ಮೊದಲಲ್ಲ ಮಂಡಿ ನೋವು, ಪಾದದ ನೋವು, ಹಿಮ್ಮಡಿ ನೋವು ಇವುಗಳನ್ನೆಲ್ಲ ವಯೋಸಹಜ ಕಾಯಿಲೆ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ನಾವು ಅಳವಡಿಸಿಕೊಂಡಿರುವ ಜೀವನ ಶೈಲಿ ಕಾರಣದಿಂದಾಗಿ ಚಿಕ್ಕ ವಯಸ್ಸಿಗೆ ಇಂಥಹ ಸಮಸ್ಯೆಗಳು ಭಾದಿಸುತ್ತಿವೆ. ಪುರುಷ ಮತ್ತು ಮಹಿಳೆ ಮಕ್ಕಳು ಹಾಗೂ ವೃದ್ದಕರು ಎನ್ನುವ ವ್ಯತ್ಯಾಸವಿಲ್ಲದೆ ಎಲ್ಲರೂ ಸಹ ಇಂತಹ ನೋವುಗಳಿಂದ ಬಳಲುತ್ತಿದ್ದಾರೆ.
ಇತ್ತೀಚೆಗಂತೂ ಕಾಲು ನೋವುಗಳ ಜೊತೆಗೆ ಹಿಮ್ಮಡಿ ನೋವು ಮತ್ತು ಪಾದಗಳ ನೋವು ಎನ್ನುವುದು ಬಹಳ ಎಲ್ಲರನ್ನು ಕಾಡುತ್ತಿರುವ ಗಂಭೀರ ಕಾಯಿಲೆ. ಈ ನೋವಿನಿಂದ ಹೆಜ್ಜೆ ಇಡಲು ಆಗುತ್ತಿಲ್ಲ ಆರಾಮವಾಗಿ ಓಡಾಡಲು ಆಗುತ್ತಿಲ್ಲ ಬಹಳ ಹಿಂಸೆ ಆಗುತ್ತಿದೆ ನೋವು ಆಗುತ್ತಿದೆ ಅಥವಾ ಔಷಧಿಗಳನ್ನು ತೆಗೆದುಕೊಂಡರು ಅಥವಾ ವೈದ್ಯರಲ್ಲಿ ಸಂಪರ್ಕಿಸಿದರು ಯಾವುದರಿಂದಲೂ ಏನು ಪ್ರಯೋಜನ ಆಗುತ್ತಿಲ್ಲ ಎನ್ನುವ ಬೇಸರ ತೋರುತ್ತಿದ್ದರೆ ಈ ಅಂಕಣವನ್ನು ಓದಿ.
ಪಾದ ನೋವು ಹಾಗೂ ಹಿಮ್ಮಡಿ ನೋವು ಸಮಸ್ಯೆ ಇದ್ದರೆ 21 ದಿನಗಳಲ್ಲಿ ನಾವು ಹೇಳುವ ಈ ಮಾರ್ಗ ಅನುಸರಿಸಿದರೆ ನೀವು ಅದರಿಂದ ಹೊರ ಬರಬಹುದು. ಇದಕ್ಕಾಗಿ ಹಣ ಖರ್ಚಾಗುವ ಭಯವು ಇಲ್ಲ, ತರಬೇತಿಗಳಿಗಾಗಿ ಶಿಬಿರ ಸೇರುವ ಅವಶ್ಯಕತೆಯೂ ಇಲ್ಲ. ನೀವು ನಿಮ್ಮ ಮನೆಯಲ್ಲಿಯೇ ಇದ್ದುಕೊಂಡು ಈ ನೋವಿನಿಂದ ಉಚಿತವಾಗಿ ಆಚೆ ಬರಬಹುದು ಅದು ಹೇಗೆಂರೆ ಸಾಮಾನ್ಯವಾಗಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಎಲ್ಲರೂ ವಾಕಿಂಗ್ ಮಾಡುತ್ತಾರೆ ಅಥವಾ ವ್ಯಾಯಾಮ ಮಾಡುತ್ತಾರೆ.
ಈ ಸಮಯದಲ್ಲಿ ಈ ರೀತಿ ಮಾಡಿ ಸಾಕು. ಮೊದಲಿಗೆ ನಿಮ್ಮ ಪಾದದ ಬೆರಳುಗಳ ಮೇಲೆ ನಿಮಗೆ ಎಷ್ಟು ದೂರ ಸಾಧ್ಯ ಅಷ್ಟು ದೂರ ಜಾಗಿಂಗ್ ಮಾಡಿ, ಹೀಗೆ ಜಾಗಿಂಗ್ ಮಾಡಿದಾಗ ನಿಮ್ಮ ಕಾಲು ಬೆರಳುಗಳ ಮೇಲೆ ಸಂಪೂರ್ಣವಾಗಿ ರಕ್ತಸಂಚಲನೆ ಶುರು ಆಗುತ್ತದೆ. ಈ ರೀತಿ ರಕ್ತ ಸಂಚರಣೆ ಸರಿಯಾದ ಕ್ರಮದಲ್ಲಿ ನಡೆದರೆ ನೋವುಗಳು ಕಡಿಮೆ ಆಗುತ್ತದೆ. ಮತ್ತು ರಿವರ್ಸ್ ಬರುವಾಗ ತಿರುಗಿ ಬರದೆ ಹಿಮ್ಮುಖವಾಗಿ ಜಾಗಿಂಗ್ ಮಾಡುತ್ತಾ ಹಿಂದೆ ಬನ್ನಿ.
ಆಗ ಹಿಂದಿನ ಸ್ನಾಯುಗಳ ಮೇಲೆ ಒತ್ತಡ ಬೀಳುವುದರಿಂದ ನೋವು ಕಡಿಮೆ ಆಗುತ್ತದೆ. ಇದೇ ರೀತಿ ಪಾದದ ಬೆರಳುಗಳಿಂದ ಆದಮೇಲೆ ಹಿಮ್ಮಡಿಯನ್ನು ಉಪಯೋಗಿಸಿಕೊಂಡು ಜಾಗಿಂಗ್ ಮಾಡಿ ಈ ರೀತಿ ಹಿಮ್ಮಡಿಗಳಿಂದ ಜಾಗಿಂಗ್ ಮಾಡಲು ಸಾಧ್ಯವಾಗದೆ ಇದ್ದರೆ ವಾಕಿಂಗ್ ಕೂಡ ಮಾಡಬಹುದು. ಮೊದಲು ಅಭ್ಯಾಸ ಮಾಡುವಾಗ ಹಿಂಸೆ ಎನಿಸಬಹುದು ಅಥವಾ ತಪ್ಪಿ ಬೀಳಬಹುದು ಆದರೆ ಯಾವುದೇ ಕಾರಣಕ್ಕೂ ನಿಲ್ಲಿಸದೆ ಮುಂದುವರೆಯಿರಿ.
ಜಾಗಿಂಗ್ ಮಾಡಿದರೆ ಹಿಮ್ಮಡಿಗಳನ್ನು ಉಪಯೋಗಿಸಿಕೊಂಡು ಬೆರಳುಗಳು ನೆಲಕ್ಕೆ ತಾಗದೆ ಹಾಗೆ ಹಿಮ್ಮಡಿಯಿಂದಲೇ ಸ್ವಲ್ಪ ದೂರ ವಾಕಿಂಗ್ ಮಾಡಿ ಮತ್ತು ಹಿಂದೆ ಬರುವಾಗ ಈ ಸಲವೂ ಕೂಡ ತಿರುಗಿ ಬರದ ಹಿಮ್ಮುಖವಾಗಿ ಹಿಮ್ಮಡಿಗಳನ್ನು ಉಪಯೋಗಿಸಿಕೊಂಡು ವಾಕಿಂಗ್ ಮಾಡುತ್ತಾ ಹಿಂದಕ್ಕೆ ಬನ್ನಿ.
ಈ ರೀತಿ ಮಾಡುವುದರಿಂದ 21 ದಿನಗಳಲ್ಲಿ ನೀವು ಸಂಪೂರ್ಣವಾಗಿ ನೋವಿನಿಂದ ಆಚೆ ಬರುತ್ತಿರಿ ಆದರೆ 21 ದಿನಗಳು ಕೂಡ ತಪ್ಪದೇ ದಿನಕ್ಕೆ 30 ನಿಮಿಷಗಳ ಸಮಯವಾದರೂ ಈ ರೀತಿಯ ಒಂದು ವ್ಯಾಯಾಮವನ್ನು ಮಾಡಲೇಬೇಕು ಈ ವ್ಯಾಯಾಮವನ್ನು ಪಾದಗಳ ಹಾಗೂ ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಎಲ್ಲಾ ವಯೋಮಾನದವರು ಸಹ ಮಾಡಬಹುದು. ಈ ನೋವಿನ ನಿವಾರಣೆಗೆ ಇರುವ ಇನ್ನೂ ಸರಳ ಮಾರ್ಗಗಳಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.