ಹಾಸಿಗೆ ಹಿಡಿದ ಲೀಲಾವತಿ, ಕಣ್ಣೀರು ಹಾಕ್ತ ನನ್ನ ಮಗನನ್ನು ಕೈ ಬಿಡಬೇಡಿ ಅಂತ ಬೇಡಿಕೊಳ್ಳಿತಿರೋ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯಾದಂತಹ ಲೀಲಾವತಿ ಅವರು 400ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ಆಗಿನ ಕಾಲದಲ್ಲಿ ಸ್ಟಾರ್ ನಟರುಗಳ ಜೊತೆಯಲ್ಲಿ ತಮ್ಮ ಸಿನಿ ಪಯಣವನ್ನು ಮುಂದುವರಿಸಿದ್ದರು. ಇವರು ನಟಿಸಿರುವಂತಹ ಎಲ್ಲಾ ಸಿನಿಮಾಗಳು ಸಹ ಆಗಿನ ಕಾಲದಲ್ಲಿ ಹಿಟ್ ಆದಂತಹ ಸಿನಿಮಾಗಳು ಹಾಗೆಯೇ ಲೀಲಾವತಿ ಅವರನ್ನು ಆಗಿನ ಕಾಲದಲ್ಲಿ ಟಾಪ್ ಹೀರೋಯಿನ್ ಗಳ ಪಟ್ಟಿಯಲ್ಲಿ ನಾವು ನೋಡಬಹುದು. ಲೀಲಾವತಿ ಅವರ ಚಿತ್ರರಂಗದೊಂದಿಗೆ ಪಯಣ ಅಷ್ಟೊಂದು ಸುಲಭವಾಗಿರಲಿಲ್ಲ, ಚಿತ್ರರಂಗದಲ್ಲಿ ಉಳಿದುಕೊಳ್ಳಲು ಸಾಕಷ್ಟು ರೀತಿಯಾದಂತಹ ಸಾಹಸಗಳನ್ನು ಎದುರಿಸಬೇಕಾಗಿತ್ತು. ಎಂತಹದ್ದೇ ಕಷ್ಟಗಳು ಬಂದರೂ ಸಹಿರಿಯೇ ಇವರು ಚಿತ್ರರಂಗದೊಂದಿಗೆ ನಂಟನ್ನು ಬಿಡಲಿಲ್ಲ ಬದಲಿಗೆ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದು ನಿಂತರು.

ಲೀಲಾವತಿ ಅವರು ಹೀರೋಯಿನ್ ಆಗಿ, ಪೋಷಕ ನಟಿಯಾಗಿ, ತಂಗಿಯಾಗಿ, ಅಕ್ಕನ್ನಾಗಿ, ತಾಯಿಯಾಗಿ, ಪೋಷಕ ನಟಿಯಾಗಿ ಇನ್ನೂ ಅನೇಕ ರೀತಿಯಾದಂತಹ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಲೀಲಾವತಿ ಮತ್ ವಿನೋದ್ ರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಗೆ ಒಳಗಾಗುತ್ತಾರೆ ಆದರೆ ಇದ್ಯಾವುದಕ್ಕೂ ಇವರು ತಲೆಕೆಡಿಸಿಕೊಳ್ಳದೆ ತಾಯಿ ಮತ್ತು ಮಗ ಇಬ್ಬರೂ ಸಹ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. ನಟಿ ಲೀಲಾವತಿ ಅವರು ತಮ್ಮ ಜೀವನದಲ್ಲಿ ಏನೇ ಕಷ್ಟ ಬಂದರೂ ಸರಿಯೇ ತಮ್ಮ ಮಗನನ್ನು ತುಂಬಾ ಚೆನ್ನಾಗಿ ಸಾಕಿದ್ದಾರೆ. ನಟ ವಿನೋದ್ ರಾಜ್ ಅವರು ಕೂಡ ಸಿನಿಮಾ ಜಗತ್ತಿಗೆ ಪರಿಚಿತರೆ ಒಂದಷ್ಟು ಸಿನಿಮಾಗಳನ್ನು ಮಾಡುವ ಮೂಲಕ ವಿನೋದ್ ರಾಜ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ತಾಯಿ ಮಗನನ್ನು ಬಿಟ್ಟು ಕೊಡುವುದಿಲ್ಲ ಹಾಗೆಯೇ ಮಗ ತಾಯಿಯನ್ನು ಎಲ್ಲಿಯೂ ಸಹ ಬಿಟ್ಟುಕೊಡುವುದಿಲ್ಲ ಈ ತಾಯಿ ಮಗನ ಮಧ್ಯೆ ಉತ್ತಮವಾದಂತಹ ಹೊಂದಾಣಿಕೆ ನಾವು ನೋಡಬಹುದು. ನಟ ವಿನೋದ್ ರಾಜ್ ಅವರು ಕೆಲವು ಸಿನಿಮಾಗಳನ್ನು ಮಾಡಿದ್ದರು ಸಹ ಇವರಿಗೆ ಹೆಚ್ಚಾಗಿ ಸಿನಿಮಾ ಆಫರ್ ಗಳು ಬರಲಿಲ್ಲ ಆದ್ದರಿಂದ ಇವರು ಚಿತ್ರರಂಗದಿಂದ ದೂರ ಉಳಿದುಕೊಳ್ಳುತ್ತಾರೆ ಒಂದಷ್ಟು ಜನ ಇವರಿಗೆ ಡಾನ್ಸ್ ನಲ್ಲಿ ಆಸಕ್ತಿ ಇರುವುದರಿಂದ ಇವರನ್ನು ಕೆಲವೊಂದು ಡಾನ್ಸ್ ಕಾರ್ಯಕ್ರಮಗಳಲ್ಲಿ ಜಡ್ಜ್ ಮಾಡಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನಟ ವಿನೋದ್ ರಾಜ್ ಮತ್ತು ಲೀಲಾವತಿ ತಮ್ಮ ಕೈಯಲ್ಲಿ ಆದಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ.

ಲೀಲಾವತಿ ಅವರು ಆಗಾಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಇದೀಗ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದೆ ಈ ಒಂದು ಸ್ಥಿತಿಯಲ್ಲಿ ಲೀಲಾವತಿ ಅವರನ್ನು ನೋಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ ಮಾ ಹರೀಶ್ ಅವರು ಭೇಟಿಯನ್ನು ನೀಡಿದರು ಇಂತಹ ಸಂದರ್ಭದಲ್ಲಿ ಭಾವುಕರಾದಂತಹ ಲೀಲಾವತಿ ಅವರು ತಮ್ಮ ಮಗನ ಕೈಯನ್ನು ಬಿಡಬಾರದು ಎಂದು ಹೇಳಿ ಅವರನ್ನು ನೀವೇ ನೋಡಿಕೊಳ್ಳಬೇಕು ಎಂದಿದ್ದಾರೆ. ಈ ಮಾತನ್ನು ಕೇಳಿದಂತಹ ಬಾ ಮ ಹರೀಶ್ ಅವರು ನಾವು ವಿನೋದ್ ರಾಜ್ ಅವರ ಜೊತೆಯಲ್ಲಿ ಯಾವಾಗಲೂ ಇರುತ್ತೇವೆ ಅವರಿಗೆ ಯಾವುದೇ ತೊಂದರೆಗಳು ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ತಾಯಿಯ ಹೃದಯ ಯಾವಾಗಲೂ ಮಕ್ಕಳಿಗಾಗಿ ಮಿಡಿಯುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಮಗನ ಜೀವನ ಚೆನ್ನಾಗಿರಬೇಕು ಎಂದು ಹಂಬಲಿಸುತ್ತಿರುವ ಈ ತಾಯಿಯ ಹೃದಯ ನಿಮಗೆ ಇಷ್ಟ ಆದರೆ ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: