ್ಳುತ್ತೀರಾ ಎಂದು ಆ ನಿರ್ಮಾಪಕರು ಕವಿತಾ ಗೌಡ ಅವರಿಗೆ ಹೇಳುತ್ತಾರೆ ಕವಿತಾ ಗೌಡ ಅವರಿಗೆ ನಿರ್ಮಾಪಕರ ತಲೆಯಲ್ಲಿ ಏನಿದೆ ಎಂಬುದು ತಿಳಿಯುತ್ತದೆ ತಕ್ಷಣದಿಂದ ಅಲ್ಲಿಂದ ಹೊರಟೆಬಿಡುತ್ತಾರೆ. ಈ ರೀತಿಯಾದಂತಹ ಸಾಕಷ್ಟು ಕೆಟ್ಟ ಅನುಭವಗಳು ಚಿತ್ರರಂಗದಲ್ಲಿ ಹೊಸದಾಗಿ ಬರುವಂತಹವರಿಗೆ ಇದ್ದೇ ಇರುತ್ತದೆ ಎಂದು ಕವಿತಾ ಗೌಡ ಅವರು ಹೇಳಿದ್ದಾರೆ.

ಚಿತ್ರರಂಗಕ್ಕೆ ಹೊಸದಾಗಿ ಬರುವವರಿಗೆ ಮಾತ್ರವಲ್ಲದೇ ಚಿತ್ರ ಈಗಾಗಲೇ ಚಿತ್ರರಂಗದಲ್ಲಿ ಇರುವವರೆಗೂ ಸಹ ಈ ರೀತಿಯಾದಂತಹ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯಾದಂತಹ ದುಷ್ಟ ಮನಸ್ಥಿತಿ ಇರುವಂತಹವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಇರುವುದು ನಮ್ಮೆಲ್ಲರಿಗೂ ಬೇಸರದ ಸಂಗತಿ ಎಂದು ಹೇಳಬಹುದು. ಈಗಿನ ಕಾಲದಲ್ಲಿ ಪ್ರತಿಭೆಗಳಿಗೆ ಯಾವುದೇ ಬೆಲೆ ಇಲ್ಲ ಕೇವಲ ಅವರ ತಾಳಕ್ಕೆ ಕುಣಿದರೆ ಇಲ್ಲಿ ಬೆಲೆ ಸಿಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಹೆಣ್ಣು ಮಕ್ಕಳು ದಿಟ್ಟ ನಿರ್ಧಾರವನ್ನು ತೆಗೆದುಕೊಂಡರೆ ಈ ರೀತಿಯಾದಂತಹ ಕೆಟ್ಟ ವ್ಯಕ್ತಿಗಳನ್ನು ನಿರ್ಣಾಮ ಮಾಡಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now