ಕಂಪ್ಯೂಟರ್ ಶಿಕ್ಷಣ ಎನ್ನುವುದು ಈಗಿನ ಕಾಲದಲ್ಲಿ ಉದ್ಯೋಗ ಮಾಡುವುದಕ್ಕೆ ಒಂದು ಅವಶ್ಯಕ ಸಂಗತಿಯಾಗಿದೆ ಎಂದು ಹೇಳಬಹುದು. ಕಂಪ್ಯೂಟರ್ ಶಿಕ್ಷಣದಲ್ಲಿ ನಾನಾ ವಿಭಾಗಗಳು ಇದ್ದು, ಪ್ರಸ್ತುತವಾಗಿ ಗ್ರಾಫಿಕ್ ಡಿಸೈನಿಂಗ್ ಎನ್ನುವುದು ಅತಿ ಹೆಚ್ಚಿನ ಉದ್ಯೋಗವಕಾಶವನ್ನು ಸೃಷ್ಟಿಸುತ್ತಿದೆ.
ಕಾಲೇಜು ಶಿಕ್ಷಣವನ್ನು ಮುಗಿಸಿದ ಬಳಿಕ ಈ ರೀತಿ ಗ್ರಾಫಿಕ್ ಡಿಸೈನ್ ಬಗ್ಗೆ ಆಕರ್ಷಕರಾಗುವವರು ಇದರ ಸಂಬಂಧಪಟ್ಟ ಕೋರ್ಸ್ ಗಳನ್ನು ಕಲಿತು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು. ಆದರೆ ಸಮಸ್ಯೆ ಏನೆಂದರೆ ಹಳ್ಳಿಗಳಲ್ಲಿ ಯುವಕರಿಗೆ ಇವುಗಳನ್ನು ಕಲಿಸಲು ಸೂಕ್ತವಾದ ತರಬೇತಿ ಶಾಲೆಗಳು ಇರುವುದಿಲ್ಲ ದೂರದ ಪಟ್ಟಣಗಳಲ್ಲಿ ಇದ್ದರೆ ಶುಲ್ಕವೇ ಹೆಚ್ಚಿನ ಮೊತ್ತದಲ್ಲಿರುತ್ತದೆ ಮತ್ತು ಊಟ ವಸತಿಗೆ ತೊಂದರೆ ಇರುತ್ತದೆ.
ಈ ಸುದ್ದಿ ಓದಿ:- 1 ಲೀಟರ್ ಹಾಲಿಗೆ 7 ಸಾವಿರ ತಿಂಗಳಿಗೆ 1 ಲಕ್ಷ ಆದಾಯ ಗ್ಯಾರೆಂಟಿ.!
ನೀವು ಕೂಡ ಇಂತಹ ಒಂದು ಸಮಸ್ಯೆಯಿಂದ ಬಳಲಿದ್ದರೆ ಇದಕ್ಕೊಂದು ಪರಿಹಾರವೂ ಸಂಸ್ಥೆಯಿಂದ ಸಿಗುತ್ತಿದೆ ಕರ್ನಾಟಕದಲ್ಲಿ ಕಳೆದ ಹಲವು ವರ್ಷಗಳಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ರುಡ್ ಸೆಡ್ ಸಂಸ್ಥೆ (Rudset Institute) ಗ್ರಾಮೀಣ ಭಾರತದ ಯುವ ಜನತೆಗೆ ಉದ್ಯೋಗ ಸೃಷ್ಟಿಸಿಕೊಡುವ ಕಾರಣದಿಂದಾಗಿ.
ಉದ್ಯೋಗ ಪೂರಕ ಕೌಶಲ್ಯ ತರಬೇತಿಗಳಾದ ಕೃಷಿಗೆ ಸಂಬಂಧಿಸಿದ ತರಬೇತಿ, ಟೈಲರಿಂಗ್, ಡ್ರೈವಿಂಗ್, ಬ್ಯೂಟಿ ಪಾರ್ಲರ್, ಕಂಪ್ಯೂಟರ್ ಶಿಕ್ಷಣಕ್ಕೆ ಸಂಬಂಧಿತ ಕೋರ್ಸ್ ಗಳನ್ನು ಉಚಿತವಾಗಿ ಕಲಿಸುತ್ತಿದೆ. ಈ ಬಾರಿ ಕಂಪ್ಯೂಟರ್ ನಲ್ಲಿ DTP ಮತ್ತು ಗ್ರಾಫಿಕ್ ಡಿಸೈನ್ ತರಬೇತಿ ನೀಡಲು ನಿರ್ಧರಿಸಲಾಗಿದೆ.
ರಾಜ್ಯದ ಆಸಕ್ತ ಅಭ್ಯರ್ಥಿಯು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಅದಕ್ಕಾಗಿ ಈ ಕುರಿತ ಹೆಚ್ಚಿನ ಮಾಹಿತಿ ಹೀಗಿದೆ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ತರಬೇತಿ ನೀಡುವ ಸಂಸ್ಥೆಯ ಹೆಸರು:- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ರುಡ್ ಸೆಡ್ ಸಂಸ್ಥೆ (Rudset Institute)
ಈ ಸುದ್ದಿ ಓದಿ:- ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 2 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!
ಒಟ್ಟು ತರಬೇತಿ ದಿನಗಳು:- 45 ದಿನಗಳು
ಕೋರ್ಸ್ ಹೆಸರು:- DTP / ಗ್ರಾಫಿಕ್ ಡಿಸೈನಿಂಗ್
ತರಬೇತಿ ನಡೆಯುವ ಸ್ಥಳ:- ಬೆಂಗಳೂರು
ಸಿಗುವ ಸೌಲಭ್ಯಗಳು:-
* 45 ದಿನಗಳ DTP / ಗ್ರಾಫಿಕ್ ಡಿಸೈನಿಂಗ್ ಉಚಿತವಾಗಿ ಕಲಿಸುವುದರ ಜೊತೆಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುತ್ತದೆ.
* ತರಬೇತಿ ಮುಗಿದ ಬಳಿಕ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ
ತರಬೇತಿಯಲ್ಲಿ ಕಲಿಸುವ ಅಂಶಗಳು:-
* ಲೇಔಟ್
* ಟೈಪೋಗ್ರಫಿ
* ಚಿತ್ರ ಸಂಪಾದನೆ
* ಡೆಸ್ಕ್ ಟಾಪ್ ಪಬ್ಲಿಷಿಂಗ್
* ಸಾಫ್ಟ್ ವೇರ್ ನಲ್ಲಿ Adobe
* ಇನ್ – ಡಿಸೈನ್
* ಕೌಶಲ್ಯ ಪ್ರಕಟಣೆ
* ಮುದ್ರಣ
* ವೆಬ್ ಡಿಸೈನ್
ಈ ತರಬೇತಿಗೆ ಪಾಲ್ಗೊಳ್ಳಲು ಇರುವ ಕಂಡೀಷನ್ ಗಳು:-
* 18 ರಿಂದ 45 ವರ್ಷದ ಒಳಗಿನವರಾಗಿರಬೇಕು
* ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಓದಲು ಬರೆಯಲು ಬಲ್ಲವರಾಗಿರಬೇಕು
* ಆಧಾರ್ ಕಾರ್ಡ್ ಹೊಂದಿರಬೇಕು
* ಗ್ರಾಮೀಣ ಭಾಗದಿಂದ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಈ ಸುದ್ದಿ ಓದಿ:- ವಾಹನ ಮಾಲೀಕರಿಗೆ ಅಪ್ಡೇಟ್, HSRP ನಂಬರ್ ಪ್ಲೇಟ್ ಹಾಕದವರಿಗೆ RTO ನಿಂದ ಹೊಸ ಸೂಚನೆ.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭಗೊಂಡಿದೆ
* ಅರ್ಜಿ ಸಲ್ಲಿಸಲು ಕಡೆಯ ದಿನಾಂಕ – 15 ಜೂನ್, 2024.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಿ:-
ರೂಡ್ಸೆಟ್ ಸಂಸ್ಥೆ,
ಅರಿಶಿಣ ಕುಂಟೆ,
ನೆಲಮಂಗಲ ತಾಲ್ಲೂಕೂ,
ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಸಹಾಯವಾಣಿ ಸಂಖ್ಯೆ:- 9740982585