ಕರ್ನಾಟಕದ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳ ಅನುಕೂಲತೆ ಸಿಗುತ್ತಿದೆ. ಇದರಲ್ಲಿ ಮುಖ್ಯವಾಗಿ ಇಲಾಖೆಯಲ್ಲಿ ನೋಂದಣಿಯಾಗಿ ಲೇಬರ್ ಕಾರ್ಡ್ ಹೊಂದಿರುವವರ ಮೊದಲ ಇಬ್ಬರು ಮಕ್ಕಳಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಉಚಿತ ಸ್ಕಾಲರ್ಶಿಪ್ ಸಿಗಲಿದೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ತರಗತಿಗಳಿಗೆ ಅನುಗುಣವಾಗಿ 5000 ದಿಂದ ಇವತ್ತು 50,000 ವರೆಗೂ ಕೂಡ ಸ್ಕಾಲರ್ಶಿಪ್ ದೊರೆಯಲಿದೆ.
ಶಿಶು ವಿಹಾರ, ಒಂದನೇ ತರಗತಿಯಿಂದ ಸ್ನಾತಕೋತರ ಪದವಿ, ತಾಂತ್ರಿಕ ಪದವಿ, ತಾಂತ್ರಿಕೇತರ ಪದವಿಗೆ ಅಡ್ಮಿಶನ್ ಪಡೆದಿರುವ ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಈ ಸ್ಕಾಲರ್ಶಿಪ್ ಸಿಗುತ್ತದೆ. ಈಗಾಗಲೇ ಸರ್ಕಾರವು 2022-23 ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಂದ ಸ್ಕಾಲರ್ ಶಿಪ್ ಗಾಗಿ ಅರ್ಜಿ ಕೂಡ ಆಹ್ವಾನ ಮಾಡಿತ್ತು. ಆದರೆ ಕಡೆ ಗಳಿಗೆಯಲ್ಲಿ ಇದರಲ್ಲಿ ಬದಲಾವಣೆಯೊಂದು ಆಗಿದೆ.
ಈ ಬಗ್ಗೆ ಎರಡು ತಿಂಗಳ ಹಿಂದೆಯೇ ಸೂಚನೆ ಹೊರಡಿಸಿ ಅರ್ಜಿ ಆಹ್ವಾನ ಮಾಡಿದ ಸರ್ಕಾರವು ಅರ್ಜಿ ಸಲ್ಲಿಸಲು ಇದ್ದ ಕಡೆ ದಿನಾಂಕವನ್ನು ನಾನಾ ಕಾರಣಗಳಿಂದ ಹೆಚ್ಚುವರಿಯಾಗಿ ಒಂದು ತಿಂಗಳ ಕಾಲ ವಿಸ್ತರಿಸಿದೆ. 15 ಏಪ್ರಿಲ್ 2023 ಕ್ಕೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಎಂದು ಸರ್ಕಾರ ಹೇಳಿತ್ತು ಆದರೆ ಈಜ ಒಂದು ತಿಂಗಳ ಕಾಲವಕಾಶ ಹೆಚ್ಚಿಗೆ ಮಾಡಿ 15ಮೇ, 2023ರವರೆಗೆ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಮಯ ಮಾಡಿಕೊಟ್ಟಿದೆ.
ಈ ಒಂದು ಬದಲಾವಣೆಯಿಂದ ಇನ್ನು ಸಹ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದ ಅನೇಕ ವಿದ್ಯಾರ್ಥಿಗಳಿಗೆ ಸಹಾಯ ಆಗಲಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ವಿಷಯ ಎಲ್ಲರಿಗೂ ತಲುಪುವಂತೆ ಮಾಡಿ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿದ್ಯಾರ್ಥಿ ವೇತನ ಪಡೆಯಲು ಬೇಕಾಗಿರುವ ದಾಖಲೆಗಳು:-
● ವಿದ್ಯಾರ್ಥಿ ಆಧಾರ್ ಕಾರ್ಡ್ ಮತ್ತು ಸ್ಯಾಟ್ಸ್ ಸಂಖ್ಯೆ
● ತಂದೆ ತಾಯಿಯ ಆಧಾರ್ ಕಾರ್ಡ್
● ಲೇಬರ್ ಕಾರ್ಡ್ ಮತ್ತು ಪಾಸ್ ಪುಸ್ತಕ
ತರಗತಿಗನುಸಾರ ಸಿಗುವ ಸಹಾಯಧನದ ಪಟ್ಟಿ:-
● ಶಿಶುವಿಹಾರ(ಅಂಗನವಾಡಿ)/ನರ್ಸರಿ—5,000ರೂ
● 1ರಿಂದ 4ನೇ ತರಗತಿ—5,000ರೂ
● 5 ರಿಂದ 8ನೇ ತರಗತಿ—-8,000ರೂ
● 9 & 10 ನೇ ತರಗತಿ—-12,000ರೂ
● ಪ್ರಥಮ & ದ್ವಿತೀಯ ಪಿ.ಯು.ಸಿ—- 15,000ರೂ
● ಪದವಿ—-25,000ರೂ
● ಡಿ.ಎಡ್—–25,000ರೂ
● ಬಿ.ಎಡ್—35,000ರೂ
● ಐ.ಟಿ.ಐ & ಡಿಪ್ಲಮೋ—-20,000ರೂ
● ಬಿ.ಎಸ್ಸಿ/GNM ನರ್ಸಿಂಗ್/ PARAMEDICAL—40,000ರೂ
● ಸ್ನಾತಕೋತ್ತರ ಪದವಿ—-35,000ರೂ
● ಇಂಜಿನಿಯರಿಂಗ್—-50,000ರೂ
ಅರ್ಜಿ ಸಲ್ಲಿಸುವ ಪ್ರಕ್ರಿಯೆ:-
● ಸರ್ಕಾರ ಅಧಿಸೂಚನೆ ಹೊರಡಿಸಿ ತಿಳಿಸಿರುವ ಪ್ರಕಾರ ಆ ಎಲ್ಲಾ ಅರ್ಹತೆಗಳನ್ನು ಮತ್ತು ದಾಖಲೆ ಪತ್ರಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
● ಹೊಸದಾಗಿ ತಿಳಿಸಲಾದ ಕಡೆ ದಿನಾಂಕ ಅಂದರೆ 15 ಮೇ, 2023ರ ಒಳಗಾಗಿ ಹತ್ತಿರದಲ್ಲಿರುವ ಯಾವುದೇ CSC ಕೇಂದ್ರಕ್ಕೆ ಭೇಟಿಕೊಟ್ಟು ಅರ್ಜಿ ಸಲ್ಲಿಸಬಹುದು.
● ಒಂದು ವೇಳೆ CSC ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಪಕ್ಷದಲ್ಲಿ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕ:-
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 15.05.2023