ಪ್ರತಿಯೊಬ್ಬರ ಮನೆಯಲ್ಲೂ ಕೂಡ ಕಾಫಿ ಪುಡಿಗಳನ್ನು ತಂದು ಇಡುತ್ತಾರೆ. ಕಾಫಿ ಎನ್ನುವುದು ಮನೆಯಲ್ಲಿ ಅನೇಕರ ಫೇವರೆಟ್ ಹಾಟ್ ಡ್ರಿಂಕ್. ಅನೇಕರಿಗೆ ಬೆಡ್ ಅಲ್ಲಿ ಕಾಫಿ ಕುಡಿಯದೇ ಇದ್ದರೆ ದಿನ ಆರಂಭವಾಗುವುದಿಲ್ಲ. ಇನ್ನು ಕೆಲವರು ದಿನಕ್ಕೆ ಅದೆಷ್ಟೋ ಬಾರಿ ಕಾಫಿ ಕುಡಿಯುತ್ತಿರುತ್ತಾರೆ. ಕೆಲವರು ಆಫೀಸಿಂದ ಬಂದ ಕೂಡಲೇ ಅಥವಾ ಸ್ಕೂಲ್, ಕಾಲೇಜ್ ಇಂದ ಬಂದ ಕೂಡಲೇ ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿ ಕೊಂಡಿರುತ್ತಾರೆ.
ಆ ರೀತಿ ಕಾಫಿ ಕುಡಿದಾಗ ಮಾತ್ರ ಅವರ ಎಲ್ಲಾ ಟೆನ್ಶನ್ ರಿಲ್ಯಾಕ್ಸ್ ಆಗುವುದು. ಮನೆಯಲ್ಲಿರುವ ಗೃಹಿಣಿಯರಿಗೆ ಕಾಫಿ ಒಂದು ಎನರ್ಜಿ ಡ್ರಿಂಕ್. ಬಂಧು ಮಿತ್ರರು ಬಂದಾಗ ಮೊದಲು ಉಪಚಾರ ಮಾಡುವುದೇ ಕಾಫಿ ಟೀ ಕೊಟ್ಟು, ಹೀಗೆ ನಾನಾ ಕಾರಣಗಳಿಂದಾಗಿ ಕಾಫಿ ನಮ್ಮ ಬದುಕಿನ ಅತಿ ಮುಖ್ಯ ಭಾಗವಾಗಿದೆ.
ಈ ಕಾರಣಕ್ಕಾಗಿ ಅನೇಕರು ಕಾಫಿ ಪುಡಿಯನ್ನು ತಂದು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ ಆಫರ್ ಗಳಿವೆ ಎಂದು ದೊಡ್ಡ ದೊಡ್ಡ ಡಬ್ಬಗಳನ್ನು ತಂದರೆ ಕೆಲವರು ಚಿಕ್ಕಚಿಕ್ಕ ಸ್ಯಾಷೆಟ್ ಗಳ ಸರವನ್ನೇ ಅಡಿಗೆ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಒಬ್ಬೊಬ್ಬರು ಅವರ ಐಡಿಯಾ ಪ್ರಕಾರ ಈ ರೀತಿ ಕಾಫಿ ಪುಡಿಯನ್ನು ತರಿಸಿಕೊಂಡು ಮನೆಯಲ್ಲಿ ಇಟ್ಟುಕೊಂಡು ಇರುತ್ತಾರ.
ಆದರೆ ಚಿಕ್ಕ ಸಾಶೆಟ್ ಆಗಲಿ ಅಥವಾ ದೊಡ್ಡ ಡಬ್ಬದಲ್ಲೇ ಆಗಲಿ ಅದು ಇನ್ಸ್ಟಂಟ್ ಕಾಫಿ ಪೌಡರ್ ಆಗಿದ್ದರೆ ಸ್ವಲ್ಪ ಗಾಳಿ ತಾಗಿದರೂ ಗಟ್ಟಿಯಾಗಿ ಬಿಡುತ್ತದೆ. ಓಪನ್ ಮಾಡಲಾಗದ ರೀತಿ ಅಂಟಿಕೊಂಡಿರುತ್ತದೆ. ಡಬ್ಬಗಳಲ್ಲಿ ಪುಡಿ ಸ್ಪೂನ್ ಇಂದ ತೆಗೆದುಕೊಂಡು ಹಾಕಲು ಆಗದ ರೀತಿ ಗಟ್ಟಿ ಗಟ್ಟಿಯಾಗಿರುತ್ತದೆ. ಈ ರೀತಿ ಪರಿಸ್ಥಿತಿಯನ್ನು ಪ್ರತಿಯೊಬ್ಬರೂ ಕೂಡ ಎಕ್ಸ್ಪೀರಿಯನ್ಸ್ ಮಾಡಿರುತ್ತಾರೆ.
ಆ ಸಮಯದಲ್ಲಿ ಚಿಕ್ಕ ಸ್ಯಾಷೆಟ್ ಆಗಿದ್ದರೆ ಪರವಾಗಿಲ್ಲ ಎಂದು ಬಿಡಬಹುದು. ಆದರೆ ಮನೆಯಲ್ಲಿ ಅನಿವಾರ್ಯವಾಗಿ ಕಾಫಿ ಬೇಕಾದಾಗ ಕಾಫಿ ಪುಡಿ ಮತ್ತೊಮ್ಮೆ ತಂದು ಕೊಡಲು ಯಾರು ಇಲ್ಲದೆ ಇದ್ದಾಗ ಅದರಲ್ಲೇ ಕಾಫಿ ಮಾಡುವ ಅನಿವಾರ್ಯತೆ ಬರುತ್ತದೆ ಅಥವಾ ದೊಡ್ಡ ಡಬ್ಬಗಳಿಗೆ ಹೆಚ್ಚು ಬೆಲೆ ಕೊಟ್ಟು ತರುವುದರಿಂದ ಬಿಸಾಕಲು ಮನಸ್ಸು ಬರುವುದಿಲ್ಲ. ಇಂತಹ ಸಮಯಗಳಲ್ಲಿ ನೀವು ಒಂದು ಒಳ್ಳೆಯ ಐಡಿಯಾ ಮಾಡಿ ನಿಮ್ಮ ಮನೆಗೆ ಕಾಫಿ ಪುಡಿ ವ್ಯರ್ಥವಾಗದಂತೆ ನೋಡಿಕೊಳ್ಳಬಹುದು.
ನೀವು ಮಾಡಬೇಕಾಗಿರುವುದು ಇಷ್ಟೇ. ನೀವೇನಾದರೂ ಕಾಫಿಪುಡಿ ಬಳಸುತ್ತಿದ್ದರೆ ನಿಮಗೆ ಎಷ್ಟು ಬೇಕೋ ಅಷ್ಟು ಹಾಕಿಕೊಂಡು ಉಳಿದಿರುವ ಪೌಡರನ್ನು ಹಾಗೇ ಓಪನ್ ಆಗಿ ಇಡುವ ಬದಲು ನೀಟಾಗಿ ಫೋಲ್ಡ್ ಮಾಡಿ ಒಂದು ರಬ್ಬರ್ ಬ್ಯಾಂಡ್ ಹಾಕಿ ಸುತ್ತಿಡಿ. ಈ ರೀತಿ ಆದಾಗ ಅದರಲ್ಲಿ ಗಾಳಿ ಹೋಗಲು ಆಗುವುದಿಲ್ಲ ಹಾಗಾಗಿ ಅದು ಗಟ್ಟಿ ಆಗುವುದಿಲ್ಲ.
ಹಾಗಿದ್ದರೂ ಕೂಡ ಒಂದು ವೇಳೆ ಗಟ್ಟಿಯಾಗಿದೆ ಎಂದರೆ ಅಥವಾ ಡಬ್ಬಗಳಲ್ಲಿ ಇರುವುದು ಕಲ್ಲಿನ ರೀತಿ ಆಗಿದೆ ಎಂದರೆ ಒಂದು ಸ್ಟೀಲ್ ಬೌಲ್ ತೆಗೆದುಕೊಂಡು ಅದಕ್ಕೆ ಗಟ್ಟಿಯಾದ ಕಾಫಿ ಪೌಡರ್ ಅನ್ನು ಹಾಕಿ. ಅದು ಎಷ್ಟಿದೆ ಆ ಅಳತೆ ನೋಡಿಕೊಂಡು ಅದಕ್ಕೆ ತಕ್ಕ ಅಳತೆ ಬಿಸಿ ನೀರನ್ನು ಹಾಕಿ ಡಿಕಾಕ್ಷನ್ ರೀತಿ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ ಈಗ ಅದನ್ನು ಫ್ರಿಡ್ಜಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ. ನಿಮಗೆ ಯಾವಾಗ ಕಾಫಿ ಬೇಕು ಆಗ ಬಿಸಿ ಹಾಲಿನ ಜೊತೆ ಇದನ್ನು ಎಷ್ಟು ಬೇಕೋ ಅಷ್ಟು ಅಳತೆಗೆ ಹಾಕಿಕೊಂಡು ಉಪಯೋಗಿಸಿಕೊಳ್ಳಿ. ಇದೇ ಟಿಪ್ ಅನ್ನು ನೀವು ಹಾರ್ಲಿಕ್ಸ್, ಬೂಸ್ಟ್ ಇವು ಗಟ್ಟಿಯಾಗಲು ಕೂಡ ಅಪ್ಲೈ ಮಾಡಬಹುದು.