ನಿಮ್ಮ ಜಮೀನಿನ ಸಂಪೂರ್ಣ ಹದ್ದುಬಸ್ತನ್ನು ಸರಿಯಾಗಿ ಇಟ್ಟುಕೊಳ್ಳು ವಂತಹ ಜವಾಬ್ದಾರಿ ಹಾಗೂ ಹಕ್ಕು ನಿಮ್ಮ ಮೇಲೆ ಇರುತ್ತದೆ. ಇದನ್ನು ಭೂ ಕಂದಾಯ ಅಧಿನಿಯಮದ 1964 ರ 145 ಸೆಕ್ಷನ್ ನಲ್ಲಿ ಸೂಚಿಸ ಲಾಗಿದೆ. ಇದಾಗಿಯೂ ಪೂರ್ವ ಕಾಲದಿಂದಲೂ ನಿಮ್ಮ ಸರ್ವೆ ನಂಬರ್ ಅಳತೆ ಕಾರ್ಯವನ್ನು ನಿರ್ವಹಿಸದೆ ಇರುವುದರಿಂದ. ಪಕ್ಕದ ಜಮೀನಿನ ಮಾಲೀಕರು ನಿಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಹೇಗೆ ತೆರವುಗೊಳಿಸುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ನಿಮ್ಮ ಆಧಾರ್ ಕಾರ್ಡ್ ಪಹಣಿ ಮತ್ತು ಅಗತ್ಯ ಶುಲ್ಕದೊಂದಿಗೆ ನಿಮ್ಮ ಹೋಬಳಿಯ ನಾಡ ಕಚೇರಿಗೆ ಭೇಟಿ ನೀಡಿ ಹದ್ದುಬಸ್ತು ಸರ್ವೆಗೆ ಹಣವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು. ಹದ್ದುಬಸ್ತು ಅಳತೆ ಭೂಮಾಪಕರಿಗೆ ವರ್ಗಾಯಿಸಿದ ನಂತರ ಅವರು ನಿಮಗೆ ದೂರವಾಣಿಯ ಮೂಲಕ ಸಂಪರ್ಕಿಸಿ ನಿಮ್ಮ ಅಕ್ಕ ಪಕ್ಕದ ಜಮೀನಿನವರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಎಲ್ಲರಿಗೂ ಒಂದು ದಿನಾಂಕವನ್ನು ನಿಗದಿಪಡಿಸಿ ಒಂದು ನೋಟಿಸ್ ಅನ್ನು ಪ್ರತಿ ಯೊಬ್ಬರಿಗೂ ಕೂಡ ಕಳುಹಿಸುತ್ತಾರೆ.
ಅಳತೆಯ ದಿನದಂದು ಬಂದು ಹದ್ದು ಬಸ್ತು ಮಾಡಿ ನಿಮ್ಮ ಜಮೀನಿನ ಸುತ್ತಳತೆಗೆ ಬಾಂದ್ಕಲ್ ಇಡುತ್ತಾರೆ. ಪಕ್ಕದ ಜಮೀನಿನವರು ನಿಮ್ಮ ಜಾಗವನ್ನು ಏನಾದರೂ ಒತ್ತುವರಿ ಮಾಡಿರುವುದು ಕಂಡು ಬಂದಾಗ ಗ್ರಾಮದಲ್ಲಿ ಮುಖಂಡರ ಸಮಕ್ಷಮ ಬಗೆಹರಿಸಿಕೊಂಡು ಒತ್ತುವರಿಯನ್ನು ತೆರವು ಮಾಡಲು ಭೂಮಾಪಕರು ತಿಳಿಸುತ್ತಾರೆ. ಇಲ್ಲವಾದರೆ ಹದ್ದು ಬಸ್ತು ನಕ್ಷೆ ತಯಾರಿಸಿ ಯಾರೆಲ್ಲ ಒತ್ತುವರಿ ಮಾಡಿದ್ದಾರೆ ಹಾಗೂ ಎಷ್ಟು ವಿಸ್ತೀರ್ಣ ಒತ್ತುವರಿ ಯಾಗಿದೆ ಅನ್ನೋದನ್ನ ವಿವರವಾದ ವರದಿಯೊಂದಿಗೆ ಮೋಜಿನಿ ತಂತ್ರಾಂಶಕ್ಕೆ ಅಪ್ಲೋಡ್ ಮಾಡುತ್ತಾರೆ.
ಪಕ್ಕದ ಜಮೀನಿನ ಮಾಲೀಕರು ಒತ್ತುವರಿಯನ್ನು ಬಿಡಲು ಒಪ್ಪದೇ ಇದ್ದಲ್ಲಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಆಗ ಹದ್ದುಬಸ್ತು ನಕ್ಷೆ ಹಾಗೂ ವರದಿ ನ್ಯಾಯಾಲಯದಲ್ಲಿ ಪ್ರಮುಖವಾದ ಆಧಾರವಾಗಿರುತ್ತದೆ. ಅಳತೆ ಕಾರ್ಯವನ್ನು ನಿರ್ವಹಿಸುವಾಗ ಅಡ್ಡಿ ಮಾಡಿದ್ದಲ್ಲಿ ಭೂಮಾಪಕರು ಇನ್ನೊಂದು ದಿನವನ್ನು ನಿಗದಿಪಡಿಸಿ ಸೂಕ್ತ ಪೊಲೀಸ್ ಬಂದೋ ಬಸ್ತಿನಲ್ಲಿ ಅಳತೆ ಕಾರ್ಯವನ್ನು ನಿರ್ವಹಿಸುತ್ತಾರೆ. ಅಕ್ಕ ಪಕ್ಕದ ಜಮೀನಿನವರು ನ್ಯಾಯಾಲಯದಿಂದ ಏನಾದರೂ ತಡೆ ಆಜ್ಞೆ ತಂದಿದ್ದರೆ ಅಂದರೆ ಕೋರ್ಟ್ ನಿಂದ ಸ್ಟೇ ತಂದಿದ್ದರೆ ಅಳತೆ ಕಾರ್ಯವನ್ನು ನಿರ್ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಕೆಲವು ಸಲ ಅಳತೆ ಕಾರ್ಯದ ಸಮಯದಲ್ಲಿ ಶಾಂತಿಭಂಗ ಉಂಟಾಗಬಹುದು ಎಂದು ನಿಮಗೆ ಮೊದಲೇ ತಿಳಿದಿದ್ದರೆ, ಭೂಮಾಪಕರಿಗೆ ಮೊದಲೇ ತಿಳಿಸಿ ಸೂಕ್ತ ಪೊಲೀಸ್ ಬಂದೋಬಸ್ತಿಗೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ. ನ್ಯಾಯಾಲಯದಲ್ಲಿ ಹದ್ದುಬಸ್ತಿನ ನಕ್ಷೆ, ಪಹಣಿ, MR ಪ್ರತಿ ಅಂದರೆ ಮ್ಯುಟೇಶನ್ ರಿಜಿಸ್ಟರ್, ನೊಂದಣಿ ಪತ್ರಗಳಿಗೆ ವಕೀಲರ ಮೂಲಕ ಅರ್ಜಿಯನ್ನು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು.
ಎವಿಕ್ಷನ್ ಆರ್ಡರ್ ಅಥವಾ ಪ್ರೊಟೆಕ್ಷನ್ ಆರ್ಡರ್ ತೆಗೆದುಕೊಂಡು ಪೊಲೀಸರ ಸಮಕ್ಷಮ ಒತ್ತುವರಿಯನ್ನು ತೆರೆವುಗೊಳಿಸುವುದಕ್ಕೆ ನ್ಯಾಯಾಲಯ ಆದೇಶವನ್ನು ಕೊಡುತ್ತದೆ. ಗ್ರಾಮದಲ್ಲಿಯೇ ಎಲ್ಲರೂ ಒಟ್ಟಾಗಿ ಸೇರಿ ಪರಸ್ಪರ ಮಾತನಾಡುವುದರ ಮೂಲಕ ಸಮಸ್ಯೆಗಳನ್ನು ದೂರ ಮಾಡಿ ಕೊಳ್ಳುವುದು ಅಂದರೆ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳು ವುದು ಉತ್ತಮ.
ಜೊತೆಗೆ ಅಕ್ಕಪಕ್ಕದ ಜಮೀನಿನವರು ಸಹಾಯಕ್ಕೆ ಬೇಕಾಗುತ್ತಾರೆ ಎನ್ನುವಂತಹ ಅಂಶವನ್ನು ಯಾರೂ ಕೂಡ ಮರೆಯ ಬಾರದು. ಹಾಗೆಯೇ ಪ್ರತಿಯೊಬ್ಬರೂ ಕೂಡ ಒಗ್ಗಟ್ಟಿನಲ್ಲಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೋರ್ಟ್ ಮೆಟ್ಟಿಲೇರುವುದು ಮುನ್ನ, ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟು ಕೊಂಡಿರುವುದು ಬಹಳ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.