ಭಾರತದಂತಹ ಬಡ ಹಾಗೂ ಸಾಮಾನ್ಯ ಜನರು ಹೆಚ್ಚು ತುಂಬಿರುವಂತಹ ಈ ದೇಶಗಳಲ್ಲಿ ಜನ ಹೂಡಿಕೆಗಳ ಬಗ್ಗೆ ಬಹಳ ಆಸಕ್ತಿ ಹೊಂದಿದ್ದಾರೆ. ಅದಕ್ಕಾಗಿ ಎಲ್ಐಸಿ ಅಂತಹ ಭದ್ರತೆ ಒದಗಿಸುವ ವಿಮೆ ಕಂಪನಿಗಳನ್ನು ಬಹಳ ನಂಬುತ್ತಾರೆ. ಎಲ್ಐಸಿಯು ಸಹ ಹಲವಾರು ವರ್ಷಗಳಿಂದ ನಮ್ಮ ಜನರ ನಂಬಿಕೆ ಉಳಿಸಿಕೊಂಡಿದ್ದು, ಸತತವಾಗಿ ಹೊಸ ಹೊಸ ಸ್ಕೀಮ್ ಗಳನ್ನು ತನ್ನ ಗ್ರಾಹಕರಿಗಾಗಿ ಆಕರ್ಷಿಕ ರೀತಿಯಲ್ಲಿ ತರುವ ಮೂಲಕ ಇಂದಿಗೂ ಕೂಡ ಜನರನ್ನು ತನ್ನಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದೆ.
ಎಲ್ಐಸಿಯು ಬಡಜನದ ಪಾಲಿಗೆ ಒಂದು ವರದಾನವಾಗಿದೆ. ತನ್ನ ಕೈಲಾದಷ್ಟು ಹಣವನ್ನು ಕಂತುಗಳಲ್ಲಿ ಕಟ್ಟಿ, ಇಂತಿಷ್ಟು ವರ್ಷಗಳ ನಂತರ ದೊಡ್ಡ ಮೊತ್ತದಲ್ಲಿ ಹಣವನ್ನು ಹೆಚ್ಚಿನ ಬಡ್ಡಿಯ ಜೊತೆ ಪಡೆಯಲು ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಜೊತೆಗೆ ಪ್ರತಿ ವರ್ಷವೂ ಕೂಡ ಹೊಸ ಸ್ಕೀಮ್ ಗಳನ್ನು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ಲಾಭದಾಯಕವಾದ ಯೋಚನೆಗಳನ್ನು ತರುತ್ತಿದೆ.
ಈಗ ಈ ವರ್ಷ ಅದೇ ರೀತಿಯ ಮತ್ತೊಂದು ಲಾಭದಾಯಕವಾದ ಪಾಲಿಸಿಯನ್ನು ಭಾರತೀಯರಿಗಾಗಿ ತಂದಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ಅದನ್ನು ಸರಂಡರ್ ಮಾಡುವ ವೇಳೆ ಬರೋಬ್ಬರಿ 76 ಲಕ್ಷಗಳನ್ನು ಪಡೆಯಲಿದ್ದೀರಿ. ಈ ಪಾಲಿಸಿಯ ಹೆಸರು ಎಲ್ಐಸಿ ಭೀಮರತ್ನ ಪಾಲಿಸಿ. ಎಲ್ಐಸಿ ಭೀಮರತ್ನ ಪಾಲಿಸಿಯ ವಿಶೇಷತೆ ಏನು ಎಂದರೆ ಇದು ನಾನ್ ಲಿಂಕ್ ನಾನ್ ಪಾರ್ಟಿಸಿಪೇಟಿಂಗ್ ವೈಯುಕ್ತಿಕ ವಿಮಾ ಯೋಜನೆ ಆಗಿದೆ.
ಇದೊಂದು ಮನಿ ಬ್ಯಾಕ್ ಪಾಲಿಸಿ ಆಗಿದೆ. ಇದಕ್ಕೆ ನಿರ್ದಿಷ್ಟ ಬೋನಸ್ ಕೂಡ ಲಭ್ಯವಿದ್ದು ಎಲ್ಲ ರೀತಿಯಲ್ಲೂ ಕೂಡ ಗ್ರಾಹಕರಿಗೆ ಬಹಳ ಲಾಭ ಕೊಡುವ ಉತ್ತಮ ಪಾಲಿಸಿ ಇದಾಗಿದೆ. ಪಾಲಿಸಿಯನ್ನು ನೀವು ಕನಿಷ್ಠ 5 ಲಕ್ಷದಿಂದ ಗರಿಷ್ಠವಾಗಿ ಎಷ್ಟಕ್ಕಾದರೂ ಖರೀದಿಸಬಹುದು. ಆದರೆ ಈ ಪಾಲಿಸಿ ಖರೀದಿಸುವುದಕ್ಕೆ ವಯಸ್ಸಿನ ಮಿತಿ ಇದೆ, 55ನೇ ವಯಸ್ಸಿಲ್ಲವರೆಗೂ ಕೂಡ ಈ ಪಾಲಿಸಿಯನ್ನು ಖರೀದಿಸಬಹುದಾಗಿದೆ.
ಮತ್ತು ಈ ಪಾಲಿಸಿಗೆ ಕಟ್ಟಬೇಕಾದ ಪ್ರೀಮಿಯಂ ಮೊತ್ತವನ್ನು ಮಾಸಿಕವಾಗಿ, ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಅಥವಾ ವಾರ್ಷಿಕವಾಗಿ ಕೂಡ ಪೇ ಮಾಡಬಹುದಾಗಿದೆ. ಈ ಪಾಲಿಸಿಯ ಅವಧಿಯು 15 20 ವರ್ಷಗಳನ್ನು ಒಳಗೊಂಡಿದೆ. ಇಷ್ಟರಲ್ಲಿ ನಿಮಗೆ ಅನುಕೂಲವಾಗುವ ವರ್ಷಗಳಿಗೆ ಇದನ್ನು ಖರೀದಿಸಬಹುದಾಗಿದೆ. 15 ವರ್ಷಗಳಿಗೆ ಖರೀದಿಸಿದರೆ 11 ರೂಗಳವರೆಗೆ ಪ್ರೀಮಿಯಂ ಕಟ್ಟಬೇಕು, 20 ವರ್ಷಗಳಿಗೆ ಖರೀದಿಸಿದರೆ 16 ವರ್ಷಗಳವರೆಗೆ ಮತ್ತು 25 ವರ್ಷಗಳಿಗೆ ಖರೀದಿಸಿದರೆ 21 ವರ್ಷಗಳವರೆಗೂ ಕೂಡ ಪ್ರೀಮಿಯಂ ಪಾವತಿಸಬೇಕು.
ನಿಮಗೆ ಸುಲಭವಾಗಿ ಅರ್ಥೈಸಲು ಇದನ್ನು ಉದಾಹರಣೆಯೊಂದಿಗೆ ವಿವರಿಸುತ್ತೇವೆ ನೋಡಿ. ಉದಾಹರಣೆಗೆ 35 ವರ್ಷ ವಯಸ್ಸಿನವರು 25 ವರ್ಷ ಅವಧಿಗೆ 20 ಲಕ್ಷ ಮೊತ್ತಕ್ಕೆ ಈ ಪಾಲಿಸಿದೆಯನ್ನು ಖರೀದಿಸಿದರೆ 21 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕು. ನೀವು ಕಟ್ಟುವ 1.18 ಲಕ್ಷ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅವಧಿ ಮುಗಿಯುವ ಹತ್ತಿರದಲ್ಲಿ 23 ಮತ್ತು 24ನೇ ವರ್ಷಕ್ಕೆ ತಲ ಐದೈದು ಲಕ್ಷ ರೂಗಳನ್ನು ನೀವು ಸರ್ವೈವಲ್ ಬೆನಿಫಿಟ್ ಅಡಿಯಲ್ಲಿ ಪಡೆಯಬಹುದು.
ಖಾತರಿ ಸೇರ್ಪಡೆಗಳ ಅಡಿಯಲ್ಲಿ 28.5 ಲಕ್ಷ ಬರಲಿದೆ. ಮೆಚ್ಯೂರಿಟಿ ಬೆನಿಫಿಟ್ ಅಡಿಯಲ್ಲಿ 38.5 ಲಕ್ಷ ಗಳನ್ನು ನೀವು ಪಡೆಯಬಹುದು. ಒಂದು ವೇಳೆ ಪಾಲಿಸಿ ಖರೀದಿದಾತ ಮೃತಪಟ್ಟರೆ ನಾಮನಿಗೆ 53 ಲಕ್ಷಗಳು ಸಿಗಲಿದೆ. ಈಗ ಎಲ್ಐಸಿ ಈ ಪಾಲಿಸಿ ತೆಗೆದುಕೊಂಡವರಿಗೂ ಸಾಲ ಸೌಲಭ್ಯ ಲಭ್ಯವಿದೆ. ನಿಮ್ಮ ಮೆಚುರಿಟಿ ಮೊತ್ತದ ಶೇಕಡ 90%ರ ತನಕವೂ ನೀವು ಸಾಲ ಪಡೆಯಬಹುದು.